ಬಾಹ್ಯಾಕಾಶ ನಿಲ್ದಾಣದಲ್ಲಿ ಒಲಂಪಿಕ್ ಜ್ಯೋತಿ ಯಶಸ್ವಿ ಸಂಚಾರ
2014ರ ಸೋಚಿ ಚಳಿಗಾಲದ ಒಲಿಂಪಿಕ್ಸ್ ಜ್ಯೋತಿ ಬಾಹ್ಯಾಕಾಶದಲ್ಲಿ ಯಶಸ್ವಿಯಾಗಿ ಸಂಚರಿಸಿ ಭೂಮಿಗೆ ಮರಳಿದೆ. ರಷ್ಯಾದ ಇಬ್ಬರು ಗಗನಯಾತ್ರಿಗಳು ಜ್ಯೋತಿಯೊಂದಿಗೆ ಬಾಹ್ಯಾಕಾಶಲ್ಲಿ ಸಂಚರಿಸುವ ಮೂಲಕ ರಷ್ಯಾ ಐತಿಹಾಸಿಕ ಹೆಜ್ಜೆ ಇಟ್ಟಿದೆ.
ಸೊಯುಜ್ ನೌಕೆಯಲ್ಲಿದ್ದ ಯಾನಿಗಳು ಕಜಕಿಸ್ತಾನದ Zhezkazganನಲ್ಲಿ ಭಾರತೀಯ ಕಾಲಮಾನ ಬೆಳಗ್ಗೆ 8 ಗಂಟೆ49 ನಿಮಿಷಕ್ಕೆ (0249 GMT) ಯಶಸ್ವಿಯಾಗಿ ಇಳಿದಿದ್ದಾರೆ.ಕಳೆದ ಗುರುವಾರ ಕಜಕಿಸ್ತಾನದ ಬೈಕೊನೂರ್‌ನಿಂದ ಉಡಾವಣೆಯಾದ ಸೊಯುಜ್ ಟಿಎಂಎ-11 ಎಂ(Soyuz TMA-11M) ನೌಕೆಯಲ್ಲಿ ಸೋಚಿ ಚಳಿಗಾಲದ ಒಲಿಂಪಿಕ್ಸ್ ಜ್ಯೋತಿಯೊಂದಿಗೆ ರಷ್ಯಾ,ಜಪಾನ್ ಮತ್ತು ಅಮೆರಿಕ ನಾಸಾದ ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ್ದರು.
ಈ ನೌಕೆಯಲ್ಲಿ ಬಂದಿದ್ದ ಜ್ಯೋತಿಯನ್ನು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿದ್ದ ಆರು ಗಗನ ಯಾತ್ರಿಗಳ ಪೈಕಿ ಇಬ್ಬರು ರಷ್ಯಾದ ಗಗನಯಾತ್ರಿಗಳು ಜ್ಯೋತಿಯನ್ನು ಸ್ವೀಕರಿಸಿ ನಡಿಗೆ ಕೈಗೊಂಡಿದ್ದರು.ಬಾಹ್ಯಾಕಾಶ ನಡಿಗೆಯ ಸಂದರ್ಭದಲ್ಲಿ ಸುರಕ್ಷತೆಯ ದೃಷ್ಟಿಯಿಂದ ಬಾಹ್ಯಾಕಾಶ ಅಥವಾ ನೌಕೆಯಲ್ಲಿ ಜ್ಯೋತಿ ಬೆಳಗಿಸಲಾಗಲಿಲ್ಲ.ಹೀಗಾಗಿ ಜ್ಯೋತಿ ರಹಿತವಾಗಿಬಾಹ್ಯಕಾಶದಲ್ಲಿ ಗಗನಯಾತ್ರಿಗಳು ಈ ಐತಿಹಾಸಿಕ ನಡಿಗೆಯನ್ನು ಮಾಡಿದ್ದರು.
ಬಾಹ್ಯಕಾಶದಲ್ಲಿ ಒಲಿಂಪಿಕ್ ಜ್ಯೋತಿ ಸಂಚರಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ 1996ರಲ್ಲಿ ಅಮೆರಿಕದ ಗಗನನೌಕೆ ಅಥೆನ್ಸ್ ಬೇಸಿಗೆ ಕಾಲದ ಒಲಿಂಪಿಕ್ಸ್ ಜ್ಯೋತಿಯನ್ನು ತೆಗೆದುಕೊಂಡು ಹೋಗಿತ್ತು. ಆದರೆ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಹೊರಗೆ ಜ್ಯೋತಿಯನ್ನು ತೆಗೆದುಕೊಂಡು ಹೋಗುವುದು ಇದೇ ಮೊದಲು.
2014 ಫೆಬ್ರವರಿ ಏಳರಿಂದ 23ವರೆಗೆ ರಷ್ಯಾದ ಸೋಚಿಯಲ್ಲಿ ಚಳಿಗಾಲದ ಒಲಂಪಿಕ್ಸ್ ನಡೆಯಲಿದ್ದು ಅಕ್ಟೋಬರ್ ಏಳರಿಂದ ಮಾಸ್ಕೋದಿಂದ ಸೋಚಿ ಜ್ಯೋತಿಯ ಸಂಚಾರ ಆರಂಭಗೊಂಡಿದೆ. ನಾಲ್ಕು ತಿಂಗಳಿನಲ್ಲಿ ವಿಮಾನ, ರೈಲು, ಕಾರು ಸೇರಿದಂತೆ ವಿವಿಧ ವಾಹನಗಳ ಮೂಲಕ ವಿವಿಧ ದೇಶಗಳಲ್ಲಿ ಸುಮಾರು 65 ಸಾವಿರ ಕಿ.ಮೀ ಸಂಚರಿಸಲಿದೆ.
ಅಮೆರಿಕದ ನಾಸಾ ಈ ಐತಿಹಾಸಿಕ ಘಟನೆಯ ಚಿತ್ರ ಮತ್ತು ವಿಡಿಯೋವನ್ನು ಪ್ರಕಟಿಸಿದ್ದು, ಆ ಫೋಟೋ ಮತ್ತು ವಿಡಿಯೋ ಇಲ್ಲಿದ್ದು ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.
ಇದನ್ನೂ ಓದಿ: ನಿಮ್ಮ ಅಂತರಿಕ್ಷ ಕುತೂಹಲವನ್ನು ತಣಿಸುವ ವೀಡಿಯೋಗಳು.

ಬಾಹ್ಯಾಕಾಶದ ನಿಲ್ದಾಣದಲ್ಲಿ ಒಲಂಪಿಕ್ ಜ್ಯೋತಿ ಯಶಸ್ವಿ ಸಂಚಾರ
ಗುರುವಾರ ಅಂತರಿಕ್ಷ ಪ್ರಯಾಣಕ್ಕೆ ಮುನ್ನಾ ಜ್ಯೋತಿಯೊಂದಿಗೆ ರಷ್ಯಾದ ಮಿಖಾಯಿಲ್ ಟೈರುನ್(Mikhail Tyurin),ಜಪಾನಿನ ಕೊಯಿಚಿ ವಕಟಾ(Koichi Wakata )ಅಮೆರಿಕದ ನಾಸಾ ಸಂಸ್ಥೆಯ ಎಂಜಿನಿಯರ್ ರಿಚಾರ್ಡ್ ಮಸ್ಟ್ರಾಚೊಯೊ(Richard Mastracchio)

ಬಾಹ್ಯಾಕಾಶದ ನಿಲ್ದಾಣದಲ್ಲಿ ಒಲಂಪಿಕ್ ಜ್ಯೋತಿ ಯಶಸ್ವಿ ಸಂಚಾರ
ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಜ್ಯೋತಿಯನ್ನು ಸ್ವೀಕರಿಸಲು ಫ್ಯೋಡರ್ ಯಾರ್ಕ್‌ಚಿನ್(Fyodor Yurchikhin) ಕುಳಿತಿರುವುದು.

ಬಾಹ್ಯಾಕಾಶದ ನಿಲ್ದಾಣದಲ್ಲಿ ಒಲಂಪಿಕ್ ಜ್ಯೋತಿ ಯಶಸ್ವಿ ಸಂಚಾರ
ಆರು ಗಂಟೆಯ ಅಂತರಿಕ್ಷ ಯಾನದ ಬಳಿಕ ಬಳಿಕ ಯಾನಿ ಮಿಖಾಯಿಲ್ ಟೈರುನ್(Mikhail Tyurin) ಜ್ಯೋತಿಯೊಂದಿಗೆ ಅಂತರಿಕ್ಷ ಕೇಂದ್ರಕ್ಕೆ ಬರುತ್ತಿರುವುದು.

ಬಾಹ್ಯಾಕಾಶದ ನಿಲ್ದಾಣದಲ್ಲಿ ಒಲಂಪಿಕ್ ಜ್ಯೋತಿ ಯಶಸ್ವಿ ಸಂಚಾರ
ಜ್ಯೋತಿಯನ್ನು ಸ್ವೀಕರಿಸಿದ ಬಳಿಕ ಮಿಖಾಯಿಲ್ ಟೈರುನ್ ಮತ್ತು ಫ್ಯೋಡರ್ ಯಾರ್ಕ್‌ಚಿನ್ ಪರಸ್ಪರ ಆಲಿಂಗನ ಮಾಡಿಕೊಳ್ಳುತ್ತಿರುವುದು

ಬಾಹ್ಯಾಕಾಶದ ನಿಲ್ದಾಣದಲ್ಲಿ ಒಲಂಪಿಕ್ ಜ್ಯೋತಿ ಯಶಸ್ವಿ ಸಂಚಾರ
ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಹೊರಗೆ ಜ್ಯೋತಿಯೊಂದಿಗೆ ನಡಿಗೆ ಮಾಡುತ್ತಿರುವ ರಷ್ಯಾದ ಗಗನಯಾತ್ರಿ ಒಲೆಗ್ ಕೊಟೊವೊ(Oleg Kotov)

ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಗಗನ ಯಾತ್ರಿಗಳು ಜ್ಯೋತಿಯನ್ನು ಹಿಡಿದಿರುವುದು.

ಬಾಹ್ಯಾಕಾಶದ ನಿಲ್ದಾಣದಲ್ಲಿ ಒಲಂಪಿಕ್ ಜ್ಯೋತಿ ಯಶಸ್ವಿ ಸಂಚಾರ
ಭೂಮಿಗೆ ಮರಳುತ್ತಿರುವ ಗಗನಯಾನಿಗಳು
ಬಾಹ್ಯಾಕಾಶ ನಿಲ್ದಾಣದಲ್ಲಿ ಒಲಂಪಿಕ್ ಜ್ಯೋತಿ ಯಶಸ್ವಿ ಸಂಚಾರ
ವಿಡಿಯೋ ವೀಕ್ಷಿಸಿ

Click it and Unblock the Notifications