Home
ಸುದ್ದಿಜಾಲ

OnePlus: ಈ ಸೌಲಭ್ಯ ಪಡೆಯುವ ಮೊದಲ ಫೋನ್ ಒನ್‌ಪ್ಲಸ್‌ 13? ಇತರೆ ಫೀಚರ್ಸ್‌ ಏನು?

ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ಗಳು (OnePlus smartphone) ಇತರೆ ಸ್ಮಾರ್ಟ್‌ಫೋನ್‌ಗಳಿಗಿಂತ ಭಿನ್ನ ರೀತಿಯಲ್ಲಿ ಗುರುತಿಸಕೊಳ್ಳುತ್ತವೆ. ಅದರಲ್ಲೂ ಹೊಸ ಹೊಸ ಫೋನ್‌ಗಳು ವಿಶೇಷ ಫೀಚರ್ಸ್‌ ಆಯ್ಕೆಯೊಂದಿಗೆ ಮಾರುಕಟ್ಟೆಯಲ್ಲಿ ಸೌಂಡ್‌ ಮಾಡುತ್ತಿದ್ದು, ಇದರ ಬೆನ್ನಲ್ಲೇ ಒನ್‌ಪ್ಲಸ್‌ 13 ಸ್ಮಾರ್ಟ್‌ಫೋನ್ (OnePlus 13 smartphone) ಬಗ್ಗೆ ವಿಶೇಷ ಮಾಹಿತಿ ಹೊರಬಿದ್ದಿದೆ.

ಹೌದು, ಒನ್‌ಪ್ಲಸ್‌ ಇನ್ನೇನು ಕೆಲವು ತಿಂಗಳಲ್ಲಿ ಹೊಸ ಫೋನ್ ಅನ್ನು ಲಾಂಚ್ ಮಾಡಲು ಸಜ್ಜಾಗಿದೆ. ಅದುವೇ ಒನ್‌ಪ್ಲಸ್‌ 13 ಸ್ಮಾರ್ಟ್‌ಫೋನ್, ಈ ಫೋನ್‌ ಫ್ಲ್ಯಾಗ್‌ಶಿಪ್‌ಗಾಗಿ ಕಾರ್ಯಕ್ಷಮತೆ, ಬ್ಯಾಟರಿ ಬಾಳಿಕೆ ಮತ್ತು ಕ್ಯಾಮೆರಾದಲ್ಲಿನ ಸುಧಾರಣೆಗಳ ಮೇಲೆ ಕೇಂದ್ರೀಕರಿಸುತ್ತದೆ ಎನ್ನಲಾಗಿದೆ. ಹಾಗಿದ್ರೆ ಈ ಫೋನ್‌ ಯಾವೆ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ? ಇತರೆ ಫೀಚರ್ಸ್‌ ಏನು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಈ ಸೌಲಭ್ಯ ಪಡೆಯುವ ಮೊದಲ ಫೋನ್ ಒನ್‌ಪ್ಲಸ್‌ 13? ಇತರೆ ಫೀಚರ್ಸ್‌ ಏನು?

ಒನ್‌ಪ್ಲಸ್‌ 13 ಸ್ಮಾರ್ಟ್‌ಫೋನ್: ಡಿಜಿಟಲ್ ಚಾಟ್ ಸ್ಟೇಷನ್ (ಡಿಸಿಎಸ್) ನಿಂದ ಇತ್ತೀಚಿನ ಮಾಹಿತಿ ಪ್ರಕಾರ, ಒನ್‌ಪ್ಲಸ್‌ ತನ್ನ ಮುಂದಿನ ಫ್ಲ್ಯಾಗ್‌ಶಿಪ್‌ಗಾಗಿ ಕಾರ್ಯಕ್ಷಮತೆ, ಬ್ಯಾಟರಿ ಬಾಳಿಕೆ ಮತ್ತು ಕ್ಯಾಮೆರಾದಲ್ಲಿನ ಸುಧಾರಣೆಗಳ ಮೇಲೆ ಕೇಂದ್ರೀಕರಿಸುತ್ತದೆ ಎನ್ನಲಾಗಿದೆ. ಅದರಂತೆ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜನ್ 4 ಪ್ರೊಸೆಸರ್ (Snapdragon 8 Gen 4 processor) ಅನ್ನು ಹೊಂದಿರುವ ಮೊದಲ ಸ್ಮಾರ್ಟ್‌ಫೋನ್‌ಗಳಲ್ಲಿ ಒನ್‌ಪ್ಲಸ್‌ 13 ಒಂದಾಗಿರಬಹುದು ಎಂದು ಡಿಸಿಎಸ್ ಸೂಚಿಸುತ್ತದೆ.

ಶಿಯೋಮಿ 15 ಸರಣಿಯು ಈ ಹೊಸ ಪ್ರೊಸೆಸರ್‌ ಅನ್ನು ಪಡೆಯುವ ಮೊದಲ ಫೋನ್ ಎಂದು ನಿರೀಕ್ಷಿಸಲಾಗಿದೆಯಾದರೂ ಸಹ ಒನ್‌ಪ್ಲಸ್‌ 13 ಕೂಡ ಇದೇ ಪ್ರೊಸೆಸರ್‌ ಪಡೆಯುವ ಮೂಲಕ ಮೊದಲ ಫೋನ್‌ ಆಗಿ ಗುರುತಿಸಿಕೊಳ್ಳಲಿದೆ ಎಂದು ತಿಳಿದುಬಂದಿದೆ. ಇನ್ನು ಒನ್‌ಪ್ಲಸ್‌ 13 ಹೊಸ ಸಿಂಗಲ್-ಪಾಯಿಂಟ್ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸೆನ್ಸರ್‌ ಮತ್ತು ಸುಧಾರಿತ ಸಿಲಿಕಾನ್ ಆನೋಡ್ ಬ್ಯಾಟರಿ ತಂತ್ರಜ್ಞಾನವನ್ನು ಒಳಗೊಂಡಿರುತ್ತದೆ ಎಂದು ಈಗಾಗಲೇ ತಿಳಿದುಬಂದಿದೆ

ಇದರ ಜೊತೆಗೆ ಈ ಫೋನ್‌ ದೊಡ್ಡ ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿರಲಿದೆ ಎನ್ನಲಾಗಿದೆ. ಅಂದರೆ ಒನ್‌ಪ್ಲಸ್‌ 12 (OnePlus 12) ಗಿಂತ ದೊಡ್ಡದಾಗಿರಬಹುದು ಎಂದು ನಿರೀಕ್ಷಿಸಬಹುದು. ಅದಾಗ್ಯೂ ಲೀಕ್ ಮಾಹಿತಿ ಪ್ರಕಾರ ಫೋನ್ ದೊಡ್ಡ ಡಿಸ್‌ಪ್ಲೇಯನ್ನು ಉಳಿಸಿಕೊಳ್ಳುತ್ತದೆ ಎಂದು ಸೂಚಿಸುತ್ತದೆ. ಆದರೂ ಸಹ ಸ್ವಲ್ಪ ಕರ್ವ್ ಹೊಂದಿರುವ 6.8 ಇಂಚಿನ 2K LTPO OLED ಪ್ಯಾನೆಲ್ ಅನ್ನು ಈ ಫೋನ್‌ನಲ್ಲಿ ಕಾಣಬಹುದು ಎಂದು ಲೀಕ್ ಆದ ವರದಿಗಳಲ್ಲಿ ಉಲ್ಲೇಖ ಮಾಡಲಾಗಿದೆ.

ಕ್ಯಾಮೆರಾ ಫೀಚರ್ಸ್‌ ಸಹ ನವೀಕರಣಗೊಳ್ಳುವ ನಿರೀಕ್ಷೆಯಿದೆ. ನಿರ್ದಿಷ್ಟತೆಗಳ ಕೊರತೆಯಿದ್ದರೂ, ಸುಧಾರಿತ ಪೆರಿಸ್ಕೋಪ್ ಲೆನ್ಸ್‌ನೊಂದಿಗೆ ಟ್ರಿಪಲ್ ಕ್ಯಾಮೆರಾ ಸೌಲಭ್ಯವನ್ನು ಈ ಫೋನ್‌ ಪಡೆಯಲಿದೆ ಎನ್ನಲಾಗಿದ್ದು, ಹೆಚ್ಚುವರಿಯಾಗಿ, ವಾಟರ್‌ ರೆಸಿಸ್ಟೆಂಟ್‌ ಆಗಿರಲಿದೆ ಎಂದೂ ಸಹ ಹೇಳಲಾಗಿದೆ. IP68 ರೇಟಿಂಗ್ ಕುರಿತು ಬಳಕೆದಾರರ ಕಾಮೆಂಟ್‌ಗೆ ಪ್ರತಿಕ್ರಿಯೆ ನೀಡಿರುವ ಟಿಪ್‌ಸ್ಟರ್ ಅದನ್ನು ದೃಢೀಕರಿಸದಿದ್ದರೂ, ಜಲನಿರೋಧಕ ಪರೀಕ್ಷೆಗಳನ್ನು ಮಾಡಲಾಗಿದೆ ಎಂದು ಕಂಡುಕೊಂಡಿದ್ದಾರೆ.

ಒನ್‌ಪ್ಲಸ್‌ 13 ರ ಹೊರತಾಗಿ, ಒನ್‌ಪ್ಲಸ್‌ ಈ ವರ್ಷ ಚೀನಾದ ಮಾರುಕಟ್ಟೆಯಲ್ಲಿ ಮತ್ತೊಂದು ಪ್ರಮುಖ ಫೋನ್ ಅನ್ನು ಲಾಂಚ್‌ ಮಾಡಬಹುದು ಎಂಬ ವದಂತಿಗಳಿವೆ. ಅದುವೇ ಏಸ್‌ 3 ಪ್ರೊ. ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8 ಜನ್ 3 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ ಎಂಬ ವದಂತಿಗಳಿವೆ ಮತ್ತು ರಿಯಲ್‌ಮಿ GT 6 ಮತ್ತು ಮುಂಬರುವ ರೆಡ್ಮಿ K70 ಅಲ್ಟ್ರಾ ನಂತಹ ಫೋನ್‌ಗಳ ಜೊತೆ ಸ್ಪರ್ಧಿಸುತ್ತೆದ ಎಂದು ತಿಳಿದುಬಂದಿದೆ. ಇನ್ನು ಒನ್‌ಪ್ಲಸ್‌ 13 ಮತ್ತು ಒನ್‌ಪ್ಲಸ್‌ ಏಸ್‌ 3 ಪ್ರೊ ಕುರಿತು ಇನ್ನೂ ಹೆಚ್ಚಿನ ಮಾಹಿತಿ ಬೇಕು ಎಂದರೆ ಗಿಜ್‌ಬಾಟ್‌ನೊಂದಿಗೆ ಸಂಪರ್ಕದಲ್ಲಿರಿ.

Best Mobiles in India

English summary
OnePlus, OnePlus Smartphone Snapdragon 8 Gen 4 Processor, OnePlus 13 Smartphone, Information About OnePlus 13 Smartphone, ಒನ್‌ಪ್ಲಸ್‌, ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌, ಒನ್‌ಪ್ಲಸ್‌ 13 ಸ್ಮಾರ್ಟ್‌ಫೋನ್, ಒನ್‌ಪ್ಲಸ್‌ 13 ಸ್ಮಾರ್ಟ್‌ಫೋನ್ ಬಗ್ಗೆ ಮಾಹಿತಿ, ಸ್ನಾಪ್‌ಡ್ರಾಗನ್ 8 ಜನ್ 4 ಪ್ರೊಸೆಸರ್,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+