Home
ಸುದ್ದಿಜಾಲ

OnePlus: ಒನ್‌ಪ್ಲಸ್‌ನ ಈ ಬಹುಬೇಡಿಕೆಯ ಫೋನ್‌ಗೆ ದೊಡ್ಡ ಡಿಸ್ಕೌಂಟ್‌! 128GB ಸ್ಟೋರೇಜ್‌.. ಟ್ರಿಪಲ್‌ ಕ್ಯಾಮೆರಾ!

ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ಗಳಿಗೆ (OnePlus smartphone) ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಬೇಡಿಕೆ ಇದ್ದು, ಅದರಲ್ಲೂ ಆಫರ್ ಬೆಲೆಯಲ್ಲಿ ಏನಾದರೂ ಈ ಫೋನ್‌ಗಳು ಲಭ್ಯವಾದರೆ ಒಂದನ್ನೂ ಬಿಡದಂತೆ ಖರೀದಿ ಮಾಡುವ ಗ್ರಾಹಕರು ಭಾರತದಲ್ಲಿದ್ದಾರೆ. ಈ ನಡುವೆ ಒನ್‌ಪ್ಲಸ್‌ನ ಬಹುಬೇಡಿಕೆಯ ಸ್ಮಾರ್ಟ್‌ಫೋನ್‌ಗೆ ಭರ್ಜರಿ ಡಿಸ್ಕೌಂಟ್‌ ನೀಡಲಾಗಿದೆ.

ಹೌದು, ಒನ್‌ಪ್ಲಸ್‌ನ ಬಹು ನಿರೀಕ್ಷಿತ ಸ್ಮಾರ್ಟ್‌ಫೋನ್ ಆಗಿರುವ ಒನ್‌ಪ್ಲಸ್‌ 10R ಫೋನ್‌ಗೆ (OnePlus 10R smartphone) ರಿಯಾಯಿತಿ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ 128 GB ಇಂಟರ್‌ ಸ್ಟೋರೇಜ್‌ ಆಯ್ಕೆ ಹಾಗೂ 50 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾದೊಂದಿಗೆ ಟ್ರಿಪಲ್ ರಿಯರ್‌ ಕ್ಯಾಮೆರಾ ಆಯ್ಕೆ ಸೇರಿದಂತೆ ಅನೇಕ ಆಕರ್ಷಕ ಫೀಚರ್ಸ್‌ ಅನ್ನು ಈ ಫೋನ್‌ ಪಡೆದುಕೊಂಡಿದೆ. ಹಾಗಿದ್ರೆ ಈ ಫೋನ್‌ನ ಇತರೆ ಪ್ರಮುಖ ಫೀಚರ್ಸ್‌ ಹಾಗೂ ಆಫರ್ ವಿವರಗಳನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಒನ್‌ಪ್ಲಸ್‌ನ ಈ ಬಹುಬೇಡಿಕೆಯ ಫೋನ್‌ಗೆ ದೊಡ್ಡ ಡಿಸ್ಕೌಂಟ್‌! 128GB ಸ್ಟೋರೇಜ್‌..

ಒನ್‌ಪ್ಲಸ್‌ 10R ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್‌ ಆಫರ್ ಬೆಲೆಗೆ ಲಭ್ಯವಾಗುತ್ತಿರುವುದೋನೋ ಸರಿ. ಆದರೆ ಈ ಬೆಲೆಗೆ ಈ ಫೋನ್‌ ಯೋಗ್ಯವೇ ಎಂಬುದನ್ನು ತಿಳಿದುಕೊಳ್ಳಲು ಅಗತ್ಯವಾಗಿ ಇದರ ಫೀಚರ್ಸ್‌ ಕಡೆ ಕಣ್ಣಾಯಿಸುವುದು ಉತ್ತಮ ಕೆಲಸವಾಗಿದೆ. ಅದರಂತೆ ಈ ಫೋನ್ 6.7 ಇಂಚಿನ ಫುಲ್‌ಹೆಚ್‌ಡಿ ಫ್ಲೂಯಿಡ್ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 120 Hz ರಿಫ್ರೆಶ್‌ ರೇಟ್‌ ಮೂಲಕ ತಡೆರಹಿತ ಸ್ಕ್ರೋಲಿಂಗ್ ಅನುಭವವನ್ನು ನೀಡುತ್ತದೆ.

ಇದರೊಂದಿಗೆ ಈ ಡಿಸ್‌ಪ್ಲೇಯನ್ನು ಅಡಾಪ್ಟಿವ್ ಫ್ರೇಮ್ ರೇಟ್ ತಂತ್ರಜ್ಞಾನದೊಂದಿಗೆ ವಿನ್ಯಾಸಗೊಳಿಸಲಾಗಿದ್ದು, ಅದು 60 Hz, 90 Hz ಮತ್ತು 120 Hz ವರೆಗೆ ಸರಾಗವಾಗಿ ಅಗತ್ಯಕ್ಕೆ ತಕ್ಕಂತೆ ಬದಲಾಗುತ್ತದೆ. ಇದರೊಂದಿಗೆ ಈ ಸ್ಮಾರ್ಟ್‌ಫೋನ್‌ನ ಡಿಸ್‌ಪ್ಲೇ HDR10+ ಮತ್ತು 10-ಬಿಟ್ ಬಣ್ಣ ಆಯ್ಕೆ ಪಡೆದಿದ್ದು, ಈ ಮೂಲ ನೀವು ಸಿನಿಮಾ ನೋಡುವಾಗ ಹಾಗೂ ಗೇಮ್‌ ಆಡುವಾಗ ತಲ್ಲೀನಗೊಳಿಸುವ ಅನುಭವ ಪಡೆದುಕೊಳ್ಳಬಹುದಾಗಿದೆ.

ಒನ್‌ಪ್ಲಸ್‌ನ ಈ ಬಹುಬೇಡಿಕೆಯ ಫೋನ್‌ಗೆ ದೊಡ್ಡ ಡಿಸ್ಕೌಂಟ್‌! 128GB ಸ್ಟೋರೇಜ್‌..

ಒನ್‌ಪ್ಲಸ್‌ 10R ಸ್ಮಾರ್ಟ್‌ಫೋನ್‌ ಪ್ರೊಸೆಸರ್‌ ಮಾಹಿತಿ: ಈ ಫೋನ್ ಸುಧಾರಿತ ಫ್ಲ್ಯಾಗ್‌ಶಿಪ್-ಲೆವೆಲ್ ಎಮ್‌ಟಿಕೆ ಡೈಮೆನ್ಸಿಟಿ 8100 ಮ್ಯಾಕ್ಸ್‌ ಚಿಪ್‌ಸೆಟ್‌ನೊಂದಿಗೆ ಪ್ಯಾಕ್‌ ಆಗಿದ್ದು, ಶಕ್ತಿಯುತ ಕಾರ್ಯಕ್ಷಮತೆ, ವರ್ಧಿತ ಉಷ್ಣ ನಿಯಂತ್ರಣ ಮತ್ತು ಕಡಿಮೆ ವಿದ್ಯುತ್ ಬಳಕೆಯ ಸೌಲಭ್ಯಗಳನ್ನು ನೀಡಲಿದೆ. ಇದರೊಂದಿಗೆ 8 GB ವರೆಗಿನ ಪ್ರಭಾವಶಾಲಿ RAM ಸಾಮರ್ಥ್ಯದೊಂದಿಗೆ, 128 GB ವರೆಗಿನ ಇಂಟರ್‌ ಸ್ಟೋರೇಜ್‌ ಆಯ್ಕೆ ಈ ಫೋನ್‌ನಲ್ಲಿ ಅಸಾಧಾರಣ ಶಕ್ತಿ ನೀಡುವ ಕೆಲಸ ಮಾಡುತ್ತದೆ.

ಒನ್‌ಪ್ಲಸ್‌ 10R ಸ್ಮಾರ್ಟ್‌ಫೋನ್‌ ಕ್ಯಾಮೆರಾ ರಚನೆ: ಇನ್ನು ಈ ಫೋನ್‌ನ ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಇದು ಟ್ರಿಪಲ್ ರಿಯಲ್‌ ಕ್ಯಾಮೆರಾ ಆಯ್ಕೆ ಪಡೆದಿದ್ದು, ಅದರಲ್ಲಿ 50 ಮೆಗಾಪಿಕ್ಸೆಲ್‌ನ ಮುಖ್ಯ ಕ್ಯಾಮೆರಾ, 8 ಮೆಗಾಪಿಕ್ಸೆಲ್‌ನ ಅಲ್ಟ್ರಾವೈಡ್ ಸೆನ್ಸರ್‌ ಹಾಗೂ 2 ಮೆಗಾಪಿಕ್ಸೆಲ್‌ನ ಮ್ಯಾಕ್ರೋ ಸೆನ್ಸರ್‌ ಅನ್ನು ಹೊಂದಿದೆ. ಇದರೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 16 ಮೆಗಾಪಿಕ್ಸೆಲ್‌ ಸೆನ್ಸರ್‌ ಆಯ್ಕೆ ಪಡೆದಿದೆ.

ಒನ್‌ಪ್ಲಸ್‌ 10R ಸ್ಮಾರ್ಟ್‌ಫೋನ್‌ ಬ್ಯಾಟರಿ ಹಾಗೂ ಇತರೆ: ಇನ್ನು ಈ ಸ್ಮಾರ್ಟ್‌ಫೋನ್ 5000 mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, 80W ವೈರ್ಡ್ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ. ಅಂದರೆ ನೀವು 32 ನಿಮಿಷಗಳಲ್ಲಿ 1-100% ಬ್ಯಾಟರಿ ಚಾರ್ಜಿಂಗ್‌ ಆಗಲಿದೆ. ಉಳಿದಂತೆ ಈ ಫೋನ್ ವೈ-ಫೈ 802.11 a/b/g/n/ac/6, ಡ್ಯುಯಲ್-ಬ್ಯಾಂಡ್, ವೈ-ಫೈ ಡೈರೆಕ್ಟ್, ಬ್ಲೂಟೂತ್ ಆವೃತ್ತಿ 5.2, ಯುಎಸ್‌ಬಿ ಟೈಪ್-ಸಿ 2.0 ಸೇರಿದಂತೆ ಅನೇಕ ಕನೆಕ್ಟಿವಿಟಿ ಬೆಂಬಲ ಪಡೆದುಕೊಂಡಿದೆ.

ಒನ್‌ಪ್ಲಸ್‌ 10R ಸ್ಮಾರ್ಟ್‌ಫೋನ್‌ ಬೆಲೆ ಹಾಗೂ ಆಫರ್ ವಿವರ: ಈ ಫೋನ್‌ನ ಪ್ರಮುಖ ವಿಚಾರಕ್ಕೆ ಬರೋದಾದರೆ ಇದು 38,999ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ಆದರೂ ನೀವು ಇದನ್ನು ಈಗ 27,137ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಈ ಫೋನ್‌ಗೆ ಪ್ರಮುಖ ಇ-ಕಾಮರ್ಸ್‌ ಸೈಟ್‌ ಆಗಿರುವ ಫ್ಲಿಪ್‌ಕಾರ್ಟ್‌ 30% ವರೆಗೆ ಡಿಸ್ಕೌಂಟ್‌ ನೀಡಿದೆ. ಅದಾಗ್ಯೂ ನೀವು ಬ್ಯಾಂಕ್‌ ಕಾರ್ಡ್‌ ಬಳಕೆ ಮಾಡುವ ಮೂಲಕ ಇನ್ನೂ ಅಗ್ಗದ ದರದಲ್ಲಿ ಈ ಫೋನ್‌ ಖರೀದಿ ಮಾಡಬಹುದಾಗಿದೆ.

ಒನ್‌ಪ್ಲಸ್‌ನ ಈ ಬಹುಬೇಡಿಕೆಯ ಫೋನ್‌ಗೆ ದೊಡ್ಡ ಡಿಸ್ಕೌಂಟ್‌! 128GB ಸ್ಟೋರೇಜ್‌..

ಅಂದರೆ ನೀವು ಪೇಟಿಎಮ್‌ ವಾಲೆಟ್‌ ಮೂಲಕ ಖರೀದಿ ಮಾಡಿದ್ರೆ 100 ಕ್ಯಾಶ್‌ಬ್ಯಾಕ್, ಫ್ಲಿಪ್‌ಕಾರ್ಟ್‌ ಆಕ್ಸಿಸ್‌ ಬ್ಯಾಂಕ್‌ ಕಾರ್ಡ್‌ ಬಳಕೆ ಮಾಡಿಕೊಂಡು ಖರೀದಿ ಮಾಡಿದ್ರೆ 5% ಕ್ಯಾಶ್‌ಬ್ಯಾಕ್ ಸಿಗಲಿದೆ. ಇದರೊಂದಿಗೆ ಇಎಮ್‌ಐ ಆಯ್ಕೆಯನ್ನೂ ಸಹ ನೀಡಲಾಗಿದ್ದು, ತಿಂಗಳಿಗೆ ನೀವು 9,046ರೂ.ಗಳನ್ನು ಪಾವತಿ ಮಾಡಬಹುದಾಗಿದೆ. ಇಷ್ಟೇ ಅಲ್ಲದೆ ಪಾಲುದಾರ ಆಫರ್‌ಗೆ ಸೈನ್ ಅಪ್ ಮಾಡಿ ಫ್ಲಿಪ್‌ಕಾರ್ಟ್‌ ಪೇ ಲೇಟರ್‌ ಮೂಲಕ ಖರೀದಿ ಮಾಡಿದ್ರೆ 20,000 ಮೌಲ್ಯದ ಉಚಿತ ಟೈಮ್ಸ್ ಪ್ರೈಮ್ ಬೆನಿಫಿಟ್‌ಗಳನ್ನು ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
OnePlus 10R smartphone is discounted. This smartphone has 128 GB internal storage option and triple rear camera option with 50 megapixel main camera.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+