OnePlus: ಫೆಬ್ರವರಿ 6 ರಿಂದ ಒನ್‌ಪ್ಲಸ್ 12R ಮೊದಲ ಸೇಲ್: ಭಾರತದಲ್ಲಿ ಇದರ ಬೆಲೆ, ಆಫರ್ ವಿವರ ತಿಳಿಯಿರಿ
ಒನ್‌ಪ್ಲಸ್ (OnePlus) ಯಾವುದೇ ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಿದರೂ ಸಹ ಅದು ಸ್ಮಾರ್ಟ್‌ಫೋನ್ ವಲಯದಲ್ಲಿ ದೊಡ್ಡ ಬಿರುಗಾಳಿಯನ್ನೇ ಉಂಟು ಮಾಡುತ್ತದೆ. ಈ ನಡುವೆ ಕಳೆದ ತಿಂಗಳು ಅನಾವರಣ ಆದ ಸ್ಮಾರ್ಟ್‌ಫೋನ್ ಅನ್ನು ಖರೀದಿ ಮಾಡಲು ಗ್ರಾಹಕರು ತುದಿಗಾಲಲ್ಲಿ ತಿಂದಿದ್ದು, ಈ ಫೋನ್ ಅನ್ನು ನಾಳೆಯಿಂದ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ.
ಹೌದು, ಇತ್ತೀಚೆಗಷ್ಟೇ ಅನಾವರಣ ಆಗಿರುವ ಒನ್‌ಪ್ಲಸ್ 12R ಸ್ಮಾರ್ಟ್‌ಫೋನ್ (OnePlus 12R smartphone) ಅನ್ನು ನಾಳೆಯಿಂದ ಖರೀದಿ ಮಾಡಬಹುದಾಗಿದೆ. ಈ ಸ್ಮಾರ್ಟ್‌ಫೋನ್ ಒಪ್ಪೋ ರೆನೋ 11 ಪ್ರೊ, ಪಿಕ್ಸೆಲ್ 7a (Oppo Reno 11 Pro, Pixel 7a) ಮತ್ತು ಹೆಚ್ಚಿನ ಡಿವೈಸ್‌ಗಳೊಂದಿಗೆ ನೇರವಾಗಿ ಸ್ಪರ್ಧೆ ಮಾಡಲಿದೆ. ಹಾಗಿದ್ರೆ, ನಾಳೆಯಿಂದ ಮಾರಾಟ ಆಗಲಿರುವ ಈ ಫೋನ್‌ನ ಬೆಲೆ ಎಷ್ಟು?, ಏನೆಲ್ಲಾ ಆಫರ್ ಇದೆ?, ಈ ಫೋನ್‌ನ ಫೀಚರ್ಸ್ ಏನು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಒನ್‌ಪ್ಲಸ್ 12R ಸ್ಮಾರ್ಟ್‌ಫೋನ್ ಸೇಲ್: ಒನ್‌ಪ್ಲಸ್ 12R ಸ್ಮಾರ್ಟ್‌ಫೋನ್‌ನ 8GB RAM ಮತ್ತು 128GB ವೇರಿಯಂಟ್‌ಗೆ 39,999 ರೂ.ಗಳ ಬೆಲೆ ನಿಗದಿ ಮಾಡಲಾಗಿದ್ದು, 16GB RAM ಮತ್ತು 256GB ಇಂಟರ್ ಸ್ಟೋರೇಜ್ ಆಯ್ಕೆಯ ಫೋನ್ 45,999ರೂ. ಗಳ ಬೆಲೆ ಹೊಂದಿದೆ. ಈ ಫೋನ್ ಅನ್ನು ಫೆಬ್ರವರಿ 6 ರಂದು ಮಧ್ಯಾಹ್ನ 12 ಗಂಟೆಯಿಂದ ಖರೀದಿ ಮಾಡಬಹುದು.
ಇನ್ನು ಲಾಂಚ್ ಆಫರ್ ಅನ್ನು ನೀಡಲಾಗುತ್ತಿದ್ದು, ಐಸಿಐಸಿಐ ಕ್ರೆಡಿಟ್ ಕಾರ್ಡ್ ಮತ್ತು ಒನ್‌ಕಾರ್ಡ್ ಹೊಂದಿರುವ ಗ್ರಾಹಕರು 1,000 ಬ್ಯಾಂಕ್ ರಿಯಾಯಿತಿಯೊಂದಿಗೆ ಈ ಫೋನ್ ಅನ್ನು ಖರೀದಿ ಮಾಡಬಹುದಾಗಿದೆ. ಹೆಚ್ಚುವರಿಯಾಗಿ ಖರೀದಿದಾರರು ಕಂಪನಿಯು ಒದಗಿಸಿದ ವಿವರಗಳ ಪ್ರಕಾರ ಆರು ತಿಂಗಳ ಗೂಗಲ್ ಒನ್ ಚಂದಾದಾರಿಕೆ ಪಡೆಯಬಹುದಾಗಿದೆ.

ಇದರೊಂದಿಗೆ ಮೂರು ತಿಂಗಳ ಯೂಟ್ಯೂಬ್ ಪ್ರೀಮಿಯಂ ಚಂದಾದಾರಿಕೆಯನ್ನು ಸಹ ಪಡೆಯುತ್ತಾರೆ. ಅಲ್ಲದೆ ಅಧಿಕೃತ ವೆಬ್‌ಸೈಟ್‌ನಲ್ಲಿ ಆರಂಭಿಕ 24 ಗಂಟೆಗಳ ಒಳಗೆ ಮಾಡಿದ ಆರ್ಡರ್‌ಗಳಿಗೆ 4,999 ಮೌಲ್ಯದ ಬಡ್ಸ್ Z2 ಅನ್ನು ಈ ಹೊಸ ಫೋನ್‌ನೊಂದಿಗೆ ಪಡೆಯಬಹುದಾಗಿದೆ. ಹಾಗಿದ್ರೆ, ಈ ವಿಶೇಷ ಫೋನ್‌ನ ಪ್ರಮುಖ ಫೀಚರ್ಸ್ ಏನು ಅನ್ನೋದನ್ನು ಸಹ ನೋಡೋಣ ಬನ್ನಿ.
ಒನ್‌ಪ್ಲಸ್ 12R ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ಫೋನ್ 6.78 ಇಂಚಿನ ಅಮೋಲೆಡ್ LTPO ಡಿಸ್‌ಪ್ಲೇ ಹೊಂದಿದ್ದು, 1264 x 2780 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಇದರೊಂದಿಗೆ 4,500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಹಾಗೂ 360Hz ಟಚ್ ಸ್ಯಾಂಪಲಿಂಗ್ ರೇಟ್, 120Hz ರಿಫ್ರೆಶ್ ರೇಟ್ ಆಯ್ಕೆ ಪಡೆದಿದೆ. ಅಲ್ಲದೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆಯನ್ನು ಈ ಡಿಸ್‌ಪ್ಲೇ ಪಡೆದಿದೆ.
ಒನ್‌ಪ್ಲಸ್ 12R ಸ್ಮಾರ್ಟ್‌ಫೋನ್ ಪ್ರೊಸೆಸರ್ ವಿವರ: ಈ ಫೋನ್ ಆಕ್ಟಾ-ಕೋರ್ 4nm ಸ್ನಾಪ್‌ಡ್ರಾಗನ್ 8 ಜನ್ 2 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದು 12GB ಹಾಗೂ 16GB LPDDR5x RAM ಮತ್ತು UFS 4.0 ತಂತ್ರಜ್ಞಾನದೊಂದಿಗೆ 1TB ವರೆಗಿನ ಸ್ಟೋರೇಜ್ ಆಯ್ಕೆಯನ್ನು ನೀಡುತ್ತದೆ. ಇದರೊಂದಿಗೆ ಅಡ್ರಿನೋ 740 ಗ್ರಾಪಿಕ್ಸ್ ಕಾರ್ಡ್ ಬಲ ಪಡೆದಿದ್ದು, ಉತ್ತಮ ಎನಿಸಿದೆ.

ಒನ್‌ಪ್ಲಸ್ 12R ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆ ಹಾಗೂ ಇತರೆ: ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಪಡೆದಿದ್ದು, ಇದರಲ್ಲಿ 50 ಮೆಗಾಪಿಕ್ಸೆಲ್ ಸೋನಿ IMX890 ಪ್ರಾಥಮಿಕ ಸೆನ್ಸರ್, 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಸೆನ್ಸಾರ್ ಹಾಗೂ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್ ಆಯ್ಕೆ ಪಡೆದಿದೆ. ಇದರೊಂದಿಗೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ. ಉಳಿದಂತೆ ಈ ಫೋನ್ 100W ಸೂಪರ್‌ವೂಕ್ ಪಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,500mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದೆ.


Click it and Unblock the Notifications








