ಒನ್‌ಪ್ಲಸ್ 5T ಕೊಳ್ಳಲು ಕ್ಯೂನಲ್ಲಿ ನಿಂತಿದ್ದವರಿಗೆ ಸಿಹಿಸುದ್ದಿ..! ಇಂದು ಫ್ಲಾಷ್ ಸೇಲ್..!!
ಬಿಡುಗಡೆಗೂ ಮುನ್ನವೇ ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಿದ್ದ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಮತ್ತೊಂಮ್ಮೆ ಮಾರುಕಟ್ಟೆಯಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದೆ. ಈ ಮೂಲಕ ಗ್ರಾಹಕರ ನಂಬಿಗೆ ಪಾತ್ರವಾಗಿರುವುದನ್ನು ಸಾಧಿಸಿತೋರಿಸಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಒನ್‌ಪ್ಲಸ್ 5 ಸ್ಮಾರ್ಟ್‌ಫೋನ್ ನಿರ್ಮಿಸಿದ್ದ ದಾಖಲೆಯ ಎರಡು ಪಟ್ಟು ವೇಗವಾಗಿ ಸೇಲ್ ಆಗಿ ಹೊಸ ದಾಖಲೆಗೆ ಪಾತ್ರವಾಗಿದೆ.

ಬಿಡುಗಡೆಯ ದಿನದಲ್ಲಿ ಕೇವಲ ಆರು ಗಂಟೆಗಳಲ್ಲಿ ಅಮೆಜಾನ್.ಇನ್‌ನಲ್ಲಿ ಸೋಲ್ಡ್ ಔಟ್ ಆದ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್, ಈ ಹಿಂದಿನ ಫೋನ್ ಗಳಿಂತ ವಿಭಿನ್ನವಾಗಿರುವುದಲ್ಲದೇ ಬೆಲೆಯಲ್ಲಿಯೂ ಹೆಚ್ಚೇನು ವ್ಯತ್ಯಾಸವನ್ನು ಕಾಣದ ಕಾರಣ ಗ್ರಾಹಕರಿಗೆ ಬಹುಬೇಗನೆ ಮೆಚ್ಚುಗೆ ಆಗಿದೆ ಎನ್ನಲಾಗಿದೆ.
ಓದಿರಿ: ರೂ.925ಕ್ಕೆ ಡ್ಯುಯಲ್ ಸಿಮ್ ಹಾಕುವ ಫೋನ್: ವಿಶೇಷತೆಗಳೇನು..?
ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಬಹುಬೇಗನೆ ಸೇಲ್ ಆಗಿರುವ ಹಿನ್ನೆಲೆಯಲ್ಲಿ ಅಮೆಜಾನ್.ಇನ್ ನಲ್ಲಿ ನವೆಂಬರ್ 24ರಂದು ರಿವ್ಯೂ ಸೇಲ್ ನಡೆಸಲಿದ್ದು, ಅಂದು ಮಧ್ಯಾಹ್ನ 12 ರಿಂದ 1 ಗಂಟೆಯ ವರೆಗೆ ಈ ಸೇಲ್ ನಡೆಯಲಿದ್ದು, ಒಂದು ಗಂಟೆಯಲ್ಲಿ ಮತ್ತೇ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಖರೀದಿಸುವ ಅವಕಾಶವನ್ನು ಅಭಿಮಾನಿಗಳಿಗೆ ಮಾಡಿಕೊಡಲಾಗಿದೆ.

ವಿಶ್ವದ ಎಲ್ಲೇಡೆ ಪಾಪ್-ಆಪ್ ಇವೆಂಟ್:
ಒನ್‌ಪ್ಲಸ್ ತನ್ನ ಅಭಿಮಾನಿಗಳಿಗಾಗಿ ವಿಶೇಷವಾಗಿ ಪಾಪ್-ಆಪ್ ಕಾರ್ಯಕ್ರಮಗಳನ್ನು ವಿಶ್ವದ ನಾನಾ ಭಾಗಗಳಲ್ಲಿ ಆಯೋಜಿಸಲು ಮುಂದಾಗಿದೆ. ಇಲ್ಲಿ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಫಸ್ಟ್ ಹಾಂಡ್ ಎಕ್ಸ್‌ಪೀರಿಯನ್ಸ್ ಮಾಡಬಹುದಾಗಿದ್ದು, ಅಲ್ಲದೇ ಈ ಸ್ಮಾರ್ಟ್‌ಫೋನ್ ತಯಾರಿಕೆಯ ಹಿಂದಿರುವ ವ್ಯಕ್ತಿಗಳೊಂದಿಗೆ ಅಭಿಮಾನಿಗಳಿಗೆ ಮಾತನಾಡುವ ಅವಕಾಶವನ್ನು ಮಾಡಿಕೊಡಲಿದೆ. ಭಾರತದಲ್ಲಿ ದೆಹಲಿ ಮತ್ತು ಬೆಂಗಳೂರಿನಲ್ಲಿ ಸಹ ಈ ಕಾರ್ಯಕ್ರಮ ನಡೆಯಲಿದೆ.

ಸ್ಮಾರ್ಟ್‌ಫೋನ್ ಕೊಳ್ಳುವ ಅವಕಾಶ:
ಇದಲ್ಲದೇ ಪಾಪ್-ಆಪ್ ಇವೆಂಟ್ ನಲ್ಲಿ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಕುರಿತ ಸಂಪೂರ್ಣ ಮಾಹಿತಿಯೂ ದೊರೆಯಲಿದೆ. ಅಲ್ಲದೇ ಈ ಇವೆಂಟ್‌ನಲ್ಲಿ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಕುರಿತ ಸಂಪೂರ್ಣ ಪ್ರಶ್ನೇಗಳಿಗೆ ಉತ್ತರವನ್ನು ಕಂಪನಿಯ ತಜ್ಞರು ನೀಡಲಿದ್ದು, ಅಲ್ಲದೇ ಅಲ್ಲಿಯೇ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಕೊಳ್ಳುವ ಅವಕಾಶವು ಇರಲಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಹೊಸ ದಾಖಲೆ ನಿರ್ಮಾಣ:
ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ವಿಭಾಗದಲ್ಲಿ ಲಭ್ಯವಿರುವ ಟಾಪ್ ಎಂಡ್ ಫೋನ್‌ಗಳಲ್ಲಿ ಬೆಸ್ಟ್‌ಫೋನ್ ಎನ್ನುವ ಹಣೆ ಪಟ್ಟಿಯನ್ನು ಈಗಾಗಲೇ ಪಡೆದುಕೊಂಡಿದ್ದು, ಬೆಲೆ, ವಿಶೇಷತೆ ಸೇರಿದಂತೆ ಎಲ್ಲಾ ವಿಭಾಗದಲ್ಲಿಯೂ ಉತ್ತಮ ಅಂಕವನ್ನು ಪಡೆದುಕೊಂಡಿದ್ದು, ಈ ಹಿನ್ನಲೆಯಲ್ಲಿ ಬಿಡುಗಡೆಯ ದಿನವೇ ಮಾರುಕಟ್ಟೆಯಲ್ಲಿ ಹಿಂದಿನ ದಾಖಲೆಗಳನ್ನು ಅಳಿಸಿ ಹಾಕಿದೆ.
ಈ ಮಾಹಿತಿಯನ್ನು ಒನ್‌ಪ್ಲಸ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ನಿಂದ ಹಂಚಿಕೊಂಡಿದ್ದು, ಆರು ಗಂಟೆಗಳಲ್ಲಿ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ 'ವೇಗವಾಗಿ ಮಾರಾಟವಾದ ಸ್ಮಾರ್ಟ್‌ಫೋನ್' ಎಂಬ ದಾಖಲೆಗೆ ಪಾತ್ರವಾಗಿದೆ ಎಂದು ತಿಳಿಸಿದೆ.

ನೀಡುವ ಬೆಲೆಗೆ ಬೆಸ್ಟ್ ಫೋನ್ ಒನ್‌ಪ್ಲಸ್ 5T:
ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ವಿಶೇಷತೆಗಳನ್ನು ನೋಡುವುದಾದರೆ ಈ ಫೋನ್ ನೀಡುವ ಬೆಲೆಗೆ ಬೆಸ್ಟ್ ಎನ್ನಿಸುವುದು ಖಂಡಿತ. 6 ಇಂಚಿನ FHD ಡಿಸ್‌ಪ್ಲೇ ಈ ಫೋನಿನಲ್ಲಿದ್ದು, ಅಲ್ಲದೇ ಮಾರುಕಟ್ಟೆಯ ಟ್ರೆಂಡ್ ಆದ 18:9 ಅನುಪಾತದ ಡಿಸ್‌ಪ್ಲೇ ಇದಾಗಿದೆ. ಅಲ್ಲದೇ 3045mAh ಬ್ಯಾಟರಿಯನ್ನು ಈ ಫೋನಿನಲ್ಲಿ ಅಳವಡಿಸಲಾಗಿದ್ದು, ಸ್ನಾಪ್‌ಡ್ರಾಗನ್ 835 ಚಿಪ್ ಸೆಟ್ ಅನ್ನು ವೇಗದ ಕಾರ್ಯಚರಣೆಗಾಗಿಯೇ ನೀಡಲಾಗಿದೆ.
ಇಲ್ಲದೇ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ 8GB ಮತ್ತು 6GB RAM ಆವೃತ್ತಿಯಲ್ಲಿ ದೊರೆಯಲಿದೆ. ಅದಲ್ಲದೇ 128GB ಮತ್ತು 64GB ಇಂಟರ್ನಲ್ ಮೆಮೊರಿಯೊಂದಿಗೆ ಈ ಫೋನ್ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದೆ.

ಬೆಲೆ:
6GB RAM ಮತ್ತು 64GB ಇಂಟರ್‌ನಲ್ ಮೆಮೊರಿಯ ಒನ್‌ಪ್ಲಸ್ 5T ರೂ.32,999ಕ್ಕೆ ಮತ್ತು 8GB RAM ಹಾಗೂ 128GB ಇಂಟರ್‌ನಲ್ ಮೆಮೊರಿಯ ಒನ್‌ಪ್ಲಸ್ 5T ರೂ.37,999ಕ್ಕೆ ದೊರೆಯಲಿದೆ, ಅಮೆಜಾನ್ ವೆಬ್‌ಸೈಟ್ ಸೇರಿದಂತೆ ಒನ್‌ಪ್ಲಸ್ ತಾಣದಲ್ಲಿಯೂ ಈ ಫೋನ್ ಮಾರಾಟವಾಗುತ್ತಿದೆ.


Click it and Unblock the Notifications








