ಶೀಘ್ರದಲ್ಲೇ OnePlus 13 ಲಾಂಚ್; ಭಾರೀ ಕುತೂಹಲ ಮೂಡಿಸಿದ ಲೀಕ್ ಫೀಚರ್ಸ್!
ಮೊಬೈಲ್ ಮಾರುಕಟ್ಟೆಯಲ್ಲಿ ಲೀಡಿಂಗ್ ಸ್ಥಾನದಲ್ಲಿ ಕಾಣಿಸಿಕೊಂಡಿರುವ ಬ್ರ್ಯಾಂಡ್‌ಗಳ ಪೈಕಿ ಒನ್‌ಪ್ಲಸ್ (OnePlus) ಸಹ ಸೇರಿದೆ. ಒನ್‌ಪ್ಲಸ್ ಮೊಬೈಲ್‌ಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದ್ದು, ಕೆಲವು ಫೋನ್‌ಗಳು ಹೆಚ್ಚು ಜನಪ್ರಿಯತೆ ಪಡೆದಿವೆ. ಇತ್ತೀಚಿಗೆ ಸಂಸ್ಥೆಯು ಒನ್‌ಪ್ಲಸ್ 12 ಸರಣಿ ಬಿಡುಗಡೆ ಮಾಡಿದ್ದು, ಅದರ ಯಶಸ್ಸಿನ ಮುಂದುವರಿದ ಭಾಗವಾಗಿ ಈಗ ಒನ್‌ಪ್ಲಸ್ 13 (OnePlus 13) ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲು ಸಜ್ಜಾಗುತ್ತಿದೆ.
ಹೌದು, ಒನ್‌ಪ್ಲಸ್ ಸಂಸ್ಥೆಯು ಇದೀಗ ನೂತನವಾಗಿ ಒನ್‌ಪ್ಲಸ್ 13 (OnePlus 13) ಫೋನ್ ಅನ್ನು ಅದೇ ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡುವುದು ಬಹುತೇಕ ಪಕ್ಕಾ ಆಗಿದೆ. ಆದರೆ ಬಿಡುಗಡೆಗೂ ಮೊದಲೇ ಫೋನಿನ ಕುರಿತಾಗಿ ಕೆಲವು ಲೀಕ್ ಮಾಹಿತಿಗಳು ಬರಲಿರುವ ಈ ಫೋನ್ ಬಗ್ಗೆ ಮೊಬೈಲ್ ಪ್ರಿಯರ ಕುತೂಹಲ ಹೆಚ್ಚಿಸಿವೆ. ಇನ್ನು ಈ ಫೋನ್ 100 W ಫಾಸ್ಟ್ ಚಾರ್ಜಿಂಗ್ ಪಡೆದಿರಲಿದ್ದು, ಜೊತೆಗೆ 6000 mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿರಲಿದೆ ಎನ್ನಲಾಗಿದೆ.

ಇನ್ನು ಮುಂದಿನ ತಿಂಗಳು ಬರಲಿರುವ ಒನ್‌ಪ್ಲಸ್ 13 (OnePlus 13) ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 8 ಜೆನ್ 4 (Qualcomm Snapdragon 8 Gen 4) ಚಿಪ್‌ಸೆಟ್ ಪ್ರೊಸೆಸರ್ ಅನ್ನು ಒಳಗೊಂಡಿರುವ ಸಾಧ್ಯತೆಗಳು ಬಹುತೇಕ ಪಕ್ಕಾ ಎನ್ನಲಾಗಿದೆ. ಹಾಗೆಯೇ ಬರಲಿರುವ ಈ ಫ್ಲ್ಯಾಗ್‌ಶಿಪ್ ಫೋನ್ ಅನ್ನು ಈಗ ಚೀನಾದ 3C ಪ್ರಮಾಣೀಕರಣ ವೆಬ್‌ಸೈಟ್‌ನಲ್ಲಿ ಗುರುತಿಸಲಾಗಿದೆ. ಇನ್ನುಳಿದಂತೆ ಈ ಫೋನಿನ ಬಗ್ಗೆ ಇತರೆ ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.
ಒನ್‌ಪ್ಲಸ್ 13 - ನಿರೀಕ್ಷಿತ ಫೀಚರ್ಸ್ ಹೀಗಿವೆ
ಒನ್‌ಪ್ಲಸ್ 13 ಫೋನ್ 6.82 ಇಂಚಿನ 2K OLED 10 ಬಿಟ್ LTPO BOE X2 ಮೈಕ್ರೋ ಕರ್ವ್ ಡಿಸ್‌ಪ್ಲೇ ಒಳಗೊಂಡಿರಲಿದೆ. ಹಾಗೆಯೇ ಈ ಫೋನ್ BOE X2 ಡಿಸ್ಪ್ಲೇ ಅನ್ನು ಹೊಂದಿರುತ್ತದೆ ಎಂದು ಒನ್‌ಪ್ಲಸ್ ಈಗಾಗಲೇ ದೃಢಪಡಿಸಿದೆ. ಇದರೊಂದಿಗೆ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 8 ಜೆನ್ 4 (Qualcomm Snapdragon 8 Gen 4) ಚಿಪ್‌ಸೆಟ್ ಪ್ರೊಸೆಸರ್ ಪಡೆದಿರುವ ನಿರೀಕ್ಷೆಗಳು ಇವೆ.
ಇನ್ನು ಒನ್‌ಪ್ಲಸ್ 13 ಫೋನ್ ಹಿಂಬದಿಯಲ್ಲಿ ಟ್ರಿಪಲ್ ಕ್ಯಾಮೆರಾ ರಚನೆ ಅನ್ನು ಪಡೆದಿರಲಿದ್ದು, ಪ್ರಾಥಮಿಕ ಕ್ಯಾಮೆರಾವು 1/1.4 ದ್ಯುತಿರಂಧ್ರ ಜೊತೆಗೆ 50 ಮೆಗಾ ಪಿಕ್ಸಲ್ ಸೆನ್ಸಾರ್‌ನ ಸೋನಿ LYT808 ಸೆನ್ಸಾರ್ ಪಡೆದಿರಲಿದೆ. ಅಲ್ಲದೇ 50 ಮೆಗಾ ಪಿಕ್ಸಲ್ LYT600 ಪೆರಿಸ್ಕೋಪ್ ಲೆನ್ಸ್ ಮತ್ತು 50 ಮೆಗಾ ಪಿಕ್ಸಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಅನ್ನು ಒಳಗೊಂಡಿರಬಹುದು ಎನ್ನಲಾಗಿದೆ.
ಒನ್‌ಪ್ಲಸ್ 13 ಫೋನ್ (OnePlus 13) 6000 mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿರುವ ಸಾಧ್ಯತೆಗಳುಯ ಅಧಿಕ ಎನ್ನಲಾಗಿದೆ. ಇದಕ್ಕೆ ಪೂರಕವಾಗಿ 100W ಫಾಸ್ಟ್ ಚಾರ್ಜಿಂಗ್ ಹಾಗೂ 50W ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಸಹ ಪಡೆದಿರಲಿದೆ ಎಂದು ಹೇಳಲಾಗುತ್ತಿದೆ. ಮುಂಬರುವ ಹೊಸ ಫೋನ್ ಬ್ಯಾಟರಿ ಹಾಗೂ ಫಾಸ್ಟ್ ಚಾರ್ಜಿಂಗ್‌ನಿಂದ ಹೆಚ್ಚಿನ ಗಮನ ಸೆಳೆಯುವ ನಿರೀಕ್ಷೆಗಳು ಇವೆ.
ಇನ್ನು ಈ ಫೋನ್ ಅಕ್ಟೋಬರ್‌ನಲ್ಲಿ ಚೀನಾದಲ್ಲಿ ಲಾಂಚ್ ಆಗಲಿದೆ. ಚೀನಾ ಲಾಂಚ್ ಬಳಿಕ, ಒನ್‌ಪ್ಲಸ್ 13 ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆ ಆಗುವ ನಿರೀಕ್ಷೆಯಿದೆ. ಇನ್ನು OnePlus 13 ಫೋನ್ ಭಾರತದಲ್ಲಿ ಈ ವರ್ಷದ ಅಂತ್ಯಕ್ಕೆ ಅಥವಾ 2025 ರ ಆರಂಭದಲ್ಲಿ ಲಾಂಚ್ ಆಗುವ ಸಾಧ್ಯತೆಗಳು ಇವೆ ಎಂದು ವರದಿಯಾಗಿದೆ.


Click it and Unblock the Notifications








