Home
ಸುದ್ದಿಜಾಲ

OnePlus ನ ಈ ಫೋನ್‌ ಮೇಲೆ ದೊಡ್ಡ ಡಿಸ್ಕೌಂಟ್‌: ಆಫರ್‌ ಮಿಸ್‌ ಮಾಡ್ಕೊಂಡ್ರೆ ನಿಮಗೇ ಲಾಸ್‌!

ಒನ್‌ಪ್ಲಸ್‌ (OnePlus) ಸ್ಮಾರ್ಟ್‌ಫೋನ್‌ಗಳು ಹಲವು ಬಳಕೆದಾರರಿಗೆ ಅಚ್ಚು ಮೆಚ್ಚು. ಯಾಕೆಂದರೆ ಈ ಫೋನ್‌ಗಳ ಕಾರ್ಯಕ್ಷಮತೆ ಹಾಗೂ ಕ್ಯಾಮೆರಾದಲ್ಲಿನ ವಿಶೇಷ ಫೀಚರ್ಸ್‌ಗಳು ಎಲ್ಲರನ್ನೂ ಸೆಳೆದುಬಿಡುತ್ತವೆ. ಈ ನಡುವೆ ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ ಖರೀದಿ ಮಾಡಬೇಕು ಎಂದುಕೊಂಡವರಿಗೆ ಗುಡ್‌ ನ್ಯೂಸ್ ನೀಡಲಾಗಿದೆ.

ಹೌದು, ಒನ್‌ಪ್ಲಸ್ ಇದೀಗ ಒನ್‌ಪ್ಲಸ್‌ 10R (OnePlus 10R) ಸ್ಮಾರ್ಟ್‌ಫೋನ್‌ಗೆ ಭರ್ಜರಿ ರಿಯಾಯಿತಿ ಘೋಷಣೆ ಮಾಡಿದೆ. ಈ ಫೋನ್‌ಗೆ ಇದೇ ಮೊದಲಲ್ಲದೆ ಈ ಹಿಂದೆಯೂ ಸಹ ಹಲವಾರು ಬಾರಿ ಆಫರ್‌ ಘೋಷಣೆ ಮಾಡಲಾಗಿತ್ತು. ಆದರೆ, ಈ ಆಫರ್‌ ಮಾತ್ರ ವಿಶೇಷ ಎನಿಸಿದೆ. ಹಾಗಿದ್ರೆ ಬನ್ನಿ ಈ ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಇದರ ಆಫರ್‌ ಬೆಲೆ ವಿವರವನ್ನು ತಿಳಿಯೋಣ.

OnePlus ನ ಈ ಫೋನ್‌ ಮೇಲೆ ದೊಡ್ಡ ಡಿಸ್ಕೌಂಟ್‌....

ಒನ್‌ಪ್ಲಸ್‌ 10R ಡಿಸ್‌ಪ್ಲೇ ವಿವರ:ಈ ಫೋನ್‌ ಅನ್ನು ನೀವು ಇಷ್ಟೊಂದು ಕಡಿಮೆ ಬೆಲೆಗೆ ಖರೀದಿ ಮಾಡುತ್ತೀರಾ ಎಂದಾದರೆ ಇದರ ಪ್ರಮುಖ ಫೀಚರ್ಸ್‌ ಕಡೆ ಕಣ್ಣಾಯಿಸುವುದು ಪ್ರಮುಖವಾದ ಕೆಲಸವಾಗಿದೆ. ಅದರಂತೆ ಈ ಫೋನ್ 6.7 ಇಂಚಿನ ಫುಲ್‌ HD+ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, ಇದು 1,080x2,412 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಜೊತೆಗೆ 120Hz ಡೈನಾಮಿಕ್ ರಿಫ್ರೆಶ್ ರೇಟ್ ಹಾಗೂ 720Hz ಟಚ್ ರೆಸ್ಪಾನ್ಸ್ ರೇಟ್‌ ಅನ್ನು ಹೊಂದಿದೆ.

ಒನ್‌ಪ್ಲಸ್‌ 10R ಪ್ರೊಸೆಸರ್‌ ಮಾಹಿತಿ: ಒನ್‌ಪ್ಲಸ್‌ 10R 5G ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 8100 ಮ್ಯಾಕ್ಸ್ SoCಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 12ಆಧಾರಿತ ಆಕ್ಸಿಜನ್ ಓಎಸ್‌ 12.1ಬೆಂಬಲದೊಂದಿಗೆ ರನ್‌ ಆಗಲಿದೆ. ಇಷ್ಟು ಮಾತ್ರವಲ್ಲದೆ ಈ ಫೋನ್ 20%ಸುಧಾರಿತ GPU ಕಾರ್ಯಕ್ಷಮತೆ, 25%ಸುಧಾರಿತ ವಿದ್ಯುತ್ ದಕ್ಷತೆ ಮತ್ತು 80% ಉತ್ತಮ ಎಐ ಕಾರ್ಯಕ್ಷಮತೆಯನ್ನು ನೀಡಲಿದೆ. 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಆಯ್ಕೆ ಇದರಲ್ಲಿದೆ.

ಒನ್‌ಪ್ಲಸ್‌ 10R ಕ್ಯಾಮೆರಾ ರಚನೆ: ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೋನಿ IMX766 ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಸೋನಿ IMX355 ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ GC02M1 ಮ್ಯಾಕ್ರೋ ಲೆನ್ಸ್‌ ಹೊಂದಿದೆ. ಇದರೊಂದಿಗೆ 16 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ ISOCELL S5K3P9 ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಆಯ್ಕೆ ಇದೆ.

OnePlus ನ ಈ ಫೋನ್‌ ಮೇಲೆ ದೊಡ್ಡ ಡಿಸ್ಕೌಂಟ್‌....

ಒನ್‌ಪ್ಲಸ್‌ 10R ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ: ಈ ಫೋನ್ ಎರಡು ರೀತಿಯ ಬ್ಯಾಟರಿ ಆಯ್ಕೆ ಹೊಂದಿದ್ದು, ಅದರಲ್ಲಿ 4,500 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಜೊತೆಗೆ 150Wಸೂಪರ್‌ವೂಕ್‌ ವೇಗದ ಚಾರ್ಜಿಂಗ್‌ಗೆ ಬೆಂಬಲ ನೀಡುತ್ತದೆ. ಮತ್ತೊಂದು 80W ಸೂಪರ್‌ವೂಕ್‌ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ. ಇದರೊಂದಿಗೆ 5G,4G LTE, ವೈಫೈ 6, ಬ್ಲೂಟೂತ್ ಆವೃತ್ತಿ v5.2,ಜಿಪಿಎಸ್‌/ A-ಜಿಪಿಎಸ್‌, ಎನ್‌ಎಫ್‌ಸಿ, ಮತ್ತು ಯುಎಸ್‌ಬಿ ಟೈಪ್‌-ಸಿ ಪೋರ್ಟ್ ಹೊಂದಿದೆ.

ಒನ್‌ಪ್ಲಸ್‌ 10R ಆಫರ್‌ ಬೆಲೆ ಹಾಗೂ ಲಭ್ಯತೆ: ಇನ್ನು ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್‌ಗೆ 30,798 ರೂಪಾಯಿಗಳ ರಿಯಾಯಿತಿ ಬೆಲೆ ನಿಗದಿ ಮಾಡಲಾಗಿದೆ. ಇದರ ಸಾಮಾನ್ಯ ದರ 38,999 ರೂ.ಗಳು. ಆದರೆ, ನೀವು 8,201 ರೂಪಾಯಿಗಳ ರಿಯಾಯಿತಿಯನ್ನು ಪಡೆದುಕೊಳ್ಳಬಹುದು. ಇಷ್ಟು ಮಾತ್ರವಲ್ಲದೆ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಹೆಚ್ಚುವರಿ 10 ಪ್ರತಿಶತ ರಿಯಾಯಿತಿ ಇಹ ಇದೆ.

OnePlus ನ ಈ ಫೋನ್‌ ಮೇಲೆ ದೊಡ್ಡ ಡಿಸ್ಕೌಂಟ್‌....

ಹಾಗೆಯೇ ಅಮೆಜಾನ್‌ನಲ್ಲಿ ಈ ಫೋನ್‌ ಅನ್ನು 34,999 ರೂ.ಗಳಿಗೆ ಕೊಂಡುಕೊಳ್ಳಬಹುದು. ಜೊತೆಗೆ 4,000 ರೂ.ಗಳ ಕೂಪನ್ ಸಹ ಲಭ್ಯ. ಈ ಮೂಲಕ 30,999ರೂ.ಗೆ ಈ ಫೋನ್‌ ಲಭ್ಯ ಆಗಲಿದೆ. ಇಲ್ಲೂ ಸಹ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೇಲೆ 2,000ರೂ.ಗಳ ಹೆಚ್ಚುವರಿ ರಿಯಾಯಿತಿ ಸಹ ಲಭ್ಯ ಇದ್ದು, ಈ ಮೂಲಕ ಈ ಫೋನ್‌ ಬೆಲೆ 28,999ರೂ.ಆಗಲಿದೆ.

Best Mobiles in India

English summary
OnePlus 10R has announced huge discounts on Amazon and Flipkart. OnePlus 10R 5G smartphone will be powered by an octa-core MediaTek Dimensity 8100 Max SoC processor and will run on Android 12 based Oxygen OS 12.1.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+