Just In
Don't Miss
- Movies
ತೆಲುಗಿನ ಬ್ಲಾಕ್ ಬಸ್ಟರ್ 'ಕ್ರ್ಯಾಕ್' ಸಿನಿಮಾ ಹಿಂದಿಗೆ ರೀಮೇಕ್?
- News
BREAKING: ಖಾತೆ ಹಂಚಿಕೆ ಕುರಿತು ಮೌನ ಮುರಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
- Education
RBI Recruitment 2021: 241 ಸೆಕ್ಯುರಿಟಿ ಗಾರ್ಡ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಹಳೆಯ 100 ರೂಪಾಯಿ ನೋಟುಗಳನ್ನು ಆರ್ಬಿಐ ಹಿಂಪಡೆಯುವ ಸಾಧ್ಯತೆ!
- Automobiles
ವಿವಿಧ ಕಾರು ಮಾದರಿಗಳ ಬೆಲೆ ಹೆಚ್ಚಳ ಮಾಡಿದ ಟಾಟಾ ಮೋಟಾರ್ಸ್
- Lifestyle
ನಿಮ್ಮ ಡಲ್ ಸ್ಕಿನ್ ಹೋಗಲಾಡಿಸಲು ಸುಲಭವಾದ ಮನೆಮದ್ದು ಇಲ್ಲಿದೆ
- Sports
ಐಪಿಎಲ್ 2021: ಮತ್ತೆ ಕಣಕ್ಕಿಳಿಯಲು ವೇಗಿ ಎಸ್ ಶ್ರೀಶಾಂತ್ ಸಜ್ಜು
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಇಂದು ಒನ್‌ಪ್ಲಸ್ 7T ಪ್ರೊ 'ಮೆಕ್ಲಾರನ್ ಎಡಿಷನ್' ಫೋನಿನ ಮೊದಲ ಫ್ಲ್ಯಾಶ್ ಸೇಲ್!
ಜನಪ್ರಿಯ ಒನ್‌ಪ್ಲಸ್ ಕಂಪನಿಯು ಇತ್ತೀಚಿಗೆ 'ಒನ್‌ಪ್ಲಸ್ 7T ಪ್ರೊ' ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದು, ಅದರೊಂದಿಗೆ 'ಮೆಕ್ಲಾರನ್ ಎಡಿಷನ್'ನಲ್ಲಿ (McLaren Edition) ಒನ್‌ಪ್ಲಸ್ 7T ಪ್ರೊ' ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿದೆ. 12GB RAM ಮತ್ತು 256GB ಸ್ಟೋರೇಜ್ ವೇರಿಯಂಟ್‌ನಲ್ಲಿರುವ ಈ ಸ್ಪೆಷಿಲ್ ಎಡಿಷನ್ ಸ್ಮಾರ್ಟ್‌ಫೋನಿನ ಮೊದಲ ಫ್ಲ್ಯಾರ್ಶ್ ಸೇಲ್ ಅಮೆಜಾನ್‌ನಲ್ಲಿ ಇಂದು ಮಧ್ಯಾಹ್ನ 12 ರಿಂದ ಶುರುವಾಗಲಿದೆ.

ಹೌದು, ಒನ್‌ಪ್ಲಸ್ ಸಂಸ್ಥೆಯ ವಿಶೇಷ ಮೆಕ್ಲಾರನ್ ಎಡಿಷನ್ 'ಒನ್‌ಪ್ಲಸ್ 7T ಪ್ರೊ' ಸ್ಮಾರ್ಟ್‌ಫೋನ್ ಪಪ್ಪಾಯ ಆರೆಂಜ್ ಬಣ್ಣದ ಲುಕ್ ಹೊಂದಿದ್ದು, ಜೊತೆಗೆ ಗ್ಲಾಸಿ ಬ್ಯಾಕ್ ಡಿಸೈನ್ ಪಡೆದಿದೆ. ಈ ಸ್ಮಾರ್ಟ್‌ಫೋನ್ ಬೆಲೆಯ 58,999ರೂ.ಗಳಾಗಿದ್ದು, ಆಕ್ಸಿಸ್ ಮತ್ತು ಸಿಟಿ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಸಿ ಖರೀದಿಸಿದರೇ ಶೇ 10 ಪರ್ಸೆಂಟ್ ಇನ್‌ಸ್ಟಂಟ್ ಡಿಸ್ಕೌಂಟ್ ಸಿಗಲಿದೆ.
ನೋ ಕಾಸ್ಟ್ EMI ಆಯ್ಕೆಯು ಲಭ್ಯವಾಗಲಿದೆ. ಹಾಗಾದರೇ ಒನ್‌ಪ್ಲಸ್ 7T ಪ್ರೊ ಮೆಕ್ಲಾರನ್ ಎಡಿಷನ್ ಫೀಚರ್ಸ್ ಹೇಗಿವೆ ಮತ್ತು ಲಭ್ಯತೆ ಬಗ್ಗೆ ಮುಂದೆ ತಿಳಿಯೋಣ.

ಮೆಕ್ಲಾರನ್ ಎಡಿಷನ್-(McLaren Edition)
'ಒನ್‌ಪ್ಲಸ್ 7T ಪ್ರೊ' ಮೆಕ್ಲಾರನ್ ಎಡಿಷನ್ ಸ್ಮಾರ್ಟ್‌ಫೋನ್ ಪಪ್ಪಾಯ ಆರೆಂಜ್ ಬಣ್ಣದ ಬಾಕ್ಸ್‌ನಲ್ಲಿ ಇರಲಿದೆ. ಬಾಕ್ಸ್ ಒಳಗಡೆ ಮೆಕ್ಲಾರನ್ ಎಡಿಷನ್ ಲೊಗೊ ನೀಡಲಾಗಿದೆ. ಹಾಗೆಯೇ ಈ ಎಡಿಷನಿನ ಸ್ಮಾರ್ಟ್‌ಫೋನ್ ಚಾರ್ಜರ್ ಮತ್ತು ಕೇಬಲ್‌ನ ಲುಕ್‌ನಲ್ಲಿಯೂ ಬದಲಾವಣೆ ತರಲಾಗಿದ್ದು, ಚಾರ್ಜರ್ ಬ್ಲ್ಯಾಕ್ ಬಣ್ಣದಲ್ಲಿದೆ ಮತ್ತು ಕೇವಲ್ ಆರೆಂಜ್ ಕಲರ್ ಹೊಂದಿದೆ. ಸಾಫ್ಟ್ ಫೈಬರ್ ಬ್ಯಾಕ್ ಕೇಸ್ ನೀಡಲಾಗಿದೆ. ಡಿಸ್‌ಪ್ಲೇ ನಾಚ್ ಲುಕ್ ಸಹ ಚೆನ್ನಾಗಿದ್ದು, ಒಟ್ಟಾರೇ ರೇಸಿಂಗ್ ರೀತಿ ಕಂಗೊಳಿಸಲಿದೆ.

ಡಿಸ್‌ಪ್ಲೇ ರಚನೆ
ಈ ಸ್ಮಾರ್ಟ್‌ಫೋನ್ 1,440 x 3,120 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.67 ಇಂಚಿನ QHD ಫ್ಲ್ಯುಡ್ AMOLED ಡಿಸ್‌ಪ್ಲೇ ಪ್ಯಾನೆಲ್ ಹೊಂದಿದೆ. ಡಿಸ್‌ಪ್ಲೇಯ ಅನುಪಾತವು 19.5:9 ಆಗಿದ್ದು, 90Hz ರೀಫ್ರೆಶ್ ರೇಟ್ ಹೊಂದಿದೆ. ಡಿಸ್‌ಪ್ಲೇಯು HDR10+ ಮತ್ತು DCI-P3 ಸೌಲಭ್ಯಗಳ ಸಪೋರ್ಟ್ ಪಡೆದುಕೊಂಡಿದೆ. ಡಿಸ್‌ಪ್ಲೇ ಅತ್ಯುತ್ತಮ ಪ್ರಖರತೆ ಹೊಂದಿದ್ದು, ಗೇಮಿಂಗ್‌ಗೆ ಮತ್ತು ವಿಡಿಯೊ ವೀಕ್ಷಣೆಗೆ ಉತ್ತಮ ಎನಿಸಿಲಿದೆ.

ಪ್ರೊಸೆಸರ್ ಸಾಮರ್ಥ್ಯ
ಈ ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855 ಪ್ಲಸ್ ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡಿದ್ದು, ಇತ್ತೀಚಿನ ಹೊಸ ಆಂಡ್ರಾಯ್ಡ್ 10 ಆಕ್ಸಿಜನ್ ಓಎಸ್ ಬೆಂಬಲವನ್ನು ಹೊಂದಿದೆ. ಇದರೊಂದಿಗೆ ಅಡ್ರಿನೊ 640 GPU ಪಡೆದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನಿನಲ್ಲಿ 12GB RAM ಸಾಮರ್ಥ್ಯದ ಜೊತೆಗೆ 256GB ಆಂತರಿಕ ಸಂಗ್ರಹ ಅವಕಾಶವನ್ನು ಕಾಣಬಹುದಾಗಿದೆ.

ವಿಶೇಷ ಕ್ಯಾಮೆರಾ
ಈ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಪಡೆದುಕೊಂಡಿದ್ದು, ಮುಖ್ಯ ಕ್ಯಾಮೆರಾವು f/1.6 ಅಪರ್ಚರ್ನೊಂದಿಗೆ OIS ಸಹಿತ 48ಎಂಪಿ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು f/2.2 ಅಪರ್ಚರ್ನೊಂದಿಗೆ 16ಎಂಪಿ ಸೆನ್ಸಾರ್ ಹೊಂದಿದ್ದು, ತೃತೀಯ ಕ್ಯಾಮೆರಾವು f/2.4 ಅಪರ್ಚರ್ನೊಂದಿಗೆ 8ಎಂಪಿ ಸೆನ್ಸಾರ್‌ನಲ್ಲಿದೆ. ಇನ್ನು ಸೆಲ್ಫಿ ಕ್ಯಾಮೆರಾವು f/2.0 ಅಪರ್ಚರ್ನೊಂದಿಗೆ 16ಎಂಪಿ ಸೆನ್ಸಾರ್ ಸಾಮರ್ಥ್ಯ ಪಡೆದಿದೆ.

ಬ್ಯಾಟರಿ ಪವರ್
ಈ ಸ್ಮಾರ್ಟ್‌ಫೋನ್ 4085mAh ಸಾಮರ್ಥ್ಯದ ಬ್ಯಾಟರಿ ಲೈಫ್ ಅನ್ನು ಪಡೆದಿದ್ದು, 30W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ. ಇದರೊಂದಿಗೆ ವೈಫೈ, ಬ್ಲೂಟೂತ್ 5, ಜಿಪಿಎಸ್, ಎನ್‌ಎಫ್‌ಸಿ, ಯುಎಸ್‌ಬಿ ಟೈಪ್-ಸಿ, ಯುಎಸ್‌ಬಿ 3.1 ಪ್ರೊಟೊಕಾಲ್, ಸೇರಿದಂತೆ ಇತರೆ ಅಗತ್ಯ ಸೌಲಭ್ಯಗಳನ್ನು ಸಹ ಪಡೆದಿದೆ.

ಓಪೆನ್ ಸೇಲ್
ಮೆಕ್ಲಾರನ್ ಒನ್‌ಪ್ಲಸ್ 7T ಪ್ರೊ ಎಡಿಷನ್ ಸ್ಮಾರ್ಟ್‌ಫೋನಿನ ಮೊದಲ ಫ್ಲ್ಯಾಶ್ ಸೇಲ್ ಅಮೆಜಾನ್‌ನಲ್ಲಿ ಇಂದು(ಅಕ್ಟೋಬರ್ 25) ಮಧ್ಯಾಹ್ನ 12 ರಿಂದ ಶುರುವಾಗಲಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ ಇದೇ ನವಂಬರ್ 5ರಂದು ಮಧ್ಯಾಹ್ನ 12 ಗಂಟೆಯಿಂದ ಓಪೆನ್ ಸೇಲ್‌ನಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190