Ola parcel services: ಬೆಂಗಳೂರು ನಿವಾಸಿಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ ಓಲಾ!
ಓಲಾ (Ola) ಈವರೆಗೂ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಬಾಡಿಗೆ ವಾಹನಗಳ ಮೂಲಕ ಬೆಂಗಳೂರು ಸೇರಿದಂತೆ ದೇಶದ ಮೂಲೆ ಮೂಲೆಯಲ್ಲಿ ಸದ್ದು ಮಾಡಿತ್ತು. ಈ ಯಶಸ್ವಿ ಬೆಳವಣಿಗೆ ಹಿನ್ನೆಲೆ ಈಗ ಓಲಾ ಮತ್ತೊಂದು ಮಹತ್ವದ ಸೇವೆಗೆ ಮುಂದಾಗಿದೆ. ಈ ಮೂಲಕ ಬೆಂಗಳೂರಿಗರಿಗೆ ವಿಶೇಷ ಸೌಲಭ್ಯ ಸಿಗಲಿದೆ.
ಹೌದು, ಓಲಾ ಬೆಂಗಳೂರಿನಲ್ಲಿ ಎಲ್ಲಾ ಎಲೆಕ್ಟ್ರಿಕ್ ಪಾರ್ಸೆಲ್ ಸೇವೆಗಳನ್ನು ಆರಂಭಿಸಿದೆ. ಈ ಮೂಲಕ ಈಗಾಗಲೇ ಬೆಂಗಳೂರಲ್ಲಿ ಸಕ್ರಿಯವಾಗಿರುವ ಪೋರ್ಟರ್, ಸ್ವಿಗ್ಗಿ, ಉಬರ್ ಮತ್ತು ಡಂಜೊದಂತಹ ಕಂಪೆನಿಗಳಿಗೆ ತೀವ್ರ ಪೈಪೋಟಿ ನೀಡಲಿದೆ. ಹಾಗಿದ್ರೆ, ಏನಿದು ಹೊಸ ಸೇವೆ?, ಓಲಾ ಪಾರ್ಸಲ್ ಸರ್ವಿಸ್ (Ola Parcel Service) ಹೇಗೆ ಕಾರ್ಯನಿರ್ವಹಿಸಲಿದೆ ಎಂಬಿತ್ಯಾದಿ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಓಲಾ ಪಾರ್ಸೆಲ್: ಓಲಾ ಪಾರ್ಸೆಲ್ ಎಂಬ ಹೆಸರನ್ನು ಕೇಳಿದಾಕ್ಷಣ ನಿಮಗೆ ಖಂಡಿತಾ ಅನಿಸಿರುತ್ತದೆ. ಇದೊಂದು ವಿತರಣೆ ವ್ಯವಸ್ಥೆ ಅಂತ. ರೈಡ್-ಹೇಲಿಂಗ್ ಸಂಸ್ಥೆ ಓಲಾ ಅಕ್ಟೋಬರ್ 6 ರಂದುಈ ವಿಶೇಷ ಸೇವೆಯನ್ನು ಪರಿಚಯಿಸಿದೆ. ಈ ಮೂಲಕ ಪಾರ್ಸೆಲ್ ಡೆಲಿವರಿ ಸೇವಾ ವಿಭಾಗಕ್ಕೆ ಓಲಾ ಎಂಟ್ರಿ ನೀಡಿದಂತೆ ಆಗಿದೆ. ಬೆಂಗಳೂರಿನಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಳಸಿಕೊಂಡು ಇದು ಕಾರ್ಯನಿರ್ವಹಿಸಲಿದೆ.
ಈ ಸಂಬಂಧ ಓಲಾ ಸಹ-ಸಂಸ್ಥಾಪಕ ಮತ್ತು ಸಿಇಓ ಭವಿಶ್ ಅಗರ್ವಾಲ್ ಟ್ವೀಟ್ ಮಾಡಿದ್ದು, ಬೆಂಗಳೂರಿನಲ್ಲಿ ಇಂದು ಓಲಾ ಪಾರ್ಸೆಲ್ ಅನ್ನು ಪ್ರಾರಂಭಿಸಲಾಗುತ್ತಿದೆ! ಭಾರತಕ್ಕಾಗಿ ಆಲ್-ಎಲೆಕ್ಟ್ರಿಕ್ 2W ಲಾಜಿಸ್ಟಿಕ್ಸ್ ಇಕೋಸಿಸ್ಟಮ್‌ನ ಪ್ರಾರಂಭ ಎಂದಿದ್ದಾರೆ. ವಿಷಯ ಏನೆಂದರೆ ಓಲಾದ ನ ನಿಕಟ ಪ್ರತಿಸ್ಪರ್ಧಿ ಉಬರ್ ಸಹ ಉಬರ್ ಕನೆಕ್ಟ್ ಎಂಬ ಹೆಸರಿನಲ್ಲಿ ಪಾರ್ಸೆಲ್ ಡೆಲಿವರಿ ಸೇವೆಯನ್ನು ನೀಡುತ್ತಿದೆ.
ಬೆಲೆ ಹೇಗಿರಲಿದೆ?: ಇದೇ ಟ್ವೀಟ್‌ನಲ್ಲಿ ಬೆಲೆ ಬಗ್ಗೆಯೂ ಉಲ್ಲೇಖ ಮಾಡಲಾಗಿದೆ. ಸಂಸ್ಥೆಯು 5 ಕಿಮೀಗೆ 25 ರೂ, 10 ಕಿಮೀಗೆ 50 ರೂ, 15 ಕಿಮೀಗೆ 75 ರೂ ಮತ್ತು 20 ಕಿಮೀಗೆ 100 ರೂ.ಗಳನ್ನು ನಿಗದಿ ಮಾಡಿದೆ ಎಂದು ತಿಳಿಸಿದ್ದಾರೆ. ಇಷ್ಟೇ ಅಲ್ಲದೆ ಸೇವೆಯ ಪೂರ್ಣ ಪ್ರಮಾಣದ ರೋಲ್‌ಔಟ್ ಸದ್ಯಕ್ಕೆಬೆಂಗಳೂರಿನಲ್ಲಿ ಸಿಗಲಿದ್ದು, ಮುಂದಿನ ಕೆಲವು ತಿಂಗಳುಗಳಲ್ಲಿ ದೇಶಾದ್ಯಂತದ ಎಲ್ಲಾ ನಗರಗಳಲ್ಲಿ ವಿಸ್ತರಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಈ ವಿಶೇಷ ಸೇವೆಯನ್ನು ನೀವು ರಾತ್ರಿಯೂ ಬಳಕೆ ಮಾಡಬಹುದು ಎಂದು ಹೇಳಲಾಗಿದ್ದು, ಈ ವಿಶೇಷ ಸೇವೆ ಇದೀಗ ನಗರದೊಳಗಿನ ಪಾರ್ಸೆಲ್ ವಿತರಣಾ ಕಂಪೆನಿಗಳಾದ ಪೋರ್ಟರ್, ಸ್ವಿಗ್ಗಿ ಜಿನೀ, ಉಬರ್ ಮತ್ತು ಡಂಜೊಗಳೊಂದಿಗೆ ಪ್ರಾಬಲ್ಯ ಹೊಂದಿದೆ. ಇನ್ನು ಕಳೆದ ವರ್ಷ, ಉಬರ್ ತನ್ನ ಪಾರ್ಸೆಲ್ ಡೆಲಿವರಿ ಸೇವೆಯಾದ ಉಬರ್ ಕನೆಕ್ಟ್ ಮೂಲಕ ತನ್ನದೇ ಆದ ರೀತಿಯಲ್ಲಿ ಸದ್ದು ಮಾಡಿತ್ತು. ಉಬರ್ ಕನೆಕ್ಟ್ ಕೋಲ್ಕತ್ತಾ, ಗುವಾಹಟಿ, ಜೈಪುರ್ ಮತ್ತು ಗುರ್ಗಾಂವ್‌ಗಳಲ್ಲಿ ಆರಂಭದಲ್ಲಿ ಪರಿಚಯಿಸಲಾಗಿತ್ತು.ಆದರೆ, ಈಗ ಈ ಸೇವೆ ಭಾರತದಾದ್ಯಂತ ಲಭ್ಯವಿದೆ.
ಈ ನಡುವೆ ಈ ಪಾರ್ಸೆಲ್ ಸರ್ವಿಸ್ ಮಾಡುವ ಅದೆಷ್ಟೋ ಕಂಪೆನಿಗಳು ಇವಿ ಗಳ ಕಡೆ ಮುಖ ಮಾಡುತ್ತಿದ್ದಾರೆ. ಅದರಲ್ಲೂ ಪೋರ್ಟರ್ ಸುಮಾರು 3,500 ಇವಿಗಳನ್ನು ಆನ್‌ಬೋರ್ಡ್ ಮಾಡಿದೆ. ಪ್ರಮುಖವಾಗಿ ದೆಹಲಿ ಮತ್ತು ಬೆಂಗಳೂರು ಸೇರಿದಂತೆ ಇತರ ದೊಡ್ಡ ಮೆಟ್ರೋಗಳಲ್ಲಿ ಇವಿ ವ್ಯವಸ್ಥೆ ಹೆಚ್ಚಾಗಿದೆ. ಈ ಮೂಲಕ ಪರಿಸರಕ್ಕೆ ಇವು ತಮ್ಮದೇ ಆದ ಕೊಡುಗೆ ನೀಡಲು ಮುಂದಾಗಿವೆ.
ಇದರೊಂದಿಗೆ ಉಬರ್ ತನ್ನ ರೈಡ್-ಹೇಲಿಂಗ್ ಸೇವೆಗಳಿಗಾಗಿ ದೆಹಲಿಯಲ್ಲಿ 10,000 ಇವಿ ದ್ವಿಚಕ್ರ ವಾಹನಗಳಿಗಾಗಿ Zypp ಎಲೆಕ್ಟ್ರಿಕ್‌ನೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಂಡಿದೆ. ಇವಿ ಫೈನಾನ್ಸಿಂಗ್‌ನಲ್ಲಿ 1,000 ಕೋಟಿಗಳನ್ನು ಅನ್‌ಲಾಕ್ ಮಾಡಲು ಎಸ್‌ಐಡಿಬಿಐ ಯೊಂದಿಗೆ ಪಾಲುದಾರಿಕೆಯನ್ನು ಪಡೆದುಕೊಂಡಿದೆ. ಅದರಂತೆ ಈಗ ಓಲಾ ತನ್ನ ವ್ಯಾಪಾರ ವಿಭಾಗಗಳನ್ನು ವಿಸ್ತರಿಸುತ್ತಿದ್ದು, ಸೆಪ್ಟೆಂಬರ್‌ನಲ್ಲಿ ಓಲಾ ಆಹಾರ ವಿತರಣಾ ಸೇವೆಗಳನ್ನು ಒದಗಿಸಲು ಸರ್ಕಾರದ ಬೆಂಬಲಿತ ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ONDC) ಜೊತೆ ಕೈಜೋಡಿಸಿದೆ.
ಇನ್ನು 2022 ರಲ್ಲಿ ಓಲಾ ತನ್ನ ಕ್ಲೌಡ್ ಕಿಚನ್ ವ್ಯವಹಾರವನ್ನು 10 ನಿಮಿಷಗಳ ದಿನಸಿ ವಿತರಣೆಯೊಂದಿಗೆ ಸಂಯೋಜಿಸುವ ಬಗ್ಗೆ ಘೋಷಣೆ ಮಾಡಿತ್ತು. ಇದರೊಂದಿಗೆ ಈಗ ಓಲಾ ಕ್ಯಾಬ್ಸ್ ತನ್ನ ಬೈಕ್ ಟ್ಯಾಕ್ಸಿ ಸೇವೆಗಳನ್ನು ಮರುಪ್ರಾರಂಭಿಸುವುದಾಗಿಯೂ ಘೋಷಣೆ ಮಾಡಿದ್ದು, ಬೆಂಗಳೂರಿನಲ್ಲಿ ಓಲಾ ಎಲೆಕ್ಟ್ರಿಕ್‌ನ S1 ಸ್ಕೂಟರ್‌ಗಳನ್ನು ಮಾತ್ರ ಇದಕ್ಕೆ ಬಳಕೆ ಮಾಡಿಕೊಂಡಿದೆ. ಈಗಾಗಲೇ ಈ ಸೇವೆಗೆ ಆಟೋ ಹಾಗೂ ಕ್ಯಾಬ್ ಡ್ರೈವರ್‌ಗಳು ತೀವ್ರ ರೀತಿಯಲ್ಲಿ ಕಿಡಿಕಾರಿದ್ದಾರೆ.


Click it and Unblock the Notifications








