ಓಲಾ ಇ-ಸ್ಕೂಟರ್‌ ಮೈಲೇಜ್‌ ಎಷ್ಟು?..ಫಾಸ್ಟ್‌ ಚಾರ್ಜಿಂಗ್ ಇರಲಿದೆಯಾ?

|

ಪೆಟ್ರೋಲ್‌, ಡಿಸೇಲ್ ಬೆಲೆ ಏರಿಕೆ ಆಗುತ್ತಿದ್ದು, ಜನರು ಎಲೆಕ್ಟ್ರಾನಿಕ್ ವೆಹಿಕಲ್‌ಗಳತ್ತ ಮುಖ ಮಾಡುತ್ತಿದ್ದಾರೆ. ಎಲೆಕ್ಟ್ರಾನಿಕ್ ವೆಹಿಕಲ್‌ಗಳು ಪರಿಸರ ಸ್ನೇಹಿ ಸಹ ಆಗಿವೆ. ಈ ನಿಟ್ಟಿನಲ್ಲಿ ಇತ್ತೀಚಿಗೆ ಎಲೆಕ್ಟ್ರಾನಿಕ್ ಸ್ಕೂಟರ್‌ಗಳು ಹೆಚ್ಚು ಡಿಮ್ಯಾಂಡ್‌ ಪಡೆದುಕೊಳ್ಳುತ್ತಿವೆ. ಜನಪ್ರಿಯ ಓಲಾ ಸಹ ಹೊಸದೊಂದು ಎಲೆಕ್ಟ್ರಾನಿಕ್ ಇ-ಸ್ಕೂಟರ್‌ ಅನ್ನು ಘೋಷಿಸಿದೆ. ಓಲಾ ಇ-ಸ್ಕೂಟರ್ ಇದೇ ಆಗಸ್ಟ್‌ 15 ರಂದು ಅಧಿಕೃತವಾಗಿ ಅನಾವರಣ ಮಾಡುವುದಾಗಿ ತಿಳಿಸಿದೆ.

ಈಗಾಗಲೇ

ಹೌದು, ಓಲಾ ಕಂಪನಿ ಇದೇ ಆಗಸ್ಟ್ 15 ರಂದು ಇ-ಸ್ಕೂಟರ್ ಲಾಂಚ್ ಮಾಡುವುದಾಗಿ ತಿಳಿಸಿದೆ. ಈಗಾಗಲೇ ಒಂದು ಲಕ್ಷಕ್ಕೂ ಅಧಿಕ ಜನರು ಮುಂಗಡ ಬುಕಿಂಗ್ ಮಾಡಿದ್ದಾರೆ ಎಂದು ಕಂಪನಿ ಹೇಳಿದೆ. ಈಗಾಗಲೇ ಹಲವು ಎಲೆಕ್ಟ್ರಾನಿಕ್ ಬೈಕ್‌ಗಳು ಮಾರುಕಟ್ಟೆಯಲ್ಲಿ ಇವೆ. ಅದಾಗ್ಯೂ ಓಲಾ ಕಂಪನಿ ಹೊಸ ಇ-ಸ್ಕೂಟರ್ ಬೈಕ್ ಪ್ರಿಯರ ಗಮನ ಸೆಳೆದಿರುವುದಂತು ಸುಳ್ಳಲ್ಲ. ಹಾಗೆಯೇ ಬೆಲೆ ಎಷ್ಟು?..ಮೈಲೇಜ್‌ ಎಷ್ಟಿರಲಿದೆ? ಎನ್ನುವ ಕೆಲವು ಪ್ರಶ್ನೆಗಳು ಗ್ರಾಹಕರನ್ನು ಮೂಡಿವೆ. ಕಂಪನಿಯು ಇತ್ತೀಚಿಗಷ್ಟೆ ಸೋಶಿಯಲ್ ಮೀಡಿಯಾಗಳಲ್ಲಿ 17 ಸೆಕೆಂಡುಗಳ ವಿಡಿಯೋ ಶೇರ್ ಮಾಡಿದ್ದು, ಜನರಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ. ಓಲಾ ಇ-ಸ್ಕೂಟರ್ ಬಗ್ಗೆ ಕೆಲವು ಸಂಗತಿಗಳನ್ನು ಮುಂದೆ ತಿಳಿಯೋಣ ಬನ್ನಿರಿ.

499ರೂ.ಗೆ ಬುಕಿಂಗ್

499ರೂ.ಗೆ ಬುಕಿಂಗ್

ಓಲಾ ಕಂಪನಿಯು 499 ರೂ.ಗೆ ಮುಂಗಡ-ಬುಕಿಂಗ್ ಅನ್ನು ಜುಲೈ 15 ರಿಂದ ಪ್ರಾರಂಭಿಸಿತು. ಬುಕಿಂಗ್ ಮೊತ್ತವು ಅದನ್ನು ರೀಫಂಡ್ ಎಬಲ್ ಕೂಡ ಆಗಿದೆ. ಬುಕ್ಕಿಂಗ್‌ನ ಮೊದಲ 24 ಗಂಟೆಗಳಲ್ಲಿ ಕಂಪನಿಯು 1 ಲಕ್ಷಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಪಡೆದುಕೊಂಡಿದೆ.

ಓಲಾ ಇ-ಸ್ಕೂಟರ್ ಬಣ್ಣದ ಆಯ್ಕೆಗಳು:

ಓಲಾ ಇ-ಸ್ಕೂಟರ್ ಬಣ್ಣದ ಆಯ್ಕೆಗಳು:

ಓಲಾ ಇ-ಸ್ಕೂಟರ್ ಹಲವು ಕಾರಣಗಳಿಂದಾಗಿ ಜನರನ್ನು ಆಕರ್ಷಿಸಿದೆ. ಆ ಪೈಕಿ ಬೈಕ್ ಕಲರ್‌ ಆಯ್ಕೆಯು ಒಂದಾಗಿದೆ. ಓಲಾದ ಇ-ಸ್ಕೂಟರ್ ಒಟ್ಟು 10 ನವೀನ ಬಣ್ಣದ ಆಯ್ಕೆಗಳನ್ನು ಒಳಗೊಂಡಿರಲಿದೆ ಎಂದು ಹೇಳಲಾಗಿದೆ. ಕಲರ್‌ಗಳ ಪಟ್ಟಿಯಲ್ಲಿ ಕಪ್ಪು, ಬಿಳಿ, ಬೂದು, ಹಳದಿ, ಕೆಂಪು, ನೀಲಿ ಸಹ ಸೇರಿವೆ. ಮ್ಯಾಟ್‌ ಕೋಟಿಂಗ್ ಬಣ್ಣದ ಆಯ್ಕೆಯು ಸಿಗಲಿದೆ ಎನ್ನಲಾಗಿದೆ.

ಓಲಾ ಇ-ಸ್ಕೂಟರ್‌ ಮೈಲೇಜ್‌ ಎಷ್ಟು?

ಓಲಾ ಇ-ಸ್ಕೂಟರ್‌ ಮೈಲೇಜ್‌ ಎಷ್ಟು?

ಓಲಾ ಕಂಪನಿಯ ಹೊಸ ಇ-ಸ್ಕೂಟರ್ ಚಾರ್ಜಿಂಗ್ ಬೈಕ್ ಆಗಿದೆ. ಒಂದು ಪೂರ್ಣ ಚಾರ್ಜ್‌ನಲ್ಲಿ 150 ಕಿಮೀ ವರೆಗೆ ಸುಲಭವಾಗಿ ಚಲಿಸಬಲ್ಲದು ಎಂದು ಹೇಳಲಾಗಿದೆ. ಇನ್ನು ಈ ಬೈಕ್‌ನ ಗರಿಷ್ಠ ವೇಗ ಗಂಟೆಗೆ 90 ಕಿಮೀ ಆಗಿರಲಿದೆ ಎಂದು ಹೇಳಲಾಗಿದೆ.

ಓಲಾ ಇ-ಸ್ಕೂಟರ್‌ನ ಇತರೆ ಫೀಚರ್ಸ್‌:

ಓಲಾ ಇ-ಸ್ಕೂಟರ್‌ನ ಇತರೆ ಫೀಚರ್ಸ್‌:

* ಓಲಾ ಇ-ಸ್ಕೂಟರ್‌ನ ಆಕರ್ಷಕ ಫೀಚರ್‌ ಎಂದರೇ ಇದನ್ನು ಹೋಮ್ ಚಾರ್ಜರ್‌ನೊಂದಿಗೆ ಬಿಡುಗಡೆ ಮಾಡಲಾಗುತ್ತಿದೆ. ಅಂದರೆ ಮನೆಯಲ್ಲಿ ಅಳವಡಿಸಲಾಗಿರುವ ಸಾಮಾನ್ಯ ಸಾಕೆಟ್ ನಿಂದ ಸ್ಕೂಟರ್ ಅನ್ನು ಚಾರ್ಜ್ ಮಾಡಬಹುದು.
* ಓಲಾ ಇ-ಸ್ಕೂಟರ್ ಗರಿಷ್ಠ ವೇಗ ಗಂಟೆಗೆ 90 ಕಿಮೀ ಆಗಿರುತ್ತದೆ.
* ಓಲಾ ಇ-ಸ್ಕೂಟರ್ ಅನ್ನು 18 ನಿಮಿಷಗಳಲ್ಲಿ 50% ವರೆಗೆ ಚಾರ್ಜ್ ಮಾಡಬಹುದು. ಅದಕ್ಕಾಗಿ ಇದು ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.
* ಸ್ಮಾರ್ಟ್ ಫೋನ್ ಸಂಪರ್ಕವು ಓಲಾ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿಯೂ ಲಭ್ಯವಿರುತ್ತದೆ.
* ಬೂಟ್ ಸ್ಥಳದ ದೃಷ್ಟಿಯಿಂದ ಇದು ಆಕರ್ಷಕವಾಗಿದೆ. ವೀಡಿಯೊ ಟೀಸರ್ ಎರಡು ಹೆಲ್ಮೆಟ್‌ಗಳನ್ನು ಬೂಟ್ ಜಾಗದಲ್ಲಿ ಇಟ್ಟಿರುವುದನ್ನು ತೋರಿಸುತ್ತದೆ. ಸಾಮಾನ್ಯವಾಗಿ ಸ್ಕೂಟರ್‌ನ ಬೂಟ್ ಜಾಗದಲ್ಲಿ ಕೇವಲ ಒಂದು ಹೆಲ್ಮೆಟ್ ಅನ್ನು ಮಾತ್ರ ಇಡಲು ಸ್ಥಳಾವಕಾಶ ನೀಡಿರುತ್ತಾರೆ.

Best Mobiles in India

English summary
Ola Electric Scooter: Estimate Price, Battery Backup And Mileage.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X