ದಾಖಲೆ ನಿರ್ಮಿಸಲೇ ಹುಟ್ಟಿದೆ ಜಿಯೋ!! ಏನಿದು ಮತ್ತೊಂದು ದಾಖಲೆ?

Written By:

ಜಿಯೋ ಬಂದ ನಂತರ ಟೆಲಿಕಾಂ ಮಾರುಕಟ್ಟೆಯಲ್ಲಿ ಏನೇ ಬದಲಾವಣೆ ಆದರೂ ಅದು ದಾಖಲೆಯಾಗಿ ಬದಲಾಗುತ್ತಿದೆ. ಇನ್ನು ಇದಕ್ಕೆ ಹೊಸದೊಂದು ದಾಖಲೆ ಸೇರಿಕೊಂಡಿದ್ದು, ಜಿಯೋ ಮಾರುಕಟ್ಟೆಗೆ ಪ್ರವೇಶಿಸಿದ ನಂತರ ಭಾರತದಲ್ಲಿ 2016 ನೇ ಅಕ್ಟೋಬರ್‌ ತಿಂಗಳಿನಲ್ಲಿ ಅತಿ ಹೆಚ್ಚು ಗ್ರಾಹಕರು ಟೆಲಿಕಾಂ ಚಂದಾದಾರಾಗಿದ್ದಾರೆ.

ಟ್ರಾಯ್‌ ಬಿಡುಗಡೆ ಮಾಡಿರುವ ನೂತನ ಮಾಹಿತಿಯಂತೆ 2016 ನೇ ಅಕ್ಟೋಬರ್‌ ತಿಂಗಳಿನಲ್ಲಿ ಭಾರತದಾದ್ಯಂತ 29 ಮಿಲಿಯನ್ ಜನರು ಟೆಲಿಕಾಂಗೆ ಗ್ರಾಹಕರಾಗಿ ಬಂದಿದ್ದಾರೆ. ಈ ಮೂಲಕ ಭಾರತದಲ್ಲಿ 1.1 ಬಿಲಿಯನ್ ಜನರು ಟೆಲಿಕಾಂ ಚಂದಾದಾರಾಗಿ ಬದಲಾಗಿದ್ದಾರೆ ಎಂದು ತಿಳಿಸಿದೆ.

ದಾಖಲೆ ನಿರ್ಮಿಸಲೇ ಹುಟ್ಟಿದೆ ಜಿಯೋ!! ಏನಿದು ಮತ್ತೊಂದು ದಾಖಲೆ?

ಜಿಯೋ ಉಚಿತ ಆಫರ್ ಮುಗಿದರೆ?...ಮುಂದಿನದು ಫ್ರೀ ಅಲ್ಲದ ಉಚಿತ ಆಫರ್!!

ಇನ್ನು ಇದೇ ಮೊದಲ ಭಾರಿ ಒಂದು ತಿಂಗಳಿನಲ್ಲಿ ಅತಿ ಹೆಚ್ಚು ಗ್ರಾಹಕರು ಟೆಲಿಕಾಂ ಚಂದಾದಾರರಾಗಿದ್ದಾರೆ. ದಾಖಲೆಯಾಗಿ ಉಳಿದ ಅಕ್ಟೋಬರ್‌ ತಿಂಗಳಿನಲ್ಲಿ ಜಿಯೋಗೆ 19.63 ಮಿಲಿಯನ್ ಗ್ರಾಹಕರು ಚಂದಾದಾರಾಗಿದ್ದು ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಐಡಿಯಾ 6.33 ಮಿಲಿಯನ್, ಏರ್‌ಟೆಲ್ 2.32 ಮಿಲಿಯನ್ ಗ್ರಾಹಕರನ್ನು ಸೆಳೆದು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳನ್ನು ಹಂಚಿಕೊಂಡಿವೆ.

ದಾಖಲೆ ನಿರ್ಮಿಸಲೇ ಹುಟ್ಟಿದೆ ಜಿಯೋ!! ಏನಿದು ಮತ್ತೊಂದು ದಾಖಲೆ?

ಇನ್ನು ಮೊಬೈಲ್‌ ನಂಬರ್‌ ಪೋರ್ಟ್‌ಗಾಗಿ 4.92 ಮಿಲಿಯನ್ ರಿಕ್ವೆಸ್ಟ್‌ಗಳು ಅಕ್ಟೋಬರ್‌ ತಿಂಗಳಿನಲ್ಲಿ ದಾಖಲಾಗಿವೆ. ಇನ್ನು ಜಿಯೋ ತನ್ನ ಉಚಿತ ಸೇವೆಯನ್ನು ಮುಂದುವರೆಸಿದ ನಂತರ ಮೊಬೈಲ್‌ ನಂಬರ್‌ ಪೋರ್ಟ್‌ಗಾಗಿ ಹೆಚ್ಚು ರಿಕ್ವೆಸ್ಟ್‌ಗಳು ಬರುತ್ತಿವೆ ಎನ್ನಲಾಗಿದೆ.

English summary
India's telecom subscriber base crossed the 1.1 billion mark in October, Jio has taken first place!
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot