ಒನ್‌ಪ್ಲಸ್ 11R ಈಗ ಪ್ರಿ-ಆರ್ಡರ್‌ಗೆ ಲಭ್ಯ!..ಉಚಿತವಾಗಿ ಸಿಗಲಿದೆ ಒನ್‌ಪ್ಲಸ್ ಬಡ್ಸ್ Z2!
ಒನ್‌ಪ್ಲಸ್ ಸಂಸ್ಥೆಯು ಇತ್ತೀಗಷ್ಟೆ ಭಾರತದಲ್ಲಿ ಬಿಡುಗಡೆ ಮಾಡಿರುವ ಒನ್‌ಪ್ಲಸ್ 11R (OnePlus 11R) ಸ್ಮಾರ್ಟ್‌ಫೋನ್ ಮೊಬೈಲ್ ಪ್ರಿಯರನ್ನು ಸೆಳೆದಿದೆ. ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ Gen 1 5G SoC ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದ್ದು, ಬಿಗ್ ಬ್ಯಾಟರಿ ಆಯ್ಕೆ ಪಡೆದಿದೆ. ಇದೇ ಫೆಬ್ರವರಿ 28 ರಂದು ಮಾರಾಟ ಆರಂಭಿಸಲಿದೆ. ಆದ್ರೆ ಇಂದಿನಿಂದ (ಫೆ. 21) ಪ್ರಿ-ಆರ್ಡರ್‌ಗೆ ಲಭ್ಯವಿದೆ.
ಒನ್‌ಪ್ಲಸ್ 11R ಸ್ಮಾರ್ಟ್‌ಫೋನ್ ಈಗ ಭಾರತದಲ್ಲಿ ಮುಂಗಡ-ಕೋರಿಕೆಗೆ ಸಿದ್ಧವಾಗಿದೆ. ಅಮೆಜಾನ್ ಇಂಡಿಯಾ ವೆಬ್‌ಸೈಟ್ ಮತ್ತು ಅಧಿಕೃತ OnePlus.in ಪ್ಲಾಟ್‌ಫಾರ್ಮ್ ಗಳ ಮೂಲಕ ಗ್ರಾಹಕರು ಈಗ ಸ್ಮಾರ್ಟ್‌ಫೋನ್ ಅನ್ನು ಮುಂಗಡವಾಗಿ ಆರ್ಡರ್ ಮಾಡಬಹುದು. ಈ ಫೋನ್ 8GB+128GB ಮತ್ತು 16GB+256GB ವೇರಿಯಂಟ್ ಆಯ್ಕೆಗಳಲ್ಲಿ ಲಭ್ಯವಾಗಲಿದ್ದು, ಬೆಲೆ ಕ್ರಮವಾಗಿ 39,999ರೂ ಮತ್ತು 44,999ರೂ. ಆಗಿದೆ.

ಸಂಸ್ಥೆಯು ಒನ್‌ಪ್ಲಸ್ 11R ಖರೀದಿಗೆಯೊಂದಿಗೆ 4,999 ರೂ ಬೆಲೆಯ ಒನ್‌ಪ್ಲಸ್ ಬಡ್ಸ್ Z2 (OnePlus Buds Z2) ಇಯರ್‌ಫೋನ್‌ಗಳನ್ನು ಉಚಿತವಾಗಿ ನೀಡುತ್ತಿದೆ (ಇದು ಸೀಮಿತ ಅವಧಿಯ ಕೊಡುಗೆ). ಇದರೊಂದಿಗೆ, ಒನ್‌ಪ್ಲಸ್ 11R ಅನ್ನು ಖರೀದಿಸುವ ಗ್ರಾಹಕರು ಐಸಿಐಸಿಐ ಬ್ಯಾಂಕ್ ಮತ್ತು ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ 1,000 ರೂ. ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಹಾಗಾದರೆ ಒನ್‌ಪ್ಲಸ್ 11R ಫೋನ್ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಒನ್‌ಪ್ಲಸ್ 11R : ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ಒನ್‌ಪ್ಲಸ್ 11R ಸ್ಮಾರ್ಟ್‌ಫೋನ್ 6.74 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಕರ್ವ್ಡ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 2772x1240 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಡಿಸ್‌ಪ್ಲೇ 40Hz-120Hz ಅಡಾಪ್ಟಿವ್ ಡೈನಾಮಿಕ್ ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಇದು 1000Hz ವರೆಗೆ ಟಚ್ ರೆಸ್ಪಾನ್ಸ್, 4450 ppi ಬ್ರೈಟ್‌ನೆಸ್ ಮತ್ತು 1,450 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ನೀಡಲಿದೆ.
ಒನ್‌ಪ್ಲಸ್ 11R : ಪ್ರೊಸೆಸರ್ ಯಾವುದು?
ಒನ್‌ಪ್ಲಸ್ 11R ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ Gen 1 5G SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM+256GB ಹಾಗೂ 18GB RAM ಮತ್ತು 256GB ವೇರಿಯೆಂಟ್ ಆಯ್ಕೆಯ ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ.

ಒನ್‌ಪ್ಲಸ್ 11R : ಕ್ಯಾಮೆರಾ ಸೆಟ್‌ಅಪ್ ಏನಿದೆ?
ಒನ್‌ಪ್ಲಸ್ 11R ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX890 ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್-ಆಂಗಲ್ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 4cm ಮ್ಯಾಕ್ರೋ ಲೆನ್ಸ್ ಹೊಂದಿದ್ದು, 120-ಡಿಗ್ರಿ ಅಲ್ಟ್ರಾ-ವೈಡ್ ಲೆನ್ಸ್ ಪಡೆದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಕೂಡ ನೀಡಲಾಗಿದೆ.
ಒನ್‌ಪ್ಲಸ್ 11R : ಬ್ಯಾಟರಿ ಮತ್ತು ಇತರೆ
ಒನ್‌ಪ್ಲಸ್ 11R ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 100W SUPERVOOC S ಫ್ಲಾಶ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G, Wi-Fi, ಬ್ಲೂಟೂತ್ 5.3 ಅನ್ನು ಬೆಂಬಲಿಸಲಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್ ಉತ್ತಮ ಡಿಸ್ಚಾರ್ಜ್ ಮತ್ತು ಸುರಕ್ಷಿತ ರೀಬೂಟ್ ಅನ್ನು ಖಾತ್ರಿಗೊಳಿಸುತ್ತದೆ.
ಒನ್‌ಪ್ಲಸ್ 11R : ಬೆಲೆ ಮತ್ತು ಲಭ್ಯತೆ
ಒನ್‌ಪ್ಲಸ್ 11R ಸ್ಮಾರ್ಟ್‌ಫೋನ್ ಭಾರತದಲ್ಲಿ 8GB+256GB ರೂಪಾಂತರದ ಆಯ್ಕೆಗೆ 39,999ರೂ. ಬೆಲೆ ಹೊಂದಿದೆ. ಇದರ 16GB+256GB ರೂಪಾಂತರದ ಆಯ್ಕೆಯು 44,999ರೂ. ಬೆಲೆ ಪಡೆದಿದೆ. ಈ ಸ್ಮಾರ್ಟ್‌ಫೋನ್ ಸೋನಿಕ್ ಬ್ಲ್ಯಾಕ್ ಮತ್ತು ಗಾಲಾಟಿಕ್ ಸಿಲ್ವರ್ ಕಲರ್ ಆಯ್ಕೆಯಲ್ಲಿ ಲಭ್ಯವಾಗಲಿದೆ. ಇದು ಇದೇ ಫೆಬ್ರವರಿ 28 ರಂದು ಅಮೆಜಾನ್, ಒನ್‌ಪ್ಲಸ್ ವೆಬ್‌ಸೈಟ್ ಮೂಲಕ ಸೇಲ್‌ಗೆ ಬರಲಿದೆ.


Click it and Unblock the Notifications








