OnePlus: ಒನ್‌ಪ್ಲಸ್ 12R ಗೆನ್ಶಿನ್ ಇಂಪ್ಯಾಕ್ಟ್ ಆವೃತ್ತಿ ಲಾಂಚ್‌ಗೆ ದಿನಾಂಕ ಫಿಕ್ಸ್! ಫೀಚರ್ಸ್ ನಿರೀಕ್ಷೆ ಏನು?
ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳು (OnePlus smartphone) ಭಾರತದಲ್ಲಿ ದೊಡ್ಡ ಪಾಲನ್ನು ಪಡೆದುಕೊಂಡಿವೆ. ಮಿಡ್ ರೇಂಜ್ ವಿಭಾಗದಲ್ಲಿ ಈ ಫೋನ್‌ಗಳು ತಮ್ಮದೇ ಆದ ಪ್ರಭಾವ ತೋರಿದ್ದು, ಈ ನಡುವೆ ಭಾರತದಲ್ಲಿ ಒನ್‌ಪ್ಲಸ್ 12R ಜೆನ್ಶಿನ್ ಇಂಪ್ಯಾಕ್ಟ್ ಆವೃತ್ತಿ (OnePlus 12R Genshin Impact Edition) ಲಾಂಚ್‌ಗೆ ದಿನಾಂಕ ನಿಗದಿ ಮಾಡಲಾಗಿದೆ.
ಹೌದು, ಭಾರತದಲ್ಲಿ ಒನ್‌ಪ್ಲಸ್ 12R ಜೆನ್ಶಿನ್ ಇಂಪ್ಯಾಕ್ಟ್ ಆವೃತ್ತಿ ಲಾಂಚ್ ಅನಾವರಣಕ್ಕೆ ದಿನಾಂಕ ನಿಗದಿ ಮಾಡಲಾಗಿದೆ. ಕಂಪನಿಯು ಈಗಾಗಲೇ ಒನ್‌ಪ್ಲಸ್ 12R (OnePlus 12R) ವಿಶೇಷ ಆವೃತ್ತಿಯ ಟೀಸರ್ ಪೇಜ್ ಅನ್ನು ಲಕ್ಕಿ ಡ್ರಾ ನೊಂದಿಗೆ ಲೈವ್ ಮಾಡಿದೆ. ಹಾಗಿದ್ರೆ, ಭಾರತದಲ್ಲಿ ಈ ಫೋನ್ ಅನ್ನು ಯಾವಾಗ ಅನಾವರಣ ಮಾಡಲಾಗುತ್ತದೆ?, ಇದು ಏನೆಲ್ಲಾ ಫೀಚರ್ಸ್ ಪಡೆದಿರಲಿ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಒನ್‌ಪ್ಲಸ್ 12R ಜೆನ್ಶಿನ್ ಇಂಪ್ಯಾಕ್ಟ್ ಆವೃತ್ತಿ: ಒನ್‌ಪ್ಲಸ್ ತನ್ನ ಸ್ಮಾರ್ಟ್‌ಫೋನ್‌ಗಳ ವಿಶೇಷ ಆವೃತ್ತಿಗಳನ್ನು ಬಿಡುಗಡೆ ಮಾಡುವ ಮೂಲಕ ಇನ್ನಷ್ಟು ಹೆಚ್ಚಿನ ಗ್ರಾಹಕರನ್ನು ಸೆಳೆಯುವ ಕೆಲಸ ಮಾಡುತ್ತದೆ. ಅದರಂತೆ ಈ ವಿಶೇಷ ಆವೃತ್ತಿಯ ಫೋನ್ ಅನ್ನು ಫೆಬ್ರವರಿ 28 ರಂದು ದೇಶದಲ್ಲಿ ಲಾಂಚ್ ಮಾಡಲಾಗುತ್ತದೆ ಎಂದು ತಿಳಿದುಬಂದಿದ್ದು, ಅಂದೇ ಒನ್‌ಪ್ಲಸ್ ಏಸ್ 3 ಜೆನ್ಶಿನ್ ಇಂಪ್ಯಾಕ್ಟ್ ಆವೃತ್ತಿ (OnePlus Ace 3 Genshin Impact Edition) ಹೆಸರಿನಲ್ಲಿ ಈ ಫೋನ್ ಈಗಾಗಲೇ ಚೀನಾದಲ್ಲಿ ಲಭ್ಯವಾಗಲಿದೆ.
ಒನ್‌ಪ್ಲಸ್ ಇಂಡಿಯಾ ಈ ವಿಶೇಷ ಆವೃತ್ತಿಯ ಫೋನ್‌ಗಾಗಿ ಈಗಾಗಲೇ ಮೈಕ್ರೋಸೈಟ್ ಅನ್ನು ಆಯೋಜಿಸಿದೆ. ನೀವು ಈ ಪೇಜ್‌ಗೆ ಭೇಟಿ ನೀಡಬಹುದು, ನೋಟಿಫೈ ಮಿ ಬಟನ್ ಮೇಲೆ ಟ್ಯಾಪ್ ಮಾಡುವ ಮೂಲಕ ಅದೃಷ್ಟದ ಡ್ರಾ ಸ್ಪರ್ಧೆಯಲ್ಲಿ ಭಾಗಿಯಾಗಬಹುದಾಗಿದೆ. ಈ ಮೂಲಕ ಓರ್ವರು ಉಚಿತ ಜೆನ್ಶಿನ್ ಒನ್‌ಪ್ಲಸ್ 12R ಅನ್ನು ಗೆಲ್ಲಬಹುದಾಗಿದೆ. ಉಳಿದ ಗ್ರಾಹಕರಲ್ಲಿ 40 ಜನರು 1,000 ಪ್ರಿಮೊಜೆಮ್‌ಗಳನ್ನು ಗೆಲ್ಲುತ್ತಾರೆ. ಇದು ಕರೆನ್ಸಿಯಾಗಿದ್ದು, ಈ ಫೋನ್ ಖರೀದಿಸುವಾಗ ಬಳಕೆ ಮಾಡಬಹುದಾಗಿದೆ. ಅಲ್ಲದೆ 1,000 ರಿಯಾಯಿತಿ ಕೂಪನ್ ಅನ್ನು ಪಡೆಯುತ್ತಾರೆ.

ಒನ್‌ಪ್ಲಸ್ 12R ಜೆನ್ಶಿನ್ ಇಂಪ್ಯಾಕ್ಟ್ ಆವೃತ್ತಿ ನಿರೀಕ್ಷಿತ ಫೀಚರ್ಸ್: ಈ ವಿಶೇಷ ಆವೃತ್ತಿಯು ಎಲೆಕ್ಟ್ರೋ ವೈಲೆಟ್ ಬಣ್ಣದಲ್ಲಿ ಕಾಣಿಸಿಕೊಳ್ಳಬಹುದು ಎನ್ನಲಾಗಿದೆ. ಇದು ಫೋನ್‌ನ ರಿಯರ್ ಭಾಗದಲ್ಲಿ ವಿಶಿಷ್ಟವಾದ ಅನಿಮೇಷನ್ ಎಲೆಕ್ಟ್ರೋ-ಎಟ್‌ಚೆಡ್ ಅನ್ನು ಒಳಗೊಂಡಿದೆ ಎಂದು ತಿಳಿದುಬಂದಿದೆ. ಇದರೊಂದಿಗೆ ಈ ಫೋನ್ ಸ್ನಾಪ್‌ಡ್ರಾಗನ್ 8 ಜನ್ 2 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.
ಹಾಗೆಯೇ ಈ ಫೋನ್ 50MP+8MP+2MP ನ ಟ್ರಿಪಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿರಲಿದೆ ಎನ್ನಲಾಗಿದ್ದು, ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಫೋನ್ 16MP ಸೆನ್ಸರ್ ಆಯ್ಕೆ ಪಡೆದಿರಬಹುದು ಎಂದು ತಿಳಿದುಬಂದಿದೆ. ಜೊತೆಗೆ 100W ಸೂಪರ್‌ವೂಕ್ ವೈರ್ಡ್ ಚಾರ್ಜಿಂಗ್ ಬೆಂಬಲದೊಂದಿಗೆ 5,500mAh ಸಾಮರ್ಥ್ಯದ ಬ್ಯಾಟರಿಯನ್ನು ಈ ಫೋನ್ ಪಡೆಯಬಹುದು ಎಂದು ತಿಳಿದುಬಂದಿದೆ.

ಇದರ ಜೊತೆಗೆ ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಆಧಾರಿತ ಆಕ್ಸಿಜನ್ ಓಎಸ್ 14 ಅನ್ನು ರನ್ ಮಾಡಲಿದೆ. ಇದರೊಂದಿಗೆ ಮುಖ್ಯವಾಗಿ ಈ ಫೋನ್ 6.78 ಇಂಚಿನ LTPO 4.0 ಅಮೋಲೆಡ್ ಡಿಸ್‌ಪ್ಲೇ ಹೊಂದಿರಲಿದೆ ಎನ್ನಲಾಗಿದ್ದು, 120Hz ರಿಫ್ರೆಶ್ ರೇಟ್, 2780 x 1264 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್, ಡಾಲ್ಬಿ ವಿಷನ್, HDR10+, 4500 ನಿಟ್ಸ್ ಪೀಕ್ ಬ್ರೈಟ್‌ನೆಸ್ ಮತ್ತು ಗೊರಿಲ್ಲಾ ಗ್ಲಾಸ್ ವಿಕ್ಟಸ್ 220 ರಕ್ಷಣೆ ಪಡೆದಿರಲಿದೆ ಎಂದು ಹೇಳಲಾಗಿದೆ.


Click it and Unblock the Notifications








