Subscribe to Gizbot

ಒಲಾ ದಿಂದ ಹೊಸ ಪ್ರಯತ್ನ: ಮಾರುಕಟ್ಟೆಗೆ ಹೊಸ ಎಲೆಕ್ಟ್ರಿಕ್ ಕಾರುಗಳು

Posted By: -

ಭಾರತೀಯ ಮಾರುಕಟ್ಟೆಯಲ್ಲಿ ಆಪ್ ಆಧಾರಿತ ಟ್ಯಾಕ್ಸಿ ಸೇವೆಯನ್ನು ನೀಡುತ್ತಿರುವ ಭಾರತೀಯ ಮೂಲದ ಒಲಾ ಸಂಸ್ಥೆಯೂ ಹೊಸ ಪ್ರಯತ್ನವೊಂದಕ್ಕೆ ಮುಂದಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಹೊಸ ವಾಹನಗಳನ್ನು ಪರಿಚಯಿಸಲು ಮುಂದಾಗಿದೆ. ಎಲೆಕ್ಟ್ರಿಕ್ ವಾಹನಗಳನ್ನು ಭಾರತೀಯ ರಸ್ತೆಗಳಿಗೆ ಇಳಿಸಲಿದ್ದು, ಇದು ಭಾರತೀಯ ವಾಹನ ಉದ್ಯಮದಲ್ಲಿ ಹೊಸ ಭಾಷ್ಯವನ್ನು ಬರೆಯಲಿದೆ.

ಒಲಾ ದಿಂದ ಹೊಸ ಪ್ರಯತ್ನ: ಮಾರುಕಟ್ಟೆಗೆ ಹೊಸ ಎಲೆಕ್ಟ್ರಿಕ್ ಕಾರುಗಳು

ಈಗಾಗಲೇ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಭರಾಟೆ ಆರಂಭವಾಗಿದ್ದು, 2030ಕ್ಕೆ ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಕಾಣಿಸಿಕೊಳ್ಳಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರವೂ ಕಾರ್ಯಪ್ರವೃತ್ತವಾಗಿದ್ದು, ಇದಕ್ಕೆ ಇಂಬು ನೀಡುವಂತೆ ಒಲಾ ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ವಾಹನಗಳನ್ನು ಈಗಲೇ ರಸ್ತೆಗೆ ಇಳಿಸಲಿದೆ.

'ನಾಗಪುರ್ ನಲ್ಲಿ ಮೊದಲಿಗೆ ಒಲಾ ಎಲೆಕ್ಟ್ರಿಕ್ ವಾಹನ ಎಲೆಕ್ಟ್ರಿಕ್ ನವನ್ನು ಪರಿಚಯಿಸಲಿದ್ದು, ಪರೀಕ್ಷೆ ನಡೆಸಲಿದೆ. ಒಂದು ವೇಳೆ ಇದು ಒಲಾಗೆ ಹೆಚ್ಚಿನ ಲಾಭವನ್ನು ತಂದು ಕೊಟ್ಟಲ್ಲಿ ಮುಂದಿನ ದಿನದಲ್ಲಿ ದೇಶದ ಪ್ರಮುಖ ನಗರಗಳಲ್ಲಿ ತನ್ನ ಎಲೆಕ್ಟ್ರಿಕ್ ಕಾರುಗಳನ್ನು ಓಡಿಸಲಿದೆ ಎನ್ನಲಾಗಿದೆ.

ಓದಿರಿ: ಶಾಕಿಂಗ್ ನ್ಯೂಸ್: ಜಿಯೋ ಹಿಂದಿಕ್ಕುವ ಭರದಲ್ಲಿ ಏರ್‌ಟೆಲ್‌ ನಿಂದ ಬಳಕೆದಾರರಿಗೆ ಮಹಾ ಮೋಸ..!

ಈಗಾಗಲೇ ಒಲಾ, ಜಪಾನ್ ಮೂಲದ ಸಾಫ್ಟ್ ಬ್ಯಾಂಕ್ ನಿಂದ 9 ಮಿಲಿಯನ್ ಬಂಡವಾಳವನ್ನು ಪಡೆದುಕೊಂಡಿದ್ದು, ಇದರಲ್ಲಿಯೇ ಎಲೆಕ್ಟ್ರಿಕ್ ವಾಹನವನ್ನು ಅಭಿವೃದ್ಧಿ ಪಡಿಸಲಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ. ಇದಲ್ಲದೇ ಒಲಾ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸ್ಟೇಷನ್ ಗಳನ್ನು ಆರಂಭಿಸುವ ಯೋಜನೆಯನ್ನು ರೂಪಿಸಿದೆ.

ಒಲಾ ದಿಂದ ಹೊಸ ಪ್ರಯತ್ನ: ಮಾರುಕಟ್ಟೆಗೆ ಹೊಸ ಎಲೆಕ್ಟ್ರಿಕ್ ಕಾರುಗಳು

ಮೊದಲಿಗೆ ಒಲಾ 20 ಎಲೆಕ್ಟ್ರಿಕ್ ಕಾರುಗಳನ್ನು ನಾಗಪುರ್ ನಲ್ಲಿ ಓಡಿಸಲಿದ್ದು, ಇದಾ ನಂತರದಲ್ಲಿ ವಾಹನಗಳ ಸಂಖ್ಯೆಯನ್ನು ಹೆಚ್ಚಿಸುವುದಲ್ಲದೇ, ಈ ಸೇವೆಯನ್ನು ದೇಶದ ವಿವಿಧ ನಗರಗಳಿಗೂ ವಿಸ್ತರಿಸಲಿದೆ ಎನ್ನುವ ಮಾತು ಕೇಳಿ ಬಂದಿದೆ.

Do you know what all u can do by Downloading Hike Messenger app.?
ಈಗಾಗಲೇ ಪವರ್ ಸ್ಟೆಷನ್ ಗಳನ್ನು ನಿರ್ಮಿಸುವ ಕಾರ್ಯವೂ ಆರಂಭವಾಗಿದ್ದು, ದಿನದಿಂದ ದಿನಕ್ಕೆ ಅವುಗಳ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ ಎಂಬುದನ್ನು ಒಲಾ ತಿಳಿಸಿದೆ.
English summary
Ola's big electric vehicle plan in India hits a snag. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot