Home
ಸುದ್ದಿಜಾಲ

OnePlus: ಒನ್‌ಪ್ಲಸ್‌ನ ಈ ಫೋನ್‌ ರಿಟರ್ನ್‌ ಮಾಡಿದ್ರೆ ಪೂರ್ತಿ ಹಣ ವಾಪಸ್‌!

ಒನ್‌ಪ್ಲಸ್‌ನ ಸ್ಮಾರ್ಟ್‌ಫೋನ್‌ಗಳು (OnePlus Smartphone) ವಿವಿಧ ರೀತಿಯಲ್ಲಿ ಬಳಕೆದಾರರಿಗೆ ಭಿನ್ನ ಫೀಚರ್ಸ್ ಅನುಭವ ನೀಡುತ್ತವೆ. ಈ ನಡುವೆ ಒನ್‌ಪ್ಲಸ್‌ನ ಹೊಸ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಭರ್ಜರಿ ಆಫರ್ ಘೋಷಣೆ ಮಾಡಲಾಗಿದೆ.

ಹೌದು, ನೀವು ಏನಾದರೂ ಈಗ 256GB ಇಂಟರ್‌ ಸ್ಟೋರೇಜ್‌ ಆಯ್ಕೆಯ ಈ ಒನ್‌ಪ್ಲಸ್ ಫೋನ್‌ ಖರೀದಿ ಮಾಡಿದ್ದು, ಈ ವಿಷಯದಲ್ಲಿ ನಿಮಗೆ ಇಷ್ಟ ಇಲ್ಲ ಎನಿಸಿದ್ರೆ ನಿಮ್ಮ ಹಣವನ್ನು ಹಿಂತಿರುಗಿಸಲು ಒನ್‌ಪ್ಲಸ್‌ ಸಿದ್ಧವಾಗಿದೆ. ಹಾಗಿದ್ರೆ, ಯಾವ ಸ್ಮಾರ್ಟ್‌ಫೋನ್‌ಗೆ ಈ ವಿಶೇಷ ಆಫರ್ ಘೋಷಣೆ ಮಾಡಲಾಗುತ್ತಿದೆ?, ಈ ಫೋನ್‌ನಲ್ಲಿ ಕಂಡುಬರುತ್ತಿರುವ ಸಮಸ್ಯೆಗಳು ಏನು ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಒನ್‌ಪ್ಲಸ್‌ನ ಈ ಫೋನ್‌ ರಿಟರ್ನ್‌ ಮಾಡಿದ್ರೆ ಪೂರ್ತಿ ಹಣ ವಾಪಸ್‌!

ಒನ್‌ಪ್ಲಸ್‌ 12R ನ (OnePlus 12R) 256GB ವೇರಿಯಂಟ್‌ನಲ್ಲಿ ಸಂಪೂರ್ಣ ಮರುಪಾವತಿ: ಒನ್‌ಪ್ಲಸ್‌ 12 ಜೊತೆಗೆ ಕಳೆದ ತಿಂಗಳು ಬಿಡುಗಡೆಯಾದ ಹೊಸ ಒನ್‌ಪ್ಲಸ್‌ 12R ಈಗ ಮತ್ತೇ ಮುನ್ನೆಲೆಗೆ ಬಂದಿದೆ. ಕಾರಣ ಅದರ 256GB ವೇರಿಯಂಟ್‌. ಈ ಮೂಲಕ ಯಾರೆಲ್ಲಾ 256GB ವೇರಿಯಂಟ್‌ ಫೋನ್‌ ಅನ್ನು ಖರೀದಿ ಮಾಡುತ್ತಾರೋ ಅವರ ಹಣವನ್ನು ಹಿಂತಿರುಗಿಸಲು ಕಂಪೆನಿ ಮುಂದಾಗಿದೆ.

ಒನ್‌ಪ್ಲಸ್‌ 12R ಫೋನ್ ಅನ್ನು ಲಾಂಚ್‌ ಮಾಡುವಾಗ, ಕಂಪೆನಿಯು UFS 4.0 ಸ್ಟೋರೇಜ್ ಪ್ರಕಾರವನ್ನು ನೀಡಲಾಗುತ್ತದೆ ಎಂದು ಹೇಳಿತ್ತು. ಹಾಗೆಯೇ UFS 3.1 ಶೇಖರಣಾ ಪ್ರಕಾರವು ಮೂಲ ವೇರಿಯಂಟ್‌ನಲ್ಲಿ ಲಭ್ಯ ಇರಲಿದೆ ಎಂದು ತಿಳಿಸಲಾಗಿತ್ತು. ಆದರೆ, ಈಗ ಕಂಪನಿಯು ಹೈಎಂಡ್‌ ವೇರಿಯಂಟ್‌ ಅನ್ನು UFS 3.1 ಸ್ಟೋರೇಜ್‌ ಪ್ರಕಾರದಲ್ಲೇ ನೀಡುವ ಬಗ್ಗೆ ಮಾಹಿತಿ ನೀಡಿದೆ. ಪರಿಣಾಮ ಯಾರೆಲ್ಲಾ ಬಳಕೆದಾರರು ಈ ಫೋನ್‌ ಅನ್ನು ಹಿಂತಿರುಗಿಸಲು ಬಯಸಿದರೆ, ಅವರಿಗೆ ಪೂರ್ಣ ಮರುಪಾವತಿಯನ್ನು ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.

ಒನ್‌ಪ್ಲಸ್‌ನ ಈ ಫೋನ್‌ ರಿಟರ್ನ್‌ ಮಾಡಿದ್ರೆ ಪೂರ್ತಿ ಹಣ ವಾಪಸ್‌!

ಈ ಮಾಹಿತಿಯನ್ನು ಕಂಪನಿಯು ಬ್ಲಾಗ್ ಪೋಸ್ಟ್‌ನಲ್ಲಿ ಉಲ್ಲೇಖಿಸಿದೆ. ಆದ್ದರಿಂದ ನೀವು ಈ ಒನ್‌ಪ್ಲಸ್‌ ಫೋನ್‌ನ 256 GB ವೇರಿಯಂಟ್‌ ಅನ್ನು ಖರೀದಿ ಮಾಡಿ ನಿಮಗೆ ಅದನ್ನು ಬಳಕೆ ಮಾಡಲು ಇಷ್ಟ ಇಲ್ಲ ಎಂದಾದರೆ ಅದನ್ನು ವಾಪಸ್‌ ಮಾಡಿ ಪೂರ್ಣ ಹಣವನ್ನು ಮರಳಿ ಪಡೆಯಬಹುದಾಗಿದೆ. ಹಾಗೆಯೇ ಒನ್‌ಪ್ಲಸ್‌ 12R ನಲ್ಲಿ ಪೂರ್ಣ ಮರುಪಾವತಿಯನ್ನು ಪಡೆಯಲು ಕಂಪನಿಯು ಮಾರ್ಚ್ 16 ರ ಗಡುವನ್ನು ನಿಗದಿಪಡಿಸಿದೆ.

ಒನ್‌ಪ್ಲಸ್‌ನ ಮುಖ್ಯಸ್ಥ ಕಿಂಡರ್ ಲಿಯು ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಒನ್‌ಪ್ಲಸ್‌ 12R ನ 256GB ವೇರಿಯಂಟ್‌ ಖರೀದಿಸಿದ್ದರೆ ಮತ್ತು ಅದರ ಫೈಲ್ ಸಿಸ್ಟಮ್ ಬಗ್ಗೆ ಕೆಲವು ಪ್ರಶ್ನೆಗಳನ್ನು ಹೊಂದಿದ್ದರೆ, ನೀವು ಗ್ರಾಹಕ ಸೇವೆಯನ್ನು ಸಂಪರ್ಕಿಸಬಹುದು. ಅವರು ಅದರ ಬಗ್ಗೆ ನಿಮಗೆ ಮಾಹಿತಿ ನೀಡುತ್ತಾರೆ ಮತ್ತು ಮರುಪಾವತಿಯನ್ನು ಸಹ ನೀಡಲಾಗುತ್ತದೆ. ಇದು 16 ಮಾರ್ಚ್ 2024 ರವರೆಗೆ ಮಾತ್ರ ಮಾನ್ಯವಾಗಿರುತ್ತದೆ ಎಂದು ತಿಳಿಸಿದ್ದಾರೆ.

ಒನ್‌ಪ್ಲಸ್‌ನ ಈ ಫೋನ್‌ ರಿಟರ್ನ್‌ ಮಾಡಿದ್ರೆ ಪೂರ್ತಿ ಹಣ ವಾಪಸ್‌!

ಒನ್‌ಪ್ಲಸ್‌ 12R ಸ್ಮಾರ್ಟ್‌ಫೋನ್ ಫೀಚರ್ಸ್‌:
ಈ ಸ್ಮಾರ್ಟ್‌ಫೋನ್ 6.78 ಇಂಚಿನ 1.5K (1,264x2,780 ಪಿಕ್ಸೆಲ್‌ಗಳು) LTPO 4.0 ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 16 GB LPDDR5x RAM ಜೊತೆಗೆ ಸ್ನಾಪ್‌ಡ್ರಾಗನ್ 8 ಜನ್ 2 ಪ್ರೊಸೆಸರ್‌ ಬಲ ಪಡೆದಿದೆ. ಜೊತೆಗೆ ಒನ್‌ಪ್ಲಸ್‌ 12R ಸೋನಿ IMX890 ಸೆನ್ಸರ್‌ ಮತ್ತು f/1.8 ದ್ಯುತಿರಂಧ್ರದೊಂದಿಗೆ 50 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ.

ಇದರೊಂದಿಗೆ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿದ್ದು, ಸೆಲ್ಫಿಗಾಗಿ 16 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಉಳಿದಂತೆ ಈ ಫೋನ್ 5,000 mAh ಸಾಮರ್ಥ್ಯದ ಬ್ಯಾಟರಿಯು 100 W ಸೂಪರ್‌ವೂಕ್‌ ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

Best Mobiles in India

English summary
OnePlus is all set to give a full refund on the 256GB variant of the OnePlus 12R.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+