'ಒನ್‌ಪ್ಲಸ್ 7 ಪ್ರೊ' ಮತ್ತು 'ಒನ್‌ಪ್ಲಸ್ 7T ಪ್ರೊ' ಬೆಲೆಯಲ್ಲಿ ಭರ್ಜರಿ ಇಳಿಕೆ!
ಇತ್ತೀಚಿಗೆ ಮೊಬೈಲ್ ಮಾರುಕಟ್ಟೆಯಲ್ಲಿ ಫ್ಲ್ಯಾಗ್‌ಶಿಪ್ ಮಾದರಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಒನ್‌ಪ್ಲಸ್ ಕಂಪನಿಯ ಒನ್‌ಪ್ಲಸ್ 7 ಪ್ರೊ, ಒನ್‌ಪ್ಲಸ್ 7T ಮತ್ತು ಒನ್‌ಪ್ಲಸ್ 7T ಪ್ರೊ ಭಾರಿ ಸದ್ದು ಮಾಡಿವೆ. ಅತ್ಯುತ್ತಮ ಫೀಚರ್ಸ್‌ಗಳಿಂದ ಗ್ರಾಹಕರನ್ನು ಆಕರ್ಷಿಸಿರುವ ಈ ಸ್ಮಾರ್ಟ್‌ಫೋನ್‌ಗಳು ಈಗ ಭರ್ಜರಿ ಬೆಲೆ ಇಳಿಕೆ ಕಂಡಿವೆ. ಹೀಗಾಗಿ ಒನ್‌ಪ್ಲಸ್ ಫ್ಲ್ಯಾಗ್‌ಶಿಪ್ ಫೋನ್ ಖರೀದಿಸಲು ಇದುವೇ ರೈಟ್ ಟೈಮ್ ಆಗಿದೆ.

ಹೌದು, ಒನ್‌ಪ್ಲಸ್ ಸಂಸ್ಥೆಯ ಹೊಸ ಒನ್‌ಪ್ಲಸ್ 7 ಪ್ರೊ, ಒನ್‌ಪ್ಲಸ್ 7T ಮತ್ತು ಒನ್‌ಪ್ಲಸ್ 7T ಪ್ರೊ ಸ್ಮಾರ್ಟ್‌ಫೋನ್‌ಗಳು ಇದೀಗ ಬೆಲೆ ಕಡಿತ ಆಗಿವೆ. ಜನಪ್ರಿಯ ಇ-ಕಾಮರ್ಸ್ ತಾಣ ಆಯೋಜಿಸಿರುವ ಅಮೆಜಾನ್ ಫ್ಯಾಬ್ ಸೇಲ್‌ನಲ್ಲಿ ಈ ಸ್ಮಾರ್ಟ್‌ಫೋನ್‌ಗಳು ಅಧಿಕ ಡಿಸ್ಕೌಂಟ್ ಪಡೆದಿವೆ. ಇದರೊಂದಿಗೆ ನೋ ಕಾಸ್ಟ್ ಇಎಮ್‌ಐ, ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಸುಮಾರು 2000ರೂ.ವರೆಗೂ ಡಿಸ್ಕೌಂಟ್ ದೊರೆಯಲಿದೆ. ಹಾಗಾದರೇ ಒನ್‌ಪ್ಲಸ್‌ನ ಈ ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ಗಳೆನು ಮತ್ತು ಆಫರ್ ಬೆಲೆ ಎಷ್ಟು ಎಂಬುದನ್ನು ಮುಂದೆ ತಿಳಿಯೋಣ.

ಒನ್‌ಪ್ಲಸ್ 7 ಪ್ರೊ
ಒನ್‌ಪ್ಲಸ್ 7 ಪ್ರೊ ಸ್ಮಾರ್ಟ್‌ಫೋನ್ 2019ರ ಮೊದಲ ಫ್ಲ್ಯಾಗ್‌ಶಿಪ್ ಫೋನಾಗಿದ್ದು, ಇದೀಗ ಭಾರಿ ಬೆಲೆ ಇಳಿಕೆ ಕಂಡಿದೆ. 8GB RAM ಮತ್ತು 256GB ವೇರಿಯಂಟ್ ಸಾಮರ್ಥ್ಯದ ಒನ್‌ಪ್ಲಸ್ 7 ಪ್ರೊ ಈಗ 10,000ರೂ. ಇಳಿಕೆ ಆಗಿದ್ದು, 42,999ರೂ.ಗಳಿಗೆ ಸಿಗಲಿದೆ. ಗ್ರಾಹಕರು ಎಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ನಿಂದ ಖರೀದಿಸಿದರೇ 2000ರೂ. ಹೆಚ್ಚುವರಿ ಡಿಸ್ಕೌಂಟ್ ಲಭ್ಯವಾಗಲಿದೆ. ಇನ್ನು ಈ ಫೋನ್ 6.5 ಇಂಚಿನ HD+ ಡಿಸ್‌ಪ್ಲೇ ಹೊಂದಿದ್ದು, 48ಎಂಪಿ ಕ್ಯಾಮೆರಾ ಜೊತೆಗೆ 4000mAh ಬ್ಯಾಟರಿ ಬಾಳಿಕೆಯನ್ನು ಪಡೆದಿದೆ.

ಒನ್‌ಪ್ಲಸ್ 7T
ಒನ್‌ಪ್ಲಸ್ ಕಂಪನಿಯ ಇತ್ತೀಚಿನ ಟ್ರೆಂಡಿಂಗ್ ಫೋನ್ ಆಗಿ ಗುರುತಿಸಿಕೊಂಡಿರುವ ಒನ್‌ಪ್ಲಸ್ 7T ಸ್ಮಾರ್ಟ್‌ಫೋನ್ ಸಹ ಬೆಲೆ ಇಳಿಕೆ ಕಂಡಿದೆ. 34,999ರೂ.ಗಳಿಗೆ ಒನ್‌ಪ್ಲಸ್ 7T ಯ 8GB RAM ಮತ್ತು 256GB ವೇರಿಯಂಟ್ ಸ್ಮಾರ್ಟ್‌ಫೋನ್ ಸಿಗಲಿದೆ. ಇನ್ನು ಗ್ರಾಹಕರು ಎಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ನಿಂದ ಖರೀದಿಸಿದರೇ 1,500 ರೂ. ಹೆಚ್ಚುವರಿ ಡಿಸ್ಕೌಂಟ್ ಸಹ ಲಭ್ಯವಾಗಲಿದೆ. ಹಾಗೆಯೇ ಈ ಫೋನ್ 6.5 ಇಂಚಿನ AMOLED ಡಿಸ್‌ಪ್ಲೇ ಹೊಂದಿದ್ದು, ಜೊತೆಗೆ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಪಡೆದಿದೆ.

ಒನ್‌ಪ್ಲಸ್ 7T ಪ್ರೊ
ಒನ್‌ಪ್ಲಸ್ ಕಂಪನಿಯ ಇತ್ತೀಚಿನ ಒನ್‌ಪ್ಲಸ್ 7T ಪ್ರೊ ಸ್ಮಾರ್ಟ್‌ಫೋನ್ ಮತ್ತು McLaren ಎಡಿಷನ್ 3000ರೂ. ಬೆಲೆ ಇಳಿಕೆ ಕಂಡಿದೆ. 50,999 ರೂ.ಗಳಿಗೆ ಒನ್‌ಪ್ಲಸ್ 7T ಪ್ರೊ ಲಭ್ಯ ಹಾಗೂ ಒನ್‌ಪ್ಲಸ್ 7T ಪ್ರೊ McLaren ಎಡಿಷನ್ 55,999ರೂ.ಗಳಿಗೆ ಸಿಗಲಿದೆ. ಇನ್ನು ಗ್ರಾಹಕರು ಎಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ನಿಂದ ಖರೀದಿಸಿದರೇ ಹೆಚ್ಚುವರಿ ಡಿಸ್ಕೌಂಟ್ ಮತ್ತು ನೋ ಕಾಸ್ಟ್ ಇಎಮ್‌ಐ ಸೌಲಭ್ಯಗಳು ಸಹ ಲಭ್ಯವಾಗಲಿದೆ.


Click it and Unblock the Notifications








