Home
ಸುದ್ದಿಜಾಲ

OnePlus: ಒನ್‌ಪ್ಲಸ್‌ 11 5G ಫೋನ್‌ಗೆ ಎರಡನೇ ಬಾರಿ ಬೆಲೆ ಇಳಿಕೆ! ಬ್ಯಾಂಕ್‌ ಆಫರ್ ಸಹ ಇದೆ...

ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ಗಳಿಗೆ ಭಾರತದಲ್ಲಿ ವಿಶೇಷವಾದ ಬೇಡಿಕೆ ಇದೆ. ಈ ನಡುವೆ ಒನ್‌ಪ್ಲಸ್‌ನ ಪ್ರಮುಖ ಫೋನ್‌ಗೆ ಇದೀಗ ಎರಡನೇ ಬಾರಿಗೆ ಬೆಲೆ ಇಳಿಕೆ ಮಾಡಲಾಗಿದೆ. ಇಷ್ಟು ಮಾತ್ರವಲ್ಲದೆ ಬ್ಯಾಂಕ್‌ ಆಫರ್ ಸಹ ಇದ್ದು, ಭಾರೀ ಕಡಿಮೆ ದರದಲ್ಲಿ ಈ ಫೋನ್‌ ಅನ್ನು ಖರೀದಿ ಮಾಡಬಹುದಾಗಿದೆ.

ಹೌದು, ಚೀನಾದ ಸ್ಮಾರ್ಟ್‌ಫೋನ್ ತಯಾರಕ ಒನ್‌ಪ್ಲಸ್‌ ಭಾರತದಲ್ಲಿ ಒನ್‌ಪ್ಲಸ್‌ 11 5G ಬೆಲೆಗಳನ್ನು ಕಡಿತಗೊಳಿಸಿದೆ. ಇದನ್ನು ಕಳೆದ ವರ್ಷ ಲಾಂಚ್‌ ಮಾಡಲಾಗಿದ್ದು, ಅತ್ಯಂತ ದುಬಾರಿ ಸ್ಮಾರ್ಟ್‌ಫೋನ್‌ ಎಂದು ಗುರುತಿಸಲಾಗಿತ್ತು. ಆದರೆ, ಈಗ ಭಾರೀ ಆಫರ್ ಬೆಲೆಗೊಂದಿಗೆ ಲಭ್ಯ ಇದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಆಫರ್ ಬೆಲೆ ಎಷ್ಟು?. ಈ ಫೋನ್‌ನ ಫೀಚರ್ಸ್‌ ಏನು ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಒನ್‌ಪ್ಲಸ್‌ 11 5G ಫೋನ್‌ಗೆ ಎರಡನೇ ಬಾರಿ ಬೆಲೆ ಇಳಿಕೆ! ಬ್ಯಾಂಕ್‌ ಆಫರ್ ಸಹ ಇದೆ..

ಒನ್‌ಪ್ಲಸ್‌ 11 5G: ಈ ಫೋನ್‌ ಎರಡು ವೇರಿಯಂಟ್ ಆಯ್ಕೆಯಲ್ಲಿ ಲಭ್ಯ ಇದ್ದು, 8GB+128GB ಸ್ಟೋರೇಜ್ ವೇರಿಯಂಟ್‌ ಗೆ ಮಾತ್ರ‌ ಬೆಲೆ ಕಡಿಮೆ ಮಾಡಲಾಗಿದೆ. ಅಂದರೆ ಈ ಫೋನ್‌ ಅನ್ನು 56,999 ರೂ.ಗಳ ಬೆಲೆಗೆ ಲಾಂಚ್‌ ಮಾಡಲಾಗಿದ್ದು, ಕಂಪನಿಯು ಇತ್ತೀಚೆಗೆ 2,000 ರೂ.ಗಳ ಮೊದಲ ಬೆಲೆ ಕಡಿತವನ್ನು ಮಾಡಿದೆ. ಅದರಂತೆ ಈಗ ಮತ್ತೊಂದು ಬೆಲೆ ಕಡಿತವನ್ನು ಮಾಡಿದೆ. ಅಂದರೆ ಭರ್ಜರಿ 3,000 ರೂ. ಗಳ ಬೆಲೆ ಇಳಿಕೆ. ಈ ಮೂಲಕ ಗ್ರಾಹಕರು ಈ ಫೋನ್‌ ಅನ್ನು 51,999 ರೂ.ಗಳಲ್ಲಿ ಖರೀದಿ ಮಾಡಬಹುದಾಗಿದೆ.

ಒನ್‌ಪ್ಲಸ್‌11 5G ಸ್ಮಾರ್ಟ್‌ಫೋನ್‌ಗೆ ಬ್ಯಾಂಕ್‌ ಆಫರ್: ಈ ಸ್ಮಾರ್ಟ್‌ಫೋನ್‌ಗೆ ಅತ್ಯಾಕರ್ಷಕ ಬ್ಯಾಂಕ್ ಕೊಡುಗೆಗಳು ಸಹ ಲಭ್ಯವಿದೆ. ಐಸಿಐಸಿಐ ಮತ್ತು ಹೆಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ಗಳ ಮೇಲೆ 3,000 ರೂಪಾಯಿಗಳ ತ್ವರಿತ ರಿಯಾಯಿತಿಯನ್ನು ನೀಡಲಾಗುತ್ತದೆ ಅಲ್ಲದೆ. 4 ವರ್ಷಗಳ ಸಾಫ್ಟ್‌ವೇರ್ ನವೀಕರಣಗಳು ಮತ್ತು 5 ವರ್ಷಗಳ ಭದ್ರತಾ ನವೀಕರಣಗಳನ್ನು ಭರವಸೆ ಸಹ ನೀಡಲಾಗುತ್ತದೆ.

ಒನ್‌ಪ್ಲಸ್‌ 11 5G ಫೋನ್‌ಗೆ ಎರಡನೇ ಬಾರಿ ಬೆಲೆ ಇಳಿಕೆ! ಬ್ಯಾಂಕ್‌ ಆಫರ್ ಸಹ ಇದೆ..

ಒನ್‌ಪ್ಲಸ್‌11 11 5G ಫೀಚರ್ಸ್‌: ಈ ಸ್ಮಾರ್ಟ್‌ಫೋನ್ 6.7 ಇಂಚಿನ QHD+ E4 2.75D ಕರ್ವ್ OLED LTPO 3.0 ಡಿಸ್‌ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್ ಮತ್ತು ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ ಈ ಫೋನ್ 1300 ನಿಟ್ಸ್‌ಬ್ರೈಟ್‌ನೆಸ್‌ ಆಯ್ಕೆ ಪಡೆದಿದ್ದು, ಉತ್ತಮವಾಗಿದೆ.

ಇದರ ಜೊತೆಗೆ ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜನ್ 2 4nm ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಅಡ್ರಿನೋ 740 GPU ಜೊತೆಗೆ ತಡೆರಹಿತ ಕಾರ್ಯಕ್ಷಮತೆ ಮತ್ತು ಗಮನಾರ್ಹ ದಕ್ಷತೆಯನ್ನು ನೀಡಲಿದೆ. ಹಾಗೆಯೇ ಈ ಫೋನ್ ಟ್ರಿಪಲ್ ಕ್ಯಾಮೆರಾ ರಚನೆ ಪಡೆದಿದ್ದು, OIS ಜೊತೆಗೆ 50MP ಸೆನ್ಸರ್‌, 48MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 32MP ಟೆಲಿಫೋಟೋ ಸೆನ್ಸರ್‌ ಅನ್ನು ಕಾಣಬಹುದಾಗಿದೆ.

ಒನ್‌ಪ್ಲಸ್‌ 11 5G ಫೋನ್‌ಗೆ ಎರಡನೇ ಬಾರಿ ಬೆಲೆ ಇಳಿಕೆ! ಬ್ಯಾಂಕ್‌ ಆಫರ್ ಸಹ ಇದೆ..

ಇದರೊಂದಿಗೆ ಸೆಲ್ಫಿ ಮತ್ತು ವೀಡಿಯೊ ಸಂವಹನಕ್ಕಾಗಿ ಮುಂಭಾಗದಲ್ಲಿ 16MP ಸೆನ್ಸರ್‌ ಆಯ್ಕೆ ನೀಡಲಾಗಿದೆ. ಈ ಸೆನ್ಸರ್‌ಗಳು ಹ್ಯಾಸೆಲ್‌ಬ್ಲೇಡ್ ,ಪೋರ್ಟ್ರೇಟ್ ಮೋಡ್ ಅನ್ನು ಸಂಯೋಜಿಸಲಿದ್ದು, ಫೋಟೋಗ್ರಫಿ ಪ್ರಿಯರಿಗೆ ಉತ್ತಮ ಫೋನ್‌ ಆಗಿ ಗುರುತಿಸಿಕೊಂಡಿದೆ. ಮತ್ತು ಇದು 5,000mAh ಸಾಮರ್ಥ್ಯದ ಬ್ಯಾಟರಿಯಿಂದ ಕಾರ್ಯನಿರ್ವಹಿಸಲಿದ್ದು, 100W ವೇಗದ ಚಾರ್ಜಿಂಗ್ ಸಾಮರ್ಥ್ಯ ಪಡೆದಿದೆ. ಅಂದರೆ 25 ನಿಮಿಷಗಳಲ್ಲಿ 1 ರಿಂದ 100 ಪ್ರತಿಶತದಷ್ಟು ಸ್ವಿಫ್ಟ್ ಚಾರ್ಜ್ ಅನ್ನು ಖಚಿತಪಡಿಸುತ್ತದೆ.

ಉಳಿದಂತೆ ಈ ಸ್ಮಾರ್ಟ್‌ಫೋನ್ 5G ಬೆಂಬಲ, ವೈ-ಫೈ 7, ಬ್ಲೂಟೂತ್ ಆವೃತ್ತಿ 5.2, ಜಿಪಿಎಸ್‌ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್‌ನೊಂದಿಗೆ ಕಾಣಿಸಿಕೊಂಡಿದೆ. ಹಾಗೆಯೇ ಇದು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್‌ ಆಯ್ಕೆ ಪಡೆದಿದ್ದು, ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP54 ರೇಟಿಂಗ್, ಡಾಲ್ಬಿ ಅಟ್ಮಾಸ್‌ನೊಂದಿಗೆ ಸ್ಟೀರಿಯೋ ಸ್ಪೀಕರ್‌ ಆಯ್ಕೆ ಪಡೆದುಕೊಂಡಿದೆ.

Best Mobiles in India

English summary
OnePlus has slashed OnePlus 11 5G prices in India. It was launched last year and is recognized as the most expensive smartphone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+