Home
ಸುದ್ದಿಜಾಲ

ಬೆಂಗಳೂರಿನಲ್ಲಿ 'ಓಲಾ' ಸಂಸ್ಥೆಯಿಂದ 'ಸೆಲ್ಫ್ ಡ್ರೈವ್' ಕಾರು ಸೇವೆ ಆರಂಭ!

ಪ್ರಸ್ತುತ ಟ್ಯಾಕ್ಸಿ ವಲಯದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ 'ಓಲಾ' ಸಂಸ್ಥೆಯು ಇದೀಗ ತನ್ನ ಸೇವಾ ವ್ಯಾಪ್ತಿಯಲ್ಲಿ ಮತ್ತೊಂದು ಹೊಸ ಸೇವೆಯನ್ನು ಪರಿಚಯಿಸಿದೆ. ಅದುವೇ 'ಓಲಾ ಡ್ರೈವ್' ಈ ಸೇವೆಯನ್ನು ಸಂಸ್ಥೆಯು ಗುರುವಾರ (ಅ.17) ಬೆಂಗಳೂರಿನಲ್ಲಿ ಆರಂಭಿಸಿದ್ದು, ಓಲಾ ಕಾರುಗಳನ್ನು ಗ್ರಾಹಕರೇ ಸೆಲ್ಫ್‌ ಡ್ರೈವ್ ಮಾಡುವ ಸೌಲಭ್ಯ ಇದಾಗಿದೆ. 'ಓಲಾ' ಅಪ್ಲಿಕೇಶನ್‌ನಲ್ಲಿ ಓಲಾ ಡ್ರೈವ್‌ಗಾಗಿ ಹೊಸ ಕೇಟಗರಿಯನ್ನು ಸೇರಿಸಲಿದೆ.

ಓಲಾ ಡ್ರೈವ್

ಹೌದು, ಜನಪ್ರಿಯ ಓಲಾ ಸಂಸ್ಥೆಯು 'ಓಲಾ ಡ್ರೈವ್' ಸೇವೆಯನ್ನು ಬೆಂಗಳೂರಿನಲ್ಲಿ ಆರಂಭಿಸಿದ್ದು, ಈ ಸೇವೆಯಲ್ಲಿ ಗ್ರಾಹಕರು ಓಲಾ ಬಾಡಿಗೆ ಕಾರುಗಳನ್ನು ಬಾಡಿಗೆ ಪಡೆದು ಅವರೇ ಡ್ರೈವ್ ಮಾಡಬಹುದಾಗಿದೆ(Self Drive). ಓಲಾ ಸಂಸ್ಥೆಯು ಈ ಸೇವೆಯನ್ನು ಮೊದಲು ಬೆಂಗಳೂರಿನಲ್ಲಯೇ ಶುರುಮಾಡಿದ್ದು, ಮುಂದಿನ ದಿನಗಳಲ್ಲಿ ದೆಹಲಿ, ಹೈದ್ರಾಬಾದ ಮತ್ತು ಮುಂಬೈ ಮಹಾನಗರಗಳಲ್ಲಿಯೂ ಆರಂಭಿಸಲಿದೆ. ಮುಂಬರುವ 2020 ವರ್ಷದಲ್ಲಿ ಸುಮಾರು 20,000 ಕಾರುಗಳನ್ನು ನಿಯೋಜಿಸುವ ಗುರಿ ಇದೆ ಎಂದು ಓಲಾ ತಿಳಿಸಿದೆ.

ಬೆಂಗಳೂರಿನಲ್ಲಿ

ಸದ್ಯ ಓಲಾ ಅಪ್ಲಿಕೇಶನ್‌ನಲ್ಲಿಯೇ ಹೊಸದಾಗಿ ಓಲಾ ಡ್ರೈವ್ ಕೇಟಗರಿಯನ್ನು ಸೇರಿಸುವುದಾಗಿ ತಿಳಿಸಿದ್ದು, ಆಪ್‌ ಮೂಖಾಂತರವೇ ಗ್ರಾಹಕರು ಓಲಾ ಡ್ರೈವ್ ಸೇವೆ ಪಡೆಯಬಹುದಾಗಿದೆ. ಹಾಗೆಯೇ ಓಲಾ ಡ್ರೈವ್ ಸೇವೆ ಪಡೆಯುವ ಗ್ರಾಹಕರಿಗೆ ಅನುಕೂಲವಾಗಲಿ ಎಂದು ಸಂಸ್ಥೆಯು ಬೆಂಗಳೂರಿನಲ್ಲಿ ಕೆಲವು ವಸತಿ ಪ್ರದೇಶ ಮತ್ತು ವಾಣಿಜ್ಯ ಪ್ರದೇಶಗಳಲ್ಲಿ ಪಿಕ್‌ಅಪ್‌ ಸ್ಟೇಷನ್‌ಗಳನ್ನು ನಿಗದಿ ಮಾಡಲಿದೆ ಎಂದು ಓಲಾ ತಿಳಿಸಿದೆ.

250ಕ್ಕೂ ಅಧಿಕ ನಗರಗಳಲ್ಲಿ

ಓಲಾ ಡ್ರೈವ್ ಸೇವೆಯನ್ನು ಮುಂದಿನ ದಿನಗಳಲ್ಲಿ 250ಕ್ಕೂ ಅಧಿಕ ನಗರಗಳಲ್ಲಿ ಆರಂಭಿಸುವ ಯೋಜನೆಗಳಿದ್ದು, ಅದಕ್ಕಾಗಿ ನಮ್ಮ ನುರಿತ ತಂಡ ಸಿದ್ಧವಾಗಿದೆ. ಮುಂದಿನ ದಶಕದಲ್ಲಿ ಭಾರತದ ಕಾರು ಹಂಚಿಕೆ ಮಾರುಕಟ್ಟೆಯಲ್ಲಿ ಓಲಾ ಸಂಸ್ಥೆಯು ಪ್ರಮುಖ ಪಾತ್ರವಹಿಸಲಿದೆ. ಹಾಗೆಯೇ ಸೆಲ್ಫ್ ಡ್ರೈವ್‌ ಕಾರ ಶೇರಿಂಗ್ ಮತ್ತು ಕಾರ್ಪೊರೇಟ್‌ ಲೀಸಿಂಗ್‌ ಸೇವೆಯನ್ನು ಆರಂಭಿಸುವ ಯೋಜನೆ ಇದೆ ಎಂದು ಓಲಾ ಸಂಸ್ಥೆಯ ಮುಖ್ಯ ಮಾರಾಟ ಮತ್ತು ಮಾರುಕಟ್ಟೆ ಅಧಿಕಾರಿ ಅರುಣ್ ಶ್ರೀನಿವಾಸ್ ಹೇಳಿದ್ದಾರೆ.

24X7 ಹೆಲ್ಪ್‌ಲೈನ್

ಓಲಾ ಡ್ರೈವ್ ಕಾರಗಳು ಒಳಾಂಗಣದಲ್ಲಿ 7 ಇಂಚಿನ್ ಟಚ್‌ಸ್ಕ್ರೀನ್‌ ಇನ್‌ಫೋಟೈನಮೆಂಟ್‌ ಡಿವೈಸ್‌ ಅನ್ನು ಒಳಗೊಂಡಿರಲಿದ್ದು, ಜೊತೆಗೆ ಬ್ಲೂಟೂತ್ ಕನೆಕ್ಟಿವಿಟಿ, ಜಿಪಿಎಸ್‌, ಮ್ಯೂಸಿಕ್ ಪ್ಲೇಬ್ಯಾಕ್‌ ಸೌಲಭ್ಯಗಳನ್ನು ಪಡೆದಿರುತ್ತವೆ. ಇದರೊಂದಿಗೆ ಸಂಸ್ಥೆಯು ಗ್ರಾಹಕರ ಸುರಕ್ಷತೆಗೂ ಒತ್ತು ನೀಡಲಿದ್ದು, 24X7 ಹೆಲ್ಪ್‌ಲೈನ್, ಎಮೆರ್ಜನ್ಸಿ ಬಟನ್ (ತಕ್ಷಣಕ್ಕೆ ಓಲಾದಿಂದ ಕರೆ) ಆಯ್ಕೆಗಳನ್ನು ಸಹ ಒಳಗೊಂಡಿರಲಿವೆ.

Best Mobiles in India

English summary
Ola Drive will appear as a new category on the Ola app. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+