Home
ಸುದ್ದಿಜಾಲ

OnePlus: ಒನ್‌ಪ್ಲಸ್‌ 13 ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ, ವಿನ್ಯಾಸ ಲೀಕ್!..ಯಾವಾಗ ಲಾಂಚ್‌?

ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಒನ್‌ಪ್ಲಸ್ ಸ್ಮಾರ್ಟ್‌ ಫೋನ್‌ಗಳು (OnePlus smartphone) ವಿಶೇಷ ಬೇಡಿಕೆ ಪಡೆದುಕೊಂಡಿವೆ. ಈ ನಡುವೆ ಒನ್‌ಪ್ಲಸ್‌ 13 ಸ್ಮಾರ್ಟ್‌ಫೋನ್‌ (OnePlus 13 smartphone) ನ ಕೆಲವು ಫೀಚರ್ಸ್‌ ಲೀಕ್‌ ಆಗಿವೆ. ಅದರಂತೆ ಸ್ನಾಪ್‌ಡ್ರಾಗನ್ 8 ಜನ್ 4 ಪ್ರೊಸೆಸರ್‌ ಬಲ ಪಡೆದಿರಲಿದೆ ಎಂದು ತಿಳಿದುಬಂದಿದೆ.

ಹೌದು, ಒನ್‌ಪ್ಲಸ್‌ 13 ಸ್ಮಾರ್ಟ್‌ಫೋನ್‌ ಅನ್ನು ಶೀಘ್ರದಲ್ಲೇ ಅನಾವರಣ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಈ ಸ್ಮಾರ್ಟ್‌ಫೋನ್ ಕರ್ವ್ ಡಿಸ್‌ಪ್ಲೇ ಆಯ್ಕೆ ಪಡೆದಿರಲಿದ್ದು, ಆಪ್ಟಿಕಲ್ ಜೂಮ್‌ಗಾಗಿ ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾವನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್ ಏನೆಲ್ಲಾ ಫೀಚರ್ಸ್‌ ಆಯ್ಕೆ ಪಡೆದಿರಲಿದೆ? ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಒನ್‌ಪ್ಲಸ್‌ 13 ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ, ವಿನ್ಯಾಸ ಲೀಕ್!..ಯಾವಾಗ ಲಾಂಚ್‌?

ಒನ್‌ಪ್ಲಸ್‌ 13 ಸ್ಮಾರ್ಟ್‌ಫೋನ್‌: ಕ್ವಾಲ್ಕಾಮ್ ಈ ವರ್ಷದ ಅಕ್ಟೋಬರ್‌ನಲ್ಲಿ ಮುಂದಿನ ಪೀಳಿಗೆಯ ಸ್ನಾಪ್‌ಡ್ರಾಗನ್ 8 ಜನ್ 4 ಪ್ರೊಸೆಸರ್‌ ಅನ್ನು ಅನಾವರಣಗೊಳಿಸುವ ನಿರೀಕ್ಷೆಯಿದ್ದು, SD8G4 ಚಿಪ್ ಆನ್‌ಬೋರ್ಡ್‌ನೊಂದಿಗೆ ಒನ್‌ಪ್ಲಸ್‌ 13 ಕಾಣಿಸಿಕೊಳ್ಳಬಹುದು ಎಂದು ನಂಬಲಾಗಿದೆ. ಈ ಫೋನ್‌ನ ಲಾಂಚ್‌ ಡೇಟ್‌ ಹಲವಾರು ತಿಂಗಳುಗಳ ದೂರದಲ್ಲಿದ್ದರು, ಇದರ ಲೀಕ್‌ ಮಾಹಿತಿ ಬಹಳ ಸೌಂಡ್‌ ಮಾಡುತ್ತಿವೆ.

ಡಿಸಿಎಸ್‌ ಪ್ರಕಾರ, ಒನ್‌ಪ್ಲಸ್‌ 13 ಮೈಕ್ರೋ-ಕರ್ವ್ ವಿನ್ಯಾಸದೊಂದಿಗೆ 6.8 ಇಂಚಿನ OLED LTPO ಡಿಸ್‌ಪ್ಲೇಯನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ. ಹಾಗೆಯೇ ಈ ಡಿಸ್‌ಪ್ಲೇ 2K ರೆಸಲ್ಯೂಶನ್ ಅನ್ನು ಬೆಂಬಲಿಸಲಿದ್ದು, ಅಲ್ಟ್ರಾಸಾನಿಕ್ ಇನ್-ಸ್ಕ್ರೀನ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ನೊಂದಿಗೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಹಿಂದಿನ ಒನ್‌ಪ್ಲಸ್ ಫ್ಲ್ಯಾಗ್‌ಶಿಪ್‌ಗಳು ಆಪ್ಟಿಕಲ್ ಅಂಡರ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್‌ಗಳನ್ನು ಹೊಂದಿರುವುದನ್ನು ಈ ವೇಳೆ ನೆನಪಿಸಿಕೊಳ್ಳಬಹುದು.

ಒನ್‌ಪ್ಲಸ್‌ 13 ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ, ವಿನ್ಯಾಸ ಲೀಕ್!..ಯಾವಾಗ ಲಾಂಚ್‌?

ಒನ್‌ಪ್ಲಸ್‌ 13 ಮಲ್ಟಿ-ಫೋಕಲ್ ಕ್ಯಾಮೆರಾ ರಚನೆಯನ್ನು ಹೊಂದಿರಲಿದೆ ಎಂದು ಲೀಕ್‌ ಮಾಹಿತಿ ಮೂಲಕ ತಿಳಿದುಬಂದಿದ್ದು, ಹಿಂದಿನ ಮಾದರಿಯಂತೆ, ಈ ಫೋನ್ ಹೆಚ್ಚಿನ ಆಪ್ಟಿಕಲ್ ಜೂಮ್‌ಗಾಗಿ ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾವನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ಜೊತೆಗೆ ಫೆಬ್ರವರಿಯ ಹಿಂದಿನ ಲೀಕ್‌ಗಳು ಒನ್‌ಪ್ಲಸ್‌ 13 ಹೊಸ ಹಿಂದಿನ ವಿನ್ಯಾಸವನ್ನು ಹೊಂದಿರುತ್ತದೆ ಎಂದು ತಿಳಿಸಿದೆ.

ಒನ್‌ಪ್ಲಸ್‌ 12 ಗೆ ಅನುಗುಣವಾಗಿ ಒನ್‌ಪ್ಲಸ್‌ 13 ಸ್ಮಾರ್ಟ್‌ಫೋನ್ 5,400mAh ಸಾಮರ್ಥ್ಯದ ಬ್ಯಾಟರಿ ಮತ್ತು 100W ವೈರ್ಡ್ ಚಾರ್ಜಿಂಗ್ ಅನ್ನು ಪ್ಯಾಕ್ ಮಾಡಲಿದೆ ಎಂದು ಬ್ರಾರ್ ಹೇಳಿದ್ದಾರೆ. ಹೊಸ ಫೋನ್ ಒನ್‌ಪ್ಲಸ್‌ 12 ನಂತೆಯೇ ಅದೇ ಕ್ಯಾಮೆರಾ ಸೆನ್ಸರ್‌ ಅನ್ನು ಪಡೆದಿರಲಿದೆ ಎಂದು ಇವರು ತಿಳಿಸಿದ್ದು, 50 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮರಾ, 64 ಮೆಗಾಪಿಕ್ಸೆಲ್‌ 3x ಪೆರಿಸ್ಕೋಪ್ ಕ್ಯಾಮರಾ ಮತ್ತು 48 ಮೆಗಾಪಿಕ್ಸೆಲ್‌ ಅಲ್ಟ್ರಾವೈಡ್ ಲೆನ್ಸ್ ಅನ್ನು ಈ ಫೋನ್‌ನಲ್ಲಿ ನಿರೀಕ್ಷಿಸಬಹುದಾಗಿದೆ.

ಒನ್‌ಪ್ಲಸ್‌ 13 ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ, ವಿನ್ಯಾಸ ಲೀಕ್!..ಯಾವಾಗ ಲಾಂಚ್‌?

ಡಿಜಿಟಲ್ ಚಾಟ್ ಸ್ಟೇಷನ್ ಕೆಲವು ಕ್ಯಾಮೆರಾ ಕ್ಲೈಮ್‌ಗಳನ್ನು ಈಗಾಗಲೇ ದೃಢೀಕರಿಸಿದೆ. ಈ ಕಾರಣಕ್ಕೆ ಫೋನ್ ದೊಡ್ಡ 50 ಮೆಗಾಪಿಕ್ಸೆಲ್‌ ಖಚಿತವಾಗಿ ಇದರಲ್ಲಿ ಲಭ್ಯ ಇರಲಿದೆ ಅನ್ನೋದನ್ನು ತಿಳಿಯಬಹುದಾಗಿದೆ. ಇನ್ನು ಏಪ್ರಿಲ್‌ನಲ್ಲಿ ಜೆಮಿನಿಯಿಂದ ನಡೆಸಲ್ಪಡುವ ಎಐ ಫೀಚರ್ಸ್‌ಗಳು ಒಪ್ಪೋ ಮತ್ತು ಒನ್‌ಪ್ಲಸ್‌ ಫೋನ್‌ಗಳಿಗೆ ಈ ವರ್ಷದ ನಂತರ ಬರಲಿವೆ ಎಂದು ತಿಳಿಸಲಾಗಿದ್ದು, ಎರಡು ಚೀನೀ ಬ್ರ್ಯಾಂಡ್‌ಗಳು ಗೂಗಲ್‌ನ ಅತ್ಯಂತ ಶಕ್ತಿಶಾಲಿ ಎಐ ಮಾಡೆಲ್ (ಜೆಮಿನಿ 1.0 ಅಲ್ಟ್ರಾ) 2024 ರ ನಂತರ ಫೋನ್‌ಗಳಿಗೆ ಬರಲಿದೆ ಎಂದು ದೃಢಪಡಿಸಿದೆ. ಹಾಗಾಗಿ ಒನ್‌ಪ್ಲಸ್‌ 13 ಕೆಲವು ಗೂಗಲ್‌-ಚಾಲಿತ ಎಐ ಫೀಚರ್ಸ್‌ ನೊಂದಿಗೆ ಬರಬಹುದು ಎಂದು ನಂಬಲಾಗಿದೆ.

ಯಾವಾಗ ಈ ಫೋನ್‌ ಲಾಂಚ್‌ ಆಗಲಿದೆ?: ವಾಸ್ತವವಾಗಿ, ಒನ್‌ಪ್ಲಸ್‌ 12 ಡಿಸೆಂಬರ್ 2023 ರಲ್ಲಿ ಚೀನಾದಲ್ಲಿ ಜನವರಿ 2024 ರಲ್ಲಿ ಜಾಗತಿಕ ಲಾಂಚ್ ಆಗಿತ್ತು. ಇದರ ಇತಿಹಾಸವನ್ನು ಗಮನಿಸಿದ್ರೆ ಜನವರಿಯಲ್ಲಿ ಜಾಗತಿಕ ಉಡಾವಣೆ ಪಡೆಯುವ ಮೊದಲು ಒನ್‌ಪ್ಲಸ್‌ 13 ಡಿಸೆಂಬರ್ 2024 ರಲ್ಲಿ ಚೀನಾದಲ್ಲಿ ಲಾಂಚ್‌ ಆಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

Best Mobiles in India

English summary
It is known that the OnePlus 13 smartphone will be unveiled soon. The smartphone is said to feature a curved display option and a periscope telephoto camera for optical zoom.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+