Home
ಸುದ್ದಿಜಾಲ

ನಾಳೆ ಮಾರುಕಟ್ಟೆಯಲ್ಲಿ ಅಬ್ಬರಿಸಲು ಬರಲಿದೆ ಒನ್‌ಪ್ಲಸ್ 13R ಫೋನ್‌!

ದೇಶಿಯ ಮೊಬೈಲ್‌ ಮಾರುಕಟ್ಟೆಯಲ್ಲಿ ಒನ್‌ಪ್ಲಸ್‌ ಸಂಸ್ಥೆಯ ಮೊಬೈಲ್‌ಗಳಿಗೆ ಡಿಮ್ಯಾಂಡ್‌ ಇದೆ. ಈ ನಿಟ್ಟಿನಲ್ಲಿ ಹೊಸ ಮಾಡೆಲ್‌ಗಳನ್ನು ಪರಿಚಯಿಸುತ್ತ ಮುನ್ನಡೆದಿರುವ ಸಂಸ್ಥೆಯು ಇದೀಗ ತನ್ನ ಮೊಬೈಲ್‌ಗಳ ಲಿಸ್ಟ್‌ಗೆ ಹೊಸ ಸೇರ್ಪಡೆ ಮಾಡಲು ಸಕಲ ಸಜ್ಜಾಗಿದೆ. ಅದುವೇ ಒನ್‌ಪ್ಲಸ್ 13R (OnePlus 13R) ಸ್ಮಾರ್ಟ್‌ಫೋನ್‌ ಆಗಿದೆ. ಇನ್ನು ಈ ಬಹುನಿರೀಕ್ಷಿತ ಹೊಸ ಫೋನ್‌ ನಾಳೆ ದೇಶಿಯ ಮಾರುಕಟ್ಟೆಗೆ ಗ್ರ್ಯಾಂಡ್‌ ಎಂಟ್ರಿ ಕೊಡಲಿದೆ. ಅಂದಹಾಗೆ ಈ ಫೋನ್‌ ಕ್ವಾಲ್ಕಮ್‌ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್‌ ಪಡೆದಿರುವುದು ಬಹುತೇಕ ಖಚಿತ ಎನ್ನಲಾಗಿದೆ.

ಹೌದು, ಒನ್‌ಪ್ಲಸ್‌ ಕಂಪನಿಯ ಒನ್‌ಪ್ಲಸ್ 13R (OnePlus 13R) ಸ್ಮಾರ್ಟ್‌ಫೋನ್‌ ನಾಳೆ ಅಧಿಕೃತವಾಗಿ ಭಾರತದಲ್ಲಿ ಬಿಡುಗಡೆ ಆಗಲಿದೆ. ಈ ಸ್ಮಾರ್ಟ್‌ಫೋನ್‌ ಒನ್‌ಪ್ಲಸ್‌ ನಾರ್ಡ್‌ 3 ಫೋನಿನ ಉತ್ತರಾಧಿಕಾರಿ ಆಗಿದ್ದು, ಕೆಲವು ಅಪ್‌ಡೇಟ್‌ ಫೀಚರ್ಸ್‌ಗಳೊಂದಿಗೆ ಲಗ್ಗೆ ಇಡುವುದು ನಿಶ್ಚಿತ. ಇನ್ನು ಈ ಫೋನ್‌ ಲಾಂಚ್‌ ಕಾರ್ಯಕ್ರಮವು ಜನವರಿ 7 ರಂದು ಭಾರತೀಯ ಕಾಲಮಾನ 9PM ಗಂಟೆಗೆ ಪ್ರಾರಂಭವಾಗಲಿದೆ.

ನಾಳೆ ಮಾರುಕಟ್ಟೆಯಲ್ಲಿ ಅಬ್ಬರಿಸಲು ಬರಲಿದೆ ಒನ್‌ಪ್ಲಸ್ 13R ಫೋನ್‌!

ದೊರೆತ ಮಾಹಿತಿಗಳ ಪ್ರಕಾರ ಈ ಫೋನ್‌ 6,000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿರಲಿದ್ದು, ಇದರ ಜೊತೆಗೆ AMOLED ಸ್ಕ್ರೀನ್‌ ಹಾಗೂ 120Hz ರಿಫ್ರೆಶ್ ರೇಟ್‌ ಸೌಲಭ್ಯ ಪಡೆದಿರಲಿದೆ ಎಂದು ತಿಳಿದುಬಂದಿದೆ. ಇನ್ನುಳಿದಂತೆ ಒನ್‌ಪ್ಲಸ್ 13R ಸ್ಮಾರ್ಟ್‌ಫೋನಿನ ಇತರೆ ನಿರೀಕ್ಷಿತ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಒನ್‌ಪ್ಲಸ್ 13R ಫೋನಿನ ನಿರೀಕ್ಷಿತ ಫೀಚರ್ಸ್‌

ಒನ್‌ಪ್ಲಸ್ 13R ಮೊಬೈಲ್ 6.78 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಅನ್ನು ಹೊಂದಿರಲಿದೆ. ಇದು 1264 × 2780 ಪಿಕ್ಸೆಲ್ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದ ಬೆಂಬಲ ಪಡೆದಿರಲಿದೆ. ಈ ಡಿಸ್ಪ್ಲೇಯು ಗೊರಿಲ್ಲಾ ಗ್ಲಾಸ್ ರಕ್ಷಣೆ ಸೌಲಭ್ಯವನ್ನು ಹೊಂದಿರಲಿದೆ ಎನ್ನಲಾಗಿದೆ.

ಬರಲಿರುವ ಹೊಸ ಒನ್‌ಪ್ಲಸ್ 13R ಮೊಬೈಲ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಜೆನ್ 3 ಆಕ್ಟಾಕೋರ್ ಪ್ರೊಸೆಸರ್‌ ಪವರ್‌ ಜೊತೆಗೆ ಬಿಡುಗಡೆ ಆಗುವ ಸಾಧ್ಯತೆಗಳು ಇವೆ. ಇನ್ನು ಒನ್‌ಪ್ಲಸ್ 12R ಮೊಬೈಲ್ ಸ್ನಾಪ್‌ಡ್ರಾಗನ್ 8 ಜೆನ್ 2 ಪ್ರೊಸೆಸರ್ ಪಡೆದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಆಧಾರಿತ OxygenOS 15.0 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕೆಲಸ ಮಾಡುತ್ತದೆ. ಇದು ಒನ್‌ಪ್ಲಸ್ 13R ಫೋನ್ 12GB RAM + 256GB ಸ್ಟೋರೇಜ್‌ ಆಯ್ಕೆ ಪಡೆದಿರಲಿದೆ.

ಒನ್‌ಪ್ಲಸ್ 13R ಮೊಬೈಲ್ ಟ್ರಿಪಲ್ ಕ್ಯಾಮೆರಾ ರಚನೆ ಹೊಂದಿರಲಿದ್ದು, ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಸೆನ್ಸಾರ್‌ ಪಡೆದಿರಲಿದೆ. ಇದರ ಜೊತೆಗೆ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 50 ಮೆಗಾ ಪಿಕ್ಸೆಲ್ ಸೋನಿ ತೃತೀಯ ಕ್ಯಾಮೆರಾ ಪಡೆದಿರಲಿದೆ. ಈ ಮೊಬೈಲ್‌ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸೌಲಭ್ಯ ಒಳಗೊಂಡಿರಲಿದೆ.

ಒನ್‌ಪ್ಲಸ್ 13R ಮೊಬೈಲ್ 6,000mAh ಸಾಮರ್ಥ್ಯದ ಬಿಗ್ ಬ್ಯಾಟರಿ ಪಡೆದಿರುವುದು ಬಹುತೇಕ ಖಚಿತ ಎನ್ನಲಾಗಿದೆ. ಈ ಹಿಂದೆ ಲಾಂಚ್ ಆಗಿರುವ ಒನ್‌ಪ್ಲಸ್ 12R ಮೊಬೈಲ್ 5500mAh ಬ್ಯಾಟರಿಯನ್ನು ಪಡೆದಿದೆ. ಇನ್ನು ಒನ್‌ಪ್ಲಸ್ 13R ಮೊಬೈಲ್ 80W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಒಳಗೊಂಡಿದೆ.

Best Mobiles in India

English summary
OnePlus 13R is launching in India Tomorrow. Know Price, Specifications and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+