ಅಬ್ಬರಿಸಲು ಬರ್ತಿದೆ OnePlus 13 ಫೋನ್; 6000mAh ಬ್ಯಾಟರಿ, 50MP ಕ್ಯಾಮೆರಾ ಫಿಕ್ಸ್!
ಒನ್‌ಪ್ಲಸ್ ಕಂಪನಿಯು ತನ್ನ ಪ್ರಮುಖ ಸರಣಿಯಲ್ಲಿ ಹೊಸ ಮೊಬೈಲ್ ಬಿಡುಗಡೆ ಮಾಡಲು ಸಜ್ಜಾಗಿದೆ. ಅದುವೇ, ಒನ್‌ಪ್ಲಸ್ 13 (OnePlus 13) ಸ್ಮಾರ್ಟ್‌ಫೋನ್. ಈ ಬಗ್ಗೆ ಅಧಿಕೃತ ಪ್ರಕಟಣೆಯೊಂದೇ ಬಾಕಿ ಉಳಿದಿದೆ. ಇತ್ತ, ಹೊಸ ಫೋನಿನ ಪ್ರಮುಖ ವೈಶಿಷ್ಟ್ಯಗಳು ಒಂದೊಂದಾಗಿ ಬಹಿರಂಗಗೊಳ್ಳುತ್ತಿವೆ. ಅಕ್ಟೋಬರ್ ಅಂತ್ಯದಲ್ಲಿ ಅಥವಾ ನವೆಂಬರ್ ಆರಂಭದಲ್ಲಿ ಈ ಹೊಸ ಫೋನ್ ಮಾರುಕಟ್ಟೆಗೆ ಲಗ್ಗೆ ಇಡುವುದು ಪಕ್ಕಾ ಆಗಿದೆ. ಬನ್ನಿ, ಹೊಸ ಒನ್‌ಪ್ಲಸ್ 13 ಫೋನಿನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.
ಒನ್‌ಪ್ಲಸ್ ಯಾವಾಗಲೂ ಉತ್ತಮ ಗುಣಮಟ್ಟದ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತದೆ. ಹೀಗಾಗಿ, ಗ್ರಾಹಕರು ಒನ್‌ಪ್ಲಸ್ ಕಂಪನಿಯ ಫೋನ್‌ಗಳನ್ನು ಹೆಚ್ಚು ಇಷ್ಟಪಟ್ಟು ಖರೀದಿಸುತ್ತಾರೆ. ಈ ಸಾಲಿಗೆ ಒನ್‌ಪ್ಲಸ್ 13 ಕೂಡ ಸೇರಲಿದೆ. ಈ ಹೊಸ ಮೊಬೈಲ್ 6000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಮತ್ತು 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾದೊಂದಿಗೆ ಭಾರತಕ್ಕೆ ಎಂಟ್ರಿ ಕೊಡಲಿದೆ. ಹೊಸ ಒನ್‌ಪ್ಲಸ್ ಬೆಲೆಯು ಈ ಹಿಂದೆ ಬಿಡುಗಡೆಯಾಗಿರುವ ಒನ್‌ಪ್ಲಸ್ 12 ಫೋನಿನಂತೆಯೇ ಇರಲಿದೆ.

ಒನ್‌ಪ್ಲಸ್ 13 ಫೋನಿನ ವೈಶಿಷ್ಟ್ಯಗಳು (ನಿರೀಕ್ಷಿತ)
ಬಿಡುಗಡೆ ದಿನಾಂಕ ಘೋಷಣೆಗೂ ಮೊದಲೇ, ಒನ್‌ಪ್ಲಸ್ 13 ಮೊಬೈಲ್‌ನ ಫೀಚರ್ಸ್‌ಗಳು ಸೋರಿಕೆಯಾಗಿವೆ. ವರದಿಯ ಪ್ರಕಾರ, ಇದು 6.7 ಇಂಚಿನ ಮೈಕ್ರೋ-ಕರ್ವ್ಡ್ ಡಿಸ್ಪ್ಲೇಯನ್ನು ಹೊಂದಿರಲಿದೆ. ಈ ಫೋನ್ 1440 x 3168 ಪಿಕ್ಸೆಲ್ 2K ರೆಸಲ್ಯೂಶನ್, 120Hz ರಿಫ್ರೆಶ್ ರೇಟ್ ಮತ್ತು ಅಲ್ಟ್ರಾಸಾನಿಕ್ ಇನ್-ಸ್ಕ್ರೀನ್ ಫಿಂಗರ್‌ಪ್ರಿಂಟ್ ಸಂವೇದಕ, LTPO ತಂತ್ರಜ್ಞಾನ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ.
ಮುಂಬರುವ ಒನ್‌ಪ್ಲಸ್ 13 ಸ್ಮಾರ್ಟ್‌ಫೋನ್ Qualcomm Snapdragon 8 Gen 4 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡಲಿದೆ. ಇದರಲ್ಲಿ O916T ಹ್ಯಾಪ್ಟಿಕ್ ಮೋಟಾರ್ ಅನ್ನು ಕಾಣಬಹುದು. ಈ ಮೊಬೈಲ್ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಅಲ್ಟ್ರಾಸಾನಿಕ್ ಇನ್-ಸ್ಕ್ರೀನ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಸಹ ಹೊಂದಿರಲಿದೆ.
ಈ ಸುದ್ದಿ ಓದಿದ್ದೀರಾ?: ಬಂದೇ ಬಿಡ್ತು ಹೊಸ Realme 13 5G ಫೋನ್; ಕಡಿಮೆ ಬೆಲೆ.. ಅಬ್ಬರ ಶುರು!
50MP ಮುಖ್ಯ ಕ್ಯಾಮೆರಾ, 32MP ಸೆಲ್ಫಿ ಶೂಟರ್
ಕಂಪನಿಯು ಒನ್‌ಪ್ಲಸ್ 13 ಫೋನನ್ನು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬಿಡುಗಡೆ ಮಾಡಲಿದೆ. ಇದು ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್‌ನೊಂದಿಗೆ ಮಲ್ಟಿ-ಫೋಕಲ್ ಕ್ಯಾಮೆರಾ ಸಿಸ್ಟಮ್‌ನೊಂದಿಗೆ ಬರಲಿದೆ. 50 ಮೆಗಾಪಿಕ್ಸೆಲ್ Sony LYT-808 ಮುಖ್ಯ ಕ್ಯಾಮೆರಾ, 50 ಮೆಗಾಪಿಕ್ಸೆಲ್ ಸೋನಿ IMX882 ಅಲ್ಟ್ರಾವೈಡ್ ಮತ್ತು 50 ಮೆಗಾಪಿಕ್ಸೆಲ್ IMX882 ಕ್ಯಾಮೆರಾ ಲೆನ್ಸ್ ಇರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, 32 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿರಲಿದೆ. ಇದಲ್ಲದೆ, ಫೋನ್ ಎಲ್ಇಡಿ ಫ್ಲ್ಯಾಷ್ ಮತ್ತು ವಿವಿಧ ಕ್ಯಾಮೆರಾ ವೈಶಿಷ್ಟ್ಯಗಳನ್ನು ಹೊಂದಿರಲಿದೆ.

6000mAh ಬ್ಯಾಟರಿ, 100W ವೈರ್ಡ್ ಚಾರ್ಜಿಂಗ್
ಒನ್‌ಪ್ಲಸ್ 13 ಮೊಬೈಲ್ OnePlus 12 ಫೋನಿಗಿಂತ ದೊಡ್ಡ ಬ್ಯಾಟರಿಯನ್ನು ಹೊಂದಿರಲಿದೆ. ಇದು 6000mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದಿರಲಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 100W ವೈರ್ಡ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಒದಗಿಸಲಾಗುತ್ತದೆ. ಈ ಫೋನ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68/69 ರೇಟಿಂಗ್ ಪಡೆಯಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಯುಎಸ್‌ಬಿ ಟೈಪ್-ಸಿ ಪೋರ್ಟ್, ವೈ-ಫೈ, ಜಿಪಿಎಸ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಲಿದೆ.
ಒನ್‌ಪ್ಲಸ್ 13 ಫೋನಿನ ಬೆಲೆ ಎಷ್ಟಿರಲಿದೆ?
ವರದಿಯ ಪ್ರಕಾರ, ಒನ್‌ಪ್ಲಸ್ 13 ಫೋನಿನ ಬೆಲೆ ಸ್ವಲ್ಪ ಹೆಚ್ಚಿರಬಹುದು. ಆದರೆ, ಕಂಪನಿಯು ಬೆಲೆಯ ಬಗ್ಗೆ ಇನ್ನೂ ನಿಖರವಾದ ಮಾಹಿತಿ ಪ್ರಕಟಿಸಿಲ್ಲ. ಈ ಫೋನ್ ಬೆಲೆಗೆ ತಕ್ಕಂತೆ ಯೋಗ್ಯವಾದ ಫೀಚರ್ಸ್‌ಗಳನ್ನು ಹೊಂದಿರಲಿದೆ. ಇನ್ನೂ, ಒನ್‌ಪ್ಲಸ್ 12 ಫೋನನ್ನು ಭಾರತದಲ್ಲಿ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. 12GB+256GB ಮತ್ತು 16GB+512GB ರೂಪಾಂತರವು ಕ್ರಮವಾಗಿ 64,999 ರೂ. ಮತ್ತು 69,999 ರೂ. ಬೆಲೆ ಹೊಂದಿದೆ.


Click it and Unblock the Notifications








