OnePlus 10 Pro 5G Price Cut : ಒನ್‌ಪ್ಲಸ್ ಫೋನ್ ಖರೀದಿಸುವ ಪ್ಲ್ಯಾನ್ ಇದ್ರೆ, ಈ ಡಿಸ್ಕೌಂಟ್ ಆಫರ್ ಬಿಡಬೇಡಿ!
ಸ್ಮಾರ್ಟ್‌ಫೋನ್ ವಲಯದಲ್ಲಿ ಜನಪ್ರಿಯ ಬ್ರ್ಯಾಂಡ್‌ಗಳ ಪೈಕಿ ಒನ್‌ಪ್ಲಸ್ ಸಹ ಒಂದಾಗಿದೆ. ಒನ್‌ಪ್ಲಸ್ ಸಂಸ್ಥೆಯ ಕೆಲವು ಫ್ಲ್ಯಾಗ್‌ಶಿಪ್ ಮಾದರಿಯ ಫೋನ್‌ಗಳು ಈಗಾಗಲೇ ಗ್ರಾಹಕರಿಗೆ ಇಷ್ಟವಾಗಿವೆ. ಆ ಪೈಕಿ ಒನ್‌ಪ್ಲಸ್ 10 ಪ್ರೊ 5G (OnePlus 10 Pro 5G) ಸ್ಮಾರ್ಟ್‌ಫೋನ್ ಹೆಚ್ಚು ಗಮನ ಸೆಳೆದಿದೆ. ಸದ್ಯ ಈ ಫೋನ್ ಖರೀದಿಸುವ ಗ್ರಾಹಕರಿಗೆ ಈಗ ಭರ್ಜರಿ ಸಿಹಿಸುದ್ದಿ ಇದ್ದು, ಸಖತ್ ಡಿಸ್ಕೌಂಟ್ ಪಡೆದಿದೆ.

ಹೌದು, ಒನ್‌ಪ್ಲಸ್ 10 ಪ್ರೊ 5G (OnePlus 10 Pro 5G) 8GB RAM + 128GB ಸ್ಟೋರೇಜ್ ವೇರಿಯಂಟ್ ಫೋನ್ 66,999ರೂ. ಗಳ ಪ್ರೈಸ್ ಟ್ಯಾಗ್ ಹೊಂದಿದೆ. ಆದ್ರೆ, ಅಮೆಜಾನ್ ಇ ಕಾಮರ್ಸ್‌ನಲ್ಲಿ ಡಿಸ್ಕೌಂಟ್ ಪಡೆಇದ್ದು, 60,999ರೂ. ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇದಲ್ಲದೆ ಎಕ್ಸ್‌ಚೇಂಜ್ ಕೊಡುಗೆ, ಬ್ಯಾಂಕ್ ಆಫರ್‌ಗಳು ಸಹ ಗ್ರಾಹಕರಿಗೆ ಲಭ್ಯವಾಗಲಿವೆ.

ಇನ್ನು ಒನ್‌ಪ್ಲಸ್ 10 ಪ್ರೊ 5G ಸ್ಮಾರ್ಟ್‌ಫೋನ್ 8GB RAM + 128 GB ಮತ್ತು 12GB RAM + 256 GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದಿದ್ದು, ಬ್ಲ್ಯಾಕ್ ಹಾಗೂ ಎಮರಾಲ್ಡ್ ಫಾರೆಸ್ಟ್ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಹಾಗಾದರೆ ಒನ್‌ಪ್ಲಸ್ 10 ಪ್ರೊ 5G ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಒನ್‌ಪ್ಲಸ್ 10 ಪ್ರೊ 5G : ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ಒನ್‌ಪ್ಲಸ್ 10 ಪ್ರೊ ಸ್ಮಾರ್ಟ್‌ಫೋನ್ 1,440 x 3,216 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.7 ಇಂಚಿನ OLED ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಎರಡನೇ ತಲೆಮಾರಿನ ಲೋ-ಟೆಂಪ್‌ರೇಚರ್ ಪಾಲಿಕ್ರಿಸ್ಟಲಿನ್ ಆಕ್ಸೈಡ್ (LTPO) ತಂತ್ರಜ್ಞಾನವನ್ನು ಆಧರಿಸಿದೆ. ಇದು 1Hz ಮತ್ತು 120Hz ನಡುವೆ ಡೈನಾಮಿಕ್ ರಿಫ್ರೆಶ್ ರೇಟ್ ನೀಡಲಿದೆ. ಈ ಡಿಸ್‌ಪ್ಲೇ sRGB ಬಣ್ಣದ ಹರವುಗಳನ್ನು ಸಹ ಬೆಂಬಲಿಸುತ್ತದೆ. ಇದಲ್ಲದೆ, ಈ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್ ಪಡೆದಿದೆ.

ಒನ್‌ಪ್ಲಸ್ 10 ಪ್ರೊ 5G : ಪ್ರೊಸೆಸರ್ ಯಾವುದು?
ಒನ್‌ಪ್ಲಸ್ 10 ಪ್ರೊ ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 8 ಜೆನ್ 1 SoC ಪ್ರೊಸೆಸರ್ ಬಲವನ್ನು ಪಡೆದಿದೆ. ಇದು ಆಂಡ್ರಾಯ್ಡ್ 12 ನಲ್ಲಿ ಆಕ್ಸಿಜನ್ OS 12.1 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ 12GB RAM ಮತ್ತು 256GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಒಳಗೊಂಡಿದೆ.
ಒನ್‌ಪ್ಲಸ್ 10 ಪ್ರೊ 5G : ಕ್ಯಾಮೆರಾ ಸೆನ್ಸಾರ್
ಒನ್‌ಪ್ಲಸ್ 10 ಪ್ರೊ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೋನಿ IMX789 ಸೆನ್ಸಾರ್, ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ ISOCELL JN1 ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೋನಿ IMX615 ಸೆನ್ಸಾರ್ ಹೊಂದಿರುವ ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ.

ಒನ್‌ಪ್ಲಸ್ 10 ಪ್ರೊ 5G : ಬ್ಯಾಟರಿ ಮತ್ತು ಇತರೆ ಸೌಲಭ್ಯ
ಒನ್‌ಪ್ಲಸ್ 10 ಪ್ರೊ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದು 80W ಸೂಪರ್‌ವೂಕ್ ವೈರ್ಡ್ ಚಾರ್ಜಿಂಗ್ ಮತ್ತು 50W ಏರ್‌ವೂಕ್ ವಾಯರ್‌ಲೆಸ್ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2, GPS/ A-GPS, NFC, ಮತ್ತು USB ಟೈಪ್-C ಪೋರ್ಟ್ ಸೇರಿವೆ. ಇದಲ್ಲದೆ ಅಕ್ಸಿಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸಾರ್, ಗೈರೊಸ್ಕೋಪ್, ಮ್ಯಾಗ್ನೆಟೋಮೀಟರ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್ ಅನ್ನು ಒಳಗೊಂಡಿದೆ.


Click it and Unblock the Notifications








