ಒನ್‌ಪ್ಲಸ್ 12R ಫೋನಿನ ಓಪೆನ್ ಸೇಲ್ ಯಾವಾಗ ಗೊತ್ತಾ?..ಭರ್ಜರಿ ಆಫರ್ ಸಿಗುತ್ತೆ!
ಒನ್‌ಪ್ಲಸ್ ಸಂಸ್ಥೆಯು ಒನ್‌ಪ್ಲಸ್ 12R ಸ್ಮಾರ್ಟ್‌ಫೋನ್ ಫಸ್ಟ್ ಸೇಲ್ ಫೆ. 6 ರಂದು ಮುಕ್ತಾಯವಾಗಿದೆ. ಆದರೆ ಸದ್ಯದಲ್ಲೇ ಒನ್‌ಪ್ಲಸ್ 12R ಸ್ಮಾರ್ಟ್‌ಫೋನ್ ಓಪೆನ್ ಸೇಲ್ ಪ್ರಾರಂಭವಾಗಲಿದ್ದು, ಫಸ್ಟ್ ಸೇಲ್‌ನಲ್ಲಿ ಖರೀದಿ ಮಾಡಲು ಸಾಧ್ಯವಾಗದೇ ಇರುವ ಗ್ರಾಹಕರು ಓಪೆನ್ ಸೇಲ್‌ನಲ್ಲಿ ಖರೀದಿ ಮಾಡಬಹುದಾಗಿದೆ.
ಹೌದು, ಒನ್‌ಪ್ಲಸ್ 12R ಸ್ಮಾರ್ಟ್‌ಫೋನ್ ಮುಂದಿನ ಮಾರಾಟವು ಇದೇ ಫೆಬ್ರವರಿ 13 ರಂದು ಒನ್‌ಪ್ಲಸ್ ಇಂಡಿಯಾ ವೆಬ್‌ಸೈಟ್, ಅಮೆಜಾನ್ ಇ ಕಾಮರ್ಸ್ ಹಾಗೂ ರಿಟೇಲ್ ಸ್ಟೋರ್‌ಗಳ ಮೂಲಕ ನಡೆಯಲಿದೆ. ಅಮೆಜಾನ್‌ನಲ್ಲಿ Notify Me ಆಯ್ಕೆ ಇದ್ದು, ಗ್ರಾಹಕರು ಸೇಲ್ ಅಪ್‌ಡೇಟ್ ಪಡೆಯಬಹುದು. ಅಂದಹಾಗೆ ಈ ಫೋನ್ ಸ್ನಾಪ್‌ಡ್ರಾಗನ್ 8 ಜೆನ್ 2 SoC ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ.

ಒನ್‌ಪ್ಲಸ್ 12R ಮೊಬೈಲ್ 8GB + 128GB ಮಾಡೆಲ್ 39,999ರೂ. ಪ್ರೈಸ್ ಟ್ಯಾಗ್ ಹೊಂದಿದ್ದು, 16GB RAM + 256GB ಸ್ಟೋರೇಜ್ ಮಾಡೆಲ್ 45,999ರೂ. ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇ ಕಾಮರ್ಸ್ ತಾಣ ಅಮೆಜಾನ್‌ನಲ್ಲಿ ಕೆಲವು ಆಫರ್‌ಗಳು ಸಹ ಖರೀದಿದಾರರಿಗೆ ಸಿಗಲಿವೆ. ಇನ್ನುಳಿದಂತೆ ಒನ್‌ಪ್ಲಸ್ 12R ಫೋನಿನ ಇತರೆ ಫೀಚರ್ಸ್ ಯಾವುವು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.
ಒನ್‌ಪ್ಲಸ್ 12R ಮೊಬೈಲ್ ಫೀಚರ್ಸ್ ಹೀಗಿವೆ
ಒನ್‌ಪ್ಲಸ್ ಸಂಸ್ಥೆಯ ಈ ಫೋನ್ 6.78 ಇಂಚಿನ BOE X1 OLED ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇಯು 1,264x2,780 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡಿದೆ. ಅಲ್ಲದೇ ಇದು 120Hz ProXDR ರಿಫ್ರೆಶ್ ರೇಟ್ ಪಡೆದಿರುವ ಜೊತೆ LTPO 4.0 ತಂತ್ರಜ್ಞಾನವನ್ನು ಪಡೆದುಕೊಂಡಿದೆ. ಇದು ಡಿಸ್‌ಪ್ಲೇ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ನೊಂದಿಗೆ ಲೇಯರ್ಡ್ ಆಗಿದೆ.

ಒನ್‌ಪ್ಲಸ್ 12R ಸ್ಮಾರ್ಟ್ ಫೋನ್ ಸ್ನಾಪ್‌ಡ್ರಾಗನ್ 8 ಜೆನ್ 2 SoC ಪ್ರೊಸೆಸರ್ ಬಲವನ್ನು ಪಡೆದಿದ್ದು, ಇದು ಆಂಡ್ರಾಯ್ಡ್ 14 ಆಧಾರಿತ OxygenOS 14 ಔಟ್-ಆಫ್-ದಿ-ಬಾಕ್ಸ್‌ನಲ್ಲಿ ಕೆಲಸ ನಿರ್ವಹಿಸುತ್ತದೆ. ಹಾಗೆಯೇ ಈ ಫೋನ್ 8GB RAM + 128GB ಮತ್ತು 16GB RAM + 256GB ಸ್ಟೋರೇಜ್ ಸಾಮರ್ಥ್ಯದ ವೇರಿಯೆಂಟ್ ಆಯ್ಕೆಗಳನ್ನು ಒಳಗೊಂಡಿರುವುದು ಪ್ಲಸ್ ಪಾಯಿಂಟ್ ಎನಿಸಿದೆ.
ಒನ್‌ಪ್ಲಸ್ 12R ಮೊಬೈಲ್ ಟ್ರಿಪಲ್ ರಿಯರ್ ಕ್ಯಾಮೆರಾವನ್ನು ಸೆಟ್‌ಅಪ್ ಅನ್ನು ಪಡೆದುಕೊಂಡಿದ್ದು, ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಕ್ಯಾಮೆರಾ 112-ಡಿಗ್ರಿ ಫೀಲ್ಡ್-ಆಫ್-ವ್ಯೂ ಆಗಿದೆ. ದ್ವಿತೀಯ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು ತೃತೀಯ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಪಡೆದುಕೊಂಡಿದೆ. ಇದಲ್ಲದೆ ಮೊಬೈಲ್ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಪಡೆದಿದೆ.
ಒನ್‌ಪ್ಲಸ್ ಕಂಪನಿಯ ಈ ನೂತನ ಮೊಬೈಲ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಹೊಂದಿದೆ. ಇದಕ್ಕೆ ಪೂರಕವಾಗಿ 100W SuperVOOC ವೈರ್ಡ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡಲಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಬ್ಲೂಟೂತ್ 5.3, 5G ಬೆಂಬಲ, ವೈ-ಫೈ 6E, ಬ್ಲೂಟೂತ್ 5.3, NFC, USB-C 3.2 ಜೆನ್ 2, ಜಿಪಿಎಸ್ ಅನ್ನು ಸಪೋರ್ಟ್ ಮಾಡಲಿದೆ.
ಹಾಗೆಯೇ ಈ ಫೋನ್ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್, ಅಕ್ಸಿಲೆರೊಮೀಟರ್, ಗೈರೊಸ್ಕೋಪ್, ಪ್ರಾಕ್ಸಿಮಿಟಿ ಸೆನ್ಸಾರ್, ಆಂಬಿಯೆಂಟ್ ಲೈಟ್ ಸೆನ್ಸರ್ ಮತ್ತು ಇ-ಕಾಪಾಸ್ ಆಯ್ಕೆಗಳನ್ನು ಒಳಗೊಂಡಿದೆ. ಒನ್‌ಪ್ಲಸ್ 12R (OnePlus 12R) ಮೊಬೈಲ್ ಮಾರುಕಟ್ಟೆಯಲ್ಲಿ 8GB + 128GB ಆಯ್ಕೆ ಹಾಗೂ 16GB + 256GB ಆಯ್ಕೆ ಪಡೆದಿದೆ. ಖರೀದಿದಾರರು ಈ ಫೋನ್ ಅನ್ನು ಐರನ್ ಗ್ರೇ ಮತ್ತು ಕೋಲ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಖರೀದಿ ಮಾಡಲು ಅವಕಾಶ ಇದೆ.


Click it and Unblock the Notifications








