Home
ಸುದ್ದಿಜಾಲ

OnePlus: ಒನ್‌ಪ್ಲಸ್‌ 12R ಸ್ಮಾರ್ಟ್‌ಫೋನ್‌ನ ಬ್ಯಾಟರಿ, ಡಿಸ್‌ಪ್ಲೇ ಬಗ್ಗೆ ಹೊರಬಿತ್ತು ಅಧಿಕೃತ ಮಾಹಿತಿ! ವಾವ್‌ ಅಂತೀರಾ...

ಒನ್‌ಪ್ಲಸ್‌ಗೆ (OnePlus) ಸ್ಮಾರ್ಟ್‌ಫೋನ್‌ಗೆ ಭರ್ಜರಿ ಕ್ರೇಜ್‌ ಇದೆ. ಯಾವುದೇ ಹೊಸ ಒನ್‌ಪ್ಲಸ್‌ ಫೋನ್‌ ಮಾರುಕಟ್ಟೆಗೆ ಎಂಟ್ರಿ ಕೊಟ್ಟರೆ ಸಂಚಲನ ಉಂಟಾಗುವುದಂತೂ ಪಕ್ಕಾ. ಈ ನಡುವೆ ಲಾಂಚ್‌ ಆಗುವ ಮುನ್ನವೇ ಒನ್‌ಪ್ಲಸ್‌ 12R ಸ್ಮಾರ್ಟ್‌ಫೋನ್‌ (OnePlus 12R smartphone) ಬಗ್ಗೆ ಗ್ರಾಹಕರಲ್ಲಿ ಬಹಳ ಕುತೂಹಲ ಉಂಟಾಗಿದೆ. ಈ ಬೆಳವಣಿಗೆ ನಡುವೆ ಈ ಫೋನ್‌ ಬಗ್ಗೆ ಕೆಲವು ಮಾಹಿತಿ ಅಧಿಕೃತವಾಗಿವೆ.

ಹೌದು, ಒನ್‌ಪ್ಲಸ್‌ 12R ಸ್ಮಾರ್ಟ್‌ಫೋನ್‌ ಅನಾವರಣದ ಬಗ್ಗೆ ನಿತ್ಯವೂ ಒಂದಲ್ಲಾ ಒಂದು ವರದಿಗಳು ಪ್ರಕಟ ಆಗುತ್ತಲೇ ಇವೆ. ಆದರೆ ಈ ಎಲ್ಲಾ ವರದಿಗಳು ಲೀಕ್‌ ಮಾಹಿತಿ ಆಧರಿಸಿದ್ದವು. ಆದರೆ ಇದೀಗ ಅಧಿಕೃತವಾಗಿ ಈ ಪೊನ್‌ನ ಬ್ಯಾಟರಿ ಹಾಗೂ ಡಿಸ್‌ಪ್ಲೇ ಸಂಬಂಧ ಮಾಹಿತಿ ತಿಳಿದುಬಂದಿದೆ. ಈ ಮೂಲಕ ಗ್ರಾಹಕರಲ್ಲಿ ಇದ್ದ ಕಾತುರ ಇನ್ನಷ್ಟು ಹೆಚ್ಚಾಗುವಂತೆ ಆಗಿದೆ. ಹಾಗಿದ್ರೆ, ಈ ಫೋನ್‌ನ ಡಿಸ್‌ಪ್ಲೇ ಮಾಹಿತಿ ಹಾಗೂ ಬ್ಯಾಟರಿ ವಿವರ ಇಲ್ಲಿದೆ ನೋಡಿ.

ಒನ್‌ಪ್ಲಸ್‌ 12R ಫೋನ್‌ನ ಬ್ಯಾಟರಿ, ಡಿಸ್‌ಪ್ಲೇ ಬಗ್ಗೆ ಹೊರಬಿತ್ತು ಅಧಿಕೃತ ಮಾಹಿತಿ

ಒನ್‌ಪ್ಲಸ್‌ 12R ಸ್ಮಾರ್ಟ್‌ಫೋನ್‌: ಈ ಸ್ಮಾರ್ಟ್‌ಫೋನ್‌ ಅನ್ನು ಈ ತಿಂಗಳ ಅಂತ್ಯದಲ್ಲಿ ಅಂದರೆ ಜನವರಿ 23 ರಂದು ಭಾರತದಲ್ಲಿ ಲಾಂಚ್‌ ಮಾಡುವ ಬಗ್ಗೆ ಅಧಿಕೃತ ಮಾಹಿತಿ ತಿಳಿದುಬಂದಿದೆ. ಈ ನಡುವೆ ನಾಳೆ ಒನ್‌ಪ್ಲಸ್‌ನ 12R ಚೀನಾದಲ್ಲಿ ಲಾಂಚ್‌ ಆಗಲಿದೆ. ಈಗಾಗಲೇ ಈ ಫೋನ್‌ ಅನಾವರಣಕ್ಕೆ ಎಲ್ಲಾ ರೀತಿಯ ಸಿದ್ಧತೆ ನಡೆದಿದೆ. ಈ ಬೆಳವಣಿಗೆ ನಡುವೆ ಒನ್‌ಪ್ಲಸ್‌ ಅಧಿಕೃತವಾಗಿ ಡಿಸ್‌ಪ್ಲೇ ಸಂಬಂಧ ಮಾಹಿತಿ ಹೊರಹಾಕಿದೆ.

ಒನ್‌ಪ್ಲಸ್‌ ತನ್ನ ಒನ್‌ಪ್ಲಸ್‌ 12R ನಾಲ್ಕನೇ ತಲೆಮಾರಿನ LTPO 120Hz ProXDR ಡಿಸ್‌ಪ್ಲೇಯೊಂದಿಗೆ ಬರಲಿದೆ ಎಂದು ಬಹಿರಂಗಪಡಿಸಿದೆ. ಅದಾಗ್ಯೂ ಕಂಪನಿಯು ಡಿಸ್‌ಪ್ಲೇ ಗಾತ್ರವನ್ನು ದೃಢೀಕರಿಸಿಲ್ಲ. ಆದರೆ ಸೋರಿಕೆ ಮಾಹಿತಿ ಪ್ರಕಾರ ಒನ್‌ಪ್ಲಸ್‌ 12R 6.78 ಇಂಚಿನ ಡಿಸ್‌ಪ್ಲೇ ಹೊಂದಿರಲಿದೆ ಎಂಬ ಮಾಹಿತಿ ಇದೆ. ಇನ್ನು ಈ LTPO ಡಿಸ್‌ಪ್ಲೇ ಬ್ಯಾಟರಿ ಅವಧಿಯನ್ನು ಉಳಿಸುವ ಕೆಲಸ ಮಾಡುತ್ತದೆ. ಅಂದರೆ ಡಿಸ್‌ಪ್ಲೇ ಆಟೋಮ್ಯಾಟಿಕ್‌ ಆಗಿ ರಿಫ್ರೆಶ್ ರೇಟ್‌ ಅನ್ನು ಸೆಟ್‌ ಮಾಡಿಕೊಳ್ಳುವ ಕೆಲಸ ಮಾಡುತ್ತದೆ.

ಒನ್‌ಪ್ಲಸ್‌ 12R ಫೋನ್‌ನ ಬ್ಯಾಟರಿ, ಡಿಸ್‌ಪ್ಲೇ ಬಗ್ಗೆ ಹೊರಬಿತ್ತು ಅಧಿಕೃತ ಮಾಹಿತಿ

ಅದಾಗ್ಯೂ ಈ ಫೋನ್‌ನಲ್ಲಿ ರಿಫ್ರೆಶ್ ರೇಟ್‌ ಎಷ್ಟು ಇರಲಿದೆ ಎಂಬ ಬಗ್ಗೆ ಮಾಹಿತಿ ಬಹಿರಂಗಪಡಿಸಿಲ್ಲ. ಇದರೊಂದಿಗೆ ಯಾವುದೇ ಒನ್‌ಪ್ಲಸ್‌ ಫೋನ್‌ನಲ್ಲಿ ನೋಡಿರದ ಅತಿದೊಡ್ಡ ಬ್ಯಾಟರಿಯನ್ನು ಈ ಫೋನ್‌ನಲ್ಲಿ ಕಾಣಬಹುದು ಎಂದು ಒನ್‌ಪ್ಲಸ್‌ ಘೋಷಿಸಿದೆ. ಅಂದರೆ ಈ ಫೋನ್ 5,500mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿರಲಿದೆ ಎಂದು ತಿಳಿದುಬಂದಿದೆ. ಉಳಿದಂತೆ ಇತರೆ ಮಾಹಿತಿಗಳು ಜನವರಿ 23 ರಂದು ಬಹಿರಂಗಗೊಳ್ಳಲಿದೆ.

ಈ ನಡುವೆ ನಾವು ಲೀಕ್‌ ಆದ ಮಾಹಿತಿಗಳನ್ನು ಗಮನಿಸುವುದಾದರೆ ಒನ್‌ಪ್ಲಸ್‌ ಏಸ್ 3 (OnePlus Ace 3) ಫೋನ್‌ ಒನ್‌ಪ್ಲಸ್‌ 12R ಆಗಿರಲಿದೆ ಎನ್ನಲಾಗಿದೆ. ಈ ಫೋನ್ 6.78 ಇಂಚಿನ ಡಿಸ್‌ಪ್ಲೇ ಹೊಂದಿರಲಿದ್ದು, 1Hz ನಿಂದ 120Hz ವರೆಗಿನ ರಿಫ್ರೆಶ್‌ ರೇಟ್‌ ಆಯ್ಕೆ ಪಡೆದಿರಲಿದೆ ಎನ್ನಲಾಗಿದ್ದು, ಇದು ಕರ್ವ್ಡ ಡಿಪ್ಲೇ ಆಗಿರಲಿದೆ ಎಂದು ಹೇಳಲಾಗಿದೆ. ಇದರೊಂದಿಗೆ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ನಿಂದ ಈ ಡಿಸ್‌ಪ್ಲೇ ರಕ್ಷಣೆ ಪಡೆಯಲಿದೆ ಎಂದೂ ಸಹ ಉಲ್ಲೇಖ ಮಾಡಲಾಗಿದೆ.

ಇದರೊಂದಿಗೆ ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8 ಜನ್‌ 2 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಈ ಚಿಪ್‌ಸೆಟ್ ಅನ್ನು 16GB LPDDR5X RAM ಮತ್ತು 256GB UFS 4.0 ಸ್ಟೋರೇಜ್‌ನೊಂದಿಗೆ ಜೋಡಿಸಬಹುದು ಎಂದು ಹೇಳಲಾಗಿದೆ. ಜೊತೆಗೆ ಕ್ಯಾಮೆರಾ ವಿಚಾರದಲ್ಲೂ ಈ ಫೋನ್‌ ಅತ್ಯುತ್ತಮ ಫೀಚರ್ಸ್‌ ಪಡೆದಿರಲಿದೆ ಎನ್ನಲಾಗಿದ್ದು, ಟ್ರಿಪಲ್ ರಿಯರ್‌ ಕ್ಯಾಮೆರಾ ರಚನೆಯನ್ನು ಈ ಫೋನ್‌ನಲ್ಲಿ ಕಾಣಬಹುದಂತೆ.

ಒನ್‌ಪ್ಲಸ್‌ 12R ಫೋನ್‌ನ ಬ್ಯಾಟರಿ, ಡಿಸ್‌ಪ್ಲೇ ಬಗ್ಗೆ ಹೊರಬಿತ್ತು ಅಧಿಕೃತ ಮಾಹಿತಿ

ಅಂದರೆ 50 ಮೆಗಾಪಿಕ್ಸೆಲ್ ಸೋನಿ IMX890 ಸೆನ್ಸರ್‌, 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಆಂಗಲ್ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್‌ ಅನ್ನು ಈ ಫೋನ್‌ ಹೊಂದಿರಲಿದೆ ಎನ್ನಲಾಗಿದ್ದು, ಈ ಫೋನ್ ಗೋಲ್ಡ್, ಐರನ್ ಗ್ರೇ ಮತ್ತು ಕೂಲ್ ಬ್ಲೂ ಬಣ್ಣ ಆಯ್ಕೆಗಳಲ್ಲಿ ಕಾಣಿಸಿಕೊಳ್ಳಲಿದೆ ಎಂದು ಕೆಲವು ವರದಿಗಳಿಂದ ತಿಳಿದುಬಂದಿದೆ. ಈ ಮೂಲಕ ಒನ್‌ಪ್ಲಸ್‌ ಪ್ರಿಯರು ಈ ಫೋನ್‌ನಲ್ಲಿ ವಿಶೇಷ ಅನುಭವ ಪಡೆಯಬಹುದಾಗಿದೆ.

Best Mobiles in India

English summary
OnePlus 12R smartphone will be launch soon in india. Accordingly, now the battery and display details of this phone have been officially revealed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+