ಇಂದು ಒನ್‌ಪ್ಲಸ್ 13 ಮೊಬೈಲ್ ಸರಣಿ ಬಿಡುಗಡೆ; ಸಖತ್ ಫೀಚರ್ಸ್, ಬೆಲೆ ಎಷ್ಟು?
ಒನ್‌ಪ್ಲಸ್ ಸಂಸ್ಥೆಯ ಬಹುನಿರೀಕ್ಷಿತ ಒನ್‌ಪ್ಲಸ್ 13 ಸರಣಿ (OnePlus 13 Series) ಇಂದು ಬಿಡುಗಡೆ ಆಗಲಿದೆ. ಈ ಸರಣಿಯು ಒನ್‌ಪ್ಲಸ್ 13, ಒನ್‌ಪ್ಲಸ್ 13R ಹಾಗೂ ಒನ್‌ಪ್ಲಸ್ ಬಡ್ಸ್ ಪ್ರೊ 3 ಇಯರ್‌ಬಡ್ಸ್ ಡಿವೈಸ್ ಅನ್ನು ಒಳಗೊಂಡಿದೆ. ಈ ಸರಣಿಯ ಕೆಲವು ಲೀಕ್ ಫೀಚರ್ಸ್ ಗ್ರಾಹಕರಲ್ಲಿ ಸಾಕಷ್ಟು ನಿರೀಕ್ಷೆಗಳುನ್ನು ಹುಟ್ಟುಹಾಕಿವೆ. ಅಂದಹಾಗೆ ಈ ಸರಣಿಯು ಒನ್‌ಪ್ಲಸ್ 12 ಸರಣಿಯ ಉತ್ತರಾಧಿಕಾರಿ ಆಗಿದೆ.
ಹೌದು, ಒನ್‌ಪ್ಲಸ್ ಕಂಪನಿಯ ಒನ್‌ಪ್ಲಸ್ 13, ಒನ್‌ಪ್ಲಸ್ 13R ಹಾಗೂ ಒನ್‌ಪ್ಲಸ್ ಬಡ್ಸ್ ಪ್ರೊ 3 ಡಿವೈಸ್‌ಗಳು ಇಂದು (ಜ 7) ಅಧಿಕೃತವಾಗಿ ಭಾರತದಲ್ಲಿ ಬಿಡುಗಡೆ ಆಗಲಿದೆ. ಈ ಸ್ಮಾರ್ಟ್‌ಫೋನ್ ಒನ್‌ಪ್ಲಸ್ ನಾರ್ಡ್ 3 ಫೋನಿನ ಉತ್ತರಾಧಿಕಾರಿ ಆಗಿದ್ದು, ಕೆಲವು ಅಪ್‌ಡೇಟ್ ಫೀಚರ್ಸ್‌ಗಳೊಂದಿಗೆ ಎಂಟ್ರಿ ಕೊಡಲಿದೆ. ಇನ್ನು ಈ ಫೋನ್ ಲಾಂಚ್ ಕಾರ್ಯಕ್ರಮವು (ಜನವರಿ 7 ರಂದು, 9PM ಗಂಟೆಗೆ) ರಂದು ಭಾರತೀಯ ಕಾಲಮಾನ ರಾತ್ರಿ 9 ಗಂಟೆಗೆ ಶುರು ಆಗಲಿದೆ.

ಲೀಕ್ ಮಾಹಿತಿಗಳ ಪ್ರಕಾರ ಒನ್‌ಪ್ಲಸ್ 13R ಫೋನ್ 6,000mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿರಲಿದ್ದು, ಜೊತೆಗೆ ಸ್ಕ್ರೀನ್ 120Hz ರಿಫ್ರೆಶ್ ರೇಟ್ ಸೌಲಭ್ಯ ಹೊಂದಿರಲಿದೆ ಎಂದು ತಿಳಿದುಬಂದಿದೆ. ಇನ್ನು ಒನ್‌ಪ್ಲಸ್ 13 ಫೋನ್ ನೂತನ ಸ್ನ್ಯಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಪಡೆದಿರಲಿದೆ. ಇನ್ನುಳಿದಂತೆ ಒನ್‌ಪ್ಲಸ್ 13R ಸ್ಮಾರ್ಟ್‌ಫೋನಿನ ಇತರೆ ನಿರೀಕ್ಷಿತ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಒನ್‌ಪ್ಲಸ್ 13R - ನಿರೀಕ್ಷಿತ ಫೀಚರ್ಸ್
ಒನ್‌ಪ್ಲಸ್ 13R ಫೋನ್ 6.78 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಅನ್ನು ಹೊಂದಿರಲಿದೆ. ಇದು 1264 × 2780 ಪಿಕ್ಸೆಲ್ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದ ಬೆಂಬಲ ಪಡೆದಿರಲಿದೆ. ಈ ಡಿಸ್ಪ್ಲೇಯು ಗೊರಿಲ್ಲಾ ಗ್ಲಾಸ್ ರಕ್ಷಣೆ ಸೌಲಭ್ಯವನ್ನು ಹೊಂದಿರಲಿದೆ ಎನ್ನಲಾಗಿದೆ.
ಹೊಸ ಒನ್‌ಪ್ಲಸ್ 13R ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಜೆನ್ 3 ಆಕ್ಟಾಕೋರ್ ಪ್ರೊಸೆಸರ್ ಪವರ್ ಜೊತೆಗೆ ಬಿಡುಗಡೆ ಆಗುವ ಸಾಧ್ಯತೆಗಳು ಇವೆ. ಇನ್ನು ಒನ್‌ಪ್ಲಸ್ 12R ಮೊಬೈಲ್ ಸ್ನಾಪ್‌ಡ್ರಾಗನ್ 8 ಜೆನ್ 2 ಪ್ರೊಸೆಸರ್ ಪಡೆದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಆಧಾರಿತ OxygenOS 15.0 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕೆಲಸ ಮಾಡುತ್ತದೆ. ಇದು ಒನ್‌ಪ್ಲಸ್ 13R ಫೋನ್ 12GB RAM + 256GB ಸ್ಟೋರೇಜ್ ಆಯ್ಕೆ ಪಡೆದಿರಲಿದೆ.
ಒನ್‌ಪ್ಲಸ್ 13R ಫೋನ್ ಟ್ರಿಪಲ್ ಕ್ಯಾಮೆರಾ ರಚನೆ ಹೊಂದಿರಲಿದ್ದು, ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮೊದಲ ಕ್ಯಾಮೆರಾ ಸೆನ್ಸಾರ್ ಪಡೆದಿರಲಿದೆ. ಇದರ ಜೊತೆಗೆ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 50 ಮೆಗಾ ಪಿಕ್ಸೆಲ್ ಸೋನಿ ತೃತೀಯ ಕ್ಯಾಮೆರಾ ಪಡೆದಿರಲಿದೆ. ಈ ಮೊಬೈಲ್ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸೌಲಭ್ಯ ಒಳಗೊಂಡಿರಲಿದೆ.
ಒನ್‌ಪ್ಲಸ್ 13R ಫೋನ್ 6,000mAh ಸಾಮರ್ಥ್ಯದ ಬಿಗ್ ಬ್ಯಾಟರಿ ಪಡೆದಿರುವುದು ಬಹುತೇಕ ಖಚಿತ ಎನ್ನಲಾಗಿದೆ. ಈ ಹಿಂದೆ ಲಾಂಚ್ ಆಗಿರುವ ಒನ್‌ಪ್ಲಸ್ 12R ಮೊಬೈಲ್ 5500mAh ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಅನ್ನು ಪಡೆದಿದೆ. ಇನ್ನು ಒನ್‌ಪ್ಲಸ್ 13R ಮೊಬೈಲ್ 80W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒಳಗೊಂಡಿದೆ.


Click it and Unblock the Notifications








