ಭಾರತದಲ್ಲಿ ಇಂದು 'ಒನ್‌ಪ್ಲಸ್ 7T ಪ್ರೊ'ನ ಮೊದಲ ಸೇಲ್ ಆರಂಭ!
ಒನ್‌ಪ್ಲಸ್ ಸಂಸ್ಥೆಯ ಫ್ಲ್ಯಾಗ್‌ಶಿಫ್ ಸ್ಮಾರ್ಟ್‌ಫೋನ್ 'ಒನ್‌ಪ್ಲಸ್ 7T ಪ್ರೊ' ಸ್ಮಾರ್ಟ್‌ಫೋನ್ ಭಾರತದಲ್ಲಿ ಇಂದು ಮೊದಲ ಸೇಲ್ ಆರಂಭಿಸಲಿದೆ. ಈ ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855 ಪ್ಲಸ್ ಪ್ರೊಸೆಸರ್ ಮತ್ತು ಇತ್ತೀಚಿನ ಆಂಡ್ರಾಯ್ಡ್ 10 ಆಕ್ಸಿಜನ್ ಓಎಸ್ ಸಪೋರ್ಟ್ ಒಳಗೊಂಡಿದೆ. ಈಗಾಗಲೇ ಹೈ ಎಂಡ್ ಫೀಚರ್ಸ್‌ಗಳಿಂದ ಗ್ರಾಹಕರನ್ನು ಸೆಳೆದಿರುವ ಈ ಸ್ಮಾರ್ಟ್‌ಫೋನ್ ಇಂದಿನಿಂದ ಖರೀದಿಗೆ ಮುಕ್ತವಾಗಲಿದೆ.

ಹೌದು, ಜನಪ್ರಿಯ ಒನ್‌ಪ್ಲಸ್ ಕಂಪನಿಯ 'ಒನ್‌ಪ್ಲಸ್ 7T ಪ್ರೊ' ಸ್ಮಾರ್ಟ್‌ಫೋನ್ ಇಂದು (ಅಕ್ಟೋಬರ್ 12) ಮಧ್ಯಾಹ್ನ 12ರಿಂದ ಮಾರಾಟ ಆರಂಭಿಸಲಿದೆ. ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ಮತ್ತು ಒನ್‌ಪ್ಲಸ್‌ನ ಅಧಿಕೃತ ವೆಬ್‌ತಾಣಗಳಲ್ಲಿ ಗ್ರಾಹಕರು ಖರೀದಿಸಬಹುದಾಗಿದೆ. ಈ ಸ್ಮಾರ್ಟ್‌ಫೋನ್ ಆರಂಭಿಕ ಬೆಲೆಯು 53,999ರೂ.ಗಳಾಗಿದೆ. ಹಾಗಾದರೇ ಒನ್‌ಪ್ಲಸ್ 7T ಪ್ರೊ' ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಸೇಲ್ ಮತ್ತು ಆಫರ್
'ಒನ್‌ಪ್ಲಸ್ 7T ಪ್ರೊ' ಇಂದು ಸೇಲ್ ಆರಂಭಿಸಲಿದ್ದು, ಅಮೆಜಾನ್ ಇ-ಕಾಮರ್ಸ್ ತಾಣ ಮತ್ತು ಒನ್‌ಪ್ಲಸ್ ಅಧಿಕೃತ ವೆಬ್‌ತಾಣದಲ್ಲಿ ಖರೀದಿಗೆ ಲಭ್ಯವಾಗಲಿದ್ದು, ಹಾಗೆಯೇ ಆಫ್‌ಲೈನ್‌ನಲ್ಲಿಯೂ ಸಿಗಲಿದೆ ಎಂದು ಕಂಪನಿಯು ತಿಳಿಸಿದೆ. ಎಚ್‌ಡಿಎಫ್‌ಸಿ ಕಾರ್ಡ್ ಬಳಸಿ ಖರೀದಿಸಿದರೇ 3,000ರೂ ಡಿಸ್ಕೌಂಟ್ ಸಿಗಲಿದ್ದು, ಐಸಿಐಸಿಐ ಕಾರ್ಡ್ ಬಳಸಿದರೇ 1750ರೂ.ಡಿಸ್ಕೌಂಟ್ ಮತ್ತು ಇತರೆ ಬ್ಯಾಂಕ್ ಕಾರ್ಡ್‌ಗಳಿಗೂ ಸುಮಾರು 1500ರೂ.ಗಳ ವರೆಗೆ ರಿಯಾಯಿತಿ ಸಿಗಲಿದೆ.

ಡಿಸ್‌ಪ್ಲೇ ರಚನೆ
'ಒನ್‌ಪ್ಲಸ್ 7T ಪ್ರೊ' ಸ್ಮಾರ್ಟ್‌ಫೋನ್ 1,440 x 3,120 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.67 ಇಂಚಿನ QHD ಫ್ಲ್ಯುಡ್ AMOLED ಡಿಸ್‌ಪ್ಲೇ ಪ್ಯಾನೆಲ್ ಹೊಂದಿದೆ. ಡಿಸ್‌ಪ್ಲೇಯ ಅನುಪಾತವು 19.5:9 ಆಗಿದ್ದು, 90Hz ರೀಫ್ರೆಶ್ ರೇಟ್ ಹೊಂದಿದೆ. ಡಿಸ್‌ಪ್ಲೇಯು HDR10+ ಮತ್ತು DCI-P3 ಸೌಲಭ್ಯಗಳ ಸಪೋರ್ಟ್ ಪಡೆದುಕೊಂಡಿದೆ. ಡಿಸ್‌ಪ್ಲೇ ಅತ್ಯುತ್ತಮ ಪ್ರಖರತೆ ಹೊಂದಿದ್ದು, ಗೇಮಿಂಗ್‌ಗೆ ಮತ್ತು ವಿಡಿಯೊ ವೀಕ್ಷಣೆಗೆ ಉತ್ತಮ ಎನಿಸಿಲಿದೆ.

ಪ್ರೊಸೆಸರ್ ಸಾಮರ್ಥ್ಯ
'ಒನ್‌ಪ್ಲಸ್ 7T ಪ್ರೊ' ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855 ಪ್ಲಸ್ ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡಿದ್ದು, ಇತ್ತೀಚಿನ ಹೊಸ ಆಂಡ್ರಾಯ್ಡ್ 10 ಆಕ್ಸಿಜನ್ ಓಎಸ್ ಬೆಂಬಲವನ್ನು ಹೊಂದಿದೆ. ಇದರೊಂದಿಗೆ ಅಡ್ರಿನೊ 640 GPU ಪಡೆದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನಿನಲ್ಲಿ 8GB RAM ಸಾಮರ್ಥ್ಯದ ಜೊತೆಗೆ 256GB ಆಂತರಿಕ ಸಂಗ್ರಹ ಅವಕಾಶವನ್ನು ಕಾಣಬಹುದಾಗಿದೆ.

ವಿಶೇಷ ಕ್ಯಾಮೆರಾ
'ಒನ್‌ಪ್ಲಸ್ 7T ಪ್ರೊ' ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಪಡೆದುಕೊಂಡಿದ್ದು, ಮುಖ್ಯ ಕ್ಯಾಮೆರಾವು f/1.6 ಅಪರ್ಚರ್ನೊಂದಿಗೆ OIS ಸಹಿತ 48ಎಂಪಿ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು f/2.2 ಅಪರ್ಚರ್ನೊಂದಿಗೆ 16ಎಂಪಿ ಸೆನ್ಸಾರ್ ಹೊಂದಿದ್ದು, ತೃತೀಯ ಕ್ಯಾಮೆರಾವು f/2.4 ಅಪರ್ಚರ್ನೊಂದಿಗೆ 8ಎಂಪಿ ಸೆನ್ಸಾರ್‌ನಲ್ಲಿದೆ. ಇನ್ನು ಸೆಲ್ಫಿ ಕ್ಯಾಮೆರಾವು f/2.0 ಅಪರ್ಚರ್ನೊಂದಿಗೆ 16ಎಂಪಿ ಸೆನ್ಸಾರ್ ಸಾಮರ್ಥ್ಯ ಪಡೆದಿದೆ.

ಬ್ಯಾಟರಿ ಪವರ್
'ಒನ್‌ಪ್ಲಸ್ 7T ಪ್ರೊ' ಸ್ಮಾರ್ಟ್‌ಫೋನ್ 4085mAh ಸಾಮರ್ಥ್ಯದ ಬ್ಯಾಟರಿ ಲೈಫ್ ಅನ್ನು ಪಡೆದಿದ್ದು, 30W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ. ಇದರೊಂದಿಗೆ ವೈಫೈ, ಬ್ಲೂಟೂತ್ 5, ಜಿಪಿಎಸ್, ಎನ್‌ಎಫ್‌ಸಿ, ಯುಎಸ್‌ಬಿ ಟೈಪ್-ಸಿ, ಯುಎಸ್‌ಬಿ 3.1 ಪ್ರೊಟೊಕಾಲ್, ಸೇರಿದಂತೆ ಇತರೆ ಅಗತ್ಯ ಸೌಲಭ್ಯಗಳನ್ನು ಸಹ ಪಡೆದಿದೆ.


Click it and Unblock the Notifications








