OnePlus: ಒನ್‌ಪ್ಲಸ್ 12R ನ ವಿನ್ಯಾಸ ಬಹಿರಂಗ! ನೀವು ಮನಸೋಲೋದು ಪಕ್ಕಾ
ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳು (OnePlus smartphone) ವಿವಿಧ ಸುಧಾರಿತ ಫೀಚರ್ಸ್ ಆಯ್ಕೆಯೊಂದಿಗೆ ಕಾಣಿಸಿಕೊಳ್ಳುತ್ತಿದ್ದು, ಈ ಮೂಲಕ ದೊಡ್ಡ ಗ್ರಾಹಕ ವಲಯವನ್ನೇ ಪಡೆದುಕೊಂಡಿವೆ. ಅದರಲ್ಲೂ ಯಾವುದಾದರೂ ಹೊಸ ಒನ್‌ಪ್ಲಸ್ ಫೋನ್ ಲಾಂಚ್ ಆಗುತ್ತದೆ ಎಂದರೆ ಆ ಫೋನ್‌ಗೆ ಅಪ್‌ಗ್ರೇಡ್ ಆಗಲು ಜಾಗತಿಕವಾಗಿ ಸಾಕಷ್ಟು ಜನರು ಕಾದು ಕುಳಿತಿರುತ್ತಾರೆ. ಅವರ ಆಸೆಯನ್ನು ಇನ್ನಷ್ಟು ಹೆಚ್ಚಿಸಲು ಈಗ ಒನ್‌ಪ್ಲಸ್ 12R (OnePlus 12R) ಅನಾವರಣ ಆಗಲು ಸಿದ್ಧವಾಗುತ್ತಿದೆ.
ಹೌದು, ಒನ್‌ಪ್ಲಸ್ 12R ಸ್ಮಾರ್ಟ್‌ಫೋನ್ ಲಾಂಚ್ ಆಗುವ ಮುನ್ನವೇ ಇದರ ಡಿಸೈನ್ ಎಲ್ಲಾ ಕಡೆ ಬಹಳ ಸದ್ದು ಮಾಡುತ್ತಿದೆ. ಈ ಸ್ಮಾರ್ಟ್‌ಫೋನ್ ಲೋಹದ ಫ್ರೇಮ್ ಅನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲದೆ ಈ ಫೋನ್ ಯಾವೆಲ್ಲಾ ಬಣ್ಣದ ಆಯ್ಕೆಯಲ್ಲಿ ಲಭ್ಯವಿರಲಿದೆ ಎಂಬ ಬಗ್ಗೆಯೂ ಮಾಹಿತಿ ತಿಳಿದುಬಂದಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್ ಬಗ್ಗೆ ಲೀಕ್ ಆದ ಮಾಹಿತಿ ಇಲ್ಲಿದೆ ನೋಡಿ.

ಒನ್‌ಪ್ಲಸ್ 12R : ಒನ್‌ಪ್ಲಸ್ ತನ್ನ ಮುಂಬರುವ ಒನ್‌ಪ್ಲಸ್ 12R ನ ವಿನ್ಯಾಸವನ್ನು ಅಧಿಕೃತವಾಗಿ ಬಹಿರಂಗಪಡಿಸಿದೆ. ಈ ಸ್ಮಾರ್ಟ್‌ಫೋನ್ ಒನ್‌ಪ್ಲಸ್ 12 ನಂತೆ (OnePlus 12) ಕಾಣಿಸಿಕೊಂಡಿದ್ದು, ಈ ಮೂಲಕ ಒನ್‌ಪ್ಲಸ್ 12R ಒನ್‌ಪ್ಲಸ್ 12 ಸರಣಿಯ ಎರಡನೇ ಸದಸ್ಯ ಎಂದು ಕಂಪನಿ ಹೇಳಿದೆ. ಜೊತೆಗೆ ಈ ಫೋನ್‌ನ ಅತ್ಯುತ್ತಮ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಬಗ್ಗೆ ಒತ್ತಿ ಹೇಳಿದೆ.
ಕಂಪನಿಯು 2021 ರಲ್ಲಿ ಒನ್‌ಪ್ಲಸ್ 9R ಸರಣಿಯೊಂದಿಗೆ R ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿತು. ಅಲ್ಲಿಂದ ಇಲ್ಲಿವರೆಗೆ ವಿವಿಧ ಫೋನ್‌ಗಳನ್ನು ಈಸರಣಿಯಲ್ಲಿ ಲಾಂಚ್ ಮಾಡಿಕೊಂಡು ಬರುತ್ತಿದೆ. ಆದರೆ, ಈ ಸರಣಿ ಫೋನ್‌ಗಳು ಭಾರತ ಮತ್ತು ಚೀನಾದಂತಹ ಮಾರುಕಟ್ಟೆಗಳಿಗೆ ಸೀಮಿತವಾಗಿದ್ದವು. ಆದರೆ ಒನ್‌ಪ್ಲಸ್ 12R ಜಾಗತಿಕವಾಗಿ ಲಭ್ಯವಾಗಲಿದೆ. ಈ ಫೋನ್ ಲೋಹದ ಫ್ರೇಮ್ ಅನ್ನು ಹೊಂದಿರಲಿದೆ ಎಂದು ತಿಳಿದುಬಂದಿದ್ದು, ಒನ್‌ಪ್ಲಸ್ 11R ಗಿಂತ ಭಿನ್ನವಾಗಿದೆ. ಅಂದರೆ ಈ ಫೋನ್ ಪ್ಲಾಸ್ಟಿಕ್ ಫ್ರೇಮ್‌ನೊಂದಿಗೆ ಕಾಣಿಸಿಕೊಂಡಿತ್ತು.

ಇದರೊಂದಿಗೆ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ವೃತ್ತಾಕಾರದ ಕ್ಯಾಮೆರಾ ಲೈಟ್ ಆಯ್ಕೆ ಇದೆ. ಎಕ್ಸ್ ನಲ್ಲಿನಲ್ಲಿನ ಮ್ಯಾಕ್ಸ್ ಜಂಬೋರ್ ಅವರ ಪೋಸ್ಟ್ ಪ್ರಕಾರ ಹೇಳುವುದಾದರೆ ಈ ಸ್ಮಾರ್ಟ್‌ಫೋನ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆಯೊಂದಿಗೆ 6.78 ಇಂಚಿನ LTPO ಡಿಸ್‌ಪ್ಲೇ ಹೊಂದಿರಲಿದೆ ಎಂದು ತಿಳಿದುಬಂದಿದೆ. ಜೊತೆಗೆ ಈ ಫೋನ್ 5,500 mAh ಸಾಮರ್ಥ್ಯದ ಬ್ಯಾಟರಿ 100W ವೇಗದ ಚಾರ್ಜಿಂಗ್ ಬೆಂಬಲ ಹಾಗೂ 50 ಮೆಗಾಪಿಕ್ಸೆಲ್ ಪ್ರಾಥಮಿಕ ಶೂಟರ್‌ನೊಂದಿಗೆ ಟ್ರಿಪಲ್ ಕ್ಯಾಮೆರಾ ರಚನೆ ಪಡೆದಿರಲಿದೆ.
ಇದರೊಂದಿಗೆ 16 GB RAM ಮತ್ತು 256 GB ಇಂಟರ್ ಸ್ಟೋರೇಜ್ ಆಯ್ಕೆ ಪಡೆದಿರಲಿದೆ ಎಂದು ತಿಳಿಸಲಾಗಿದ್ದು, ಈ ನಡುವೆ ಕಂಪನಿಯು ಒನ್‌ಪ್ಲಸ್ R ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಕಾರ್ಯಕ್ಷಮತೆ-ಕೇಂದ್ರಿತ ಫ್ಲ್ಯಾಗ್‌ಶಿಪ್‌ಗಳು ಎಂದು ವ್ಯಾಖ್ಯಾನಿಸಿದೆ. ಇವು ಅತ್ಯುತ್ತಮ ಮೊಬೈಲ್ ಗೇಮಿಂಗ್ ಅನುಭವ ನೀಡುತ್ತದೆ ಎಂದೂ ಸಹ ಈ ವೇಳೆ ತಿಳಿಸಲಾಗಿದೆ.
ಹಾಗೆಯೇ 2024 ರ Q1 ರಲ್ಲಿ ಇದು ಮೊದಲ ಬಾರಿಗೆ ಉತ್ತರ ಅಮೇರಿಕಾ ಮತ್ತು ಯುರೋಪ್‌ನಂತಹ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ಕಂಪೆನಿ ಮಾಹಿತಿ ನೀಡಿದ್ದು, ಈ ರೀತಿಯ ಲಾಂಚ್ ಆಗುತ್ತಿರುವ ಫೋನ್‌ಗಳಲ್ಲಿ ಒನ್‌ಪ್ಲಸ್ 12R ಮೊದಲನೆಯದು ಉಲ್ಲೇಖಿಸಿದೆ. ಇನ್ನು ಚಿತ್ರದಲ್ಲಿ ಕಾಣುವಂತೆ ಫೋನ್ ಅನ್ನು ಕೂಲ್ ಬ್ಲೂ ಮತ್ತು ಐರನ್ ಗ್ರೇ ಬಣ್ಣಗಳಲ್ಲಿ ತೋರಿಸಲಾಗಿದೆ.
ಒನ್‌ಪ್ಲಸ್ 12R, ಒನ್‌ಪ್ಲಸ್ 12 ಜಾಗತಿಕವಾಗಿ ಜನವರಿ 23 ರಂದು ಒನ್‌ಪ್ಲಸ್ ಸ್ಮೂತ್ ಬಿಯಾಂಡ್ ಬಿಲೀಫ್ ಲಾಂಚ್ ಈವೆಂಟ್‌ನಲ್ಲಿ ಲಾಂಚ್ ಆಗುತ್ತಿವೆ. ಸೋರಿಕೆಗಳ ಪ್ರಕಾರ, ಒನ್‌ಪ್ಲಸ್ 12R ಸ್ನಾಪ್‌ಡ್ರಾಗನ್ 8 ಜನ್ 2 ಪ್ರೊಸೆಸರ್‌ನಿಂದ್ ಕಾರ್ಯನಿರ್ವಹಿಸಲಿದೆ ಎನ್ನಲಾಗಿದ್ದು, ಒನ್‌ಪ್ಲಸ್ 11 ನಲ್ಲಿ ಕಾಣಿಸಿಕೊಂಡಿರುವ ಅದೇ ಚಿಪ್ ಇದಾಗಿದೆ.

ಇನ್ನು ಈ ಒನ್‌ಪ್ಲಸ್ 12R ಅನ್ನು ಒನ್‌ಪ್ಲಸ್ 11R ಗೆ ನಿಗದಿ ಮಾಡಲಾದ ಬೆಲೆಯಲ್ಲಿಯೇ ಲಾಂಚ್ ಮಾಡಬಹುದು ಎನ್ನಲಾಗಿದೆ. ಅಂದರೆ 8 GB RAM ಮತ್ತು 128 GB ಇಂಟರ್ ಸ್ಟೋರೇಜ್ ಆಯ್ಕೆ ಫೋನ್ ಅನ್ನು 40,000 ರೂ.ಗಳಲ್ಲಿ ಲಾಂಚ್ ಮಾಡಬಹುದು ಎನ್ನಲಾಗಿದೆ. ಏನೇ ಇದ್ದರೂ ಈ ಫೋನ್‌ಗಳು ಮಾತ್ರ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸುಂಟರಗಾಳಿಯನ್ನೇ ಎಬ್ಬಿಸಿವೆ. ಈ ಫೋನ್ ಅನ್ನು ನೀವು ಕೊಂಡುಕೊಳ್ಳಲು ಇಚ್ಚಿಸಿದ್ದು, ನಿಮಗೆ ಇನ್ನಷ್ಟು ಮಾಹಿತಿ ಬೇಕು ಎಂದರೆ ಕಮೆಂಟ್ ಮಾಡಿ.


Click it and Unblock the Notifications








