Subscribe to Gizbot

ಓಲಾ ಮತ್ತು ಉಬರ್ ಶೇರ್ ನಿಷೇಧದಿಂದ ತೊಂದರೆಯೇ ಹೆಚ್ಚು!! ಏಕೆ?

Written By:

ಸಾರಿಗೆ ಇಲಾಖೆಯ ಅಧಿಕಾರಿಗಳ ನಿರ್ದೇಶನದಂತೆ ಓಲಾ ಶೇರ್ ಮತ್ತು ಉಬರ್ ಪೂಲ್ ಸೇವೆ ಇದೇ ಶುಕ್ರವಾರದಿಂದ ಸ್ಥಗಿತಗೊಳ್ಳಲಿದೆ. ಈ ಬಗ್ಗೆ ಪ್ರಯಾಣಿಕರು ಆತಂಕ ವ್ಯಕ್ತಪಡಿಸಿದ್ದು, ಅತ್ಯಂತ ಉಪಯುಕ್ತವಾಗಿರುವ ಕಾರ್‌ ಪೂಲಿಂಗ್‌ ಸೇವೆಯನ್ನು ಯಾವ ಕಾರಣಕ್ಕೆ ರದ್ದು ಮಾಡಲಾಗುತ್ತಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಡಿಮೆ ಬೆಲೆಯಲ್ಲಿ ಅತ್ಯಂತ ಉಪಯುಕ್ತವಾದ ಸೇವೆಯನ್ನು ಇದ್ದಕ್ಕಿದ್ದ ಹಾಗೆ ಸ್ಥಗಿತಗೊಳಿಸಿರುವುದು ಸರಿಯಲ್ಲ. ಮತ್ತು ಕಾರ್‌ ಪೂಲಿಂಗ್ ಸೇವೆಯನ್ನು ಯಾವ ನಿರ್ಧಿಷ್ಟ ಕಾರಣಕ್ಕಾಗಿ ರದ್ದು ಮಾಡಲಾಗುತ್ತಿದೆ ಎಂದು ತಿಳಿಯುತ್ತಿಲ್ಲ ಎಂದು ಎಂದು ಕಾರ್‌ ಪೂಲಿಂಗ್‌ ಸೇವೆಯನ್ನು ಬಳಸುವವರು ದೂರಿದ್ದಾರೆ.

ಓಲಾ ಮತ್ತು ಉಬರ್ ಶೇರ್ ನಿಷೇಧದಿಂದ ತೊಂದರೆಯೇ ಹೆಚ್ಚು!! ಏಕೆ?

ಭೀಮ್‌ ಆಪ್‌ನಲ್ಲಿ ಆಧಾರ್ ಸಂಖ್ಯೆ ಮೂಲಕ ಹಣ ಸೆಂಡ್ ಹೇಗೆ? ಫುಲ್ ಡೀಟೆಲ್ಸ್!!!

ಹಾಗಾದರೆ ಕಾರ್‌ ಪೂಲಿಂಗ್ ಸೇವೆಯನ್ನು ನಿಷೇಧಿಸುವುದರಿಂದ ಆಗುವ ನಷ್ಟವೇ ಹೆಚ್ಚು ಎಂದರೆ ನಿಜಕ್ಕೂ ಹೌದು ಎನ್ನಬಹುದು.! ಕಡಿಮೆ ದರದಲ್ಲಿ ಅತ್ಯುತ್ತಮ ಸೇವೆಯನ್ನು ನೀಡುತ್ತಿರುವ ಕಾರ್‌ ಪೂಲಿಂಗ್ ವ್ಯವಸ್ಥೆ ಎಷ್ಟೋ ಜನರಿಗೆ ವರದಾನವೆನ್ನಬಹುದು.!! ರಾತ್ರಿ ಬೆಳಗ್ಗೆ ಎನ್ನದೇ ನಮಗೆ ಬೇಕಾದ ಸಮಯದಲ್ಲಿ ಸರಿಯಾದ ದರವನ್ನು ಪಾವತಿ ಮಾಡಿ ಎಲ್ಲಾದರೂ ಪ್ರಯಾಣಿಸುವುದು ಎಂದರೆ ಅದು ನಿಜಕ್ಕೂ ಅತ್ಯುತ್ತಮ ಸೇವೆ ಎಂದು ಹೇಳಬಹುದು.

ಓಲಾ ಮತ್ತು ಉಬರ್ ಶೇರ್ ನಿಷೇಧದಿಂದ ತೊಂದರೆಯೇ ಹೆಚ್ಚು!! ಏಕೆ?

ಇನ್ನು ಈ ಬಗ್ಗೆ ಮಾತನಾಡಿದ ಮಹಿಳಾ ಪ್ರಯಾಣಿಕರೋರ್ವರು, ಮಹಿಳೆಯರ ರಕ್ಷಣೆಗೆ ಕಾರ್‌ ಪೂಲಿಂಗ್‌ ಸೇವೆಯಿಂದ ಯಾವುದೇ ತೊಂದರೆಯಾಗಿಲ್ಲ. ಕೇವಲ ಊಹೆಯ ಮೇಲೆ ಇವುಗಳನ್ನು ನಿಶೇಧಿಸುವ ಅವಶ್ಯಕತೆಇಲ್ಲ ಎಂದು ಅಭಿಪ್ರಾಯಪಟ್ಟರು. 

ಇನ್ನು ಕೇಂದ್ರ ಸರ್ಕಾರ ರಚಿಸಿದ್ದ ಸಮಿತಿ ಸಹ 'ದೇಶದ ಸಂಕೀರ್ಣ ರಸ್ತೆಗಳಿಗೆ ಕಾರ್ ಪೂಲಿಂಗ್‌ ಅತ್ಯಂತ ಉತ್ತಮ ಸಾರಿಗೆ ವ್ಯವಸ್ಥೆ. ಸ್ವಂತ ವಾಹನವನ್ನು ಹೊಂದುವ ಪ್ರವೃತ್ತಿಯನ್ನು ನಿಯಂತ್ರಿಸಲು ಉತ್ತಮ ಪರಿಹಾರ' ಎಂದು ಈ ಸೇವೆಯನ್ನು ಹೊಗಳಿತ್ತು. ಅಲ್ಲದೆ, ಶೇರ್‌ ವ್ಯವಸ್ಥೆಗೆ ರಾಜ್ಯ ಸರ್ಕಾರಗಳು ಅನುಮತಿ ನೀಡಬೇಕೆಂದು ಶಿಫಾರಸು ಮಾಡಿತ್ತು.

English summary
Starting this Friday, commuters will not be able to share a ride to work through taxi aggregators Ola and Uber in Bengaluru.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more