Home
ಸುದ್ದಿಜಾಲ

ಇಂದು ಒನ್‌ಪ್ಲಸ್‌ 11 5G ಫೋನ್‌ ಓಪೆನ್‌ ಸೇಲ್‌!..ಆಫರ್‌ ತಿಳಿದ್ರೆ OMG ಅಂತೀರಾ?

ಇತ್ತೀಚಿಗೆ ಒನ್‌ಪ್ಲಸ್‌ ಸಂಸ್ಥೆಯು ಭಾರತದಲ್ಲಿ ಬಿಡುಗಡೆ ಮಾಡಿರುವ ಹೊಸ ಒನ್‌ಪ್ಲಸ್‌ 11 5G (OnePlus 11 5G) ಸ್ಮಾರ್ಟ್‌ಫೋನ್ ಈಗಾಗಲೇ ಟ್ರೆಂಡಿ ಎನಿಸಿದೆ. ಈ ಸ್ಮಾರ್ಟ್‌ಫೋನ್ ಇಂದು (ಫೆಬ್ರವರಿ 14) ಅಮೆಜಾನ್ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಹಾಗೂ ಅಧಿಕೃತ ಒನ್‌ಪ್ಲಸ್‌ ವೆಬ್‌ಸೈಟ್‌ ಮೂಲಕ ಮಧ್ಯಾಹ್ನ 12ಕ್ಕೆ ಓಪೆನ್‌ ಸೇಲ್‌ ಪ್ರಾರಂಭಿಸಲಿದೆ. ಇನ್ನು ಈ ಫೋನ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 2 SoC ಪ್ರೊಸೆಸರ್‌ ಪಡೆದಿದೆ.

ಇಂದು ಒನ್‌ಪ್ಲಸ್‌ 11 5G ಫೋನ್‌ ಓಪೆನ್‌ ಸೇಲ್‌!..ಆಫರ್‌ ತಿಳಿದ್ರೆ OMG ಅಂತೀರಾ?

ಹೌದು, ಒನ್‌ಪ್ಲಸ್‌ ಸಂಸ್ಥೆಯ ಒನ್‌ಪ್ಲಸ್‌ 11 5G ಸ್ಮಾರ್ಟ್‌ಫೋನ್ ಮಾರಾಟ ಇಂದು ಇ ಕಾಮರ್ಸ್ ದೈತ್ಯ ಅಮೆಜಾನ್ ನಡೆಯಲಿದೆ. ಈ ಫೋನ್ ಟ್ರಿಪಲ್‌ ಕ್ಯಾಮೆರಾ ಸೆಟ್‌ಅಪ್, ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿರುವುದು ಪ್ಲಸ್‌ ಪಾಯಿಂಟ್ ಆಗಿ ಕಾಣಿಸಿಕೊಂಡಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದೆ. ಹಾಗಾದರೇ ಒನ್‌ಪ್ಲಸ್‌ 11 5G ಸ್ಮಾರ್ಟ್‌ಫೋನಿನ ಬೆಲೆ ಎಷ್ಟು? ಹಾಗೂ ಈ ಫೋನಿನ ಇತರೆ ಫೀಚರ್ಸ್‌ಗಳು ಯಾವುವು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಒನ್‌ಪ್ಲಸ್‌ 11 5G : ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಒನ್‌ಪ್ಲಸ್‌ 11 5G ಸ್ಮಾರ್ಟ್‌ಫೋನ್‌ 6.7 ಇಂಚಿನ ಕ್ವಾಡ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,440 x 3,216 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 10 ಬಿಟ್ LTPO 3.0 ಅಮೋಲೆಡ್‌ ಸ್ಕ್ರೀನ್‌ ಹೊಂದಿದೆ. ಜೊತೆಗೆ ಈ ಡಿಸ್‌ಪ್ಲೇ 525ppi ಪಿಕ್ಸೆಲ್ ಸಾಂದ್ರತೆ, 1,000Hz ವರೆಗಿನ ಟಚ್ ಸ್ಯಾಂಪ್ಲಿಂಗ್ ರೇಟ್‌ ಅನ್ನು ಬೆಂಬಲಿಸಲಿದೆ. ಇದಲ್ಲದೆ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್‌ ಅನ್ನು ಪಡೆದುಕೊಂಡಿದೆ.

ಇಂದು ಒನ್‌ಪ್ಲಸ್‌ 11 5G ಫೋನ್‌ ಓಪೆನ್‌ ಸೇಲ್‌!..ಆಫರ್‌ ತಿಳಿದ್ರೆ OMG ಅಂತೀರಾ?

ಒನ್‌ಪ್ಲಸ್‌ 11 5G : ಪ್ರೊಸೆಸರ್‌ ಪವರ್‌ ಮಾಹಿತಿ

ಒನ್‌ಪ್ಲಸ್‌ 11 5G ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 2 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 13-ಆಧಾರಿತ OxygenOS 13 ಔಟ್-ಆಫ್-ದಿ-ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 16GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ ಹೈಪರ್‌ಬೂಸ್ಟ್ ಗೇಮಿಂಗ್ ಎಂಜಿನ್ ಅನ್ನು ಸಹ ಹೊಂದಿದೆ.

ಒನ್‌ಪ್ಲಸ್‌ 11 5G : ತ್ರಿವಳಿ ಕ್ಯಾಮೆರಾ ಸೆನ್ಸಾರ್

ಒನ್‌ಪ್ಲಸ್‌ 11 5G ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX890 ಸೆನ್ಸಾರ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 48 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್‌ ಮತ್ತು ಮೂರನೇ ಕ್ಯಾಮೆರಾ 32 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್‌ ಅನ್ನು ಪಡೆದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇನ್ನು ರಿಯರ್‌ ಕ್ಯಾಮೆರಾ ಫೀಚರ್ಸ್‌ನಲ್ಲಿ ನೈಟ್‌ಸ್ಕೇಪ್, ಸ್ಮಾರ್ಟ್ ದೃಶ್ಯ ಗುರುತಿಸುವಿಕೆ, ಸೂಪರ್ ಸ್ಟೇಬಲ್ ಮೋಡ್ ಅನ್ನು ನೀಡಲಾಗಿದೆ.

ಇಂದು ಒನ್‌ಪ್ಲಸ್‌ 11 5G ಫೋನ್‌ ಓಪೆನ್‌ ಸೇಲ್‌!..ಆಫರ್‌ ತಿಳಿದ್ರೆ OMG ಅಂತೀರಾ?

ಒನ್‌ಪ್ಲಸ್‌ 11 5G : ಬ್ಯಾಟರಿ ಬ್ಯಾಕ್‌ಅಪ್‌ ಎಷ್ಟಿದೆ?

ಒನ್‌ಪ್ಲಸ್‌ 11 5G ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 100W SuperVOOC ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G, Wi-Fi 7, ಬ್ಲೂಟೂತ್ 5.3, GPS , A-GPS, NFC, ಮತ್ತು USB 2.0 ಅನ್ನು ಬೆಂಬಲಿಸಲಿದೆ. ಜೊತೆಗೆ ಪ್ರಾಕ್ಸಿಮಿಟಿ, ಗೈರೊಸ್ಕೋಪ್ ಮತ್ತು ಆಂಬಿಯೆಂಟ್‌ ಲೈಟ್‌ ಸೆನ್ಸಾರ್‌ ಅನ್ನು ಒಳಗೊಂಡಿದೆ.

ಒನ್‌ಪ್ಲಸ್‌ 11 5G : ಬೆಲೆ ಮತ್ತು ಲಭ್ಯತೆ

ಒನ್‌ಪ್ಲಸ್‌ 11 5G ಸ್ಮಾರ್ಟ್‌ಫೋನ್‌ ಭಾರತದಲ್ಲಿ 8GB + 128GB ಸ್ಟೋರೇಜ್ ಆಯ್ಕೆಗೆ 56,999ರೂ.ಬೆಲೆಯನ್ನು ಪಡೆದಿದೆ. ಇದರ 12GB + 256G ಸ್ಟೋರೇಜ್ ರೂಪಾಂತರದ ಆಯ್ಕೆಯು 61,999ರೂ. ಬೆಲೆಯಲ್ಲಿ ಪಡೆದಿದೆ. ಇನ್ನು ಸ್ಮಾರ್ಟ್‌ಫೋನ್‌ ಎಟರ್ನಲ್ ಗ್ರೀನ್ ಮತ್ತು ಟೈಟಾನ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಇನ್ನು ಈ ಸ್ಮಾರ್ಟ್‌ಫೋನ್‌ ಸೇಲ್‌ ಇದೇ ಫೆಬ್ರವರಿ 14 ರಂದು ನಡೆಯಲಿದೆ.

Best Mobiles in India

English summary
Oneplus 11 5g comes powered by Qualcomm Snapdragon 8 Gen 2 octa-core processor and is priced at Rs. 56,999 onwards. Know more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+