ಆಧಾರ್ ಸಂಖ್ಯೆ ಮೂಲಕ ಹಣ ಪಾವತಿ ಮಾಡುವುದು ಹೇಗೆ? ಫುಲ್ ಡೀಟೆಲ್ಸ್!!

Written By:

ಭಾರತದಲ್ಲಿ ಡಿಜಿಟಲ್‌ ಪೇಮೆಂಟ್‌ಗೆ ಬಲತುಂಬಲು ಭಾರತ ಸರ್ಕಾರವೇ ಡಿಜಿಟಲ್‌ ಆಪ್‌ ಅನ್ನು ಬಿಡುಗಡೆಮಾಡಿದೆ. ಬಹುತೇಕ ಭಾರತೀಯರು ಡಿಜಿಟಲ್‌ ಪೇಮೆಂಟ್ ಮಾಡಲು ಹೆಚ್ಚು ಸೆಕ್ಯೂರ್ ಆಗಿರುವ ಭೀಮ್ ಆಪ್‌ ಬಳಸುತ್ತಿದ್ದು, ಇದಕ್ಕೆ ಇದೀಗ ಆಧಾರ್ ಬಯೋಮೆಟ್ರಿಕ್ ತಂತ್ರಜ್ಞಾನ ಸಹ ಸೇರ್ಪಡೆಯಾಗಿದೆ.!

ಹೌದು, ಭೀಮ್ ಆಪ್‌ ಇದೀಗ ಆಧಾರ್ ಕಾರ್ಡ್ ಬಯೋಮೆಟ್ರಿಕ್ ತಂತ್ರಜ್ಞಾನವನ್ನು ಒಳಗೊಂಡಿದ್ದು, ಕೇವಲ ಆಧಾರ್‌ ಕಾರ್ಡ್‌ ನಂಬರ್‌ ಮೂಲಕವೇ ಹಣ ವರ್ಗಾವಣೆ ಮಾಡಬಹುದಾದ ಸೌಲಭ್ಯವನ್ನು ನೀಡಿದೆ. ನೀವು ಹಣ ಕಳುಹಿಸಬೇಕಾದ ಆಧಾರ್‌ ಕಾರ್ಡ್ ನಂಬರ್‌ ನಮೂದಿಸಿ ಹಣ ವರ್ಗಾವಣೆ ಮಾಡಬಹುದಾಗಿದೆ.

ಎಲ್ಲೆಂದರಲ್ಲಿ ಸ್ಮಾರ್ಟ್‌ಫೋನ್ ಚಾರ್ಜ್‌ ಹಾಕುತ್ತಿದ್ದೀರಾ?..ಶಾಕಿಂಗ್ ವರದಿ ಓದಿ!!

ಯುನಿಕ್ ಐಡೆಂಟಿಕ್ ಅಥಾರಿಟಿ ಆಫ್ ಇಂಡಿಯಾ ( UIDAI) ಪ್ರಕಾರ ದೇಶದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ 92 ಪರ್ಸೆಂಟ್‌ ಜನರು ಈಗಾಗಲೇ ಆಧಾರ್‌ ಕಾರ್ಡ್‌ ಹೊಂದಿದೆ ಎಂದು ತಿಳಿಸಿದೆ. ರಿಪೋರ್ಟ್ ಪ್ರಕಾರ 390 ಮಿಲಿಯನ್ ಬ್ಯಾಂಕ್ ಅಕೌಂಟ್‌ಗಳು ಆಧಾರ್‌ ಕಾರ್ಡ್‌ ನಂಬರ್‌ಗೆ ಲಿಂಕ್ ಆಗಲಿವೆ.!!

ಆಧಾರ್ ಕಾರ್ಡ್ ಬಯೋಮೆಟ್ರಿಕ್ ತಂತ್ರಜ್ಞಾನದ ಮೂಲಕ ಹಣ ವರ್ಗಾವಣೆ ನಡೆಸಲು ಈಗಾಗಲೇ 14 ಬ್ಯಾಂಕ್‌ಗಳು ಮಂದೆ ಬಂದಿದ್ದು, ಇನ್ನು ಹಲವು ಬ್ಯಾಂಕ್‌ಗಳು ಆಧಾರ್ ಕಾರ್ಡ್ ಬಯೋಮೆಟ್ರಿಕ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಮುಂದೆ ಬಂದಿವೆ ಎನ್ನಲಾಗಿದೆ.ಹಾಗಾಗಿ, ಭೀಮ್ ಆಪ್‌ನಲ್ಲಿ ಆಧಾರ್‌ ನಂಬರ್‌ ಮೂಲಕ ಹೇಗೆ ಹಣವನ್ನು ವರ್ಗಾವಣೆ ಮಾಡುವುದು ಎಂಬುದನ್ನು ಕೆಳಗಿಸ ಸ್ಲೈಡರ್‌ಗಳಲ್ಲಿ ತಿಳಿಯಿರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೆಂಡ್‌ ಮನಿ ಕ್ಲಿಕ್ ಮಾಡಿ.

ಸೆಂಡ್‌ ಮನಿ ಕ್ಲಿಕ್ ಮಾಡಿ.

ಭೀಮ್ ಆಪ್‌ ತೆರೆದು ಸೆಂಡ್‌ ಮನಿ ಎಂಬ ಐಕಾನ್ ಕ್ಲಿಕ್ ಮಾಡಿ. ನಂತರ ನಿಮಗೆ "ಆಧಾರ್‌ ಪೇ" ಮತ್ತು "ಅಕೌಂಟ್‌ ಐಎಫ್ಎಸ್‌ಸಿ" ಎಂಬ ಎರಡು ಆಯ್ಕೆಗಳು ತೆರೆದುಕೊಳ್ಳುತ್ತವೆ.

"ಆಧಾರ್‌ ಪೇ" ಆಯ್ಕೆ ಮಾಡಿ.

"ಆಧಾರ್‌ ಪೇ" ಮತ್ತು "ಅಕೌಂಟ್‌ ಐಎಫ್ಎಸ್‌ಸಿ" ಆಯ್ಕೆಯಲ್ಲಿ "ಆಧಾರ್‌ ಪೇ" ಆಯ್ಕೆಯನ್ನು ಕ್ಲಿಕ್ ಮಾಡಿ. ಆಧಾರ್ ಕಾರ್ಡ್‌ ನಂಬರ್ ತುಂಬಲು ಕೇಳುತ್ತದೆ.

ಆಧಾರ್ ನಂಬರ್ ಮತ್ತು ಮಾಹಿತಿಯನ್ನು ತುಂಬಿರಿ.

ಆಧಾರ್ ನಂಬರ್ ಮತ್ತು ಮಾಹಿತಿಯನ್ನು ತುಂಬಿರಿ.

ಆಧಾರ್ ಕಾರ್ಡ್‌ ನಂಬರ್ ತುಂಬಲು ಆಪ್‌ ಸೂಚಿಸುತ್ತದೆ. ನಂತರ ಆಧಾರ್‌ ನಂಬರ್ ತುಂಬಿ ಮತ್ತು ಎಷ್ಟು ಹಣ ವರ್ಗಾವಣೆ ಮಾಡಬೇಕು ಎಂಬುದನ್ನು ನಮೂದಿಸಿ. ನಂತರ ಪೇ ಬಟನ್‌ ಕ್ಲಿಕ್ ಮಾಡಿ.

ಹಣ ಸೆಂಡ್‌ ಆಗಿರುತ್ತದೆ.

ಹಣ ಸೆಂಡ್‌ ಆಗಿರುತ್ತದೆ.

ಆಧಾರ್‌ ನಂಬರ್ ತುಂಬಿ, ಹಣ ವರ್ಗಾವಣೆ ಮಾಡಿದ ನಂತರ ನೀವು ನಮೂದಿಸಿದ ಆಧಾರ್‌ ಕಾರ್ಡ್ ನಂಬರ್ ಲಿಂಕ್ ಹೊಂದಿರುವ ಬ್ಯಾಂಕ್‌ ಅಕೌಂಟ್‌ಗೆ ಹಣ ಸೆಂಡ್‌ ಆಗಿರುತ್ತದೆ. ನಂತರ ಈ ಮಾಹಿತಿಯನ್ನು ಶೇರ್‌ ಮಾಡಿ.!!

ಸರ್ಕಾರದ ಈ 5 ಯೋಜನೆಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಲೇಬೇಕು!! ಯಾವುವು?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
BHIM app users will now be able to send money using their 12-digit Aadhaar number at places where Aadhaar is listed as a payment option.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot