ಭಾರಿ ಬೆಲೆ ಇಳಿಕೆ ಕಂಡ 'ಒನ್‌ಪ್ಲಸ್‌ 7 ಪ್ರೊ' ಮತ್ತು 'ಒನ್‌ಪ್ಲಸ್‌ 7T'!

|

ಒನ್‌ಪ್ಲಸ್‌ ಸಂಸ್ಥೆಯ 'ಒನ್‌ಪ್ಲಸ್‌ 7 ಪ್ರೊ' ಮತ್ತು 'ಒನ್‌ಪ್ಲಸ್‌ 7T' ಸ್ಮಾರ್ಟ್‌ಫೋನ್‌ಗಳು ಈಗಾಗಲೇ ದೇಶಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡಿವೆ. ಆದ್ರೆ ಇದೀಗ ಒನ್‌ಪ್ಲಸ್‌ ಸಂಸ್ಥೆಯು ಈ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಭರ್ಜರಿ ಬೆಲೆ ಇಳಿಕೆ ಮಾಡಿದ್ದು, ಇನ್ನಷ್ಟು ಸೌಂಡ್‌ ಮಾಡಲಿವೆ. ಸದ್ಯ 'ಒನ್‌ಪ್ಲಸ್‌ 7T' ಫೋನಿನ ಆರಂಭಿಕ ಬೆಲೆ 34,999ರೂ.ಗಳಾಗಿದ್ದು, ಹಾಗೆಯೇ 'ಒನ್‌ಪ್ಲಸ್‌ 7 ಪ್ರೊ' ಸ್ಮಾರ್ಟ್‌ಫೋನ್ ಬೆಲೆಯು 39,999ರೂ.ಗಳಾಗಿದೆ.

ಒನ್‌ಪ್ಲಸ್‌ ಸಂಸ್ಥೆ

ಹೌದು, ಭಾರತದಲ್ಲಿ 'ಒನ್‌ಪ್ಲಸ್‌ ಸಂಸ್ಥೆ'ಯು ಐದು ವರ್ಷ ಪೂರೈಸಿದ ಸಂಭ್ರಮಕ್ಕಾಗಿ ಸಂಸ್ಥೆಯು ತನ್ನ ಜನಪ್ರಿಯ ಫ್ಲ್ಯಾಗ್‌ಶಿಫ್‌ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಭಾರಿ ಕಡಿತ ಘೋಷಿಸಿದೆ. ಒನ್‌ಪ್ಲಸ್‌ ಈ ಸಂಭ್ರಮಾಚರಣೆಯನ್ನು ಅಮೆಜಾನ್‌ನಲ್ಲಿ ಆಯೋಜಿಸಿದ್ದು, ಅಮೆಜಾನ್‌ ತಾಣದಲ್ಲಿ ಈ ಎರಡು ಸ್ಮಾರ್ಟ್‌ಫೋನ್‌ಗಳಿಗೆ ಡಿಸ್ಕೌಂಟ್‌ ಲಭ್ಯವಿದೆ. ಈ ವಿಶೇಷ ಕೊಡುಗೆಯು ಇದೇ ಡಿಸೆಂಬರ್ 2ರ ವರೆಗೂ ಮಾತ್ರ ಇರಲಿದೆ. ಹಾಗಾದರೇ 'ಒನ್‌ಪ್ಲಸ್‌ 7 ಪ್ರೊ' ಮತ್ತು 'ಒನ್‌ಪ್ಲಸ್‌ 7T' ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

'ಒನ್‌ಪ್ಲಸ್‌ 7T' ಡಿಸ್‌ಪ್ಲೇ ಹೇಗಿದೆ

'ಒನ್‌ಪ್ಲಸ್‌ 7T' ಡಿಸ್‌ಪ್ಲೇ ಹೇಗಿದೆ

ಒನ್‌ಪ್ಲಸ್‌ 7T' ಸ್ಮಾರ್ಟ್‌ಫೋನ್ 2,400 x 1,080 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.55 ಇಂಚಿನ ಫ್ಲ್ಯೂಡ್‌ AMOLED ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಡಿಸ್‌ಪ್ಲೇಯ ಅನುಪಾತವು 20:9 ಆಗಿದೆ. ಇದರೊಂದಿಗೆ ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 402 PPI ಆಗಿದ್ದು, ಡಿಸ್‌ಪ್ಲೇಯ ರಿಫ್ರೇಶ್‌ ರೇಟ್ 90Hz ಆಗಿದೆ. ಹಾಗೆಯೇ 3D ಕಾರ್ನಿಂಗ್ ಗೊರಿಲ್ಲಾ ಗ್ಲಾಸ್‌ ಅನ್ನು ಪಡೆದಿದೆ.

'ಒನ್‌ಪ್ಲಸ್‌ 7T' ಪ್ರೊಸೆಸರ್ ಸಾಮರ್ಥ್ಯ

'ಒನ್‌ಪ್ಲಸ್‌ 7T' ಪ್ರೊಸೆಸರ್ ಸಾಮರ್ಥ್ಯ

ಒನ್‌ಪ್ಲಸ್‌ 7T' ಸ್ಮಾರ್ಟ್‌ಫೋನ್ ಆಕ್ಟಾಕೋರ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿದ್ದು, ಆಂಡ್ರಾಯ್ಡ್‌ 10 ಆಧಾರಿತ ಆಕ್ಸಿಜನ್ ಓಎಸ್‌ 10 ಬೆಂಬಲವನ್ನು ಒಳಗೊಂಡಿದೆ. ಜೊತೆಗೆ ಆಂಡ್ರಿನೊ 640 GPU ಸಹ ನೀಡಲಾಗಿದೆ. ಇನ್ನು ಎರಡು ವೇರಿಯಂಟ್‌ ಆಯ್ಕೆಗಳನ್ನು ಹೊಂದಿದ್ದು, ಅವುಗಳು 8GB RAM ಮತ್ತು 128GB ಆಂತರಿಕ ಸ್ಟೋರೇಜ್ ಹಾಗೂ 8GB RAM ಮತ್ತು 256GB ಆಂತರಿಕ ಸ್ಟೋರೇಜ್ ಆಗಿದೆ.

'ಒನ್‌ಪ್ಲಸ್‌ 7T' ಮೂರು ಕ್ಯಾಮೆರಾ

'ಒನ್‌ಪ್ಲಸ್‌ 7T' ಮೂರು ಕ್ಯಾಮೆರಾ

ಒನ್‌ಪ್ಲಸ್‌ 7T' ಸ್ಮಾರ್ಟ್‌ಫೋನ್ ತ್ರಿವಳಿ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾವು 48ಎಂಪಿ ಸೋನಿಯ IMX586 ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 12ಎಂಪಿ ಸೆನ್ಸಾರ್‌ ಟೆಲಿಪೋಟೋ ಲೆನ್ಸ್‌ ಪಡೆದಿದ್ದು, ತೃತೀಯ ಕ್ಯಾಮೆರಾವು 16ಎಂಪಿಯ ಅಲ್ಟ್ರಾ ವೈಲ್ಡ್‌ ಆಂಗಲ್ ಲೆನ್ಸ್ ಸಾಮರ್ಥ್ಯದಲ್ಲಿದೆ. ಹಾಗೆಯೇ ಸೆಲ್ಫಿ ಕ್ಯಾಮೆರಾವು 16ಎಂಪಿ ಸಾಮರ್ಥ್ಯದಲ್ಲಿದ್ದು, ಸೋನಿಯ IMX471 ಸೆನ್ಸಾರ್ ಪಡೆದಿದೆ. 4K ವಿಡಿಯೊ ಬೆಂಬಲಿಸುತ್ತದೆ.

ಒನ್‌ಪ್ಲಸ್‌ 7T' ಬ್ಯಾಟರಿ ಪವರ್

ಒನ್‌ಪ್ಲಸ್‌ 7T' ಬ್ಯಾಟರಿ ಪವರ್

ಒನ್‌ಪ್ಲಸ್‌ 7T' ಸ್ಮಾರ್ಟ್‌ಫೋನ್ 3,800mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆ ಹೊಂದಿದ್ದು, ಇದರೊಂದಿಗೆ ವ್ರಾಪ್‌ ಚಾರ್ಜ್‌ 30T ಫಾಸ್ಟ್‌ ಚಾರ್ಜಿಂಗ್ ತಂತ್ರಜ್ಞಾನದ ಸೌಲಭ್ಯವನ್ನು ಒಳಗೊಂಡಿದೆ. ಈ ಚಾರ್ಜರ್ ನೆರವಿನಿಂದ ಕೇವಲ 30 ನಿಮಿಷದಲ್ಲಿ ಸ್ಮಾರ್ಟ್‌ಫೋನ್ 0 ಯಿಂದ 70 ಪರ್ಸೆಂಟ್ ವರೆಗೂ ಚಾರ್ಜ್ ಪಡೆದುಕೊಳ್ಳುತ್ತದೆ. ಬ್ಯಾಟರಿ ಬ್ಯಾಕ್‌ಅಪ್‌ ಸಹ ಅತ್ಯುತ್ತಮವಾಗಿ ನೀಡಬಲ್ಲದು.

ಒನ್‌ಪ್ಲಸ್‌ 7 ಪ್ರೊ ಡಿಸ್‌ಪ್ಲೇ

ಒನ್‌ಪ್ಲಸ್‌ 7 ಪ್ರೊ ಡಿಸ್‌ಪ್ಲೇ

6.67 ಇಂಚಿನ ಕ್ವಾಡ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ನೀಡಲಾಗಿದ್ದು, ಡಿಸ್‌ಪ್ಲೇ ರೆಸಲ್ಯೂಶನ್ ಸಾಮರ್ಥ್ಯವು 3120x1440 ಆಗಿದೆ. ಹಾಗೇ ಫೋನಿನ್ ಸ್ಕ್ರೀನ್‌ನಿಂದ ಬಾಡಿಯ ನಡುವಿನ ಅನುಪಾತವು ಶೇ. 93ರಷ್ಟು ಆಗಿದ್ದು, ಡಿಸ್‌ಪ್ಲೇ ಪಿಕ್ಸಲ್ ಡೆನ್ಸಿಟಿಯು 516 ಆಗಿದೆ. ಡಿಸ್‌ಪ್ಲೇಯು ಸಂಪೂರ್ಣ ನಾಚ್ ರಹಿತವಾಗಿದ್ದು, ಸ್ಕ್ರೀನ್ ವಿಶಾಲವಾಗಿ ಕಾಣಿಸಲಿದೆ.

ಒನ್‌ಪ್ಲಸ್‌ 7 ಪ್ರೊ ಪ್ರೊಸೆಸರ್‌

ಒನ್‌ಪ್ಲಸ್‌ 7 ಪ್ರೊ ಪ್ರೊಸೆಸರ್‌

ಒನ್‌ಪ್ಲಸ್‌ 7 ಪ್ರೊ ಸ್ಮಾರ್ಟ್‌ಫೋನ್‌ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855 ಸಾಮರ್ಥ್ಯದ ಬಲವಾದ ಪ್ರೊಸೆಸರ್ ಅನ್ನು ಒದಗಿಸಲಾಗಿದೆ. ಇದರೊಂದಿಗೆ 12GB RAM ಪ್ರೊಸೆಸರ್‌ಗೆ ಬೆಂಬಲ ನೀಡಲಿದೆ. ಆಂತರಿಕ ಸಂಗ್ರಹಕ್ಕಾಗಿ 256GB ಸ್ಥಳಾವಕಾಶವನ್ನು ಇದಗಿಸಲಾಗಿದ್ದು, ಹೆಚ್ಚಿನ ಡೇಟಾ ಬೇಡುವ ಗೇಮ್‌ಗಳನ್ನು ಆಡಲು ಮತ್ತು ಹೈ ಎಂಡ್‌ ಆಪ್‌ಗಳನ್ನು ಬಳಸಬಹುದಾಗಿದೆ.

ಒನ್‌ಪ್ಲಸ್‌ 7 ಪ್ರೊ -ತ್ರಿವಳಿ ಕ್ಯಾಮೆರಾ

ಒನ್‌ಪ್ಲಸ್‌ 7 ಪ್ರೊ -ತ್ರಿವಳಿ ಕ್ಯಾಮೆರಾ

ಸ್ಮಾರ್ಟ್‌ಫೋನಿನ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ಆಯ್ಕೆಯನ್ನು ನೀಡಲಾಗಿದ್ದು, ಪ್ರಾಥಮಿಕ ಕ್ಯಾಮೆರಾವು 48 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿದೆ. ಸೆಕೆಂಡರಿ ಕ್ಯಾಮೆರಾವು 16 ಮೆಗಾಪಿಕ್ಸ್‌ನಲ್ಲಿದ್ದು, ಅಲ್ಟ್ರಾವೈಲ್ಡ್ ಆಂಗಲ್ ಲೆಸ್‌ ಹೊಂದಿದೆ. ಹಾಗೇ ಮೂರನೇ ಕ್ಯಾಮೆರಾವು 8 ಮೆಗಾಪಿಕ್ಸಲ್ನಲ್ಲಿದ್ದು, ಟೆಲಿಪೋಟೊ ಸೆನ್ಸಾರ್‌ ಲೆನ್ಸ್ ಸಾಮರ್ಥ್ಯದಲ್ಲಿದೆ.

ಒನ್‌ಪ್ಲಸ್‌ 7 ಪ್ರೊ-ಸೆಲ್ಫಿ ಕ್ಯಾಮೆರಾ

ಒನ್‌ಪ್ಲಸ್‌ 7 ಪ್ರೊ-ಸೆಲ್ಫಿ ಕ್ಯಾಮೆರಾ

ಒನ್‌ಪ್ಲಸ್‌ 7 ಪ್ರೊ ಸ್ಮಾರ್ಟ್‌ಫೋನ ಮೂಲಕ ಕಂಪನಿಯು ಮೊದಲ ಬಾರಿಗೆ ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾವನ್ನು ಪರಿಚಯಿಸಿದ್ದು, ಸೆಲ್ಫಿ ಕ್ಯಾಮೆರಾವು 16 ಮೆಗಾಪಿಕ್ಸಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಸೆಲ್ಫಿ ಕ್ಯಾಮೆರಾ ಅತ್ಯುತ್ತಮ ಆಯ್ಕೆಗಳನ್ನು ಸಹ ನೀಡಲಾಗಿದ್ದು, ಉತ್ತಮವಾಗಿ ಫೋಟೋ ಮುಡಿಬರಲು ಸಹಕರಿಸಲಿವೆ.

ಒನ್‌ಪ್ಲಸ್‌ 7 ಪ್ರೊ ಬ್ಯಾಟರಿ

ಒನ್‌ಪ್ಲಸ್‌ 7 ಪ್ರೊ ಬ್ಯಾಟರಿ

ಒನ್‌ಪ್ಲಸ್‌ 7 ಪ್ರೊ ಸ್ಮಾರ್ಟ್‌ಫೋನನಲ್ಲಿ 4000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು, ಸ್ಮಾರ್ಟ್‌ಫೋನ್ ದೀರ್ಘಕಾಲದ ಬಾಳಿಕೆ ಬರಲು ಇದು ಸಹಕರಿಸಲಿದೆ.ಅತ್ಯುತ್ತಮ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗಿದೆ. ಕೇವಲ 10 ನಿಮಿಷದ ಚಾರ್ಜ್‌ ಸುಮಾರು 10 ಗಂಟೆಗಳವರೆಗೆ ಸ್ಮಾರ್ಟ್‌ಫೋನ್‌ಗೆ ಬಲ ನೀಡಲಿದೆ.

Best Mobiles in India

English summary
OnePlus is celebrating the fifth year of its debut in the Indian market with a 5th anniversary celebration sale on Amazon. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X