ಇಂದಿನಿಂದ ಓಲಾ S1 ಮತ್ತು ಓಲಾ S1 ಪ್ರೊ ಇವಿ ಸ್ಕೂಟರ್ ವಿತರಣೆ ಪ್ರಾರಂಭ!
ಓಲಾ ಕಂಪನಿಯ ಬಹುನಿರೀಕ್ಷಿತ ಓಲಾ S1 ಮತ್ತು ಓಲಾ S1 ಪ್ರೊ ಇವಿ ಸ್ಕೂಟರ್ ಇಂದಿನಿಂದ (ಡಿ.15) ವಿತರಣೆ ಪ್ರಾರಂಭ ಆಗಲಿದೆ. ಓಲಾ ಕಂಪನಿಯ ಈ ಎರಡು ಮಾಡೆಲ್ ಸ್ಕೂಟರ್‌ಗಳು ಈಗಾಗಲೇ ಗ್ರಾಹಕರ ಗಮನ ಸೆಳೆದಿವೆ. ಚಿಪ್ ಕೊರತೆಯಿಂದಾಗಿ ಕಂಪನಿಯು ಸ್ಕೂಟರ್ ವಿತರಣಾ ದಿನಾಂಕ ಸುಮಾರು ಎರಡು ತಿಂಗಳು ವಿಳಂಬ ಆಗಿದೆ ಎಂದು ಓಲಾ ಸಿಇಒ ಭವಿಶ್ ಅಗರ್ವಾಲ್ ತಿಳಿಸಿದ್ದಾರೆ.

ಓಲಾ ಸಿಇಒ ಭವಿಶ್ ಅಗರ್ವಾಲ್ ತಮ್ಮ ಟ್ವೀಟ್‌ನಲ್ಲಿ ಅವರು, 'ಸ್ಕೂಟರ್‌ಗಳು ಸಿದ್ಧವಾಗುತ್ತಿವೆ. ಉತ್ಪಾದನೆಯನ್ನು ಹೆಚ್ಚಿಸಲಾಗಿದೆ ಮತ್ತು ಡಿಸೆಂಬರ್ 15 ರಿಂದ ವಿತರಣೆಯನ್ನು ಪ್ರಾರಂಭಿಸಲು ಸಜ್ಜಾಗಿದೆ. ನಿಮ್ಮ ತಾಳ್ಮೆಗೆ ಧನ್ಯವಾದಗಳು!' ಎಂದು ತಿಳಿಸಿದ್ದರು. ಹಾಗೆಯೇ ಈಗ ಸ್ಕೂಟರ್‌ಗಳನ್ನು ರವಾನಿಸಲಾಗುತ್ತಿದೆ ಎಂದು ಸೋಮವಾರ ಅವರು ಖಚಿತಪಡಿಸಿದರು.
ಓಲಾ ಸಂಸ್ಥೆಯು ಸೆಪ್ಟೆಂಬರ್ ತಿಂಗಳಲ್ಲಿ ಓಲಾ S1 ಮತ್ತು ಓಲಾ S1 ಪ್ರೊ ಸ್ಕೂಟರ್‌ಗಳ ಬುಕಿಂಗ್ ಅನ್ನು ಪ್ರಾರಂಭಿಸಿತು. ಮುಂಗಡ ಬುಕಿಂಗ್ ಮೊತ್ತ 499 ರೂ. ನೀಡಿತ್ತು. ಕಂಪನಿಯು ಅಕ್ಟೋಬರ್‌ನಲ್ಲಿ ವಿತರಣೆಯನ್ನು ಪ್ರಾರಂಭಿಸಲು ಯೋಜಿಸಿತ್ತು. ನಂತರ ಅದನ್ನು ನವೆಂಬರ್‌ಗೆ ಮುಂದೂಡಲಾಯಿತು. ಈಗ ಓಲಾ ಅಂತಿಮವಾಗಿ ಡಿಸೆಂಬರ್ ತಿಂಗಳಿನಲ್ಲಿ ವಿತರಣೆಯನ್ನು ಪ್ರಾರಂಭಿಸಲಿದೆ.

ಇನ್ನು ಸ್ಕೂಟರ್ ಬುಕ್ ಮಾಡಿದ ಕೆಲವು ಖರೀದಿದಾರರು, ಸ್ಕೂಟರ್ ವಿತರಣೆ ವಿಳಂಬದ ಆದ ಕಾರಣ ತಮ್ಮ ಬುಕಿಂಗ್ ಅನ್ನು ರದ್ದುಗೊಳಿಸಿದ್ದಾರೆ. ಖರೀದಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಖರೀದಿದಾರರಿಗೆ ಸ್ಕೂಟರ್ ವಿತರಣೆಗಳನ್ನು ಮಾಡಲಾಗುತ್ತದೆ. ಓಲಾ ಇವಿ ಕಳೆದ ತಿಂಗಳು ಟೆಸ್ಟ್ ಡ್ರೈವ್‌ಗಳಿಗೆ ಬಳಕೆದಾರರನ್ನು ಆಹ್ವಾನಿಸಿತು ಮತ್ತು ನಂತರ ಬುಕಿಂಗ್ ಅನ್ನು ಖಚಿತಪಡಿಸಲು ಬಯಸುವವರು ಸ್ಕೂಟರ್‌ಗೆ ಪಾವತಿಸಲು ಆಯ್ಕೆ ಸಹ ನೀಡಿತ್ತು.

ಓಲಾ ಎಲೆಕ್ಟ್ರಿಕ್‌ನ ಓಲಾ S1 ಪ್ರೊ ಪವರ್‌ಟ್ರೇನ್ ಅನ್ನು ಪಡೆಯುತ್ತದೆ. ಅದು 8.4 kW ಗರಿಷ್ಠ ವಿದ್ಯುತ್ ಉತ್ಪಾದನೆಯನ್ನು ಮತ್ತು 181 km ನ ARAI ಪ್ರಮಾಣೀಕೃತ ಶ್ರೇಣಿಯನ್ನು ಉತ್ಪಾದಿಸುತ್ತದೆ. S1 ಪ್ರೊ ಸ್ಕೂಟರ್ ಹೈಪರ್ ಮೋಡ್ ನಲ್ಲಿ, 3 ಸೆಕೆಂಡುಗಳಲ್ಲಿ 0-40 km/h ವೇಗವನ್ನು ಪಡೆಯಬಹುದು. ಓಲಾ S1 ARAI ಪ್ರಮಾಣೀಕೃತ ಶ್ರೇಣಿಯೊಂದಿಗೆ 121 km ಮತ್ತು 90kmph ವೇಗವನ್ನು ಹೊಂದಿದೆ. ಓಲಾ S1 3.6 ಸೆಕೆಂಡುಗಳಲ್ಲಿ 0-40 km/h ವೇಗವನ್ನು ಪಡೆಯಬಹುದು.
ಒಪ್ಪೋ ಎಲೆಕ್ಟ್ರಿಕ್ ವಾಹನ
ಒಪ್ಪೋ ಎಲೆಕ್ಟ್ರಿಕ್ ವಾಹನ ತಯಾರಿಕಾ ವಲಯಕ್ಕೆ ಕಾಲಿಡಲು ಸಜ್ಜಾಗಿದೆ. 2024ರಲ್ಲಿ ಒಪ್ಪೋ ಭಾರತದಲ್ಲಿ ಒಪ್ಪೋ EV ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಅನ್ನು ಲಾಂಚ್ ಮಾಡಲು ತಯಾರಿ ನಡೆಸಿದೆ ಎಂದು ವರದಿಯಾಗಿದೆ. ಸದ್ಯ ಈ ಯೋಜನೆ ಇನ್ನೂ ಆರಂಭಿಕ ಹಂತದಲ್ಲಿದೆ ಎನ್ನಲಾಗಿದೆ. ಈಗಾಗಲೇ ಒಪ್ಪೋ ಕಂಪನಿಯು ಬ್ಯಾಟರಿ ಮತ್ತು ಇತರ ಬಿಡಿ ಭಾಗಗಳ ತಯಾರಕರೊಂದಿಗೆ ಮಾತುಕತೆ ಪ್ರಾರಂಭಿಸಿದೆ ಎನ್ನಲಾಗಿದೆ. ಅಧಿಕೃತವಾಗಿ ಒಪ್ಪೋ ಎಲೆಕ್ಟ್ರಿಕ್ ಸ್ಕೂಟರ್ ಯಾವಾಗ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲ.
ಹಾಗೆಯೇ ಒಪ್ಪೊ ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್ ತಯಾರಿಕೆಯಲ್ಲಿ ಕೆಲಸ ಮಾಡುತ್ತಿದೆ ಎನ್ನಲಾಗಿದೆ. ಅದರೊಂದಿಗೆ ಒಪ್ಪೋ EV ಕಾಂಪ್ಯಾಕ್ಟ್ ಕಾರ್ ಅನ್ನು ಸಹ ಪರಿಚಯಿಸಬಹುದು ಎಂದು ಹೇಳಲಾಗುತ್ತಿದೆ. ಒಪ್ಪೋ EV ಕಾಂಪ್ಯಾಕ್ಟ್ ಕಾರ್ ಟಾಟಾ ನ್ಯಾನೋ ಕಾರಿಗೆ ಹೋಲುತ್ತದೆ ಎನ್ನಲಾಗಿದೆ. ಒಪ್ಪೋ EV ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಬಗ್ಗೆ ಹಲವು ಸುದ್ದಿಗಳು ಹರಿದಾಡುತ್ತಿವೆ. ಬರಲಿರುವ ಒಪ್ಪೋ ಎಲೆಕ್ಟ್ರಿಕ್ ಸ್ಕೂಟರ್ ಸುಮಾರು 60,000 ರೂ.ಗಳ ಆಸುಪಾಸಿನಲ್ಲಿ ಇರಲಿದೆ ಎಂದು ಹೇಳಲಾಗುತ್ತಿದೆ.


Click it and Unblock the Notifications




