Home
ಸುದ್ದಿಜಾಲ

ಹೊಸ ಒನ್‌ಪ್ಲಸ್‌ ಫೋನ್‌ ಖರೀದಿಸುವ ಗ್ರಾಹಕರಿಗೆ ಸಿಹಿಸುದ್ದಿ!..ಈ ಚಾನ್ಸ್‌ ಬಿಡಬೇಡಿ!

ಹೊಸದಾಗಿ ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ ಖರೀದಿಸುವ ಗ್ರಾಹಕರಿಗೆ ಈಗ ಭರ್ಜರಿ ಗುಡ್‌ನ್ಯೂಸ್‌. ಏಕೆಂದರೆ, ಜನಪ್ರಿಯ ಒನ್‌ಪ್ಲಸ್‌ ಕಳೆದ ವರ್ಷ ಬಿಡುಗಡೆ ಮಾಡಿರುವ ಒನ್‌ಪ್ಲಸ್‌ 10R ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿತ್ತು. ಈ ಫೋನ್‌ ಬೆಲೆಯಲ್ಲಿ ಈಗ ಇಳಿಕೆ ಆಗಿದ್ದು, ಮತ್ತೊಮ್ಮೆ ಗ್ರಾಹಕರು ಖುಷಿಯಿಂದ ಫೋನಿನತ್ತ ನೋಡುವಂತಾಗಿದೆ.

ಹೌದು, ಒನ್‌ಪ್ಲಸ್‌ 10R (OnePlus 10R) ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಈದೀಗ ಎರಡನೇ ಬಾರಿ ಬೆಲೆ ಇಳಿಕೆ ಆಗಿದೆ. ಮೊದಲನೇ ಬಾರಿ ಬೆಲೆ ಇಳಿಕೆ ಆದ ಬಳಿಕ 8GB + 128GB ವೇರಿಯಂಟ್‌ ಬೆಲೆ 34,999ರೂ, 12GB + 256GB ವೇರಿಯಂಟ್‌ ದರವು 38,999ರೂ ಮತ್ತು 12GB + 256GB ವೇರಿಯಂಟ್‌ ಬೆಲೆಯ 39,999ರೂ. ಆಗಿತ್ತು.

ಹೊಸ ಒನ್‌ಪ್ಲಸ್‌ ಫೋನ್‌ ಖರೀದಿಸುವ ಗ್ರಾಹಕರಿಗೆ ಸಿಹಿಸುದ್ದಿ!.ಈ ಚಾನ್ಸ್‌ ಬಿಡಬೇಡಿ

ಇದೀಗ ಒನ್‌ಪ್ಲಸ್‌ 10R ಬೆಲೆಯಲ್ಲಿ ಮತ್ತೆ 3,000ರೂ. ಕಡಿತ ಆಗಿದ್ದು, 8GB + 128GB ವೇರಿಯಂಟ್‌ 31,999ರೂ, 12GB + 256GB ವೇರಿಯಂಟ್‌ 35,999ರೂ ಮತ್ತು 12GB + 256GB ವೇರಿಯಂಟ್‌ 36,999ರೂ. ಪ್ರೈಸ್‌ ಟ್ಯಾಗ್‌ನಲ್ಲಿ ಅಮೆಜಾನ್‌ನಲ್ಲಿ ಖರೀದಿಗೆ ಲಭ್ಯ. ಹಾಗಾದರೆ ಒನ್‌ಪ್ಲಸ್‌ 10R ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ : ಒನ್‌ಪ್ಲಸ್‌ 10R 5G ಸ್ಮಾರ್ಟ್‌ಫೋನ್‌ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,080x2,412 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿದೆ. ಇದು 120Hz ಡೈನಾಮಿಕ್ ರಿಫ್ರೆಶ್ ರೇಟ್ ಮತ್ತು 720Hz ಟಚ್ ರೆಸ್ಪಾನ್ಸ್ ರೇಟ್‌ ಅನ್ನು ಹೊಂದಿದೆ. 2.5D ಕರ್ವ್ಡ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್‌ ಪಡೆದುಕೊಂಡಿದೆ.

ಹೊಸ ಒನ್‌ಪ್ಲಸ್‌ ಫೋನ್‌ ಖರೀದಿಸುವ ಗ್ರಾಹಕರಿಗೆ ಸಿಹಿಸುದ್ದಿ!.ಈ ಚಾನ್ಸ್‌ ಬಿಡಬೇಡಿ

ಪ್ರೊಸೆಸರ್‌ ದಕ್ಷತೆ ಹೇಗಿದೆ : ಒನ್‌ಪ್ಲಸ್‌ 10R 5G ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 8100 ಮ್ಯಾಕ್ಸ್ SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಇದು ಆಂಡ್ರಾಯ್ಡ್ 12 ಆಧಾರಿತ OxygenOS 12.1 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಇನ್ನು ಈ ಪ್ರೊಸೆಸರ್‌ 20% ಸುಧಾರಿತ GPU ಕಾರ್ಯಕ್ಷಮತೆ ಮತ್ತು 80% ಉತ್ತಮ AI ಕಾರ್ಯಕ್ಷಮತೆಯನ್ನು ನೀಡುತ್ತದೆ. ಹಾಗೆಯೇ 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ.

ಟ್ರಿಪಲ್ ಕ್ಯಾಮೆರಾ ಸೆನ್ಸಾರ್ : ಒನ್‌ಪ್ಲಸ್‌ 10R 5G ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX766 ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಸೋನಿ IMX355 ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ GC02M1 ಮ್ಯಾಕ್ರೋ ಲೆನ್ಸ್‌ ಹೊಂದಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸ್ಯಾಮ್‌ಸಂಗ್ ISOCELL S5K3P9 ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ.

ಹೊಸ ಒನ್‌ಪ್ಲಸ್‌ ಫೋನ್‌ ಖರೀದಿಸುವ ಗ್ರಾಹಕರಿಗೆ ಸಿಹಿಸುದ್ದಿ!.ಈ ಚಾನ್ಸ್‌ ಬಿಡಬೇಡಿ

ಬ್ಯಾಟರಿ ಸಾಮರ್ಥ್ಯ ಎಷ್ಟು? ಇತರೆ ಫೀಚರ್ಸ್‌ಗಳೇನು : ಒನ್‌ಪ್ಲಸ್‌ 10R 5G ಸ್ಮಾರ್ಟ್‌ಫೋನ್‌ ಎಂಡ್ಯೂರೆನ್ಸ್ ಆವೃತ್ತಿಯ ಮಾದರಿ 4,500mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದು 150W SuperVOOC ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಇನ್ನು 80W SuperVOOC ವೇಗದ ಚಾರ್ಜಿಂಗ್ ಹೊಂದಿರುವ ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2, GPS/ A-GPS, NFC, ಮತ್ತು USB ಟೈಪ್-C ಪೋರ್ಟ್ ಸೇರಿವೆ.

Best Mobiles in India

English summary
OnePlus 10R Price Cut in india. now available at starting price Rs. 31,999. more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+