Home
ಸುದ್ದಿಜಾಲ

ಭಾರತದಲ್ಲಿ ಒನ್‌ಪ್ಲಸ್‌ 11R ಫೋನ್‌ನ ಮೊದಲ ಸೇಲ್‌ ಆರಂಭ; ಎಲ್ಲೆಲ್ಲಿ ಲಭ್ಯ?

ಒನ್‌ಪ್ಲಸ್‌ 11R ಸ್ಮಾರ್ಟ್‌ಫೋನ್‌ ಖರೀದಿ ಮಾಡಲು ಭಾರತೀಯರು ಕಾತುರದಿಂದ ಕಾಯುತ್ತಿದ್ದರು. ಅದರಂತೆ ಇಂದಿನಿಂದ ಈ ಅತ್ಯುತ್ತಮ ಕಾರ್ಯಕ್ಷಮತೆ ಇರುವ ಫೋನ್‌ ಅನ್ನು ಖರೀದಿ ಮಾಡಬಹುದಾಗಿದೆ. ಈ ಫೋನ್‌ ಖರೀದಿ ಮಾಡಲು ಮುಂಗಡ ಬುಕಿಂಗ್‌ಗೂ ಅವಕಾಶ ಕಲ್ಪಿಸಲಾಗಿತ್ತು.

ಹೌದು, ಒನ್‌ಪ್ಲಸ್‌ 11R ಫೋನ್ (OnePlus 11R 5G ) ಅನ್ನು ಇಂದಿನಿಂದ ಖರೀದಿ ಮಾಡಬಹುದಾಗಿದ್ದು, ಆರಂಭಿಕ ಬೆಲೆ 39,999 ರೂ. ಗಳಾಗಿದೆ. ಈ ಫೋನ್ ಸ್ನಾಪ್‌ಡ್ರಾಗನ್ 8 ಪ್ಲಸ್ ಜನ್ 1 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಜೊತೆಗೆ ಟ್ರಿಪಲ್ ರಿಯರ್‌ ಕ್ಯಾಮೆರಾ ರಚನೆ ಅತ್ಯಾಕರ್ಷಕವಾಗಿದೆ. ಹಾಗಿದ್ರೆ, ಈ ಫೋನ್‌ ಅನ್ನು ಖರೀದಿ ಮಾಡುವುದು ಎಲ್ಲಿ, ಫೀಚರ್ಸ್‌ ಏನು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

 ಭಾರತದಲ್ಲಿ ಒನ್‌ಪ್ಲಸ್‌ 11R ಫೋನ್‌ನ ಮೊದಲ ಸೇಲ್‌ ಆರಂಭ; ಎಲ್ಲೆಲ್ಲಿ ಲಭ್ಯ?

ಒನ್‌ಪ್ಲಸ್ 11R 5G ಖರೀದಿಗೆ ಮುಕ್ತ

ಹಲವಾರು ಗ್ರಾಹಕರು ಯಾವಾಗಪ್ಪಾ ಈ ಫೋನ್‌ ಅನ್ನು ಖರೀದಿ ಮಾಡಿ ತಮ್ಮ ಕೈ ನಲ್ಲಿ ಹಿಡಿದುಕೊಳ್ಳುವುದು ಎಂಬ ಆಸೆಯನ್ನು ವ್ಯಕ್ತಪಡಿಸುತ್ತಿದ್ದರು. ಅದರಂತೆ ಇಂದಿನಿಂದ ಖರೀದಿಗೆ ಮುಕ್ತವಾಗಿದ್ದು. ಬೇಸ್ ಮಾಡೆಲ್ 39,999 ರೂ.ಗಳ ಆರಂಭಿಕ ಬೆಲೆ ಹೊಂದಿದ್ದರೆ ಟಾಪ್ ಮಾಡೆಲ್ 44,999 ರೂ. ಗಳ ಆರಂಭಿಕ ಬೆಲೆ ಹೊಂದಿದೆ. ಹಾಗೆಯೇ ಈ ಫೋನ್‌ ಅನ್ನು ನೀವು ಒನ್‌ಪ್ಲಸ್‌ನ ಅಧಿಕೃತ ಸೈಟ್‌ ಹಾಗೂ ಒನ್‌ಪ್ಲಸ್‌ ಸ್ಟೋರ್‌ ಸೇರಿದಂತೆ ಅಮೆಜಾನ್‌ ಮೂಲಕವೂ ಖರೀದಿ ಮಾಡಬಹುದಾಗಿದೆ.

ಒನ್‌ಪ್ಲಸ್ 11R 5G ಡಿಸ್‌ಪ್ಲೇ ವಿವರ

ಈ ಸ್ಮಾರ್ಟ್‌ಫೋನ್‌ 6.74 ಇಂಚಿನ 10 ಬಿಟ್ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಹೊಂದಿದ್ದು, 120Hz ರಿಫ್ರೆಶ್ ರೇಟ್‌ ಹಾಗೂ 360 Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಜೊತೆಗೆ 2772 X 1240 ಪಿಕ್ಸೆಲ್‌ ರೆಸಲ್ಯೂಶನ್ ಹೊಂದಿದೆ. ಇನ್ನು HDR10+ ಅನ್ನು ಬೆಂಬಲಿಸುವ ಈ ಡಿಸ್‌ಪ್ಲೇ ಅತ್ಯಾಧುನಿಕ ಫೀಚರ್ಸ್‌ಗಳಲ್ಲಿ ಒಂದಾದ ಐ ಕಂಫರ್ಟರ್, ಇಮೇಜ್ ಶಾರ್ಪನರ್ ಸೇರಿದಂತೆ ಇನ್ನಿತರೆ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

 ಭಾರತದಲ್ಲಿ ಒನ್‌ಪ್ಲಸ್‌ 11R ಫೋನ್‌ನ ಮೊದಲ ಸೇಲ್‌ ಆರಂಭ; ಎಲ್ಲೆಲ್ಲಿ ಲಭ್ಯ?

ಒನ್‌ಪ್ಲಸ್ 11R 5G ಪ್ರೊಸೆಸರ್‌

ಒನ್‌ಪ್ಲಸ್ 11R 5G ಫೋನ್ ಸ್ನಾಪ್‌ಡ್ರಾಗನ್ 8 ಪ್ಲಸ್ ಜನ್ 1 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಈ ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುವ ಮೊದಲ ಫೋನ್‌ ಆಗಿ ಗುರುತಿಸಿಕೊಂಡಿದೆ. ಜೊತೆಗೆ ಆಂಡ್ರಾಯ್ಡ್‌ 13 ಆಪರೇಟಿಂಗ್ ಸಿಸ್ಟಮ್‌ನ ಆವೃತ್ತಿಯಿಂದ ರನ್‌ ಆಗಲಿದೆ. ಇನ್ನು 8GB/16GB RAM ಹಾಗೂ 128GB/256GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯದೊಂದಿಗೆ ಈ ಫೋನ್ ಕಾಣಿಸಿಕೊಂಡಿದೆ.

ಒನ್‌ಪ್ಲಸ್ 11R 5G ಕ್ಯಾಮೆರಾ ರಚನೆ

ಈ ಫೋನ್‌ನ ಕ್ಯಾಮೆರಾ ವಿಚಾರಕ್ಕೆ ಬಂದರೆ ಬಳಕೆದಾರರು ಅತ್ಯುತ್ತಮವಾದ ಫೋಟೋಗಳನ್ನು ಸೆರೆಹಿಡಿಯಬಹುದಾಗಿದೆ. ಇದಕ್ಕಾಗಿ ಟ್ರಿಪಲ್‌ ರಿಯರ್‌ ಕ್ಯಾಮೆರಾ ಆಯ್ಕೆ ನೀಡಲಾಗಿದ್ದು, ಓಐಎಸ್‌ ಬೆಂಬಲದೊಂದಿಗೆ 50MP ಸೋನಿ IMX890 ಪ್ರಮುಖ ಕ್ಯಾಮೆರಾ, 2MP ಮ್ಯಾಕ್ರೋ ಹಾಗೂ 8MP ಮೆಗಾ ವೈಡ್ ಆಂಗಲ್ ಲೆನ್ಸ್ ಆಯ್ಕೆಯನ್ನು ಪಡೆದುಕೊಂಡಿದೆ. ಇದರೊಂದಿಗೆ 16 MP ಸೆಲ್ಫಿ ಕ್ಯಾಮೆರಾ ಸಹ ಮೊಬೈಲ್‌ಗೆ ಉತ್ತಮ ನೋಟ ನೀಡಲಿದೆ.

 ಭಾರತದಲ್ಲಿ ಒನ್‌ಪ್ಲಸ್‌ 11R ಫೋನ್‌ನ ಮೊದಲ ಸೇಲ್‌ ಆರಂಭ; ಎಲ್ಲೆಲ್ಲಿ ಲಭ್ಯ?

ಒನ್‌ಪ್ಲಸ್ 11R 5G ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ

ಈ ಫೋನ್‌ ಬರೋಬ್ಬರಿ 100W ಸೂಪರ್‌ವೂಕ್ + ಚಾರ್ಜರ್ ಆಯ್ಕೆ ಹೊಂದಿದ್ದು, 5,000 mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ. ಅದರಂತೆ ಈ ಫಾಸ್ಟ್‌ ಚಾರ್ಜರ್‌ ಮೂಲಕ ಕೇವಲ 25 ನಿಮಿಷಗಳಲ್ಲಿ ಫೋನ್‌ನ ಬ್ಯಾಟರಿಯನ್ನು ಭರ್ತಿ ಮಾಡಬಹುದಾಗಿದೆ. ಇನ್ನುಳಿದಂತೆ ಈ ಫೋನ್ ಸೋನಿಕ್ ಬ್ಲ್ಯಾಕ್‌ ಮತ್ತು ಗ್ಯಾಲಕ್ಟಿಕ್ ಸಿಲ್ವರ್ ಬಣ್ಣದಲ್ಲಿ ಕಾಣಿಸಿಕೊಂಡಿದೆ.

Best Mobiles in India

English summary
OnePlus 11R smartphone is available for purchase in India from today. starting price of this phone is Rs 39,999.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+