Home
ಸುದ್ದಿಜಾಲ

ಮತ್ತೆ ಭಾರೀ ಬೆಲೆ ಇಳಿಕೆ ಕಂಡಿದೆ ಒನ್‌ಪ್ಲಸ್‌ನ ಈ ಜನಪ್ರಿಯ ಫೋನ್‌!

ಜನಪ್ರಿಯ ಮೊಬೈಲ್‌ ಬ್ರ್ಯಾಂಡ್‌ಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಒನ್‌ಪ್ಲಸ್‌ ಕಂಪನಿಯು ಕೆಲವು ಫ್ಲ್ಯಾಗ್‌ಶಿಪ್‌ ಮಾದರಿಯ ಸ್ಮಾರ್ಟ್‌ಫೋನ್‌ಗಳ ಮೂಲಕ ಗ್ರಾಹಕರನ್ನು ಸೆಳೆದಿದೆ. ಆ ಪೈಕಿ ಕಂಪನಿಯ ಒನ್‌ಪ್ಲಸ್‌ 10 ಪ್ರೊ (OnePlus 10 Pro) ಸಹ ಜನಪ್ರಿಯತೆ ಪಡೆದಿದೆ. ಇದೀಗ ಈ ಫೋನ್‌ ಭಾರೀ ಬೆಲೆ ಇಳಿಕೆ ಕಂಡಿದ್ದು, ಗ್ರಾಹಕರು ಹುಬ್ಬೇರಿಸಿ ನೋಡುವಂತೆ ಮಾಡಿದೆ.

ಹೌದು, ಒನ್‌ಪ್ಲಸ್‌ ಕಂಪನಿಯ ಒನ್‌ಪ್ಲಸ್‌ 10 ಪ್ರೊ ಫೋನ್‌ ಬೆಲೆಯಲ್ಲಿ 5,000ರೂ. ಇಳಿಕೆ ಆಗಿದೆ. ಕಳೆದ ನವೆಂಬರ್‌ ತಿಂಗಳಿನಲ್ಲಿಯೂ ಈ ಫೋನ್‌ ಬೆಲೆ ಇಳಿಕೆ ಕಂಡಿತ್ತು. ಅಂದಹಾಗೆ ಬೆಲೆ ಇಳಿಕೆ ಯಿಂದಾಗಿ ಈ ಫೋನಿನ 8GB + 128GB ವೇರಿಯಂಟ್‌ 56,999ರೂ. ಗಳಿಗೆ ಖರೀದಿಸಬಹುದಾಗಿದೆ ಮತ್ತು 12GB + 256GB ಸ್ಟೋರೇಜ್‌ ವೇರಿಯಂಟ್‌ ಅನ್ನು 61,999ರೂ. ಬೆಲೆ ಖರೀದಿಸಬಹುದು.

ಮತ್ತೆ ಭಾರೀ ಬೆಲೆ ಇಳಿಕೆ ಕಂಡಿದೆ ಒನ್‌ಪ್ಲಸ್‌ನ ಈ ಜನಪ್ರಿಯ ಫೋನ್‌!

ಒನ್‌ಪ್ಲಸ್‌ 10 ಪ್ರೊ ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್‌ 8 ಜೆನ್‌ 1 SoC ಪ್ರೊಸೆಸರ್‌ ನಲ್ಲಿ ಕಾರ್ಯನಿರ್ವಹಿಸಲಿದ್ದು, ಇತ್ತೀಚಿನ ಆಂಡ್ರಾಯ್ಡ್‌ ಓಎಸ್ ಸಪೋರ್ಟ್‌ ಪಡೆದಿದೆ. ಹಾಗೆಯೇ ಇದು ಎಮರಾಲ್ಡ್ ಫಾರೆಸ್ಟ್ ಮತ್ತು ವೊಲ್ಕ್ಯಾನಿಕ್ ಬ್ಲಾಕ್ ಕಲರ್‌ ಆಯ್ಕೆಗಳಲ್ಲಿ ಲಭ್ಯ ಹಾಗಾದರೆ ಒನ್‌ಪ್ಲಸ್‌ 10 ಪ್ರೊ ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ ಹೇಗಿದೆ : ಒನ್‌ಪ್ಲಸ್‌ 10 ಪ್ರೊ ಮೊಬೈಲ್‌ 1,440 x 3,216 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.7 ಇಂಚಿನ QHD+ ಲಿಕ್ವಿಡ್‌ ಅಮೋಲೆಡ್‌ ಡಿಸ್‌ಪ್ಲೇ ಅನ್ನು ಪಡೆದಿದೆ. ಇದು ಎರಡನೇ ತಲೆಮಾರಿನ ಲೋ-ಟೆಂಪ್‌ರೇಚರ್‌ ಪಾಲಿಕ್ರಿಸ್ಟಲಿನ್ ಆಕ್ಸೈಡ್ (LTPO) ತಂತ್ರಜ್ಞಾನ ಅನ್ನು ಆಧರಿಸಿದೆ. ಇದು 1Hz ಮತ್ತು 120Hz ನಡುವೆ ಡೈನಾಮಿಕ್ ರಿಫ್ರೆಶ್ ರೇಟ್‌ ನೀಡಲಿದೆ. ಈ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್‌ ಪಡೆದಿದೆ.

ಪ್ರೊಸೆಸರ್‌ ಪವರ್ ಯಾವುದು? ಒನ್‌ಪ್ಲಸ್‌ 10 ಪ್ರೊ ಮೊಬೈಲ್‌ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್‌ 8 ಜೆನ್‌ 1 SoC ಪ್ರೊಸೆಸರ್‌ ಪವರ್‌ ಅನ್ನು ಪಡೆದಿದೆ. ಇದು ಆಂಡ್ರಾಯ್ಡ್‌ 12 ನಲ್ಲಿ ಆಕ್ಸಿಜನ್‌ OS 12.1 ಬೆಂಬಲದೊಂದಿಗೆ ಕೆಲಸ ಮಾಡಲಿದೆ. ಹಾಗೆಯೇ 8GB + 128GB ಮತ್ತು 12GB + 256GB ಆಂತರೀಕ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಕ್ಯಾಮೆರಾ ಸೆನ್ಸಾರ್ ಮಾಹಿತಿ : ಒನ್‌ಪ್ಲಸ್‌ 10 ಪ್ರೊ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದಿದೆ. ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೋನಿ IMX789 ಸೆನ್ಸಾರ್‌, ಸೆಕೆಂಡರಿ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ ISOCELL JN1 ಅಲ್ಟ್ರಾ-ವೈಡ್ ಲೆನ್ಸ್‌ ಮತ್ತು ತೃತೀಯ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಟೆಲಿಫೋಟೋ ಲೆನ್ಸ್‌ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾ ಪಿಕ್ಸೆಲ್ ಸೋನಿ IMX615 ಸೆನ್ಸಾರ್‌ ಹೊಂದಿರುವ ಸೆಲ್ಫಿ ಕ್ಯಾಮೆರಾ ಒದಗಿಸಲಾಗಿದೆ.

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳ ಆಯ್ಕೆಯ ಮಾಹಿತಿ : ಒನ್‌ಪ್ಲಸ್‌ 10 ಪ್ರೊ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದುಕೊಂಡಿದೆ. ಇದಕ್ಕೆ ಪೂರಕವಾಗಿ 80W ಸೂಪರ್‌ವೂಕ್‌ ವೈರ್ಡ್ ಚಾರ್ಜಿಂಗ್ ಮತ್ತು 50W ಏರ್‌ವೂಕ್‌ ವಾಯರ್‌ಲೆಸ್ ಚಾರ್ಜಿಂಗ್ ಸಪೋರ್ಟ್‌ ಸಹ ಇದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2, GPS/ A-GPS, NFC, ಮತ್ತು USB ಟೈಪ್-C ಪೋರ್ಟ್ ಸೇರಿವೆ.

ಬೆಲೆ ಮತ್ತು ಲಭ್ಯತೆ ಭಾರತದಲ್ಲಿ ಒನ್‌ಪ್ಲಸ್‌ 10 ಪ್ರೊ ಸ್ಮಾರ್ಟ್‌ಫೋನ್‌ 8GB + 128GB ಮತ್ತು 12GB + 256GB ಸ್ಟೋರೇಜ್ ವೇರಿಯಂಟ್‌ ಆಯ್ಕೆಗಳನ್ನು ಪಡೆದಿದೆ. ಹಾಗೆಯೇ ಈ ಫೋನ್ ಎಮರಾಲ್ಡ್ ಫಾರೆಸ್ಟ್ ಮತ್ತು ವೊಲ್ಕ್ಯಾನಿಕ್ ಬ್ಲಾಕ್ ಕಲರ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

Best Mobiles in India

English summary
OnePlus 10 Pro receives again price drop in India: check new price and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+