Home
ಸುದ್ದಿಜಾಲ

Train Accident: ರೈಲು ಅಪಘಾತಗಳಿಗೆ ಕಾರಣಗಳೇನು?, ನಿಯಂತ್ರಣಕ್ಕಿರುವ ತಂತ್ರಜ್ಞಾನಗಳೇನು?

ಕೋರಮಂಡಲ್‌ ಎಕ್ಸ್‌ಪ್ರೆಸ್‌, ಬೆಂಗಳೂರು-ಹೌರಾ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ಹಾಗೂ ಸರಕು ಸಾಗಣೆ ರೈಲುಗಳ ಮಧ್ಯೆ ಒಡಿಶಾದ ಬಾಲಸೋರ್‌ನಲ್ಲಿ ಜರುಗಿದ ಭೀಕರ ಅವಘಡ ಇಡೀ ದೇಶದ ಜನರ ಎದೆಯನ್ನು ಝಲ್ಲೆನ್ನುವಂತೆ ಮಾಡಿದೆ. ಈ ಘಟನೆಯಲ್ಲಿ ಈವರೆಗೆ ಕನಿಷ್ಠ 233 ಮಂದಿ ಸಾವಿಗೀಡಾಗಿದ್ದು, ಸುಮಾರು 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಹೌದು, ರೈಲು ಅಫಘಾತಗಳನ್ನು ತಡೆಗಟ್ಟಲು ಭಾರತದಲ್ಲಿ ವಿವಿಧ ರೀತಿಯ ಸುಧಾರಿತ ತಂತ್ರಜ್ಞಾನ ಅಳವಡಿಕೆ ಮಾಡಿಕೊಳ್ಳಲಾಗಿದೆ. ಅದಾಗ್ಯೂ ಈ ರೀತಿಯ ಭೀಕರ ದುರಂತ ನಡೆದಿರುವುದು ವಿಪರ್ಯಾಸವೇ ಸರಿ. ಹಾಗಿದ್ರೆ, ಈ ರೈಲು ಅಪಘಾತಗಳು ಹೇಗೆಲ್ಲಾ ಸಂಭವಿಸುತ್ತವೆ?, ಇವುಗಳನ್ನು ತಡೆಯುವ ಉದ್ದೇಶದಿಂದ ಏನೆಲ್ಲಾ ತಂತ್ರಗಳನ್ನು ಬಳಕೆ ಮಾಡಲಾಗುತ್ತದೆ ಅಥವಾ ಟೆಕ್ನಾಲಜಿ ಸಹಾಯಕವಾಗಿದೆ ಎಂಬಿತ್ಯಾದಿ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ. ಅದರಂತೆ ರೈಲು ಅಪಘಾತ ಹೇಗೆಲ್ಲಾ ಸಂಭವಿಸುತ್ತವೆ ಎಂಬುದನ್ನು ಮೊದಲು ತಿಳಿಯೋಣ.

ರೈಲು ಅಪಘಾತಗಳಿಗೆ ಕಾರಣಗಳೇನು?, ನಿಯಂತ್ರಣಕ್ಕಿರುವ ತಂತ್ರಜ್ಞಾನಗಳೇನು?

ಹಳಿ ತಪ್ಪುವಿಕೆ: ಹಳಿ ತಪ್ಪುವಿಕೆ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಯಾಗಿದೆ. ಅಂದರೆ ವೇಗವಾಗಿ ಓಡುವಾಗ ಅಥವಾ ಟ್ರ್ಯಾಕ್‌ನಲ್ಲಿ ಏನಾದರೂ ದೋಷ ಕಂಡುಬಂದಾಗ, ಅಸಮರ್ಪಕ ಸ್ವಿಚಿಂಗ್‌ ವೈಫಲ್ಯದಿಂದ ಈ ಸಮಸ್ಯೆಗಳು ಎದುರಾಗುತ್ತವೆ. ಇವು ಅಪಾರ ಜೀವ ಹಾನಿ ಹಾಗೂ ಆಸ್ತಿ ಹಾನಿಗೆ ಕಾರಣವಾಗುತ್ತದೆ. ಇದರಿಂದಾಗಿ ಟ್ರ್ಯಾಕ್‌ ಮ್ಯಾನ್‌ ಟ್ರ್ಯಾಕ್‌ಗಳ ಮೇಲೆ ಸದಾ ಹದ್ದಿನ ಕಣ್ಣಿಡಬೇಕಾಗುತ್ತದೆ.

ಘರ್ಷಣೆ ಹಾಗೂ ಲೆವೆಲ್‌ ಕ್ರಾಸಿಂಗ್‌: ಎರಡೂ ಅಥವಾ ಅದಕ್ಕಿಂತ ಹೆಚ್ಚಿನ ರೈಲುಗಳು ಡಿಕ್ಕಿಹೊಡೆದಾಗ ಅಪಘಾತ ಸಂಭವಿಸುತ್ತದೆ. ಈ ಅಪಘಾತಗಳು ಯಾವಾಗಲೂ ಭೀಕರವಾಗಿಯೇ ಇರುತ್ತವೆ. ಈ ರೀತಿಯ ಘಟನೆಗಳು ನಡೆಯಲು ಸಿಗ್ನಲ್‌ ಸಮಸ್ಯೆ, ತಪ್ಪಾದ ಸಂವಹನ, ರೈಲು ನಿರ್ವಹಣಾ ವ್ಯವಸ್ಥೆಯ ವೈಫಲ್ಯ ಕಾರಣವಾಗುತ್ತದೆ. ಇದರೊಂದಿಗೆ ಪಾದಚಾರಿಗಳು ರಸ್ತೆ ದಾಟುವಾಗಲೂ ಈ ರೀತಿಯ ಅಪಘಾತ ಸಂಭವಿಸುತ್ತವೆ.

ಬೆಂಕಿ ಸ್ಫೋಟ, ಓವರ್‌ ಹೆಡ್‌ ವೈರ್‌ ಘರ್ಷಣೆ: ಇಂಧನ ಸೋರಿಕೆ ಹಾಗೂ ವಿದ್ಯುತ್‌ನ ಸಮಸ್ಯೆಯಿಂದಾಗಿ ರೈಲಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆ ಕ್ಷಣ ಮಾತ್ರದಲ್ಲಿ ಎಲ್ಲಾ ಕಡೆ ಆವರಿಸಿಕೊಳ್ಳಲಿದ್ದು, ಹಲವಾರು ಜನರ ಸಾವು ನೋವಿಗೆ ಕಾರಣವಾಗುತ್ತದೆ. ಇತ್ತೀಚೆಗೆ ಹೆಚ್ಚು ಬಳಕೆಯಲ್ಲಿರುವ ಎಲೆಕ್ಟ್ರಿಕ್‌ ರೈಲುಗಳು ಓವರ್‌ಹೆಡ್‌ ಪವರ್‌ ಲೈನ್‌ ಮೂಲಕ ಕಾರ್ಯನಿರ್ವಹಿಸಲಿದ್ದು, ಇದರಲ್ಲಿ ಕೊಂಚ ಸಮಸ್ಯೆ ಉಂಟಾದರೂ ಗಂಭೀರ ಸಮಸ್ಯೆ ಎದುರಾಗಲಿದೆ.

ರೈಲು ಅಪಘಾತಗಳಿಗೆ ಕಾರಣಗಳೇನು?, ನಿಯಂತ್ರಣಕ್ಕಿರುವ ತಂತ್ರಜ್ಞಾನಗಳೇನು?

ಅದಾಗ್ಯೂ ನೈಸರ್ಗಿಕ ವಿಪತ್ತಿನ ಸಮಯದಲ್ಲಿ, ಮೂಲ ಸೌಕರ್ಯ ನಿರ್ಮಾಣದ ಸಮಯದಲ್ಲಿ ಹಾಗೂ ಭಯೋತ್ಪಾದನೆ ಸಮಯದಲ್ಲಿ ರೈಲು ಹೆಚ್ಚು ಅಪಘಾತಕ್ಕೆ ಒಳಗಾಗುತ್ತವೆ. ರೈಲು ಅಪಘಾತಕ್ಕೆ ಇಷ್ಟು ಕಾರಣಗಳು ಮಾತ್ರವಲ್ಲದೆ ಇತರೆ ಹಲವಾರು ಕಾರಣಗಳಿಂದಲೂ ಸಹ ಸಂಭವಿಸುತ್ತವೆ ಎಂಬುದು ತಿಳಿದಿರಲಿ. ಈ ನಡುವೆ ಈ ರೀತಿಯ ದುರಂತಗಳನ್ನು ತಡೆಗಟ್ಟಲು ಏನೆಲ್ಲಾ ತಂತ್ರಜ್ಞಾನ ಅಳವಡಿಕೆ ಮಾಡಲಾಗಿದೆ ಗಮನಿಸೋಣ ಬನ್ನಿ.

ಧನಾತ್ಮಕ ರೈಲು ನಿಯಂತ್ರಣ: ಧನಾತ್ಮಕ ರೈಲು ನಿಯಂತ್ರಣ (PTC) ವ್ಯವಸ್ಥೆಗಳು ರೈಲಿನಿಂದ ರೈಲಿಗೆ ಘರ್ಷಣೆಗಳು, ಹಳಿ ತಪ್ಪುವಿಕೆಯನ್ನು ತಪ್ಪಿಸುವ ಕೆಲಸ ಮಾಡುತ್ತದೆ. ಇದಕ್ಕಾಗಿ ಜಿಪಿಎಸ್‌ ಅನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಹಾಗೆಯೇ ವಾಯರ್‌ಲೆಸ್‌ ಸಂವಹನಗಳು ಮತ್ತು ಆನ್‌ಬೋರ್ಡ್‌ ವ್ಯವಸ್ಥೆ ಬಳಕೆ ಮಾಡಿಕೊಳ್ಳಲಾಗುತ್ತದೆ. ಈ ಮೂಲಕ ಎಲ್ಲಾದರೂ ಅಪಾಯದ ಮುನ್ಸೂಚನೆ ಸಿಕ್ಕರೆ ಆಟೋಮ್ಯಾಟಿಕ್‌ ಆಗಿ ರೈಲನ್ನು ನಿಧಾನ ಮಾಡಲು ಅಥವಾ ನಿಲ್ಲಿಸಲು ಸಹಾಯ ಮಾಡಲಿದೆ.

ಸ್ವಯಂಚಾಲಿತ ರೈಲು ನಿಯಂತ್ರಣ: ಸ್ವಯಂಚಾಲಿತ ರೈಲು ನಿಯಂತ್ರಣ (ATC) ರೈಲಿಗೆ ನಿರಂತರವಾಗಿ ವೇಗದ ಆಜ್ಞೆಗಳನ್ನು ನೀಡುವ ಮೂಲಕ ಸದಾ ಮೇಲ್ವಿಚಾರಣೆ ಮಾಡುತ್ತಿರುತ್ತದೆ. ಜೊತೆಗೆ ಅದನ್ನು ನಿಯಂತ್ರಿಸುವ ಕೆಲಸ ಮಾಡುತ್ತದೆ. ಈ ಮೂಲಕ ರೈಲು ಸುರಕ್ಷಿತ ವೇಗದಲ್ಲಿ ಸಂಚಾರ ಮಾಡುತ್ತಿದೆ ಎನ್ನುವುದನ್ನು ಇದು ಖಚಿತಪಡಿಸುತ್ತದೆ. ವಿಶೇಷವಾಗಿ ಅಪಘಾತ ವಲಯಗಳಲ್ಲಿ ಇದು ತುಂಬಾನೇ ಪ್ರಯೋಜನಕಾರಿ.

ರೈಲು ಮಾನಿಟರಿಂಗ್‌ ಹಾಗೂ ಡಯಾಗ್ನೋಸ್ಟಿಕ್ಸ್‌: ಸುಧಾರಿತ ಮಾನಿಟರಿಂಗ್ ಮತ್ತು ಡಯಾಗ್ನೋಸ್ಟಿಕ್ಸ್‌ ಸಿಸ್ಟಮ್‌ ಸೆನ್ಸರ್‌ಗಳು, ಡೇಟಾ ಅನಾಲಿಟಿಕ್ಸ್ ಮತ್ತು ಪ್ರಿಡಿಕ್ಟಿವ್ ಅಲ್ಗಾರಿದಮ್‌ಗಳನ್ನು ವಿವಿಧ ರೈಲು ಘಟಕಗಳು, ಟ್ರ್ಯಾಕ್ ಪರಿಸ್ಥಿತಿಗಳು ಮತ್ತು ಕಾರ್ಯಕ್ಷಮತೆಯನ್ನು ಮೇಲ್ವಿಚಾರಣೆ ಮಾಡಲು ಬಳಕೆ ಮಾಡಲಾಗುತ್ತದೆ. ಇದರಿಂದಾಗಿ ಸಂಭಾವ್ಯ ಡಿವೈಸ್‌ ವೈಫಲ್ಯ, ಅಥವಾ ಉಪಕರಣಗಳ ವೈಫಲ್ಯಗಳಿಂದ ಉಂಟಾಗುವ ಅಪಘಾತಗಳನ್ನು ತಡೆಗಟ್ಟಲು ಪೂರ್ವಭಾವಿಯಾಗಿ ಮಾಹಿತಿ ಪಡೆದುಕೊಳ್ಳಬಹುದು.

ವಿಡಿಯೋ ಕಣ್ಗಾವಲು: ರೈಲುಗಳು, ರೈಲ್ವೇ ನಿಲ್ದಾಣಗಳು ಮತ್ತು ನಿರ್ಣಾಯಕ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ನಿಯೋಜಿಸುವುದರಿಂದ ದೃಶ್ಯ ಮೇಲ್ವಿಚಾರಣೆ ಮಾಡಬಹುದಾಗಿದೆ. ಇದು ಸಂಭಾವ್ಯ ಸುರಕ್ಷತಾ ಅಪಾಯಗಳನ್ನು ಪತ್ತೆಹಚ್ಚಲು, ಅನಧಿಕೃತ ಪ್ರವೇಶವನ್ನು ಗುರುತಿಸಲು ಮತ್ತು ಭದ್ರತಾ ಘಟನೆಗಳು ಅಥವಾ ಅಪಘಾತಗಳಿಗೆ ತ್ವರಿತ ಪ್ರತಿಕ್ರಿಯೆಯನ್ನು ಸಕ್ರಿಯಗೊಳಿಸಲು ಸಹಾಯಕವಾಗಿದೆ.

ರೈಲು ಅಪಘಾತಗಳಿಗೆ ಕಾರಣಗಳೇನು?, ನಿಯಂತ್ರಣಕ್ಕಿರುವ ತಂತ್ರಜ್ಞಾನಗಳೇನು?

ರಿಮೋಟ್ ಕಂಡೀಷನ್ ಮಾನಿಟರಿಂಗ್: ಇಂಟರ್ನೆಟ್ ಆಫ್ ಥಿಂಗ್ಸ್ (IoT) ಸೆನ್ಸರ್‌ ಹಾಗೂ ಡೇಟಾ ಅನಾಲಿಟಿಕ್ಸ್ ಅನ್ನು ಬಳಕೆ ಮಾಡುವ ಮೂಲಕ ಟ್ರ್ಯಾಕ್‌ಗಳು, ಸೇತುವೆಗಳು ಮತ್ತು ಸಿಗ್ನಲಿಂಗ್‌ ಸಿಸ್ಟಮ್‌ಗಳ ಮೇಲೆ ನಿರಂತರವಾಗಿ ಕಣ್ಣಿಟ್ಟಿರುತ್ತವೆ. ಈ ಮೂಲಕ ಅಸಮರ್ಪಕ ಕಾರ್ಯಗಳ ಆರಂಭಿಕ ಚಿಹ್ನೆಗಳನ್ನು ಗುರುತಿಸಲು ಸಹಾಯ ಆಗಲಿದ್ದು, ಸಮಯೋಚಿತವಾಗಿ ರೈಲನ್ನು ಕಂಟ್ರೋಲ್‌ ಮಾಡಲು ಇದು ಅನುವು ಮಾಡಿಕೊಡಲಿದೆ. ಈ ಮೂಲಕ ಅಪಘಾತಗಳನ್ನು ತಡೆಯುತ್ತದೆ.

ಕೃತಕ ಬುದ್ಧಿಮತ್ತೆ (AI) ಆಧಾರಿತ ಅಪಾಯದ ಮೌಲ್ಯಮಾಪನ: ಸಂಭಾವ್ಯ ಸುರಕ್ಷತಾ ಅಪಾಯಗಳನ್ನು ಊಹಿಸಲು ಮತ್ತು ಮುಂಚಿನ ಎಚ್ಚರಿಕೆಗಳನ್ನು ಪಡೆದುಕೊಳ್ಳುವ ಉದ್ದೇಶದಿಂದ ಈ ಎಐ ಮೂಲಕ ಡೇಟಾವನ್ನು ವಿಶ್ಲೇಷಿಸಬಹುದು. ರೈಲು ಕಾರ್ಯಾಚರಣೆಗಳು, ನಿರ್ವಹಣೆ ದಾಖಲೆಗಳು, ಹವಾಮಾನ ಪರಿಸ್ಥಿತಿಗಳು ಮತ್ತು ಹಿಂದಿನ ಅಪಘಾತ ಡೇಟಾದಂತಹ ವಿವಿಧ ಮಾಹಿತಿಯನ್ನು ಸಂಯೋಜಿಸಲಾಗುತ್ತದೆ.

ಲೆವೆಲ್ ಕ್ರಾಸಿಂಗ್ ಸುರಕ್ಷತಾ ವ್ಯವಸ್ಥೆಗಳು: ಈ ತಂತ್ರಜ್ಞಾನದಲ್ಲಿ ಗೇಟ್‌ಗಳು, ಮಿನುಗುವ ದೀಪಗಳು ಮತ್ತು ಎಚ್ಚರಿಕೆ ಸಂಕೇತಗಳಂತಹ ಮಾಹಿತಿಯನ್ನು ಪಡೆದುಕೊಳ್ಳಬಹುದು. ಅಂದರೆ
ಸಮೀಪಿಸುತ್ತಿರುವ ರೈಲುಗಳನ್ನು ಇದು ಪತ್ತೆ ಮಾಡುತ್ತದೆ ಮತ್ತು ಆಟೋಮ್ಯಾಟಿಕ್‌ ಆಗಿ ಗೇಟ್‌ಗಳನ್ನು ಮುಚ್ಚುತ್ತದೆ ಜೊತೆಗೆ ಎಚ್ಚರಿಕೆ ದೀಪಗಳನ್ನು ಸಕ್ರಿಯಗೊಳಿಸುವ ಮೂಲಕ ಚಾಲಕರು ಮತ್ತು ಪಾದಚಾರಿಗಳಿಗೆ ಈ ಮೂಲಕ ಟ್ರ್ಯಾಕ್‌ ಅನ್ನು ಕ್ರಾಸ್‌ ಮಾಡದಂತೆ ಸೂಚನೆ ನೀಡುತ್ತದೆ.

ಇಷ್ಟೆಲ್ಲಾ ಟೆಕ್ನಾಲಜಿಯೊಂದಿಗೆ ಕವಚ್ ಸಹ ಇದ್ದು, ಇದು ಲೋಕೋಮೋಟಿವ್ ಪೈಲಟ್‌ಗಳಿಗೆ ಅಪಾಯದ ಸಮಯದಲ್ಲಿ ಸಿಗ್ನಲ್ ಪಾಸಿಂಗ್ ಮತ್ತು ಅತಿ ವೇಗವನ್ನು ತಪ್ಪಿಸುವಲ್ಲಿ ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ. ಜೊತೆಗೆ ದಟ್ಟವಾದ ಮಂಜಿನಂತಹ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ರೈಲು ಕಾರ್ಯಾಚರಣೆಗಳಿಗೆ ಬೆಂಬಲವನ್ನು ನೀಡುತ್ತದೆ. ಅಗತ್ಯವಿದ್ದಾಗ ಆಟೋಮ್ಯಾಟಿಕ್‌ ಆಗಿ ಬ್ರೇಕ್‌ಗಳನ್ನು ಅನ್ವಯಿಸುವ ಮೂಲಕ, ರೈಲಿನ ವೇಗದ ಮೇಲೆ ಕಂಟ್ರೋಲ್‌ ಹೊಂದಿದೆ.

ಕವಚ್ ಸಿಸ್ಟಂನ ಪ್ರಮುಖ ಫೀಚರ್ಸ್‌ ಏನೆಂದರೆ ಲೊಕೊಮೊಟಿವ್ ಪೈಲಟ್ ಕಾರ್ಯನಿರ್ವಹಿಸಲು ವಿಫಲವಾದಲ್ಲಿ ಆಟೋಮ್ಯಾಟಿಕ್‌ ಬ್ರೇಕ್ ಹಾಕುತ್ತದೆ. ಮಂಜಿನ ಪರಿಸ್ಥಿತಿಗಳಲ್ಲಿ ಮತ್ತು ಹೆಚ್ಚಿನ ವೇಗದಲ್ಲಿ ಸುಧಾರಿತ ಗೋಚರತೆಗಾಗಿ ಕ್ಯಾಬಿನ್‌ನಲ್ಲಿ ಲೈನ್-ಸೈಡ್ ಸಿಗ್ನಲ್ ಪ್ರದರ್ಶನವನ್ನು ಒದಗಿಸುತ್ತದೆ. ಚಲನೆಯ ಪ್ರಾಧಿಕಾರದ ನಿರಂತರ ನವೀಕರಣ ನೀಡುತ್ತದೆ ಹಾಗೂ ತುರ್ತು ಸಂದರ್ಭಗಳಲ್ಲಿ ರೈಲುಗಳನ್ನು ನಿಯಂತ್ರಿಸಲು SOS ಫೀಚರ್ಸ್‌ ಅನ್ನು ಬಳಕೆ ಮಾಡುತ್ತದೆ.

Best Mobiles in India

English summary
Various advanced technologies have been implemented in India to prevent train accidents. However, it is ironic that such a terrible tragedy happened.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+