ಇಂದು ಒನ್‌ಪ್ಲಸ್‌ನ ಈ ಸ್ಪೆಷಲ್ ಮೊಬೈಲ್‌ನ ಫಸ್ಟ್ ಸೇಲ್!..ಬೆಲೆ ಎಷ್ಟು ಅಂತೀರಾ?
ಒನ್‌ಪ್ಲಸ್ ಸಂಸ್ಥೆಯು ಇತ್ತೀಚಿಗೆ ಲಾಂಚ್ ಮಾಡಿರುವ ಒನ್‌ಪ್ಲಸ್ 12R ಫೋನ್ ಸಿಕ್ಕಾಪಟ್ಟೆ ಗಮನ ಸೆಳೆದಿದೆ. ಅದರ ಅಪ್‌ಡೇಟ್ ಭಾಗವಾಗಿ ಸಂಸ್ಥೆಯು ಪರಿಚಯಿಸಿರುವ ಒನ್‌ಪ್ಲಸ್ 12R Genshin Impact Edition ಫೋನಿನ ಮಾರಾಟವು ಇಂದು (ಮಾ. 19 ರಂದು) ಅಮೆಜಾನ್ ಇ ಕಾಮರ್ಸ್ ತಾಣದ ಮೂಲಕ ಮಧ್ಯಾಹ್ನ 12 ಗಂಟೆಗೆ ಪ್ರಾರಂಭ ಮಾಡಲಿದೆ.
ಹೌದು, ಇಂದು ಅಮೆಜಾನ್ ಇ ಕಾಮರ್ಸ್ ಒನ್‌ಪ್ಲಸ್ 12R Genshin Impact Edition ಫೋನಿನ ಸೇಲ್ ನಡೆಯಲಿದೆ. ಈ ವಿಶೇಷ ಆವೃತ್ತಿಯು ಬಹುತೇಕ ಒನ್‌ಪ್ಲಸ್ 12R ಫೋನಿನ ಫೀಚರ್ಸ್ ಗಳನ್ನೇ ಒಳಗೊಂಡಿದ್ದು, ಕಲರ್ ಆಯ್ಕೆ ಹಾಗೂ RAM ಆಯ್ಕೆಗಳಲ್ಲಿ ಭಿನ್ನತೆ ಕಾಣಬಹುದಾಗಿದೆ.

ಈ ವಿಶೇಷ ಆವೃತ್ತಿ ಒನ್‌ಪ್ಲಸ್ 12R ಫೋನ್ 16GB RAM + 256GB ವೇರಿಯಂಟ್ ಪಡೆದಿದ್ದು, ಹಾಗೆಯೇ ಎಲೆಕ್ಟ್ರೋ ವೈಲೆಟ್ ಕಲರ್ ಆಯ್ಕೆ ಅನ್ನು ಪಡೆದುಕೊಂಡಿದೆ. ಅಂದಹಾಗೆ ಈ ಫೋನ್ ಸಹ ಸ್ನಾಪ್‌ಡ್ರಾಗನ್ 8 ಜೆನ್ 2 SoC ಪ್ರೊಸೆಸರ್ ಕೆಲಸ ಮಾಡಲಿದೆ. ಹಾಗಾದರೇ ಈ ವಿಶೇಷ ಆವೃತ್ತಿಯ ಫೋನಿನ ಇತರೆ ಫೀಚರ್ಸ್ ಯಾವುವು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.
ಸ್ಪೆಷಲ್ ಎಡಿಷನ್ ಫೋನಿನ ಫೀಚರ್ಸ್ ಹೀಗಿವೆ
ಈ ಸ್ಪೆಷಲ್ ಎಡಿಷನ್ ಫೋನ್ 6.78 ಇಂಚಿನ BOE X1 OLED ಡಿಸ್‌ಪ್ಲೇ ಅನ್ನು ಹೊಂದಿದ್ದು, ಇದು 1,264 x 2,780 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಹಾಗೆಯೇ ಇದು 120Hz ProXDR ರಿಫ್ರೆಶ್ ರೇಟ್ ಪಡೆದಿರುವ ಜತೆಗೆ LTPO 4.0 ತಂತ್ರಜ್ಞಾನವನ್ನು ಹೊಂದಿದೆ. ಇದು ಡಿಸ್‌ಪ್ಲೇ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ನೊಂದಿಗೆ ಲೇಯರ್ಡ್ ಒಳಗೊಂಡಿದೆ.

ಅಲ್ಲದೇ ಈ ಮೊಬೈಲ್ ಫೋನ್ ಸ್ನಾಪ್‌ಡ್ರಾಗನ್ 8 ಜೆನ್ 2 SoC ಪ್ರೊಸೆಸರ್ ಬಲವನ್ನು ಹೊಂದಿದ್ದು, ಇದಕ್ಕೆ ಅನುಗುಣವಾಗಿ ಆಂಡ್ರಾಯ್ಡ್ 14 ಆಧಾರಿತ OxygenOS 14 ಸಪೋರ್ಟ್ ನಲ್ಲಿ ಕೆಲಸ ಮಾಡುತ್ತದೆ. ಹಾಗೆಯೇ ಈ ಆವೃತ್ತಿಯ ಫೋನ್ 16GB RAM + 256GB ಸ್ಟೋರೇಜ್ ಸಾಮರ್ಥ್ಯದ ವೇರಿಯೆಂಟ್ ಆಯ್ಕೆ ಅನ್ನು ಪಡೆದಿದ್ದು, ಮೇನ್ ಹೈಲೈಟ್ ಎನಿಸಿದೆ.
ಇದರೊಂದಿಗೆ ಈ ಫೋನ್ ಕೂಡಾ ಮೂರು ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದ್ದು, ಇದರ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸೌಲಭ್ಯ ಹೊಂದಿದೆ. ದ್ವಿತೀಯ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು ತೃತೀಯ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಒಳಗೊಂಡಿದೆ. ಇದಲ್ಲದೆ ಮೊಬೈಲ್ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಕೂಡಾ ಪಡೆದುಕೊಂಡಿದೆ.
ಒನ್‌ಪ್ಲಸ್ ಸಂಸ್ಥೆಯ ಈ ವಿಶೇಷ ಮಾಡೆಲ್ ಫೋನ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಆಯ್ಕೆ ಪಡೆದಿದ್ದು, ಇದಕ್ಕೆ ಪೂರಕವಾಗಿ 100W SuperVOOC ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲ ಇದೆ. ಹಾಗೆಯೇ ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಬ್ಲೂಟೂತ್ 5.3, 5G ಬೆಂಬಲ, ವೈ-ಫೈ 6E, ಬ್ಲೂಟೂತ್ 5.3, NFC, USB-C 3.2 ಜೆನ್ 2, ಜಿಪಿಎಸ್ ಅನ್ನು ಸಪೋರ್ಟ್ ಕಾಣಬಹುದಾಗಿದೆ.
ಅದೇ ರೀತಿ ಈ ಫೋನಿನ 16GB + 256GB ಸ್ಟೋರೇಜ್ ವೇರಿಯಂಟ್ ಬೆಲೆಯು 49,999ರೂ. ಗಳು ಆಗಿದ್ದು, ಖರೀದಿದಾರರು ಈ ಫೋನ್ ಅನ್ನು ಎಲೆಕ್ಟ್ರೋ ವೈಲೆಟ್ ಕಲರ್ ಆಯ್ಕೆಯಲ್ಲಿ ಖರೀದಿ ಮಾಡಲು ಅವಕಾಶ ಇದೆ.


Click it and Unblock the Notifications








