Home
ಸುದ್ದಿಜಾಲ

ಒನ್‌ಪ್ಲಸ್‌ ಮೊಬೈಲ್‌ ಖರೀದಿಸುವ ಪ್ಲ್ಯಾನ್‌ ಇದ್ರೆ, ಈ ಆಫರ್‌ ಬೆಸ್ಟ್‌!

ಪ್ರಮುಖ ಇ ಕಾಮರ್ಸ್‌ ವೆಬ್‌ಸೈಟ್‌ಗಳ ಪೈಕಿ ಅಮೆಜಾನ್‌ ಕೂಡಾ ಒಂದಾಗಿದೆ. ಈ ಪ್ಲಾಟ್‌ಫಾರ್ಮ್ ಸ್ಮಾರ್ಟ್‌ಫೋನ್‌ಗಳಿಗೆ ಒಂದಿಲ್ಲೊಂದು ರಿಯಾಯಿತಿ ಕೊಡುಗೆ ನೀಡುತ್ತಾ ಸಾಗಿ ಬಂದಿದೆ. ಪ್ರಸ್ತುತ ಅಮೆಜಾನ್‌ ತಾಣವು ಒನ್‌ಪ್ಲಸ್‌ 10T 5G ಮೊಬೈಲ್‌ ಫೋನಿಗೆ ಬಹು ಆಕರ್ಷಕ ರಿಯಾಯಿತಿ ತಿಳಿಸಿದ್ದು, ಗ್ರಾಹಕರು ಹಿಂದೆ ತಿರುಗಿ ನೋಡುವಂತಾಗಿದೆ.

ಹೌದು, ಜನಪ್ರಿಯ ಇ ಕಾಮರ್ಸ್‌ ಅಮೆಜಾನ್‌ ಪ್ಲಾಟ್‌ಫಾರ್ಮ್ ನಲ್ಲಿ ಒನ್‌ಪ್ಲಸ್‌ 10T 5G ಫೋನ್‌ ಶೇ. 20% ರಷ್ಟು ಆಕರ್ಷಕ ಡಿಸ್ಕೌಂಟ್‌ ಪಡೆದಿದ್ದು, ಖರೀದಿದಾರರು ಈ ಮೊಬೈಲ್‌ ಅನ್ನು 39,999ರೂ. ಬೆಲೆಯಲ್ಲಿ ಖರೀದಿ ಮಾಡಲು ಅವಕಾಶ ಇದೆ. ಇದರೊಂದಿಗೆ ಕೆಲವು ಆಯ್ದ ಬ್ಯಾಂಕ್ ಆಫರ್‌, ಎಕ್ಸ್‌ಚೇಂಜ್‌ ಕೊಡುಗೆ ಹಾಗೂ ಇಎಮ್‌ಐ ಕೊಡುಗೆಗಳು ಸಹ ಲಭ್ಯ ದೊರೆಯಲಿದೆ.

ಒನ್‌ಪ್ಲಸ್‌ ಮೊಬೈಲ್‌ ಖರೀದಿಸುವ ಪ್ಲ್ಯಾನ್‌ ಇದ್ರೆ, ಈ ಆಫರ್‌ ಬೆಸ್ಟ್‌!

ಇನ್ನು ಒನ್‌ಪ್ಲಸ್‌ ಸಂಸ್ಥೆಯ ಈ ಮೊಬೈಲ್‌ ಕ್ವಾಲ್ಕಮ್‌ ಸ್ನಾಪ್‌ಡ್ರಾಗನ್ 8+ ಜೆನ್‌ 1 SoC ಪ್ರೊಸೆಸರ್‌ ಸಪೋರ್ಟ್‌ ಪಡೆದಿದ್ದು, ಟ್ರಿಪಲ್ ರಿಯರ್‌ ಕ್ಯಾಮೆರಾ ರಚನೆ ಪಡೆದುಕೊಂಡಿದೆ. ಇನ್ನು ಈ ಮೊಬೈಲ್‌ 16 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಪಡೆದುಕೊಂಡಿದೆ. ಹಾಗಾದರೆ ಒನ್‌ಪ್ಲಸ್‌ 10T 5G ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ ಹೇಗಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಹೀಗಿದೆ

ಒನ್‌ಪ್ಲಸ್‌ ಸಂಸ್ಥೆಯ ಈ ಫೋನ್‌ 6.7 ಇಂಚಿನ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇ ಅನ್ನು ಪಡೆದಿದ್ದು, ಇನ್ನು ಈ ಡಿಸ್‌ಪ್ಲೇ 2,412 x 1,080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಬಲವನ್ನು ಒಳಗೊಂಡಿದೆ. ಈ ಡಿಸ್‌ಪ್ಲೇ 10 ಬಿಟ್ ಕಲರ್‌, RGB ಬಣ್ಣದ ಹರವು ಮತ್ತು HDR10+ ಜೊತೆಗೆ 120hz ಸ್ಕ್ರೀನ್ ರಿಫ್ರೆಶ್ ರೇಟ್‌ ಅನ್ನು ಸಹ ಒದಗಿಸಲಿದೆ. ಇದಲ್ಲದೆ 394ppi ಪಿಕ್ಸೆಲ್ ಸಾಂದ್ರತೆಯನ್ನು ಒಳಗೊಂಡಿರುವ ಈ ಡಿಸ್‌ಪ್ಲೇ 360Hz ವರೆಗಿನ ಹಾರ್ಡ್‌ವೇರ್ ಟಚ್‌ ರೆಸ್ಪಾನ್ಸ್‌ ಮತ್ತು 720Hz ನ ಸಾಫ್ಟ್‌ವೇರ್ ಟಚ್‌ ರೆಸ್ಪಾನ್ಸ್‌ ಅನ್ನು ಪಡೆದಿದೆ.

ಒನ್‌ಪ್ಲಸ್‌ ಮೊಬೈಲ್‌ ಖರೀದಿಸುವ ಪ್ಲ್ಯಾನ್‌ ಇದ್ರೆ, ಈ ಆಫರ್‌ ಬೆಸ್ಟ್‌!

ಪ್ರೊಸೆಸರ್‌ ಸಾಮರ್ಥ್ಯದ ಸೌಲಭ್ಯ

ಒನ್‌ಪ್ಲಸ್‌ 10T 5G ಮೊಬೈಲ್‌ ಕ್ವಾಲ್ಕಮ್‌ ಸ್ನಾಪ್‌ಡ್ರಾಗನ್ 8+ ಜೆನ್ 1 SoC ಪ್ರೊಸೆಸರ್‌ ನಲ್ಲಿ ಕೆಲಸ ನಿರ್ವಹಿಸಲಿದೆ. ಇದು ಆಕ್ಸಿಜನ್ OS 12.1 ಜೊತೆಗೆ ಆಂಡ್ರಾಯ್ಡ್‌ 12 ಬೆಂಬಲ ಕೂಡಾ ಪಡೆದುಕೊಂಡಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್‌ 16GB RAM ಮತ್ತು 256GB ಆಂತರೀಕ ಸ್ಟೋರೇಜ್‌ ಅನ್ನು ಸಪೋರ್ಟ್‌ ಪಡೆದಿದೆ.

ಆಕರ್ಷಕ ಕ್ಯಾಮೆರಾ ಸೆನ್ಸಾರ್ ಆಯ್ಕೆ

ಒನ್‌ಪ್ಲಸ್‌ 10T 5G ಮೊಬೈಲ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, ಇದರಲ್ಲಿ ಮೊದಲ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೋನಿ IMX766 ಸೆನ್ಸಾರ್‌ ಪಡೆದಿದೆ. ದ್ವಿತೀಯ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಹೊಂದಿದ್ದು, ತೃತೀಯ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ ಅನ್ನು ಒಳಗೊಂಡಿದೆ. ಇದರ ಜೊತೆಗೆ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿದೆ.

ಒನ್‌ಪ್ಲಸ್‌ ಮೊಬೈಲ್‌ ಖರೀದಿಸುವ ಪ್ಲ್ಯಾನ್‌ ಇದ್ರೆ, ಈ ಆಫರ್‌ ಬೆಸ್ಟ್‌!

ಬ್ಯಾಟರಿ ಬ್ಯಾಕ್‌ಅಪ್‌

ಒನ್‌ಪ್ಲಸ್‌ 10T ಫೋನ್ 4800mAh ಸಾಮರ್ಥ್ಯದ ಬ್ಯಾಟರಿ ಸೌಲಭ್ಯ ಹೊಂದಿದ್ದು, 150W SUPERVOOC ಫಾಸ್ಟ್‌ ಚಾರ್ಜಿಂಗ್ ಬೆಂಬಲಿಸುತ್ತದೆ. ಇದರೊಂದಿಗೆ ಸ್ಮಾರ್ಟ್ ಬ್ಯಾಟರಿ ಹೆಲ್ತ್ ಅಲ್ಗಾರಿದಮ್, ಬ್ಯಾಟರಿ ಹೀಲಿಂಗ್ ಟೆಕ್ನಾಲಜಿ, ಚಾರ್ಜಿಂಗ್ ನಿರ್ವಹಿಸಲು ಕಸ್ಟಮೈಸ್ ಮಾಡಿದ ಸ್ಮಾರ್ಟ್ ಚಿಪ್ ಮತ್ತು ಇತರೆ ಕೆಲವು ಅನುಕೂಲಕರ ಫೀಚರ್ಸ್‌ಗಳನ್ನು ಸಹ ಪಡೆದಿದೆ.

Best Mobiles in India

English summary
OnePlus 10T 5G received great price down on amazon. specifications and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+