ಲಾಂಚ್ ಆಯ್ತು 24GB RAM ಸ್ಮಾರ್ಟ್‌ಫೋನ್!..ದಂಗಾದ ಮೊಬೈಲ್ ಮಾರುಕಟ್ಟೆ!
ಗೇಮಿಂಗ್ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿರುವ ನುಬಿಯಾ ಬ್ರ್ಯಾಂಡ್ ತನ್ನ ಬಹುನಿರೀಕ್ಷಿತ ರೆಡ್ ಮ್ಯಾಜಿಕ್ 8S ಪ್ರೊ ಫೋನ್ ಅನ್ನು ಇದೀಗ ಲಾಂಚ್ ಮಾಡಿದೆ. ಈ ಮೂಲಕ ತನ್ನ ಮೊಬೈಲ್‌ಗಳ ಶ್ರೇಣಿಯನ್ನು ವಿಸ್ತರಿಸಿಕೊಂಡಿದೆ. ಇನ್ನು ಈ ದೈತ್ಯ ಮೊಬೈಲ್ 24GB RAM ಒಳಗೊಂಡಿದ್ದು, ಪ್ರಮುಖ ಹೈಲೈಟ್ ಆಗಿ ಕಾಣಿಸಿಕೊಂಡಿದೆ. ಇಷ್ಟು RAM ಸಾಮರ್ಥ್ಯ ಪಡೆದ ಮೊದಲ ಗೇಮಿಂಗ್ ಫೋನ್ ಇದಾಗಿದೆ.
ಹೌದು, ನುಬಿಯಾ ಸಂಸ್ಥೆಯು ನೂತನವಾಗಿ ರೆಡ್ ಮ್ಯಾಜಿಕ್ 8S ಪ್ರೊ ಸ್ಮಾರ್ಟ್‌ಫೋನ್ ಅನ್ನು ಚೀನಾ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಗೇಮಿಂಗ್ ಫೋನ್ ಸ್ನ್ಯಾಪ್‌ಡ್ರಾಗನ್ 8 ಜೆನ್ 2 ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದ್ದು, ಹಾಗೆಯೇ 6000 mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದೆ. ಅಲ್ಲದೇ ಬಾಹ್ಯ ಮೆಮೊರಿಯನ್ನು ಎಸ್‌ಡಿ ಕಾರ್ಡ್ ಮೂಲಕ 1TB ವರೆಗೆ ವಿಸ್ತರಿಸುವ ಅವಕಾಶ ಪಡೆದಿದೆ.

ಇಲ್ಲದೇ ರೆಡ್ ಮ್ಯಾಜಿಕ್ 8S ಪ್ರೊ ಎರಡು ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದಿದ್ದು, ಅವುಗಳು ಕ್ರಮವಾಗಿ 16GB RAM + 256GB ಹಾಗೂ 24GB RAM + 1TB ಆಗಿವೆ. ಪ್ರಾಥಮಿಕ ಕ್ಯಾಮೆರಾ 50ಎಂಪಿ ಆಗಿದ್ದು, ಸೆಲ್ಫಿ ಕ್ಯಾಮೆರಾ 16 ಮೆಗಾ ಪಿಕ್ಸಲ್‌ನಲ್ಲಿದೆ. ಇನ್ನುಳಿದಂತೆ ಈ ಮೊಬೈಲ್‌ನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಡಿಸ್‌ಪ್ಲೇ ರಚನೆ ಹಾಗೂ ಪ್ರೊಸೆಸರ್ ಪವರ್ : ರೆಡ್ ಮ್ಯಾಜಿಕ್ 8S ಪ್ರೊ ಸ್ಮಾರ್ಟ್‌ಫೋನ್ 6.8 ಇಂಚಿನ ಪೂರ್ಣ ಹೆಚ್‌ಡಿ+ ಓಎಲ್‌ಇಡಿ ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಈ ಡಿಸ್‌ಪ್ಲೇಯು, 120Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಹಾಗೆಯೇ ರೆಡ್ ಮ್ಯಾಜಿಕ್ 8S ಪ್ರೊ ಫೋನ್ ಸ್ನ್ಯಾಪ್‌ಡ್ರಾಗನ್ 8 ಜೆನ್ 2 ಪ್ರೊಸೆಸರ್ ಪವರ್‌ನಲ್ಲಿ ಕಾರ್ಯ ನಿರ್ವಹಿಸಲಿದ್ದು, ಅಡ್ರಿನೊ 740 GPU ಸಪೋರ್ಟ್ ಸಹ ಪಡೆದಿದೆ. ಇದರೊಂದಿಗೆ ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ಪಡೆದಿದೆ.
ಕ್ಯಾಮೆರಾ ಸೆನ್ಸಾರ್ ಹೇಗಿದೆ : ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಸೆಕೆಂಡರಿ ಕ್ಯಾಮೆರಾವು 8 ಮೆಗಾ ಪಿಕ್ಸಲ್ ಸಾಮರ್ಥ್ಯದಲ್ಲಿ ಇದೆ. ಇನ್ನು ತೃತೀಯ ಕ್ಯಾಮೆರಾ 2 ಮೆಗಾ ಪಿಕ್ಸಲ್ ಆಗಿದ್ದು, ಮುಂಭಾಗದಲ್ಲಿ 16 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮೆರಾ ಅನ್ನು ಒದಗಿಸಲಾಗಿದೆ. ಫ್ರಂಟ್ ಕ್ಯಾಮೆರಾ ಅಂಡರ್ ಡಿಸ್‌ಪ್ಲೇ ಮಾದರಿಯ ರಚನೆ ಪಡೆದಿದೆ.
ಬ್ಯಾಟರಿ ಬ್ಯಾಕ್‌ಅಪ್ ಎಷ್ಟಿದೆ : ರೆಡ್ ಮ್ಯಾಜಿಕ್ 8S ಪ್ರೊ ಮೊಬೈಲ್ 6000mAh ಬ್ಯಾಟರಿ ಬ್ಯಾಕ್‌ಅಪ್ ಹೊಂದಿದ್ದು, ಇದಕ್ಕೆ ಪೂರಕವಾಗಿ 165W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಅನ್ನು ಸಹ ಒಳಗೊಂಡಿದೆ. ಹಾಗೆಯೇ ನುಬಿಯಾ ICE 12.0 ಮ್ಯಾಜಿಕ್ ಕೂಲಿಂಗ್ ಸಿಸ್ಟಮ್ ಅನ್ನು ಅಂತರ್ನಿರ್ಮಿತ ಫ್ಯಾನ್‌ನೊಂದಿಗೆ ಥರ್ಮಲ್‌ಗಳನ್ನು ನಿಯಂತ್ರಣದಲ್ಲಿ ಪೂರಕವಾಗಿ ಒದಗಿಸಲಾಗಿದೆ. ಜೊತೆಗೆ 3.5mm ಹೆಡ್‌ಫೋನ್ ಜ್ಯಾಕ್, Wi-Fi 7 ಗೆ ಬೆಂಬಲ, ಟ್ರಿಪಲ್-ಮೈಕ್ರೊಫೋನ್ ಸಿಸ್ಟಮ್ ಆಯ್ಕೆಗಳು ಇವೆ.
ಬೆಲೆ ಮಾಹಿತಿ :
* ರೆಡ್ ಮ್ಯಾಜಿಕ್ 8S ಪ್ರೊ - 12GB + 256GB ಬೆಲೆಯು 4799 ಯುವಾನ್ (ಭಾರತದಲ್ಲಿ ಅಂದಾಜು 54,460ರೂ.)
* ರೆಡ್ ಮ್ಯಾಜಿಕ್ 8S ಪ್ರೊ - 16GB + 256GB ಬೆಲೆಯು 5499 ಯುವಾನ್ (ಭಾರತದಲ್ಲಿ ಅಂದಾಜು 62,405ರೂ.)
* ರೆಡ್ ಮ್ಯಾಜಿಕ್ 8S ಪ್ರೊ - 24GB + 1TB ಬೆಲೆಯು 7499 ಯುವಾನ್ (ಭಾರತದಲ್ಲಿ ಅಂದಾಜು 85,105ರೂ.)


Click it and Unblock the Notifications








