Home
ಸುದ್ದಿಜಾಲ

ಒನ್‌ಪ್ಲಸ್‌ 7T ಪ್ರೊ ಮೆಕ್ಲಾರನ್‌ ಎಡಿಷನ್‌ ಹೇಗಿದೆ?.ಫೀಚರ್ಸ್ ಏನು?.ಬೆಲೆ ಎಷ್ಟು?

ಅತ್ಯುತ್ತಮ ಕಾರ್ಯದಕ್ಷತೆಯಿಂದ 'ಒನ್‌ಪ್ಲಸ್‌' ಕಂಪನಿಯ ಸ್ಮಾರ್ಟ್‌ಫೋನ್‌ ಬೆಸ್ಟ್‌ ಎನಿಸಿದ್ದು, ಕಂಪನಿಯು ಇತ್ತೀಚಿಗೆ 'ಒನ್‌ಪ್ಲಸ್‌ 7T' ಮತ್ತು 'ಒನ್‌ಪ್ಲಸ್‌ 7T ಪ್ರೊ' ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಫ್ಲ್ಯಾಗ್‌ಶಿಫ್‌ ಮಾದರಿಯಲ್ಲಿ ಗುರುತಿಸಿಕೊಂಡಿರುವ 'ಒನ್‌ಪ್ಲಸ್‌ 7T ಪ್ರೊ' ಸ್ಮಾರ್ಟ್‌ಫೋನ್ ಫೀಚರ್ಸ್‌ಗಳು ಹುಬ್ಬೆರಿಸುವಂತಿವೆ. ಇದೀಗ ಕಂಪನಿಯು 'ಒನ್‌ಪ್ಲಸ್‌ 7T ಪ್ರೊ' ಸ್ಮಾರ್ಟ್‌ಫೋನ್ ಸ್ಪೆಷಲ್ ಎಡಿಷನ್‌ ಬಿಡುಗಡೆ ಮಾಡಿದೆ.

ಮೆಕ್ಲಾರನ್‌ ಎಡಿಷನ್‌

ಹೌದು, ಒನ್‌ಪ್ಲಸ್‌ ಸಂಸ್ಥೆಯು ಹೊಸದಾಗಿ 'ಮೆಕ್ಲಾರನ್‌ ಎಡಿಷನ್‌'ನಲ್ಲಿ (McLaren Edition) 'ಒನ್‌ಪ್ಲಸ್‌ 7T ಪ್ರೊ' ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್ ಸಂಪೂರ್ಣ ರೇಸಿಂಗ್ ಲುಕ್‌ನಲ್ಲಿದ್ದು, ಇದರ ಪ್ರೊಸೆಸರ್‌ ವೇಗವು ಸಹ ಅದ್ಭುತ. ಈ ಸ್ಪೆಷಿಲ್‌ ಎಡಿಷನ್‌ 12GB RAM ಮತ್ತು 256GB ಸ್ಟೋರೇಜ್‌ ಹೊಂದಿದ್ದು, ಬೆಲೆಯು 58,999ರೂ.ಗಳಾಗಿದೆ. ಹಾಗಾದರೇ ಒನ್‌ಪ್ಲಸ್‌ 7T ಪ್ರೊ ಮೆಕ್ಲಾರನ್‌ ಎಡಿಷನ್‌ ಫೀಚರ್ಸ್‌ ಹೇಗಿವೆ ಮತ್ತು ಲಭ್ಯತೆ ಬಗ್ಗೆ ಮುಂದೆ ತಿಳಿಯೋಣ.

ಮೆಕ್ಲಾರನ್‌ ಎಡಿಷನ್-(McLaren Edition)

ಮೆಕ್ಲಾರನ್‌ ಎಡಿಷನ್-(McLaren Edition)

'ಒನ್‌ಪ್ಲಸ್‌ 7T ಪ್ರೊ' ಮೆಕ್ಲಾರನ್‌ ಎಡಿಷನ್ ಸ್ಮಾರ್ಟ್‌ಫೋನ್ ಪಪ್ಪಾಯ ಆರೆಂಜ್ ಬಣ್ಣದ ಬಾಕ್ಸ್‌ನಲ್ಲಿ ಇರಲಿದೆ. ಬಾಕ್ಸ್ ಒಳಗಡೆ ಮೆಕ್ಲಾರನ್ ಎಡಿಷನ್ ಲೊಗೊ ನೀಡಲಾಗಿದೆ. ಹಾಗೆಯೇ ಈ ಎಡಿಷನಿನ ಸ್ಮಾರ್ಟ್‌ಫೋನ್‌ ಚಾರ್ಜರ್‌ ಮತ್ತು ಕೇಬಲ್‌ನ ಲುಕ್‌ನಲ್ಲಿಯೂ ಬದಲಾವಣೆ ತರಲಾಗಿದ್ದು, ಚಾರ್ಜರ್ ಬ್ಲ್ಯಾಕ್‌ ಬಣ್ಣದಲ್ಲಿದೆ ಮತ್ತು ಕೇವಲ್ ಆರೆಂಜ್‌ ಕಲರ್ ಹೊಂದಿದೆ. ಸಾಫ್ಟ್‌ ಫೈಬರ್‌ ಬ್ಯಾಕ್‌ ಕೇಸ್‌ ನೀಡಲಾಗಿದೆ. ಡಿಸ್‌ಪ್ಲೇ ನಾಚ್ ಲುಕ್ ಸಹ ಚೆನ್ನಾಗಿದ್ದು, ಒಟ್ಟಾರೇ ರೇಸಿಂಗ್ ರೀತಿ ಕಂಗೊಳಿಸಲಿದೆ.

ಸೇಲ್ ಮತ್ತು ಆಫರ್

ಸೇಲ್ ಮತ್ತು ಆಫರ್

'ಒನ್‌ಪ್ಲಸ್‌ 7T ಪ್ರೊ' ಮೆಕ್ಲಾರನ್‌ ಎಡಿಷನ್ ಸ್ಮಾರ್ಟ್‌ಫೋನ್ ಇದೇ ನವಂಬರ್‌ 5ರಂದು ಮಧ್ಯಾಹ್ನ 12ಗಂಟೆಗೆ ಮೊದಲ ಸೇಲ್ ಆರಂಭಿಸಲಿದೆ. ಆದರೆ 'ಒನ್‌ಪ್ಲಸ್‌ 7T ಪ್ರೊ' ಇಂದು ಸೇಲ್ ಆರಂಭಿಸಲಿದೆ. ಅಮೆಜಾನ್ ಇ-ಕಾಮರ್ಸ್‌ ತಾಣ ಮತ್ತು ಒನ್‌ಪ್ಲಸ್‌ ಅಧಿಕೃತ ವೆಬ್‌ತಾಣದಲ್ಲಿ ಖರೀದಿಗೆ ಲಭ್ಯವಾಗಲಿದ್ದು, ಹಾಗೆಯೇ ಆಫ್‌ಲೈನ್‌ನಲ್ಲಿಯೂ ಸಿಗಲಿದೆ ಎಂದು ಕಂಪನಿಯು ತಿಳಿಸಿದೆ. ಎಚ್‌ಡಿಎಫ್‌ಸಿ ಕಾರ್ಡ್‌ ಬಳಸಿ ಖರೀದಿಸಿದರೇ 3,000ರೂ ಡಿಸ್ಕೌಂಟ್‌ ಸಿಗಲಿದ್ದು, ಇತರೆ ಬ್ಯಾಂಕ್ ಕಾರ್ಡ್‌ಗಳಿಗೂ ಸುಮಾರು 1500ರೂ.ಗಳ ವರೆಗೆ ರಿಯಾಯಿತಿ ಸಿಗಲಿದೆ.

ಡಿಸ್‌ಪ್ಲೇ ರಚನೆ

ಡಿಸ್‌ಪ್ಲೇ ರಚನೆ

ಈ ಸ್ಮಾರ್ಟ್‌ಫೋನ್ 1,440 x 3,120 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.67 ಇಂಚಿನ QHD ಫ್ಲ್ಯುಡ್‌ AMOLED ಡಿಸ್‌ಪ್ಲೇ ಪ್ಯಾನೆಲ್‌ ಹೊಂದಿದೆ. ಡಿಸ್‌ಪ್ಲೇಯ ಅನುಪಾತವು 19.5:9 ಆಗಿದ್ದು, 90Hz ರೀಫ್ರೆಶ್‌ ರೇಟ್‌ ಹೊಂದಿದೆ. ಡಿಸ್‌ಪ್ಲೇಯು HDR10+ ಮತ್ತು DCI-P3 ಸೌಲಭ್ಯಗಳ ಸಪೋರ್ಟ್ ಪಡೆದುಕೊಂಡಿದೆ. ಡಿಸ್‌ಪ್ಲೇ ಅತ್ಯುತ್ತಮ ಪ್ರಖರತೆ ಹೊಂದಿದ್ದು, ಗೇಮಿಂಗ್‌ಗೆ ಮತ್ತು ವಿಡಿಯೊ ವೀಕ್ಷಣೆಗೆ ಉತ್ತಮ ಎನಿಸಿಲಿದೆ.

ಪ್ರೊಸೆಸರ್‌ ಸಾಮರ್ಥ್ಯ

ಪ್ರೊಸೆಸರ್‌ ಸಾಮರ್ಥ್ಯ

ಈ ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855 ಪ್ಲಸ್‌ ಪ್ರೊಸೆಸರ್‌ ಸಾಮರ್ಥ್ಯವನ್ನು ಒಳಗೊಂಡಿದ್ದು, ಇತ್ತೀಚಿನ ಹೊಸ ಆಂಡ್ರಾಯ್ಡ್ 10 ಆಕ್ಸಿಜನ್ ಓಎಸ್‌ ಬೆಂಬಲವನ್ನು ಹೊಂದಿದೆ. ಇದರೊಂದಿಗೆ ಅಡ್ರಿನೊ 640 GPU ಪಡೆದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನಿನಲ್ಲಿ 12GB RAM ಸಾಮರ್ಥ್ಯದ ಜೊತೆಗೆ 256GB ಆಂತರಿಕ ಸಂಗ್ರಹ ಅವಕಾಶವನ್ನು ಕಾಣಬಹುದಾಗಿದೆ.

ವಿಶೇಷ ಕ್ಯಾಮೆರಾ

ವಿಶೇಷ ಕ್ಯಾಮೆರಾ

ಈ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಪಡೆದುಕೊಂಡಿದ್ದು, ಮುಖ್ಯ ಕ್ಯಾಮೆರಾವು f/1.6 ಅಪರ್ಚರ್ನೊಂದಿಗೆ OIS ಸಹಿತ 48ಎಂಪಿ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು f/2.2 ಅಪರ್ಚರ್ನೊಂದಿಗೆ 16ಎಂಪಿ ಸೆನ್ಸಾರ್‌ ಹೊಂದಿದ್ದು, ತೃತೀಯ ಕ್ಯಾಮೆರಾವು f/2.4 ಅಪರ್ಚರ್ನೊಂದಿಗೆ 8ಎಂಪಿ ಸೆನ್ಸಾರ್‌ನಲ್ಲಿದೆ. ಇನ್ನು ಸೆಲ್ಫಿ ಕ್ಯಾಮೆರಾವು f/2.0 ಅಪರ್ಚರ್ನೊಂದಿಗೆ 16ಎಂಪಿ ಸೆನ್ಸಾರ್‌ ಸಾಮರ್ಥ್ಯ ಪಡೆದಿದೆ.

ಬ್ಯಾಟರಿ ಪವರ್

ಬ್ಯಾಟರಿ ಪವರ್

ಈ ಸ್ಮಾರ್ಟ್‌ಫೋನ್ 4085mAh ಸಾಮರ್ಥ್ಯದ ಬ್ಯಾಟರಿ ಲೈಫ್‌ ಅನ್ನು ಪಡೆದಿದ್ದು, 30W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ. ಇದರೊಂದಿಗೆ ವೈಫೈ, ಬ್ಲೂಟೂತ್ 5, ಜಿಪಿಎಸ್‌, ಎನ್‌ಎಫ್‌ಸಿ, ಯುಎಸ್‌ಬಿ ಟೈಪ್‌-ಸಿ, ಯುಎಸ್‌ಬಿ 3.1 ಪ್ರೊಟೊಕಾಲ್, ಸೇರಿದಂತೆ ಇತರೆ ಅಗತ್ಯ ಸೌಲಭ್ಯಗಳನ್ನು ಸಹ ಪಡೆದಿದೆ.

Best Mobiles in India

English summary
OnePlus 7T Pro McLaren Edition will be on sale at 12 PM starting from November 5, 2019. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+