Home
ಸುದ್ದಿಜಾಲ

ಭಾರೀ ಕುತೂಹಲ ಮೂಡಿಸಿದ್ದ OnePlus 13 ಫೋನ್‌ ಲಾಂಚ್‌ ಆಗಿದೆ!..ವಿಶೇಷ ಏನಿದೆ ಗೊತ್ತಾ?

ಮೊಬೈಲ್ ಮಾರುಕಟ್ಟೆಯಲ್ಲಿ ಪ್ರತಿಷ್ಠಿತ ಕಂಪನಿಗಳ ಪೈಕಿ ಒಂದಾಗಿ ಗುರುತಿಸಿಕೊಂಡಿರುವ ಒನ್‌ಪ್ಲಸ್‌ ಇದೀಗ ತನ್ನ ಬಹುನಿರೀಕ್ಷಿತ ಒನ್‌ಪ್ಲಸ್‌ 13 (OnePlus 13) ಸ್ಮಾರ್ಟ್‌ಫೋನ್‌ ಇಂದು ಬಿಡುಗಡೆ ಮಾಡಿದೆ. ಈ ನೂತನ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್ ಪ್ರೊಸೆಸರ್‌ ಒಳಗೊಂಡಿದೆ. ಅಲ್ಲದೇ ಒನ್‌ಪ್ಲಸ್‌ ಈ ಫೋನ್‌ ಮೂಲಕ ಮೊದಲ ಬಾರಿಗೆ 6,000mAh ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯವನ್ನು ಪರಿಚಯಿಸಿದ್ದು, ಗ್ರಾಹಕರ ಕುತೂಹಲ ಹೆಚ್ಚಿಸಿದೆ.

ಹೌದು, ಒನ್‌ಪ್ಲಸ್‌ ಸಂಸ್ಥೆಯು ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಒನ್‌ಪ್ಲಸ್‌ 13 (OnePlus 13) ಮೊಬೈಲ್‌ ಅನ್ನು ಲಾಂಚ್ ಮಾಡಿದೆ. ಇದು ತ್ರಿವಳಿ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾಪಿಕ್ಸಲ್‌ ಸೆನ್ಸಾರ್‌ ಪಡೆದುಕೊಂಡಿದೆ. ಹಾಗೆಯೇ ಇದರ ಸೆಲ್ಫಿ ಕ್ಯಾಮೆರಾವು 32 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ.

ಭಾರೀ ಕುತೂಹಲ ಮೂಡಿಸಿದ್ದ OnePlus 13 ಫೋನ್‌ ಲಾಂಚ್‌ ಆಗಿದೆ!..ವಿಶೇಷ ಏನಿದೆ?

ಇನ್ನು ಈ ಹೊಸ ಫೋನ್‌ 12GB RAM, 16GB RAM ಹಾಗೂ 24GB RAM ಆಯ್ಕೆಗಳನ್ನು ಪಡೆದಿದ್ದು, ಇದು 100W ವೈರ್ಡ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಸಹ ಪಡೆದಿದೆ. ಹಾಗಾದರೇ ಒನ್‌ಪ್ಲಸ್‌ 13 (OnePlus 13) ಫೋನಿನ ಇತರೆ ಫೀಚರ್ಸ್‌ ಹೇಗಿವೆ ಹಾಗೂ ಬೆಲೆ ಎಷ್ಟು ಎಂಬ ಮಾಹಿತಿಯನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಹೀಗಿದೆ

ಒನ್‌ಪ್ಲಸ್‌ 13 ಮೊಬೈಲ್‌ 6.82 ಇಂಚಿನ 2K ರೆಸಲ್ಯೂಶನ್‌ LTPO AMOLED ಡಿಸ್‌ಪ್ಲೇ ಅನ್ನು ಹೊಂದಿದೆ. ಈ ಡಿಸ್‌ಪ್ಲೇಯು 3168×1440 ಪಿಕ್ಸಲ್‌ ರೆಸಲ್ಯೂಶನ್‌ ಅನ್ನು ಪಡೆದಿದೆ. ಅಲ್ಲದೇ ಇದು 120Hz ರಿಫ್ರೆಶ್ ರೇಟ್‌ ಬೆಂಬಲ ಪಡೆದಿದ್ದು, 4500 nits ಗರಿಷ್ಠ ಬ್ರೈಟ್ನೆಸ್‌, 2160Hz ಹೈ-ಫ್ರೀಕ್ವೆನ್ಸಿ PWM ಗ್ಲಾಸ್ ಡಿಮ್ಮಿಂಗ್, CWM ಗ್ಲಾಸ್ ಸೂಪರ್‌ಬೈ ಡಿಮ್ಮಿಂಗ್ ಸಪೋರ್ಟ್‌ ಪಡೆದಿದೆ.

ಪ್ರೊಸೆಸರ್‌ ಪವರ್ ಮಾಹಿತಿ

ಒನ್‌ಪ್ಲಸ್‌ 13 ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್ (Snapdragon 8 Elite) ಪ್ರೊಸೆಸರ್‌ ಪವರ್‌ ಅನ್ನು ಪಡೆದಿದ್ದು, ಇದು ಆಂಡ್ರಾಯ್ಡ್‌ 15 ಓಎಸ್‌ ನಲ್ಲಿ ಕೆಲಸ ನಿರ್ವಹಿಸಲಿದೆ. ಇದರ ಜೊತೆಗೆ 12GB/256GB, 12GB/512GB, 16GB/512GB ಹಾಗೂ 24GB/1TB ಆಂತರೀಕ ಸ್ಟೋರೇಜ್‌ ವೇರಿಯೆಂಟ್‌ ಆಯ್ಕೆಗಳನ್ನು ಪಡೆದಿದೆ.

ಕ್ಯಾಮೆರಾ ಸೆನ್ಸಾರ್ ಮಾಹಿತಿ

ಒನ್‌ಪ್ಲಸ್‌ 13 ಮೊಬೈಲ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸಲ್‌ನ ಸೋನಿ LYT 808 ಸೆನ್ಸಾರ್‌ ಪಡೆದಿದೆ. ದ್ವಿತೀಯ 50 ಮೆಗಾ ಪಿಕ್ಸಲ್‌ ಸೌಲಭ್ಯ ಪಡೆದಿದ್ದು, ತೃತೀಯ ಕ್ಯಾಮೆರಾವು 50 ಮೆಗಾಪಿಕ್ಸಲ್‌ ಸೆನ್ಸಾರ್‌ ಸೌಲಭ್ಯ ಪಡೆದಿದೆ. ಇದಲ್ಲದೆ ಮುಂಭಾಗದಲ್ಲಿ 32 ಮೆಗಾ ಪಿಕ್ಸೆಲ್‌ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಬ್ಯಾಟರಿ ಬ್ಯಾಕ್‌ಅಪ್‌ ಮಾಹಿತಿ

ಒನ್‌ಪ್ಲಸ್‌ 13 ಮೊಬೈಲ್‌ 6000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದ್ದು, ಇದಕ್ಕೆ ಪೂರಕವಾಗಿ 100W ವೈರ್ಡ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಪಡೆದಿದೆ. ಬ್ಲೂ ಕಲರ್‌ ವಿತ್ ವೆಗನ್ ಬ್ಯಾಕ್‌, ವೈಟ್‌ ಕಲರ್‌ ವಿತ್ ಮ್ಯಾಟ್‌ ಗ್ಲಾಸ್‌, ಬ್ಲ್ಯಾಕ್‌ ಕಲರ್‌ ಹಾಗೂ ವುಡ್‌ ಟೆಕ್ಸ್ಚರ್‌ ಕಲರ್‌ ಆಯ್ಕೆ ಪಡೆದುಕೊಂಡಿಒದೆ.

ಬೆಲೆ ಎಷ್ಟು

ಚೀನಾ ಮಾರುಕಟ್ಟೆಯಲ್ಲಿಯಲ್ಲಿನ ಬೆಲೆ ಮಾಹಿತಿ
12GB/256GB - RMB 4,499 (ಭಾರತದಲ್ಲಿ ಅಂದಾಜು 53,200ರೂ)
12GB/512GB - RMB 4,899 (ಭಾರತದಲ್ಲಿ ಅಂದಾಜು 57,900)
16GB/512GB - RMB 5,299 (ಭಾರತದಲ್ಲಿ ಅಂದಾಜು 62,600)
24GB/1TB - RMB 5,999 (ಭಾರತದಲ್ಲಿ ಅಂದಾಜು 70,900)

Best Mobiles in India

English summary
OnePlus 13 with Snapdragon 8 Elite chipset Launched. Check Out Price and Specifications.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+