OnePlus: ಒನ್‌ಪ್ಲಸ್ 11R ಸೋಲಾರ್ ರೆಡ್ ವೇರಿಯಂಟ್ ಏಪ್ರಿಲ್ 18 ರಿಂದ ಸೇಲ್! ಆಫರ್ ಏನಿದೆ?
ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳು (OnePlus Smartphone) ವಿಶೇಷ ಫೀಚರ್ಸ್ ಆಯ್ಕೆ ಪಡೆಯುವ ಮೂಲಕ ಬಳಕೆದಾರರಿಗೆ ಹೊಸ ಹೊಸ ಅನುಭವ ನೀಡುತ್ತವೆ. ಈ ನಡುವೆ ಒನ್‌ಪ್ಲಸ್ 11R 5G ಸೋಲಾರ್ ರೆಡ್ 8 GB RAM ಮತ್ತು 128 GB ಇಂಟರ್ ಸ್ಟೋರೇಜ್ ವೇರಿಯಂಟ್ ಫೋನ್ ಸೇಲ್ ಬಗ್ಗೆ ಘೋಷಣೆ ಮಾಡಲಾಗಿದೆ.
ಹೌದು, ಒನ್‌ಪ್ಲಸ್ 11R ಸೋಲಾರ್ ರೆಡ್ ವೇರಿಯಂಟ್ (OnePlus 11R Solar Red variant) ಏಪ್ರಿಲ್ 18 ರಿಂದ ಸೇಲ್ ಆಗಲಿದ್ದು, ವಿಶೇಷ ಆಫರ್ ಅನ್ನೂ ಸಹ ಘೋಷಣೆ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ ಇದು 100W ಸೂಪರ್‌ವೂಕ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಇದರ ಬೆಲೆ ವಿವರ ಇಲ್ಲಿದೆ ನೋಡಿ.

ಒನ್‌ಪ್ಲಸ್ 11R ಸೋಲಾರ್ ರೆಡ್ ವೇರಿಯಂಟ್: ಒನ್‌ಪ್ಲಸ್ 11R ಅನ್ನು ಹೊಸ ಸೋಲಾರ್ ರೆಡ್ ಬಣ್ಣದ ವೇರಿಯಂಟ್‌ನಲ್ಲಿ ಪರಿಚಯಿಸಲು ಸಿದ್ಧವಾಗಿದೆ. ಹೊಸ ಒನ್‌ಪ್ಲಸ್ 11R ಸೋಲಾರ್ ರೆಡ್ 8GB/128GB ವೇರಿಯಂಟ್ ಅನ್ನು ಪಡೆಯಲಿದ್ದು, ಕಂಪನಿಯು ಮೈಕ್ರೋಸೈಟ್‌ನಲ್ಲಿ ಸೇಲ್ ದಿನಾಂಕವನ್ನು ಲೇವಡಿ ಮಾಡಲಾಗಿದೆ.
ಒನ್‌ಪ್ಲಸ್ 11R ಸೋಲಾರ್ ರೆಡ್ ಹೊಸ ವೇರಿಯಂಟ್ ಸೇಲ್ ದಿನಾಂಕ, ಫೀಚರ್ಸ್: ಹೊಸ ಸ್ಟೋರೇಜ್ ವೇರಿಯಂಟ್ ಅನ್ನು ಏಪ್ರಿಲ್ 18 ರಂದು ಪರಿಚಯಿಸಲಾಗುವುದು ಮತ್ತು ಅಂದೇ ಸೇಲ್‌ಗೆ ಲಭ್ಯವಿರುತ್ತದೆ. ಈ ಫೋನ್ 8GB LPDDR5 RAM ಮತ್ತು 128GB ಇಂಟರ್ ಸ್ಟೋರೇಜ್ ಆಯ್ಕೆ ಪಡೆದಿದ್ದು, ಸ್ನಾಪ್‌ಡ್ರಾಗನ್ 8+ ಜನ್ 1 ಪ್ರೊಸೆಸರ್‌ನಿಂದ ಕಾರ್ಯರ್ವಹಿಸಲಿದೆ.
ಇನ್ನು 100W ಸೂಪರ್‌ವೂಕ್ ಚಾರ್ಜಿಂಗ್ ಅನ್ನು ಸಹ ಪಡೆಯಲಿದ್ದು, ಒನ್‌ಪ್ಲಸ್ 11R ನ ಮತ್ತೊಂದು ವಿಷಯವೆಂದರೆ ಇದು 50 ಮೆಗಾಪಿಕ್ಸೆಲ್ IMX890 ಪ್ರಾಥಮಿಕ ಸೆನ್ಸರ್‌ನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಪಡೆದುಕೊಂಡಿರಲಿದೆ.

ಒನ್‌ಪ್ಲಸ್ 11R ಸೋಲಾರ್ ರೆಡ್ ಹೊಸ ವೇರಿಯಂಟ್‌ಗೆ ಇರುವ ಕೊಡುಗೆಗಳು: ಮೈಕ್ರೋಸೈಟ್ ಒನ್‌ಪ್ಲಸ್ 11R ಸೋಲಾರ್ ರೆಡ್‌ನ ಹೊಸ ವೇರಿಯಂಟ್‌ನ ಬೆಲೆಯನ್ನು ಘೋಷಿಸಿಲ್ಲ. ಆದರೆ, ಡಿವೈಸ್‌ಗೆ ಇರುವ ಕೊಡುಗೆಗಳನ್ನು ಬಹಿರಂಗಪಡಿಸಿದೆ. ಗ್ರಾಹಕರು ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಒನ್ ಕಾರ್ಡ್ ವಹಿವಾಟಿನ ಮೇಲೆ 1,250 ರೂ.ಗಳ ತ್ವರಿತ ರಿಯಾಯಿತಿಯನ್ನು ಪಡೆಯಬಹುದಾಗಿದೆ. ಗ್ರಾಹಕರು ಪ್ರಮುಖ ಬ್ಯಾಂಕ್‌ಗಳಲ್ಲಿ 6 ತಿಂಗಳವರೆಗೆ ನೋ-ಕಾಸ್ಟ್ ಇಎಮ್‌ಐ ಅನ್ನು ಪಡೆಯಬಹುದು.
ಈಗಾಗಲೇ ಲಭ್ಯ ಇರುವ ಈ ಫೋನ್‌ನ ಸಾಮಾನ್ಯ ವೇರಿಯಂಟ್ 8 GB RAM ಮತ್ತು 512 GB ಸ್ಟೋರೇಜ್ ವೇರಿಯಂಟ್ ಆಯ್ಕೆಗೆ 45,999 ರೂ.ಗಳ ಬೆಲೆ ಇದೆ. ಈ ನಡುವೆ ಒನ್‌ಪ್ಲಸ್ 11R ಅಮೆಜಾನ್‌ನಲ್ಲಿ ಹೆಚ್ಚುವರಿ 3,000 ರೂ.ಗಳ ರಿಯಾಯಿತಿಯೊಂದಿಗೆ ಲಭ್ಯವಿದ್ದು, ಗ್ರಾಹಕರು ಉತ್ತಮ ಮೌಲ್ಯವನ್ನು ಪಡೆಯಲು ವಿನಿಮಯ ಆಫರ್ ಅನ್ನು ಪಡೆಯಬಹುದಾಗಿದ್ದು, ಈ ಮೂಲಕ ಇನ್ನೂ ಕಡಿಮೆ ದರದಲ್ಲಿ ಈ ಫೋನ್ ಖರೀದಿ ಮಾಡಬಹುದಾಗಿದೆ.
ಒನ್‌ಪ್ಲಸ್ ಫೋನ್‌ಗಳಿಗೆ ನಿರ್ಬಂಧ: ಕ್ಲೈಮ್ ಪ್ರಕ್ರಿಯೆ ವಿಳಂಬಗಳು ಮತ್ತು ಬಂಡಲಿಂಗ್ ವಿಭಾಗದಲ್ಲಿ ನಡೆಯುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಚಿಲ್ಲರೆ ಸರಪಳಿ ಪಾಲುದಾರರೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಒನ್‌ಪ್ಲಸ್ ತಿಳಿಸಿದೆ. ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್‌ನ 23 ಚಿಲ್ಲರೆ ಸರಪಳಿಗಳು ಕಡಿಮೆ ಲಾಭಾಂಶಗಳು, ಕ್ಲೈಮ್ ಪ್ರಕ್ರಿಯೆಯಲ್ಲಿನ ವಿಳಂಬಗಳು ಮತ್ತು ಬಂಡಲಿಂಗ್‌ಗೆ ಸಂಬಂಧಿಸಿದ ಬಗೆಹರಿಯದ ಸಮಸ್ಯೆಗಳಿಂದಾಗಿ ಮೇ 1 ರಿಂದ ಒನ್‌ಪ್ಲಸ್ ಉತ್ಪನ್ನಗಳ ಸೇಲ್ ಅನ್ನು ನಿಲ್ಲಿಸುವುದಾಗಿ ತಿಳಿಸಿದ ಒಂದು ವಾರದ ನಂತರ ಈ ಪ್ರತ್ಯುತ್ತರ ಬಂದಿವೆ.

ಕಳೆದ 7 ವರ್ಷಗಳಲ್ಲಿ ನಮ್ಮ ವಿಶ್ವಾಸಾರ್ಹ ರಿಟೇಲರ್ ಪಾಲುದಾರರಿಂದ ಪಡೆದ ಎಲ್ಲಾ ಬೆಂಬಲವನ್ನು ಒನ್‌ಪ್ಲಸ್ ಗೌರವಿಸುತ್ತದೆ. ಪ್ರಸ್ತುತ, ನಾವು ಹೈಲೈಟ್ ಮಾಡಿದ ಕ್ಷೇತ್ರಗಳನ್ನು ಪರಿಹರಿಸಲು ನಮ್ಮ ಪಾಲುದಾರರೊಂದಿಗೆ ಕೆಲಸ ಮಾಡುತ್ತಿದ್ದೇವೆ, ಮುಂದೆ ಸಾಗುತ್ತಿರುವ ಬಲವಾದ ಮತ್ತು ಸಮೃದ್ಧ ಸಂಬಂಧಕ್ಕೆ ನಮ್ಮ ನಿರಂತರ ಬದ್ಧತೆಯನ್ನು ಖಚಿತಪಡಿಸಿಕೊಳ್ಳುತ್ತೇವೆ ಎಂದು ಒನ್‌ಪ್ಲಸ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.


Click it and Unblock the Notifications








