ಭಾರತದಲ್ಲಿ ಲಾಂಚ್ ಆಯ್ತು 'ಒನ್‌ಪ್ಲಸ್ 12' ಫೋನ್!..ಪವರ್‌ಫುಲ್ ಪ್ರೊಸೆಸರ್!
ಜಾಗತಿಕ ಮೊಬೈಲ್ ಮಾರುಕಟ್ಟೆಯಲ್ಲಿ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಒನ್‌ಪ್ಲಸ್ ಸಂಸ್ಥೆಯು ತನ್ನ ಬಹುನಿರೀಕ್ಷಿತ ಒನ್‌ಪ್ಲಸ್ 12 ಸರಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ನೂತನ ಸ್ಮಾರ್ಟ್‌ಫೋನ್ ಸರಣಿಯು ಒನ್‌ಪ್ಲಸ್ 12 ಹಾಗೂ ಒನ್‌ಪ್ಲಸ್ 12R ಮಾಡೆಲ್‌ಗಳನ್ನು ಒಳಗೊಂಡಿದೆ. ಅಲ್ಲದೇ ಫೋನ್‌ಗಳೊಂದಿಗೆ ಒನ್‌ಪ್ಲಸ್ ಬಡ್ಸ್ 3 ಡಿವೈಸ್ ಬಿಡುಗಡೆ ಮಾಡಿದೆ.
ಹೌದು, ಒನ್‌ಪ್ಲಸ್ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಒನ್‌ಪ್ಲಸ್ 12 ಸರಣಿಯನ್ನು ಲಾಂಚ್ ಮಾಡಿದೆ. ಈ ಸರಣಿಯಲ್ಲಿ ಒನ್‌ಪ್ಲಸ್ 12 ಹ್ಯಾಸೆಲ್ಬ್ಲಾಡ್ (Hasselblad) ಕ್ಯಾಮೆರಾ ಸೌಲಭ್ಯ ಪಡೆದಿದ್ದು, ಇದರ ಜೊತೆಗೆ ನೂತನ ಆಕ್ವಾ ಟಚ್ ತಂತ್ರಜ್ಞಾನ ಪಡೆದಿದೆ. ಅಂದರೆ ಸ್ಕ್ರೀನ್ ಮೇಲೆ ನೀರು/ ತೇವಾಂಶ ಇದ್ದರೂ ಸಹ ತಡೆರಹಿತ ಸ್ಪರ್ಶ ಅನುಭವವನ್ನು ನೀಡುತ್ತದೆ ಎಂದು ಸಂಸ್ಥೆ ತಿಳಿಸಿದೆ.

ನೂತನ ಒನ್‌ಪ್ಲಸ್ 12 ಫೋನ್ 12GB RAM ಹಾಗೂ 16GB RAM ಆಯ್ಕೆಗಳನ್ನು ಪಡೆದಿದ್ದು, ಇದು 5400mAh ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಪಡೆದಿದೆ. ಹಾಗೆಯೇ ಇದು ಸ್ನ್ಯಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದ್ದು, ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಕೂಡಾ ಪಡೆದಿದೆ. ಹಾಗಾದರೇ ಒನ್‌ಪ್ಲಸ್ 12 ಫೋನಿನ ಇತರೆ ಫೀಚರ್ಸ್ ಹೇಗಿವೆ ಹಾಗೂ ಬೆಲೆ ಎಷ್ಟು ಎಂಬ ಮಾಹಿತಿಯನ್ನು ಮುಂದೆ ತಿಳಿಯೋಣ ಬನ್ನಿರಿ.
ಡಿಸ್‌ಪ್ಲೇ ರಚನೆ ಹೀಗಿದೆ
ಒನ್‌ಪ್ಲಸ್ 12 ಮೊಬೈಲ್ 6.82 ಇಂಚಿನ ProXDR ಮಾದರಿಯ ಡಿಸ್‌ಪ್ಲೇ ಅನ್ನು ಹೊಂದಿದೆ. ಈ ಡಿಸ್‌ಪ್ಲೇ 1440 x 3168 ಪಿಕ್ಸೆಲ್ ಸ್ಕ್ರೀನ್ ಸೂಪರ್ ಕ್ರಿಸ್ಪ್ ರೆಸಲ್ಯೂಶನ್ ಅನ್ನು ಒದಗಿಸುತ್ತದೆ. ಇದು 120Hz ರಿಫ್ರೆಶ್ ರೇಟ್ ಬೆಂಬಲ ಪಡೆದಿದ್ದು, HDR10+ ಅನ್ನು ಸಹ ಸಪೋರ್ಟ್ ಮಾಡುತ್ತದೆ. ಇದರ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್ ಹೊಂದಿದೆ.

ಪ್ರೊಸೆಸರ್ ಪವರ್ ಮಾಹಿತಿ
ಈ ನೂತನ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನ್ಯಾಪ್‌ಡ್ರಾಗನ್ 8 ಜೆನ್ 3 SoC ಪ್ರೊಸೆಸರ್ ಪವರ್ ಪವರ್ ಅನ್ನು ಪಡೆದಿದ್ದು, CPU, 3.2GHz ನಲ್ಲಿ ಪ್ರೈಮ್ ಕೋರ್ ಅನ್ನು ಒಳಗೊಂಡಿದೆ. ಇನ್ನು ಮೊಬೈಲ್ ಆಂಡ್ರಾಯ್ಡ್ 14 ಓಎಸ್ ನಲ್ಲಿ ಕೆಲಸ ನಿರ್ವಹಿಸಲಿದೆ. ಇದರ ಜೊತೆಗೆ 12GB RAM + 256GB ಹಾಗೂ 16GB RAM + 512GB ಆಂತರೀಕ ಸ್ಟೋರೇಜ್ ವೇರಿಯೆಂಟ್ ಆಯ್ಕೆಗಳನ್ನು ಪಡೆದಿದೆ.
ಕ್ಯಾಮೆರಾ ಸೆನ್ಸಾರ್ ಮಾಹಿತಿ
ಒನ್‌ಪ್ಲಸ್ 12 ಮೊಬೈಲ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸಲ್‌ನ ಸೋನಿ LYT 808 ಸೆನ್ಸಾರ್ ಪಡೆದಿದೆ. ದ್ವಿತೀಯ 64 ಮೆಗಾ ಪಿಕ್ಸಲ್ ಸೌಲಭ್ಯ ಪಡೆದಿದ್ದು, ತೃತೀಯ ಕ್ಯಾಮೆರಾವು 48 ಮೆಗಾಪಿಕ್ಸಲ್ ಸೆನ್ಸಾರ್ ಸೌಲಭ್ಯ ಪಡೆದಿದೆ. ಇದಲ್ಲದೆ ಮುಂಭಾಗದಲ್ಲಿ 32 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.
ಬ್ಯಾಟರಿ ಬ್ಯಾಕ್‌ಅಪ್ ಮಾಹಿತಿ
ಒನ್‌ಪ್ಲಸ್ 12 ಮೊಬೈಲ್ 5400mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದ್ದು, 100W ಸೂಪರ್‌ವೂಕ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಇದು ಕೇವಲ 25 ನಿಮಿಷಗಳಲ್ಲಿ 0 ರಿಂದ 100% ವರೆಗೆ ಚಾರ್ಜ್ ಒದಗಿಸಲಿದೆ. ಇದಲ್ಲದೆ ಸ್ಮಾರ್ಟ್‌ಫೋನ್ ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಇತರೆ ಕನೆಕ್ಟಿವಿಟಿ ಆಯ್ಕೆಗಳು
ಒನ್‌ಪ್ಲಸ್ 12 ಮೊಬೈಲ್ ಕನೆಕ್ಟಿವಿಟಿ ಸೌಲಭ್ಯ 5G ಬೆಂಬಲ, Wi-Fi 6E, ಬ್ಲೂಟೂತ್ 5.3, NFC, USB-C 3.2 ಜೆನ್ 2, GPS, GLONASS ಅನ್ನು ಸಪೋರ್ಟ್ ಮಾಡಲಿದೆ. ಇದಲ್ಲದೆ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್, ಅಕ್ಸಿಲೆರೊಮೀಟರ್, ಗೈರೊಸ್ಕೋಪ್, ಪ್ರಾಕ್ಸಿಮಿಟಿ ಸೆನ್ಸಾರ್, ಆಂಬಿಯೆಂಟ್ ಲೈಟ್ ಸೆನ್ಸರ್ ಮತ್ತು ಇ-ಕಾಪಾಸ್ ಒಳಗೊಂಡಿದೆ.

ಬೆಲೆ ಎಷ್ಟು
ಒನ್‌ಪ್ಲಸ್ 12 - 12GB RAM+256GB - 64,999ರೂ
ಒನ್‌ಪ್ಲಸ್ 12 - 16GB RAM+512GB - 69,999ರೂ
ಜನೆವರಿ 23 ರಿಂದ ಪ್ರೀ-ಆರ್ಡರ್‌ಗೆ ಲಭ್ಯ. ಇನ್ನು ಈ ಫೋನ್ ಇದೇ ಜನೆವರಿ 30 ರಿಂದ ಓಪೆನ್ ಸೇಲ್ ಪ್ರಾರಂಭಿಸಲಿದೆ.


Click it and Unblock the Notifications








