ನಾಳೆ ಒನ್‌ಪ್ಲಸ್‌ನ ಈ ಹೊಸ ಸ್ಮಾರ್ಟ್‌ಫೋನಿನ ಓಪೆನ್ ಸೇಲ್ ಆರಂಭ!
ಫೋನ್ ಪ್ರಿಯರ ನೆಚ್ಚಿನ ಬ್ರ್ಯಾಂಡ್‌ಗಳಲ್ಲಿ ಒಂದಾದ ಒನ್‌ಪ್ಲಸ್ ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವ ಒನ್‌ಪ್ಲಸ್ 12R ಸ್ಮಾರ್ಟ್‌ಫೋನ್ ಈಗಾಗಲೇ ಫಸ್ಟ್ ಸೇಲ್ ಆರಂಭಿಸಿ ಭರ್ಜರಿ ರೆಸ್ಪಾನ್ಸ್ ಪಡೆದಿದೆ. ನಾಳೆ (ಫೆ. 13 ರಂದು) ಅಮೆಜಾನ್ ಇ ಕಾಮರ್ಸ್ ತಾಣದ ಮೂಲಕ ಒನ್‌ಪ್ಲಸ್ ಸಂಸ್ಥೆಯು ಒನ್‌ಪ್ಲಸ್ 12R ಸ್ಮಾರ್ಟ್‌ಫೋನ್ ಓಪೆನ್ ಸೇಲ್ ಪ್ರಾರಂಭ ಮಾಡಲಿದೆ.
ಹೌದು, ಇದೇ ಫೆಬ್ರವರಿ 13 ರಂದು (ನಾಳೆ) ಒನ್‌ಪ್ಲಸ್ ಇಂಡಿಯಾ ವೆಬ್‌ಸೈಟ್, ಅಮೆಜಾನ್ ಇ ಕಾಮರ್ಸ್ ಹಾಗೂ ರಿಟೇಲ್ ಸ್ಟೋರ್‌ಗಳ ಮೂಲಕ ಒನ್‌ಪ್ಲಸ್ 12R ಸ್ಮಾರ್ಟ್‌ಫೋನ್ ಓಪೆನ್ ಸೇಲ್ ನಡೆಯಲಿದೆ. ಈಗಾಗಲೇ ಅಮೆಜಾನ್‌ನಲ್ಲಿ ಈ ಬಗ್ಗೆ ತನ್ನ ಮಾಹಿತಿ ಅಪ್‌ಡೇಟ್ ಮಾಡಿದೆ. ಇನ್ನು ಈ ಫೋನ್ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸೌಲಭ್ಯದಲ್ಲಿ ಇದೆ.

ಒನ್‌ಪ್ಲಸ್ 12R ಮೊಬೈಲ್ 8GB + 128GB ವೇರಿಯಂಟ್ 39,999ರೂ. ಬೆಲೆ ಹೊಂದಿದ್ದು, 16GB RAM + 256GB ವೇರಿಯಂಟ್ 45,999ರೂ. ಪ್ರೈಸ್‌ಟ್ಯಾಗ್ ಪಡೆದಿವೆ. ಈ ಫೋನ್ ಸ್ನಾಪ್‌ಡ್ರಾಗನ್ 8 ಜೆನ್ 2 SoC ಪ್ರೊಸೆಸರ್ ಪಡೆದಿದೆ. ಇನ್ನುಳಿದಂತೆ ಒನ್‌ಪ್ಲಸ್ 12R ಫೋನಿನ ಇತರೆ ಫೀಚರ್ಸ್ ಯಾವುವು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.
ಒನ್‌ಪ್ಲಸ್ 12R ಫೋನ್ ಫೀಚರ್ಸ್ ಹೀಗಿವೆ
ಈ ಫೋನ್ 6.78 ಇಂಚಿನ BOE X1 OLED ಡಿಸ್‌ಪ್ಲೇ ಅನ್ನು ಪಡೆದಿದ್ದು, ಇದು 1,264 x 2,780 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡಿದೆ. ಅಲ್ಲದೇ ಇದು 120Hz ProXDR ರಿಫ್ರೆಶ್ ರೇಟ್ ಪಡೆದಿರುವ ಜೊತೆ LTPO 4.0 ತಂತ್ರಜ್ಞಾನವನ್ನು ಪಡೆದುಕೊಂಡಿದೆ. ಇದು ಡಿಸ್‌ಪ್ಲೇ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ನೊಂದಿಗೆ ಲೇಯರ್ಡ್ ಆಗಿದೆ.

ಹಾಗೆಯೇ ಈ ಫೋನ್ ಸ್ನಾಪ್‌ಡ್ರಾಗನ್ 8 ಜೆನ್ 2 SoC ಪ್ರೊಸೆಸರ್ ಪವರ್ ಅನ್ನು ಪಡೆದಿದ್ದು, ಇದು ಆಂಡ್ರಾಯ್ಡ್ 14 ಆಧಾರಿತ OxygenOS 14 ಔಟ್-ಆಫ್-ದಿ-ಬಾಕ್ಸ್‌ನಲ್ಲಿ ಕೆಲಸ ಮಾಡುತ್ತದೆ. ಹಾಗೆಯೇ ಈ ಫೋನ್ 8GB RAM + 128GB ಮತ್ತು 16GB RAM + 256GB ಸ್ಟೋರೇಜ್ ಸಾಮರ್ಥ್ಯದ ವೇರಿಯೆಂಟ್ ಆಯ್ಕೆಗಳನ್ನು ಒಳಗೊಂಡಿರುವುದು ಪ್ಲಸ್ ಪಾಯಿಂಟ್ ಆಗಿದೆ.
ಅಲ್ಲದೇ ಇದು ಟ್ರಿಪಲ್ ರಿಯರ್ ಕ್ಯಾಮೆರಾವನ್ನು ರಚನೆ ಅನ್ನು ಹೊಂದಿದ್ದು, ಇದರ ಮೊದಲ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸೌಲಭ್ಯ ಪಡೆದಿದೆ. ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಪಡೆದುಕೊಂಡಿದೆ. ಇದಲ್ಲದೆ ಮೊಬೈಲ್ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಪಡೆದಿದೆ.
ಒನ್‌ಪ್ಲಸ್ ಕಂಪನಿಯ ಈ ನೂತನ ಮೊಬೈಲ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಹೊಂದಿದೆ. ಇದಕ್ಕೆ ಪೂರಕವಾಗಿ 100W SuperVOOC ವೈರ್ಡ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡಲಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಬ್ಲೂಟೂತ್ 5.3, 5G ಬೆಂಬಲ, ವೈ-ಫೈ 6E, ಬ್ಲೂಟೂತ್ 5.3, NFC, USB-C 3.2 ಜೆನ್ 2, ಜಿಪಿಎಸ್ ಅನ್ನು ಸಪೋರ್ಟ್ ಮಾಡಲಿದೆ.
ಹಾಗೆಯೇ ಈ ಫೋನ್ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್, ಅಕ್ಸಿಲೆರೊಮೀಟರ್, ಗೈರೊಸ್ಕೋಪ್, ಪ್ರಾಕ್ಸಿಮಿಟಿ ಸೆನ್ಸಾರ್, ಆಂಬಿಯೆಂಟ್ ಲೈಟ್ ಸೆನ್ಸರ್ ಮತ್ತು ಇ-ಕಾಪಾಸ್ ಆಯ್ಕೆಗಳನ್ನು ಒಳಗೊಂಡಿದೆ. ಇನ್ನು ಈ ಫೋನ್ 8GB + 128GB ಆಯ್ಕೆ ಹಾಗೂ 16GB + 256GB ಆಯ್ಕೆ ಪಡೆದಿದೆ. ಖರೀದಿದಾರರು ಈ ಫೋನ್ ಅನ್ನು ಐರನ್ ಗ್ರೇ ಮತ್ತು ಕೋಲ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಖರೀದಿ ಮಾಡಲು ಅವಕಾಶ ಇದೆ.


Click it and Unblock the Notifications








