OnePlus: ಹೊಸ ಒನ್‌ಪ್ಲಸ್ ಫೋನ್ ಇದೀಗ ಹೊಸ ವೇರಿಯಂಟ್‌ನಲ್ಲಿ! ಬೆಲೆ ಎಷ್ಟು?
ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳಿಗೆ (OnePlus smartphone) ವಿಶೇಷವಾದ ಬೇಡಿಕೆ ಇದ್ದು, ಕೆಲವೇ ದಿನಗಳ ಹಿಂದೆ ಲಾಂಚ್ ಮಾಡಲಾಗಿದ್ದ ಒನ್‌ಪ್ಲಸ್ 12R ಸ್ಮಾರ್ಟ್‌ಫೋನ್ (OnePlus 12R smartphone) ಇದೀಗ ಮತ್ತೊಂದು ಹೊಸ ವೇರಿಯಂಟ್‌ನಲ್ಲಿ ಲಭ್ಯ ಇದೆ. ಈ ಫೋನ್ ಖರೀದಿ ಬೇಳೆ ಒನ್‌ಪ್ಲಸ್ ಬಡ್ಸ್ ಅನ್ನೂ ಉಚಿತವಾಗಿ ಪಡೆಯಬಹುದಾಗಿದೆ.
ಹೌದು, ಒನ್‌ಪ್ಲಸ್ 12R ಸ್ಮಾರ್ಟ್‌ಫೋನ್ ಅನ್ನು ಇದೀಗ ಮತ್ತೊಂದು ವೇರಿಯಂಟ್‌ನಲ್ಲಿ ಪರಿಚಯಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಖರೀದಿ ವೇಳೆ ಗ್ರಾಹಕರು ಆಫರ್ ಸಹ ಪಡೆಯಬಹುದಾಗಿದೆ. ಈ ವಿಶೇಷ ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8 ಜನ್ 2 ಪ್ರೊಸೆಸರ್ ಬಲ ಪಡೆದುಕೊಂಡಿದೆ. ಹಾಗಿದ್ರೆ, ಇದರ ಬೆಲೆ ಎಷ್ಟು?, ಏನೆಲ್ಲಾ ಆಫರ್ ಇದೆ?, ಫೀಚರ್ಸ್ ಏನು ಅನ್ನೋ ಮಾಹಿತಿಯನ್ನು ಇಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಹೊಸ ವೇರಿಯಂಟ್‌ನಲ್ಲಿ ಒನ್‌ಪ್ಲಸ್ 12R ಸ್ಮಾರ್ಟ್‌ಫೋನ್: ಈ ಸ್ಮಾರ್ಟ್‌ಫೋನ್ ಇದೀಗ 8 GB RAM ಮತ್ತು 256 GB ಇಂಟರ್ ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯ ಇದೆ. ಈವರೆಗೂ ಒನ್‌ಪ್ಲಸ್ 12R 8 ಸ್ನಾರ್ಟ್ಫೋನ್ 8 GB RAM ಮತ್ತು 128 GB ಇಂಟರ್ ಸ್ಟೋರೇಜ್ ಹಾಗೂ 16 GB RAM ಮತ್ತು 256 GB ಇಂಟರ್ ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯ ಇತ್ತು.
ಒನ್‌ಪ್ಲಸ್ 12R ಫೀಚರ್ಸ್: ಈ ಸ್ಮಾರ್ಟ್‌ಫೋನ್ ಉತ್ತಮ ರೆಸಲ್ಯೂಶನ್‌ನೊಂದಿಗೆ 6.78 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಕಾರ್ನಿಂಗ್ ಗೊರಿಲ್ಲ ಗ್ಲಾಸ್ ರಕ್ಷಣೆ ಪಡೆದುಕೊಂಡಿದೆ. ಇದರ ಜೊತೆಗೆ ಈ ಫೋನ್ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಅನ್ನು ರನ್ ಮಾಡಲಿದ್ದು, ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8 ಜನ್ 2 ಪ್ರೊಸೆಸರ್ ಬಲದಲ್ಲಿ ಕಾರ್ಯನಿರ್ವಹಿಸಲಿದೆ.
ಹಾಗೆಯೇ ಈ ಫೋನ್‌ನ ಕ್ಯಾಮೆರಾ ವಿಚಾರಕ್ಕೆ ಬಂದರೆ 50 ಮೆಗಾಪಿಕ್ಸೆಲ್ ಮುಖ್ಯ ಸೆನ್ಸರ್, 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 16 ಮೆಗಾಪಿಕ್ಸೆಲ್ ಸೆನ್ಸರ್ ಆಯ್ಕೆ ಪಡೆದಿದೆ. ಉಳಿದಂತೆ ಈ ಫೋನ್ ಸೂಪರ್ ವೂಕ್ 100W ತಂತ್ರಜ್ಞಾನದೊಂದಿಗೆ ಕ್ಷಿಪ್ರ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಕನೆಕ್ಟಿವಿಟಿ ಬಗ್ಗೆ ಹೇಳುವುದಾದರೆ 5G, 4G, ವೈ-ಫೈ, ಬ್ಲೂಟೂತ್, ಜಿಪಿಎಸ್, ಎನ್‌ಎಫ್‌ಸಿ ಬೆಂಬಲ ಪಡೆದಿದ್ದು, ಇದು ಯುಎಸ್‌ಬಿ ಟೈಪ್-ಸಿ ಪೋರ್ಟ್, ಭದ್ರತೆಗಾಗಿ ಇನ್-ಸ್ಕ್ರೀನ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಹಾಗೂ ಲೈಟ್, ಅಕ್ಸೆಲೆರೊಮೀಟರ್ ಮತ್ತು ಗೈರೊಸ್ಕೋಪ್ ಸೇರಿದಂತೆ ಹಲವಾರು ಸೆನ್ಸರ್ ಅನ್ನು ಈ ಫೋನ್ ಪಡೆದಿದೆ. ಈ ಮೂಲಕ ಇದರಲ್ಲಿ ಬಳಕೆದಾರರು ಪ್ರೀಮಿಯಂ ಅನುಭವ ಪಡೆಯಬಹುದಾಗಿದೆ. ಜೊತೆಗೆ ಫೋನ್ ಬ್ಲ್ಯಾಕ್, ಐರನ್ ಗ್ರೇ ಅಥವಾ ಕೂಲ್ ಬ್ಲೂ ಬಣ್ಣದ ಆಯ್ಕೆಯಲ್ಲಿ ಈ ಫೋನ್ ಲಭ್ಯವಿದೆ.
ಒನ್‌ಪ್ಲಸ್ 12R ಸ್ಮಾರ್ಟ್‌ಫೋನ್ ಬೆಲೆ ಹಾಗೂ ಆಫರ್ ಮಾಹಿತಿ: ಇನ್ನು ಈ ಹೊಸ ವೇರಿಯಂಟ್ ಫೋನ್‌ನ ಬೆಲೆ ಬಗ್ಗೆ ತಿಳಿಸುವುದಾದರೆ ಈ ಫೋನ್ 42,999ರೂ.ಗಳ ಬೆಲೆ ಹೊಂದಿದ್ದು, ಇಂದಿನಿಂದ ಒನ್‌ಪ್ಲಸ್, ಅಮೆಜಾನ್ ಸೇರಿದಂತೆ ಪ್ರಮುಖ ಸ್ಟೋರ್‌ಗಳ ಮೂಲಕ ಖರೀದಿ ಮಾಡಬಹುದಾಗಿದೆ. ಅಲ್ಲದೆ ಈ ವಿಶೇಷ ವೇರಿಯಂಟ್‌ಗೆ ಆಫರ್ ಅನ್ನೂ ನೀಡಲಾಗಿದೆ.
ಒನ್‌ಪ್ಲಸ್ 12R ನ ಈ ಹೊಸ ವೇರಿಯಂಟ್ ಖರೀದಿ ಮಾಡಲು ಮುಂದಾದರೆ ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು OneCard ಅನ್ನು ಬಳಕೆ ಮಾಡಿಕೊಳ್ಳಿ. ಯಾಕೆಂದರೆ ಈ ಮೂಲಕ 1,000 ರೂಪಾಯಿಗಳ ತ್ವರಿತ ಬ್ಯಾಂಕ್ ರಿಯಾಯಿತಿಯನ್ನು ಪಡೆಯಬಹುದು. ಅಲ್ಲದೆ ಖರೀದಿಯ ಮೇಲೆ 3,000 ರೂಪಾಯಿಗಳ ವಿನಿಮಯ ಬೋನಸ್ ಪ್ರಯೋಜನವನ್ನೂ ಸಹ ನೀಡಗುತ್ತದೆ. ಈ ಮೂಲಕ 4,000 ರೂಪಾಯಿಗಳ ಪರಿಣಾಮಕಾರಿ ರಿಯಾಯಿತಿ ಪಡೆಯಬಹುದು.

ಇದರೊಂದಿಗೆ ಒನ್‌ಪ್ಲಸ್ ನಾರ್ಡ್ ಸ್ಮಾರ್ಟ್‌ಫೋನ್‌ನಿಂದ ಅಪ್‌ಗ್ರೇಡ್ ಮಾಡಲು ಬಯಸುವವರು 1,000 ರೂಪಾಯಿಗಳ ಹೆಚ್ಚುವರಿ ವಿನಿಮಯ ಬೋನಸ್ ಅನ್ನು ಸಹ ಪಡೆಯಲಿದ್ದಾರೆ. ಅಲ್ಲದೆ ಸೀಮಿತ ಅವಧಿಯ ಕೊಡುಗೆಯಾಗಿ ಈ ಫೋನ್ ಖರೀದಿ ಮಾಡುವಾಗ ಆಯ್ದ ಗ್ರಾಹಕರು 4,999ರೂ.ಗಳ ಮೌಲ್ಯದ ಒನ್‌ಪ್ಲಸ್ ಬಡ್ಸ್ Z2 ಅನ್ನು ಉಚಿತವಾಗಿ ಪಡೆಯಬಹುದಾಗಿದೆ.
ಒಟ್ಟಾರೆ ಇಷ್ಟು ಹಣ ನೀಡಿ ಈ ಫೋನ್ ಖರೀದಿ ಮಾಡಲು ಆಗುವುದಿಲ್ಲ ಎಂದರೂ ಚಿಂತೆ ಬೇಡ. ಯಾಕೆಂದರೆ ಇಎಂಐ ಆಯ್ಕೆ ಸಹ ಇದೆ. ಈ ಫೋನ್ ಖರೀದಿ ಮಾಡುವಾಗ ಪ್ರಮುಖ ಬ್ಯಾಂಕ್‌ಗಳ ಮೂಲಕ 9 ತಿಂಗಳ ನೋ-ಕಾಸ್ಟ್ ಇಎಂಐ ಆಯ್ಕೆ ಮಾಡಿಕೊಳ್ಳಬಹುದು. ಇದರ ಜೊತೆಗೆ ಜಿಯೋ ಪ್ರಯೋಜನಗಳು ಸಹ ಲಭ್ಯವಿದ್ದು, 15 ತಿಂಗಳವರೆಗೆ ತಿಂಗಳಿಗೆ 150 ರೂ.ಗಳ ರಿಯಾಯಿತಿಯನ್ನು ಪಡೆಯಬಹುದಾಗಿದೆ.


Click it and Unblock the Notifications








