Home
ಸುದ್ದಿಜಾಲ

OnePlus 12: ಹೊಸ ಫೋನ್‌ ಖರೀದಿಸಲು ಮುಂದಾಗಿದ್ದೀರಾ? ಸ್ವಲ್ಪ ಇರಿ! ಬಹಿರಂಗವಾಯ್ತು ಒನ್‌ಪ್ಲಸ್ 12 ಲಾಂಚ್ ಡೇಟ್‌

ಒನ್‌ಪ್ಲಸ್‌ (OnePlus) ಫೋನ್‌ಗಳಿಗೆ ಭಾರತದಲ್ಲಿ ವಿಶೇಷವಾದ ಬೇಡಿಕೆ ಇದ್ದು, ಅದರಲ್ಲೂ ಹೊಸ ಒನ್‌ಪ್ಲಸ್ ಫೋನ್‌ಗೆ ಅಪ್‌ಗ್ರೇಡ್‌ ಆಗಲು ಸಾಕಷ್ಟು ಜನರು ಕಾತುರದಿಂದ ಕಾದು ಕುಳಿತಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ಒನ್‌ಪ್ಲಸ್ 12 (OnePlus 12) ಬಿಡುಗಡೆ ಡೇಟ್‌ ಬಹಿರಂಗವಾಗಿದೆ.

ಹೌದು, ಒನ್‌ಪ್ಲಸ್ 12 ಸ್ಮಾರ್ಟ್‌ಫೋನ್‌ ಇನ್ನೂ ಸಹ ಲಾಂಚ್‌ ಆಗೇ ಇಲ್ಲ. ಆದರೆ, ಇದರ ಸದ್ದು ಮಾತ್ರ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ದೊಡ್ಡದಾಗಿದೆ. ಸಾಕಷ್ಟು ಜನರು ಈ ಫೋನ್‌ ಅನ್ನೇ ಎದುರು ನೋಡುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆ ಹಿನ್ನೆಲೆ ಕೊನೆಗೂ ಒನ್‌ಪ್ಲಸ್ 12 ಸ್ಮಾರ್ಟ್‌ಫೋನ್‌ನ ಅನಾವರಣ ದಿನಾಂಕ ಬಹಿರಂಗ ಮಾಡಲಾಗಿದ್ದು, ಈ ಮೂಲಕ ಒನ್‌ಪ್ಲಸ್‌ ಪ್ರಿಯರಿಗೆ ಸಂತಸ ನೀಡಲಾಗಿದೆ. ಹಾಗಿದ್ರೆ, ಯಾವಾಗ ಈ ಫೋನ್‌ ಲಾಂಚ್‌ ಆಗಲಿದೆ?, ಇದು ಏನೆಲ್ಲಾ ಫೀಚರ್ಸ್‌ ಹೊಂದಿರಲಿದೆ ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

OnePlus 12: ಬಹಿರಂಗವಾಯ್ತು ಒನ್‌ಪ್ಲಸ್ 12 ಲಾಂಚ್ ಡೇಟ್‌ ...

ಒನ್‌ಪ್ಲಸ್ 12: ಒನ್‌ಪ್ಲಸ್‌ 12 5G (OnePlus 12 5G) ಸ್ಮಾರ್ಟ್‌ಫೋನ್ ಅನ್ನು ಮೊದಲು ಚೀನಾದ ಮಾರುಕಟ್ಟೆಯಲ್ಲಿ ಲಾಂಚ್‌ ಮಾಡಲಾಗುತ್ತಿದ್ದು, ಇದಾದ ನಂತರದಲ್ಲಿ ಭಾರತವೂ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಲ್ಲಿ ಲಾಂಚ್‌ ಮಾಡಲಾಗುವುದು ಎಂದು ಮಾಹಿತಿ ನೀಡಲಾಗಿದೆ. ಅಂದರೆ ಈ ಫೋನ್‌ ಅನ್ನು ಡಿಸೆಂಬರ್ 4 ರಂದು ಚೀನಾದಲ್ಲಿ ಲಾಂಚ್ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಈಗ ಮತ್ತೆ ಒಂದು ದಿನ ಮುಂದಕ್ಕೆ ದೂಡಲಾಗಿದೆ.

ಈ ನಡುವೆ ಒನ್‌ಪ್ಲಸ್‌ 12 ಸ್ಮಾರ್ಟ್‌ಫೋನ್‌ ಭಾರತದಲ್ಲಿ ಯಾವ ದಿನಾಂಕದಂದು ಲಾಂಚ್‌ ಆಗಲಿದೆ ಎಂದು ಸುಳಿವು ನೀಡಲಾಗಿದೆ. ಅಂದರೆ, ಒನ್‌ಪ್ಲಸ್ 11 5G ಸ್ಮಾರ್ಟ್‌ಫೋನ್ ಅನ್ನು ಈ ವರ್ಷದ ಫೆಬ್ರವರಿಯಲ್ಲಿ ಲಾಂಚ್‌ ಮಾಡಿದ್ದನ್ನು ಈ ವೇಳೆ ನೆನಪು ಮಾಡಿಕೊಳ್ಳಬಹುದು. ಆದರೆ, ಕಳೆದ ಬಾರಿಯಂತೆ ಒನ್‌ಪ್ಲಸ್ 12 ಸ್ಮಾರ್ಟ್‌ಫೋನ್ ಫೆಬ್ರವರಿ 2024 ರ ವೇಳೆಗೆ ಭಾರತೀಯ ಮಾರುಕಟ್ಟೆಗೆ ಲಾಂಚ್‌ ಮಾಡಲಿದೆ ಎಂದುಕೊಂಡರೆ ನಿಮ್ಮ ಊಹೆ ತಪ್ಪಾಗಲಿದೆ. ಬದಲಾಗಿ ಅದಕ್ಕೂ ಮೊದಲು ಈ ಫೋನ್‌ ಲಾಂಚ್‌ ಆಗಲಿದೆ ಎನ್ನಲಾಗಿದೆ.

OnePlus 12: ಬಹಿರಂಗವಾಯ್ತು ಒನ್‌ಪ್ಲಸ್ 12 ಲಾಂಚ್ ಡೇಟ್‌ ...

ಒನ್‌ಪ್ಲಸ್‌ 12 ಅನ್ನು ಭಾರತ, ಯುಕೆ, ಯುಎಸ್‌ ನಲ್ಲಿ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಪಟ್ಟಿಮಾಡಲಾಗಿದೆ. ಇದು ಒನ್‌ಪ್ಲಸ್‌ 12 ರ ಬಿಡುಗಡೆ ದಿನಾಂಕವನ್ನು ದೃಢೀಕರಿಸುವುದಿಲ್ಲವಾದರೂ ಈ ಫೋನ್‌ ಅನ್ನು ಉಚಿತವಾಗಿ ಗೆಲ್ಲಲು ಅವಕಾಶ ಮಾಡಿಕೊಡಲಾಗಿದೆ. ಅಂದರೆ ವಿಶೇಷ ಅಭಿಯಾನವನ್ನು ನವೆಂಬರ್ 27 ರಿಂದ ಜನವರಿ 23 ರವರೆಗೆ ನಡೆಸಲಾಗುತ್ತಿದೆ. ಪರಿಣಾಮ ಈ ಅಭಿಯಾನ ಜನವರಿ 24 ರಂದು ಕೊನೆಯಾಗಲಿದ್ದು, ಇದೇ ದಿನಾಂಕದಲ್ಲಿ ಯುಕೆ ಹಾಗೂ ಭಾರತದಲ್ಲಿ ಈ ಫೋನ್‌ ಅನ್ನು ಅನಾವರಣ ಮಾಡಬಹುದು ಎಂದು ಲೆಕ್ಕ ಹಾಕಲಾಗಿದೆ.

ಇನ್ನು ಒನ್‌ಪ್ಲಸ್‌ ಫೋನ್‌ ಖರೀದಿ ಮಾಡಲು ನಿಮ್ಮ ಇಮೇಲ್ ಐಡಿಯನ್ನು ಬಳಸಿಕೊಂಡು ಈ ಅಭಿಯಾನಕ್ಕೆ ಚಂದಾದಾರರಾಗಬೇಕಿದೆ. ಪರಿಣಾಮ ಲಕ್ಕಿ ಡ್ರಾ ಮೂಲಕ ಒನ್‌ಪ್ಲಸ್ 12 ಅನ್ನು ಗೆಲ್ಲುವ ಅವಕಾಶ ಸಿಗಲಿದೆ. ಈ ಸ್ಪರ್ಧೆಯ ನಿಯಮಗಳು ಮತ್ತು ಷರತ್ತುಗಳ ಅಡಿಯಲ್ಲಿ ನಡೆಯಲಿದೆ. ಈ ನಡುವೆ ಈ ಫೋನ್‌ಗಳ ಕೆಲವು ಫೀಚರ್ಸ್‌ ಸಹ ಲೀಕ್‌ ಆಗಿವೆ.

ಒನ್‌ಪ್ಲಸ್‌ 12 ಫೀಚರ್ಸ್‌: ಲೀಕ್‌ ಆಗಿರುವ ಮಾಹಿತಿ ಪ್ರಕಾರ ಈ ಸ್ಮಾರ್ಟ್‌ಫೋನ್ ಒನ್‌ಪ್ಲಸ್ 11 ಸ್ಮಾರ್ಟ್‌ಫೋನ್‌ನ ವಿನ್ಯಾಸವನ್ನೇ ಅನುಸರಿಸುತ್ತದೆ ಎನ್ನಲಾಗಿದೆ. ಅದರಂತೆ ಹಿಂಭಾಗದ ಫಲಕದ ಮೇಲಿನ ಎಡ ಮೂಲೆಯಲ್ಲಿ ಇರಿಸಲಾಗಿರುವ ದೊಡ್ಡ ವೃತ್ತಾಕಾರದ ಕ್ಯಾಮರಾ ಘಟಕವು ಮಧ್ಯದಲ್ಲಿ ಹ್ಯಾಸೆಲ್‌ಬ್ಲೇಡ್ ಲೋಗೋದೊಂದಿಗೆ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಜೊತೆಗೆ ಈ ಫೋನ್ ಕರ್ವ್ಡ ಅಂಚುಗಳು, ಸ್ಲಿಮ್ ಬೆಜೆಲ್‌ಗಳು ಮತ್ತು ಸೆಲ್ಫಿ ಕ್ಯಾಮೆರಾವನ್ನು ಇರಿಸಲು ಡಿಸ್‌ಪ್ಲೇಯ ಮೇಲಿನ ಮಧ್ಯಭಾಗದಲ್ಲಿ ಪಂಚ್ ಕಟೌಟ್ ಅನ್ನು ಹೊಂದಿರಲಿದೆ ಎನ್ನಲಾಗಿದೆ.

OnePlus 12: ಬಹಿರಂಗವಾಯ್ತು ಒನ್‌ಪ್ಲಸ್ 12 ಲಾಂಚ್ ಡೇಟ್‌ ...

ಹಾಗೆಯೇ ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8 ಜನ್ 3 ಚಿಪ್‌ಸೆಟ್ ಮೂಲಕ ಕಾರ್ಯನಿರ್ವಹಿಸಲಿದ್ದು, 64 ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ, ಸೋನಿ LYTIA LYT808 ಮುಖ್ಯ ಕ್ಯಾಮೆರಾದೊಂದಿಗೆ ಆಂಡ್ರಾಯ್ಡ್ 14 ಆಧಾರಿತ ಕಲರ್‌ಓಸ್‌ 14 ನಲ್ಲಿ ರನ್‌ ಆಗಲಿದೆ ಎನ್ನಲಾಗಿದೆ. ಇದರೊಂದಿಗೆ 2600 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಹಾಗೂ ಪ್ರೊXDR ಮತ್ತು 2K ರೆಸಲ್ಯೂಶನ್ ಆಯ್ಕೆಯ ಡಿಸ್‌ಪ್ಲೇ ಹೊಂದಿದೆ.

ಇದರ ಬೆಲೆ ವಿಚಾರಕ್ಕೆ ಬರುವುದಾದರೆ ಈ ಸ್ಮಾರ್ಟ್‌ಫೋನ್‌ 80,000 ರೂಪಾಯಿಗಳ ಬೆಲೆಯಲ್ಲಿ ಕಾಣಿಸಿಕೊಳ್ಳಲಿದೆ ಎಂದು ಹೇಳಲಾಗಿತ್ತು. ಆದರೆ, ಈಗ ಇದು ಒನ್‌ಪ್ಲಸ್‌ 11 ರ ಬೆಲೆ ಶ್ರೇಣಿಗೆ ಹೊಂದಿಕೆಯಾಗಬಹುದು ಎಂದು ತಿಳಿದುಬಂದಿದೆ ಒನ್‌ಪ್ಲಸ್‌ 11 ಸ್ಮಾರ್ಟ್‌ಫೋನ್‌ ಅನ್ನು 56,999ರೂ.ಗಳ ಆರಂಭಿಕ ಬೆಲೆಯಲ್ಲಿ ಲಾಂಚ್‌ ಮಾಡಲಾಗಿತ್ತು. ಅದರಂತೆ ಈ ಫೋನ್‌ 65,000 ಅಥವಾ ಅದಕ್ಕಿಂತ ಕಡಿಮೆ ಬೆಲೆಯಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ.

Best Mobiles in India

English summary
OnePlus 12 5G smartphone is being launched in the Chinese market first and after this it will be launched in global markets including India. It is said that it will be launched on January 24.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+