ಒನ್‌ಪ್ಲಸ್ ಮೊಬೈಲ್ ಖರೀದಿಸುವ ಗ್ರಾಹಕರಿಗೆ ಈಗ ಗುಡ್‌ನ್ಯೂಸ್!
ಒನ್‌ಪ್ಲಸ್ ಮೊಬೈಲ್ ಖರೀದಿಸುವ ಗ್ರಾಹಕರಿಗೆ ಈಗ ಸಖತ್ ಸಿಹಿಸುದ್ದಿ. ಏಕೆಂದರೆ, ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್‌ನಲ್ಲಿ ಒನ್‌ಪ್ಲಸ್ 10R ಸ್ಮಾರ್ಟ್‌ಫೋನ್ ಬೊಂಬಾಟ್ ಡಿಸ್ಕೌಂಟ್ ಪಡೆದಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಒನ್‌ಪ್ಲಸ್ 10R ಸ್ಮಾರ್ಟ್‌ಫೋನ್ ಮತ್ತಷ್ಟು ಸದ್ದು ಮಾಡಿದೆ.
ಹೌದು, ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಇದೇ ಮೇ 4 ರಿಂದ ಗ್ರೇಟ್ ಸಮ್ಮರ್ ಸೇಲ್ ಪ್ರಾರಂಭವಾಗಲಿದೆ. ಈ ಮಾರಾಟದಲ್ಲಿ ಒನ್‌ಪ್ಲಸ್ 10R (OnePlus 10R) ಸ್ಮಾರ್ಟ್‌ಫೋನ್ 29,999ರೂ. ಗಳ ರಿಯಾಯಿತಿ ದರದಲ್ಲಿ ಖರೀದಿಗೆ ಲಭ್ಯವಾಗಲಿದೆ. ಇದರೊಂದಿಗೆ ಇತರೆ ಕೊಡುಗೆಗಳು ಲಭ್ಯವಾಗಲಿವೆ.

ಒನ್‌ಪ್ಲಸ್ 10R 8GB + 128GB ವೇರಿಯಂಟ್ ಮತ್ತು 12GB + 256GB ವೇರಿಯಂಟ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಇನ್ನು ಈ ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 8100 ಮ್ಯಾಕ್ಸ್ SoC ಪ್ರೊಸೆಸರ್ ಪಡೆದಿದೆ. ಹಾಗಾದರೆ ಒನ್‌ಪ್ಲಸ್ 10R ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ : ಒನ್‌ಪ್ಲಸ್ 10R 5G ಸ್ಮಾರ್ಟ್‌ಫೋನ್ 6.7 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,080x2,412 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿದೆ. ಇದು 120Hz ಡೈನಾಮಿಕ್ ರಿಫ್ರೆಶ್ ರೇಟ್ ಮತ್ತು 720Hz ಟಚ್ ರೆಸ್ಪಾನ್ಸ್ ರೇಟ್ ಅನ್ನು ಹೊಂದಿದೆ. 2.5D ಕರ್ವ್ಡ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್ ಪಡೆದುಕೊಂಡಿದೆ.
ಪ್ರೊಸೆಸರ್ ದಕ್ಷತೆ ಹೇಗಿದೆ : ಒನ್‌ಪ್ಲಸ್ 10R 5G ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 8100 ಮ್ಯಾಕ್ಸ್ SoC ಪ್ರೊಸೆಸರ್ ಬಲವನ್ನು ಪಡೆದಿದೆ. ಇದು ಆಂಡ್ರಾಯ್ಡ್ 12 ಆಧಾರಿತ OxygenOS 12.1 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಇನ್ನು ಈ ಪ್ರೊಸೆಸರ್ 20% ಸುಧಾರಿತ GPU ಕಾರ್ಯಕ್ಷಮತೆ ಮತ್ತು 80% ಉತ್ತಮ AI ಕಾರ್ಯಕ್ಷಮತೆಯನ್ನು ನೀಡುತ್ತದೆ. ಹಾಗೆಯೇ 12GB RAM ಮತ್ತು 256GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಒಳಗೊಂಡಿದೆ.

ಟ್ರಿಪಲ್ ಕ್ಯಾಮೆರಾ ಸೆನ್ಸಾರ್ : ಒನ್‌ಪ್ಲಸ್ 10R 5G ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX766 ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಸೋನಿ IMX355 ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ GC02M1 ಮ್ಯಾಕ್ರೋ ಲೆನ್ಸ್ ಹೊಂದಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸ್ಯಾಮ್‌ಸಂಗ್ ISOCELL S5K3P9 ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ.
ಬ್ಯಾಟರಿ ಸಾಮರ್ಥ್ಯ ಎಷ್ಟು? ಇತರೆ ಫೀಚರ್ಸ್‌ಗಳೇನು : ಒನ್‌ಪ್ಲಸ್ 10R 5G ಸ್ಮಾರ್ಟ್‌ಫೋನ್ ಎಂಡ್ಯೂರೆನ್ಸ್ ಆವೃತ್ತಿಯ ಮಾದರಿ 4,500 mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದು 150W SuperVOOC ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಇನ್ನು 80W SuperVOOC ವೇಗದ ಚಾರ್ಜಿಂಗ್ ಹೊಂದಿರುವ ಫೋನ್ 5,000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2, GPS/ A-GPS, NFC, ಮತ್ತು USB ಟೈಪ್-C ಪೋರ್ಟ್ ಸೇರಿವೆ.


Click it and Unblock the Notifications








