ಓಲಾ ಎಲೆಕ್ಟ್ರಿಕ್ ಸ್ಕೂಟರ್‌ ಖರೀದಿಸುವ ಗ್ರಾಹಕರಿಗೆ ಕಾದಿದೆ ಬಿಗ್ ಶಾಕ್!

|

ಜನಪ್ರಿಯ ಓಲಾ ಸಂಸ್ಥೆಯು ಇತ್ತೀಚಿಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪರಿಚಯಿಸಿ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಿದೆ. ಓಲಾ ಕಂಪನಿಯು ಬಿಡುಗಡೆ ಮಾಡಿರುವ ಓಲಾ S1 ಮತ್ತು ಓಲಾ S1 ಪ್ರೊ ಹೆಸರಿನ ಎರಡು ಸ್ಕೂಟರ್‌ಗಳು ಭಿನ್ನ ಬಣ್ಣಗಳ ಆಯ್ಕೆಯೊಂದಿಗೆ ಆಕರ್ಷಕ ಡಿಸೈನ್ ಹೊಂದಿದ್ದು, ಗ್ರಾಹಕರ ಗಮನ ಸೆಳೆದಿವೆ. ಆದರೆ ಓಲಾ S1 ಪ್ರೊ ಸ್ಕೂಟರ್‌ ಖರೀದಿಸುವ ಗ್ರಾಹಕರಿಗೆ ಸದ್ಯದಲ್ಲೇ ಬಿಗ್ ಶಾಕ್ ಕಾದಿದೆ.

ಓಲಾ

ಹೌದು, ಓಲಾ ಸಂಸ್ಥೆಯು ಓಲಾ S1 ಪ್ರೊ ಸ್ಕೂಟರ್‌ ಬೆಲೆಯನ್ನು ಏರಿಕೆ ಮಾಡಲಾಗುವುದು ಎಂದು ಕಂಪನಿಯು ತಿಳಿಸಿದೆ. ಓಲಾ ಸಿಇಒ ಭವಿಶ್ ಅಗರ್ವಾಲ್ ತಮ್ಮ ಅಧಿಕೃತ ಟ್ವಿಟರ್ ಓಲಾ S1 ಪ್ರೊ ಸ್ಕೂಟರ್ ಬೆಲೆ ಏರಿಕೆಯ ಘೋಷಣೆ ಮಾಡಿದ್ದಾರೆ. ಆದರೆ ಬೆಲೆ ಏರಿಕೆಯ ನಿಖರ ಶ್ರೇಣಿಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಇನ್ನು ಓಲಾ S1 ಪ್ರೊ (Ola S1 Pro) ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೂರನೇ ಖರೀದಿ ವಿಂಡೋ ಮುಗಿದ ನಂತರ ಬೆಲೆಯನ್ನು ಹೆಚ್ಚಿಸಲಿದೆ.

ಧನ್ಯವಾದಗಳು

ಅಗರ್ವಾಲ್ ತಮ್ಮ ಟ್ವೀಟ್‌ನಲ್ಲಿ, 'ಈಗಾಗಲೇ S1 ಪ್ರೊ ಅನ್ನು ಖರೀದಿಸಿದ ಎಲ್ಲರಿಗೂ ಧನ್ಯವಾದಗಳು ಮತ್ತು ಅವರ 2 ನೇ ಅಥವಾ 3 ನೇ S1 ಪ್ರೊ ಅನ್ನು ಖರೀದಿಸಿದವರಿಗೆ ವಿಶೇಷ ಧನ್ಯವಾದಗಳು! 129,999ರೂ. ಗೆ ಅದನ್ನು ಪಡೆಯಲು ಕೊನೆಯ ಅವಕಾಶ. ಮುಂದಿನ ವಿಂಡೋದಲ್ಲಿ ನಾವು ಬೆಲೆಗಳನ್ನು ಹೆಚ್ಚಿಸುತ್ತೇವೆ. ಈ ವಿಂಡೋ 18 ರ ಮಧ್ಯರಾತ್ರಿ ಕೊನೆಗೊಳ್ಳುತ್ತದೆ!. ಎಂದು ತಿಳಿಸಿದ್ದಾರೆ.

ಹೊಸ ಬಣ್ಣದ ಆಯ್ಕೆಯಲ್ಲಿ ಓಲಾ S1 ಪ್ರೊ

ಹೊಸ ಬಣ್ಣದ ಆಯ್ಕೆಯಲ್ಲಿ ಓಲಾ S1 ಪ್ರೊ

ಓಲಾ S1 ಪ್ರೊ ಸ್ಕೂಟರ್‌ನ ಮೂರನೇ ಖರೀದಿ ವಿಂಡೋವನ್ನು ಇಂದು ಮಾರ್ಚ್ 17 ರಂದು ತೆರೆಯಲಾಗಿದ್ದು, ಮಾರ್ಚ್ 18 ರಂದ (ಇಂದು) ವರೆಗೆ ಇರಲಿದೆ ಎನ್ನಲಾಗಿದೆ. ಮೂರನೇ ಹಂತದ ಮಾರಾಟದ ಸಮಯದಲ್ಲಿ ಹೋಳಿ ಹಬ್ಬದ ಸಂಭ್ರದ ಪ್ರಯುಕ್ತ ಓಲಾ ಸಂಸ್ಥೆಯ ಹೊಸ ಗೆರುವಾ (Gerua) ಬಣ್ಣದ ವೇರಿಯಂಟ್‌ ಅನ್ನು ಪರಿಚಯಿಸಿದೆ. ಇನ್ನು ಈ ಹೊಸ ಗೆರುವಾ ಬಣ್ಣವು ಈ ಮಾರಾಟಕ್ಕೆ ಸೀಮಿತವಾಗಿದೆ.

ಪ್ರಸ್ತುತ ಓಲಾ ಸ್ಕೂಟರ್ ಬೆಲೆ?

ಪ್ರಸ್ತುತ ಓಲಾ ಸ್ಕೂಟರ್ ಬೆಲೆ?

ಓಲಾ S1 ಪ್ರೊ ಸ್ಕೂಟರ್ ಬೆಲೆ 1,29,999 ರೂ ಮತ್ತು ಓಲಾ S1 ಸ್ಕೂಟರ್ ಬೆಲೆ 99,999 ರೂ. ಆಗಿದೆ. ಇನ್ನು ಬೆಲೆ ಏರಿಕೆಯು ಈ ಎರಡೂ ವೇರಿಯಂಟ್‌ಗಳಿಗೂ ಅನ್ವಯವಾಗುತ್ತದೆಯೇ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಇನ್ನು ಓಲಾ ಎಲೆಕ್ಟ್ರಿಕ್‌ ಸ್ಕೂಟರ್ ಗಳ ಕೆಲವು ಫೀಚರ್ಸ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಪರಿಚಯಿಸಿದೆ

ಓಲಾ ಇ-ಸ್ಕೂಟರ್ ಹಲವು ಕಾರಣಗಳಿಂದಾಗಿ ಜನರನ್ನು ಆಕರ್ಷಿಸಿದೆ. ಆ ಪೈಕಿ ಬೈಕ್ ಕಲರ್‌ ಆಯ್ಕೆಯು ಒಂದಾಗಿದೆ. ಓಲಾದ ಇ-ಸ್ಕೂಟರ್ ಒಟ್ಟು 10 ನವೀನ ಬಣ್ಣದ ಆಯ್ಕೆಗಳನ್ನು ಒಳಗೊಂಡಿದೆ. ಕ್ರಮವಾಗಿ ಅವು ಕಪ್ಪು, ಬಿಳಿ, ಬೂದು, ಹಳದಿ, ಕೆಂಪು, ನೀಲಿ ಸಹ ಸೇರಿವೆ. ಈಗ ಹೊಸದಾಗಿ ಗೆರುವಾ (Gerua) ಬಣ್ಣದ ವೇರಿಯಂಟ್‌ ಪರಿಚಯಿಸಿದೆ. ಹಾಗೆಯೇ ಈ ಬೈಕ್‌ನ ಗರಿಷ್ಠ ವೇಗ ಗಂಟೆಗೆ 90 ಕಿಮೀ ಆಗಿದ್ದು, ಒಂದು ಪೂರ್ಣ ಚಾರ್ಜ್‌ನಲ್ಲಿ 150 ಕಿಮೀ ವರೆಗೆ ಸುಲಭವಾಗಿ ಚಲಿಸಬಲ್ಲದು ಎಂದು ಹೇಳಲಾಗಿದೆ. ಬೂಟ್‌ ಸ್ಪೇಸ್‌ನಲ್ಲಿ ಹೆಲ್ಮೆಟ್ ಅನ್ನು ಇಡಬಹುದಾಗಿದೆ. ಇದರೊಂದಿಗೆ ಸ್ಮಾರ್ಟ್ ಫೋನ್ ಸಂಪರ್ಕ ಆಯ್ಕೆ ಸಹ ಓಲಾ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿಯೂ ಲಭ್ಯ.

Best Mobiles in India

English summary
Ola S1 Pro Electric Scooter Price to be Hiked soon, company confirms.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X