ಮಾರುಕಟ್ಟೆಗೆ ಬರಲಿದೆ ಹೊಸ ಮಡಚುವ ಫೋನ್!..ದೈತ್ಯ ಪ್ರೊಸೆಸರ್ ಪಕ್ಕಾ!
ಮೊಬೈಲ್ ಮಾರುಕಟ್ಟೆಯಲ್ಲಿ ನುಬಿಯಾ ಸಂಸ್ಥೆಯ ಫೋನ್‌ಗಳು ವೇಗದ ಪ್ರೊಸೆಸರ್ ಹಾಗೂ ಗೇಮಿಂಗ್ ಆಯ್ಕೆಗಳ ಮೂಲಕ ಗ್ರಾಹಕರನ್ನು ಆಕರ್ಷಿಸಿದೆ. ಹಲವು ಹೈ ಎಂಡ್ ಫೋನ್ ಪರಿಚಯಿಸಿರುವ ನುಬಿಯಾ ಸಂಸ್ಥೆಯು ಇದೀಗ ಫೋಲ್ಡ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಸಜ್ಜಾಗಿದ್ದು, ಭಾರೀ ಅಚ್ಚರಿ ಮೂಡಿಸಿದೆ.
ಹೌದು, ನುಬಿಯಾ ಸಂಸ್ಥೆಯು ಈಗ ಹೊಸದಾಗಿ ನುಬಿಯಾ Z60 ಫೋಲ್ಡ್ (Nubia Z60 Fold) ಸ್ಮಾರ್ಟ್‌ಪೋನ್ ಬಿಡುಗಡೆ ಮಾಡಲಿದೆ. ಈ ಫೋನಿನ ಕೆಲವು ಫೀಚರ್ಸ್‌ಗಳು ಆನ್‌ಲೈನ್‌ನಲ್ಲಿ ಈಗ ಲೀಕ್ ಆಗಿದ್ದು, ಸಖತ್ ಕುತೂಹಲ ಮೂಡಿಸಿದೆ. ಅಂದಹಾಗೆ ಈ ಫೋನ್ ಈ ವರ್ಷದ ಅಂತ್ಯದ ವೇಳೆಗೆ ಮಾರುಕಟ್ಟೆ ಪ್ರವೇಶಿಸಲಿರುವ ನಿರೀಕ್ಷೆಗಳಿವೆ.

ಮಾರುಕಟ್ಟೆಯಲ್ಲಿ ಈಗಾಗಲೇ ಸ್ಯಾಮಸ್‌ಂಗ್, ಮೊಟೊರೊಲಾ, ಒಪ್ಪೋ, ಟೆಕ್ನೋ ಹಾಗೂ ವಿವೋ ಸಂಸ್ಥೆಗಳು ಫೋಲ್ಡ್ ಮಾದರಿಯ ಫೋನ್‌ಗಳನ್ನು ಲಾಂಚ್ ಮಾಡಿ ಸದ್ದು ಮಾಡಿವೆ. ಅದೇ ಸಾಲಿನಲ್ಲಿ ನುಬಿಯಾ ಸಂಸ್ಥೆಯು ಸಹ ಈಗ ನುಬಿಯಾ Z60 ಫೋಲ್ಡ್ ಮೂಲಕ ಮಡಚಬಹುದಾದ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ತರಲಿದೆ. ಹಾಗಾದರೆ ಲೀಕ್ ಫೀಚರ್ಸ್ ಹೇಗಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.
ನುಬಿಯಾ Z60 ಫೋಲ್ಡ್ ಫೋನ್ 7.3 ಇಂಚಿನ ಮಡಿಸಬಹುದಾದ ಅಮೊಲೆಡ್ ಡಿಸ್‌ಪ್ಲೇ ಹೊಂದಿದೆ ಎಂದು ಗುಗ್ಲಾನಿ ಬಹಿರಂಗಪಡಿಸಿದ್ದಾರೆ. ಈ ಫೋನ್ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 4 ಮತ್ತು ಗೂಗಲ್ ಪಿಕ್ಸಲ್ ಫೋಲ್ಡಬಲ್ ಡಿಸ್‌ಪ್ಲೇಗಿಂತ ಸ್ವಲ್ಪ ಚಿಕ್ಕದಾಗಿದೆ. ಅದಾಗ್ಯೂ, ನುಬಿಯಾ Z60 ಫೋಲ್ಡ್‌ನ ಹೊರ ಡಿಸ್‌ಪ್ಲೇ ಫೀಚರ್ಸ್ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ.

ಇನ್ನು ನುಬಿಯಾ Z60 ಫೋಲ್ಡ್ ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 8 ಸರಣಿಯ ಚಿಪ್‌ಸೆಟ್ ಪ್ರೊಸೆಸರ್ ಅನ್ನು ಹೊಂದಿರಲಿದೆ ಎಂದು ಹೇಳಲಾಗುತ್ತದೆ. ಲೀಕ್ ಮಾಹಿತಿ ಪ್ರಕಾರ ಕ್ವಾಲ್ಕಾಮ್ ಸ್ನ್ಯಾಪ್‌ಡ್ರಾಗನ್ 8 ಜೆನ್ 3 SoC ಪ್ರೊಸೆಸರ್ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ 12GB RAM ವೇರಿಯಂಟ್ ಆಯ್ಕೆ ಪಡೆದಿರಲಿದ್ದು, 256GB ಸ್ಟೋರೇಜ್ ಆಯ್ಕೆ ಪಡೆದಿರಲಿದೆ ಎಂದು ಹೇಳಲಾಗುತ್ತಿದೆ. ಇನ್ನೊಂದು ವೇರಿಯಂಟ್ 512GB ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಾಗಲಿದೆ.
ಲೀಕ್ ಮಾಹಿತಿ ಪ್ರಕಾರ ನುಬಿಯಾ Z60 ಫೋಲ್ಡ್ ಫೋನ್ 5000mAh ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿರಲಿದ್ದು, 100W ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿರಲಿದೆ ಎಂದು ಹೇಳಲಾಗುತ್ತಿದೆ. ಇತರೆ ಮಡಿಸಬಹುದಾದ ಫೋನ್‌ಗಳಿಗೆ ಹೋಲಿಸಿದರೆ ಇದು ಅತಿದೊಡ್ಡ ಬ್ಯಾಟರಿಯಾಗಿದೆ.
ನುಬಿಯಾ ಪ್ಯಾಡ್ 3D ಟ್ಯಾಬ್ಲೆಟ್ : ನುಬಿಯಾ ಸಂಸ್ಥೆಯು ಇತ್ತೀಚಿಗೆ ಹೊಸದಾಗಿ ನುಬಿಯಾ ಪ್ಯಾಡ್ 3D ಟ್ಯಾಬ್ಲೆಟ್ ಲಾಂಚ್ ಮಾಡಿದೆ. ಇದು 12.4 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು 2,560x1,600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಈ ಸ್ಕ್ರೀನ್ 120Hz ರಿಫ್ರೆಶ್ ರೇಟ್ ಮತ್ತು 16:10 ರಚನೆಯ ಅನುಪಾತವನ್ನು ಹೊಂದಿದೆ. ಜೊತೆಗೆ ಈ ಟ್ಯಾಬ್ಲೆಟ್ DLB ಲೇಯರ್ ಮತ್ತು ಲೀಯಾದಿಂದ 3D ಲೈಟ್‌ಫೀಲ್ಡ್ ಮೋಡ್ ಟೆಕ್ನಾಲಜಿಯನ್ನು ಹೊಂದಿದೆ ಎಂದು ಹೇಳಲಾಗಿದೆ.
ನುಬಿಯಾ ಪ್ಯಾಡ್ 3D ಟ್ಯಾಬ್ಲೆಟ್ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 256GB ಇಂಟರ್ ಸ್ಟೊರೇಜ್ ಅನ್ನು ಹೊಂದಿದ್ದು, ಮೆಮೊರಿ ಕಾರ್ಡ್ ಮೂಲಕ 1TB ವರೆಗೆ ವಿಸ್ತರಿಸಬಹುದಾಗಿದೆ. ಇನ್ನು ಈ ಟ್ಯಾಬ್ಲೆಟ್ ಸ್ಪೋರ್ಟ್ಸ್ ಡ್ಯುಯಲ್ 16 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾಗಳನ್ನು ಹೊಂದಿದೆ. ಕ್ಯಾಮೆರಾ ದೊಂದಿಗೆ ಎಲ್ಇಡಿ ಫ್ಲ್ಯಾಷ್ ಕೂಡ ಒಳಗೊಂಡಿದೆ. ಇದರೊಂದಿಗೆ ಡ್ಯುಯಲ್ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಕೂಡ ನೀಡಲಾಗಿದೆ.


Click it and Unblock the Notifications








