Home
ಸುದ್ದಿಜಾಲ

OnePlus: ಭಾರತದಲ್ಲಿ ಒನ್‌ಪ್ಲಸ್‌ 12R ಜೆನ್ಶಿನ್ ಇಂಪ್ಯಾಕ್ಟ್ ಆವೃತ್ತಿ ಲಾಂಚ್‌! ಬೆಲೆ ಎಷ್ಟು? ಫೀಚರ್ಸ್‌ ಏನು?

ಒನ್‌ಪ್ಲಸ್‌ (OnePlus) ಸ್ಮಾರ್ಟ್‌ಫೋನ್‌ಗಳಿಗೆ ಭಾರತ ಪ್ರಮುಖ ಮಾರುಕಟ್ಟೆಯಾಗಿದೆ. ಈ ನಡುವೆ ಭಾರತದಲ್ಲಿ ವಿಶೇಷ ಆವೃತ್ತಿ ಫೋನ್‌ ಅನ್ನು ಅನಾವರಣ ಮಾಡಲಾಗಿದ್ದು, ಈ ಫೋನ್‌ ಭಿನ್ನ ಫೀಚರ್ಸ್‌ ಹಾಗೂ ಶೈಲಿಯ ಮೂಲಕ ಆಕರ್ಷಕವಾಗಿದೆ.

ಹೌದು, ಒನ್‌ಪ್ಲಸ್‌ 12R ಜೆನ್ಶಿನ್ ಇಂಪ್ಯಾಕ್ಟ್ ಆವೃತ್ತಿಯನ್ನು (OnePlus 12R Genshin Impact Edition) ಭಾರತದಲ್ಲಿ ಅನಾವರಣ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ ವಿಶಿಷ್ಟವಾದ ಜೆನ್ಶಿನ್ ಇಂಪ್ಯಾಕ್ಟ್-ಪ್ರೇರಿತ ವಿನ್ಯಾಸವನ್ನು ಪಡೆಯುತ್ತದೆ ಅಲ್ಲದೆ ಈ ರೀತಿಯ ಕಸ್ಟಮೈಸ್ ಮಾಡಿದ ಜೆನ್ಶಿನ್ ಇಂಪ್ಯಾಕ್ಟ್ ಗೇಮ್ ವಿನ್ಯಾಸವನ್ನು ಪಡೆದ ಮೊದಲ ಸ್ಮಾರ್ಟ್‌ಫೋನ್ ಆಗಿದೆ. ಹಾಗಿದ್ರೆ ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಒನ್‌ಪ್ಲಸ್‌ 12R ಜೆನ್ಶಿನ್ ಇಂಪ್ಯಾಕ್ಟ್ ಆವೃತ್ತಿ ಲಾಂಚ್‌! ಬೆಲೆ ಎಷ್ಟು?

ಒನ್‌ಪ್ಲಸ್‌ 12R ಜೆನ್ಶಿನ್ ಇಂಪ್ಯಾಕ್ಟ್ ಆವೃತ್ತಿ: ಈ ಸ್ಮಾರ್ಟ್‌ಫೋನ್‌ ಗೇಮಿಂಗ್-ಕೇಂದ್ರಿತ ಕಸ್ಟಮೈಸೇಶನ್‌ನೊಂದಿಗೆ ಬರುತ್ತದೆ ಮತ್ತು ಕಸ್ಟಮೈಸೇಶನ್‌ಗಾಗಿ ಕೇಕ್-ಥೀಮ್ ಕೇಸ್‌ನಂತಹ ಬಿಡಿಭಾಗಗಳೊಂದಿಗೆ ಗಿಫ್ಟ್‌ ಬಾಕ್ಸ್‌ ಅನ್ನೂ ಸಹ ಒಳಗೊಂಡಿದೆ. ಹಾಗೆಯೇ ಈ ಒನ್‌ಪ್ಲಸ್‌ 12R ಜೆನ್ಶಿನ್ ಇಂಪ್ಯಾಕ್ಟ್ ಆವೃತ್ತಿಯು ಎಲೆಕ್ಟ್ರಿಕ್ ಥೀಮ್ ಫಿನಿಶ್ ಮತ್ತು ರಿಯರ್‌ ಭಾಗದಲ್ಲಿ ಕೆಕಿಂಗ್ ಲೋಗೋವನ್ನು ಹೊಂದಿದೆ. ಹಾಗಿದ್ರೆ, ಬನ್ನಿ ಈ ಫೋನ್‌ನ ಪ್ರಮುಖ ಫೀಚರ್ಸ್‌ ಏನು ಅನ್ನೋದನ್ನು ನೋಡೋಣ.

ಒನ್‌ಪ್ಲಸ್‌ 12R ಜೆನ್ಶಿನ್ ಇಂಪ್ಯಾಕ್ಟ್ ಆವೃತ್ತಿ ಡಿಸ್‌ಪ್ಲೇ: ಈ ವಿಶೇಷ ಸ್ಮಾರ್ಟ್‌ಫೋನ್‌ 6.78 ಇಂಚಿನ ಅಮೋಲೆಡ್‌ ProXDR 1.5K ಸಾಮರ್ಥ್ಯದ ಡಿಸ್‌ಪ್ಲೇ ಹೊಂದಿದೆ. ಅಂದರೆ ನೀವು 1,264x2,780 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯದ ಅನುಭವವನ್ನು ಪಡೆಯಬಹುದಾಗಿದೆ. ಇದರೊಂದಿಗೆ 120Hz ಡೈನಾಮಿಕ್ ರಿಫ್ರೆಶ್ ರೇಟ್ ಮತ್ತು 4,500 ನಿಟ್ಸ್‌ ನ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಇದ್ದು, HDR10+, ಡಾಲ್ಬಿ ವಿಷನ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಬೆಂಬಲ ಪಡೆದಿದೆ.

ಒನ್‌ಪ್ಲಸ್‌ 12R ಜೆನ್ಶಿನ್ ಇಂಪ್ಯಾಕ್ಟ್ ಆವೃತ್ತಿ ಲಾಂಚ್‌! ಬೆಲೆ ಎಷ್ಟು?

ಒನ್‌ಪ್ಲಸ್‌ 12R ಜೆನ್ಶಿನ್ ಇಂಪ್ಯಾಕ್ಟ್ ಆವೃತ್ತಿ ಪ್ರೊಸೆಸರ್ ಮಾಹಿತಿ: ಈ ಫೋನ್ ಸ್ನಾಪ್‌ಡ್ರಾಗನ್ 8 ಜನ್ 2 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 16GB LPDDR5x RAM ಹಾಗೂ 256GB UFS 3.1 ಇಂಟರ್‌ ಸ್ಟೋರೇಜ್‌ ಆಯ್ಕೆಯಲ್ಲಿ ಕಾಣಿಸಿಕೊಂಡಿದೆ. ಬಳಕೆದಾರರ ಇಂಟರ್‌ಫೇಸ್‌ಗೆ ಸಂಬಂಧಿಸಿದಂತೆ, ಅನ್‌ಲಾಕ್, ಚಾರ್ಜ್ ಮತ್ತು ಬೂಟ್ ಅನಿಮೇಷನ್‌ಗಳಂತಹ ವಿಶೇಷ ಫೀಚರ್ಸ್‌ ಇದರಲ್ಲಿದೆ.

ಒನ್‌ಪ್ಲಸ್‌ 12R ಜೆನ್ಶಿನ್ ಇಂಪ್ಯಾಕ್ಟ್ ಆವೃತ್ತಿ ಕ್ಯಾಮೆರಾ ರಚನೆ: ಇದರ ಕ್ಯಾಮೆರಾ ಬಗ್ಗೆ ಹೇಳುವುದಾದರೆ ಈ ಫೋನ್ ಟ್ರಿಪಲ್ ರಿಯರ್‌ ಕ್ಯಾಮೆರಾ ರಚನೆ ಪಡೆದುಕೊಂಡಿದೆ. ಇದರಲ್ಲಿ 50 ಮೆಗಾಪಿಕ್ಸೆಲ್‌ ಸೋನಿ IMX890 ಸೆನ್ಸರ್‌, 8 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ನೋಡಬಹುದು. ಹಾಗೆಯೇ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 16 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆ ನೀಡಲಾಗಿದೆ.

ಒನ್‌ಪ್ಲಸ್‌ 12R ಜೆನ್ಶಿನ್ ಇಂಪ್ಯಾಕ್ಟ್ ಆವೃತ್ತಿ ಬ್ಯಾಟರಿ ಹಾಗೂ ಇತರೆ: ಈ ಫೋನ್ 100W ಸೂಪರ್‌ವೂಕ್‌ ವೈರ್ಡ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದರ ಜೊತಗೆ 5G, 4G LTE, ವೈ-ಫೈ 7, ಬ್ಲೂಟೂತ್ ಆವೃತ್ತಿ 5.3, ಜಿಪಿಎಸ್‌ ಮತ್ತು ಎನ್‌ಎಫ್‌ಸಿ ಸೇರಿವೆ. ಇದರೊಂದಿಗೆ ಗೈರೊಸ್ಕೋಪ್, ಅಕ್ಸೆಲೆರೊಮೀಟರ್, ಮ್ಯಾಗ್ನೆಟೋಮೀಟರ್, ಸಾಮೀಪ್ಯ ಸೆನ್ಸರ್‌ ಮತ್ತು ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಅಂಡರ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್‌ ಆಯ್ಕೆಯಂತ ಅಗತ್ಯ ಕನೆಕ್ಟಿವಿಟಿ ಫೀಚರ್ಸ್‌ ನೋಡಬಹುದಾಗಿದೆ.

ಒನ್‌ಪ್ಲಸ್‌ 12R ಜೆನ್ಶಿನ್ ಇಂಪ್ಯಾಕ್ಟ್ ಆವೃತ್ತಿ ಲಾಂಚ್‌! ಬೆಲೆ ಎಷ್ಟು?

ಒನ್‌ಪ್ಲಸ್‌ 12R ಜೆನ್ಶಿನ್ ಇಂಪ್ಯಾಕ್ಟ್ ಆವೃತ್ತಿ ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್‌ಫೋನ್‌ 16 GB RAM ಮತ್ತು 256 GB ಸ್ಟೋರೇಜ್ ವೇರಿಯಂಟ್‌ ಹೊಂದಿದ್ದು, ಇದಕ್ಕೆ 49,999 ರೂ. ಗಳ ಬೆಲೆ ನಿಗದಿ ಮಾಡಲಾಗಿದೆ. ಇದನ್ನು ಮಾರ್ಚ್ 19 ರಿಂದ ಒನ್‌ಪ್ಲಸ್‌ ಸ್ಟೋರ್ ಮತ್ತು ಇತರ ರಿಟೇಲರ್‌ ಚಾನಲ್ ಪಾಲುದಾರರ ಮೂಲಕ ಖರೀದಿ ಮಾಡಬಹುದಾಗಿದೆ. ಆ ವೇಳೆ ಒನ್‌ಪ್ಲಸ್ ಒನ್‌ಕಾರ್ಡ್‌ ಬಳಕೆ ಮಾಡಿದ್ರೆ 1,000ರೂ.ಗಳ ತ್ವರಿತ ರಿಯಾಯಿತಿ ಸಿಗಲಿದೆ. ಹಾಗೆಯೇ ವಿನಿಮಯ ಆಫರ್ ನಲ್ಲಿ 3,000ರೂ.ಗಳ ವಿನಿಮಯ ಬೋನಸ್ ಸಹ ಪಡೆಯಬಹುದು.

Best Mobiles in India

English summary
OnePlus 12R Genshin Impact Edition has been unveiled in India. The smartphone gets a unique Genshin Impact inspired design.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+